
About The Book
‘Navu Nammavaru,’ the latest book written by Mr Hemant M. Bhutnal and Mrs Chinnamma T Kabade aptly explains about unique lifestyle, rituals, social and economic conditions of Haralayya Samagars living in Bijapur City (of Karnataka, India).
This is probably the first book exclusively on Haralayya Samagar community, one of the five original Scheduled Castes, living in Bijapur City. Though their population is somewhere around 30 lakh in the State of Karnataka, they have not yet got proper representation in the state politics. As a result, they are lagging behind socially, educationally as well as economically.
A majority of them still depend on making or repairing Chappals (footwear). Some Samagar families have got better education and doing well in business also. But their percentage is negligible compared to the total population. Of late, some leaders of this community are fighting for political and economical rights by forming organisations. But their fight has not yet shown any concrete result.
About The Authors
Mr Hemant M. Bhutnal
Mr Hemant Mallappa Bhutnal hails from Bijapur City. He was born and brought up in Bijapur. His father, Late Mallappa Parasappa Bhutnal, was a toll collector in the Department of Revenue. His mother, Tippavva, an illiterate but a great human being, is a housewife.
Mr Hemant had all the love and affection of the family when he was young. But the Scheduled Caste stigma attached to his community (Haralayya Samagar) made him suffer in silence in several instances. May be this humiliation made him excel in education, despite many odds, and develop a concern for the suppressed castes in Indian society.
A god orator and committed academician, Mr Hemant has been working as a voice of the downtrodden. He is not only using public platforms to protest against injustice meted out to the poor, women and backward classes, but also penning books to raise awareness level about the Samagar Community among the general public and at the government level.
Chinnamma T. Kabade
Smt Chinnamma Tulajaram Kabade is born and brought up in educated family in Bijapur. Having modern thoughts, Smt Chinnamma has completed Bachelor of Arts in Sociology. She has been the driving force for her husband Mr Hemant in all his endeavours.
She is currently working as Headmistress at Gonal Primary School in Bagalkot District (Karnataka, India).
The Full Text of the Book
ನಾವು-ನಮ್ಮವರು
(ವಿಜಾಪೂರ ಹರಳಯ್ಯ ಸಮಗಾರರ ಒಂದು ಪರಿಚಯ)
ಶ್ರೀ ಹೇಮಂತ ಎಮ್. ಭೂತನಾಳ
ಶ್ರೀಮತಿ ಚಿನ್ನಮ್ಮ ಟಿ. ಕಬಾಡೆ
ಅಪ್ಪಾಜಿ ಪ್ರಕಾಶನ,
ವಿಜಾಪೂರ.
NAAVU-NAMMAVARU: VIJAPUR HARALAYYA SAMAGAARARA ONDU PARICHAYA: An introduction of life, social practices, rituals, religious beliefs and socio-economic-political status of Haralayya Samagars living in Bijapur City (of Bijapur district in Karnataka, India) written by Mr Hemanth M Bhutnal and Mrs Chinnamma T. Kabade, Appaji Nilaya, Vijaynagar Colony, Behind IB, Ilkal-000000, Bagalkot District, Karnataka, India.
ಹಕ್ಕುಗಳು: ಲೇಖಕರವು
ಮೊದಲನೆಯ ಮುದ್ರಣ: ೨೦೦೮
ಪ್ರತಿಗಳು: ೧,೦೦೦
ಬೆಲೆ: ರೂ. ೧೫
ಪ್ರಕಾಶಕರು:
ಶರಣಪ್ಪ ಮ. ಭೂತನಾಳ
ಅದ್ಯಕ್ಷರು,
ಭೂತನಾಳ, ಹೊನ್ನಕಸ್ತೂರಿ ಹಾಗೂ
ಯಳಮೇಲಿ ಸಮಾಜ ಸೇವಾ ಸಂಘ,
ಟ್ರೇಜರಿ ಕಾಲನಿ, ಟೆಕ್ಕೆ ರೋಡ
ವಿಜಾಪೂರ.
ಪರಿವಿಡಿ
ಪ್ರಕಾಶಕರ ನುಡಿ..... ..... ..... ..... .......... ..... .....
ಮುನ್ನುಡಿ..... ..... ..... ..... .......... ..... ..... .....
ಲೇಖಕರ ಮಾತು..... ..... .......... ..... ..... .....
ಪ್ರಸ್ತಾವನೆ..... ..... .......... ..... ..... ..... ..........
ವಿಜಾಪೂರ ಹೆಸರಿನ ಮೂಲ..... ..... .......... ..... .....
ಸಮಗಾರ ಪದದ ಉತ್ಪತ್ತಿ..... ..... .......... ..... .....
ಮೂಲ ಪುರುಷ ಹರಳಯ್ಯ..... ..... .......... ..... ..... .....
ಶರಣು ಶರಣಾರ್ಥಿಗಳು..... ..... ..... ..... .......... .....
ಜಾತಿ ಮೀರಿದ ಮದುವೆ..... ..... ..... ..... .......... .....
ಕಲ್ಯಾಣ ಕ್ರಾಂತಿಗೆ ಮುನ್ನುಡಿಯಾದ ಚಮ್ಮಾವುಗೆಗಳು..... ..... ..... ..... ..
ಚರ್ಮಕಾರರೆಲ್ಲರೂ ಸಮಗಾರರಲ್ಲ..... ..... ..... ..... .......... .....
ಎಲ್ಲಿಂದ ಬಂದವರು?..... ..... ..... ..... .......... ..... ..... .....
ಅಂದು ಏಳು; ಇಂದು ಹದಿನಾಲ್ಕು ಓಣಿಗಳು..... ..... ..... .....
ಒಂದು ಕಾಲದ ಅಣ್ಣ-ತಮ್ಮಂದಿರು..... ..... ..... ..... .......... .....
ಕೌಟುಂಬಿಕ ಸ್ವರೂಪ..... ..... ..... ..... .......... ..... ..... .....
ಮಕ್ಕಳಾಗಲಿಲ್ಲವೇ? ಗಂಡನಿಗೆ ಮತ್ತೊಂದು ಮದುವೆ!..... ..... ..... ..... .....
ಅಡ್ಡ ಹೆಸರುಗಳು ಬೇರೆ-ಆದರೂ ಬೀಗರಲ್ಲ!..... ..... ..... ..... ..........
ಪ್ರಮುಖ ಬೆಡಗುಗಳು..... ..... ..... ..... .......... ..... ..... .....
ಟಾಕೀಗೊ೦ದು ಬುದ್ದಿ, ಎಳೀಗೊ೦ದು ವಿಚಾರ..... ..... ..... ..... ..........
ದುಡಿದದ್ದೆಲ್ಲಾ ತುಂಡ ಖ೦ಡಕ್ಕ; ಗುಟಕ ಹೆ೦ಡಕ್ಕ..... ..... ..... .....
ನಂಬಿಕೆ-ಮೂಢ ನಂಬಿಕೆಗಳು..... ..... ..... ..... .......... ..... .....
ಹೊಸಗಿ..... ..... ..... ..... .......... ..... ..... ..... ..........
ಚಕೋಲಿ..... ..... ..... ..... .......... ..... ..... ..... ..........
ಹಬ್ಬಾಚರಣೆಗಳು..... ..... ..... ..... .......... ..... ..... .....
ಗಣಿ-ಯಲ್ಲಮ್ಮ..... ..... ..... ..... .......... ..... ..... .....
ಎಲ್ಲಮ್ಮ ತಾಯಿಯ ’ಭೀಕರ’ ಮುಖ..... ..... ..... ..... ..........
ನ್ಯಾಯ ಪದ್ಧತಿ..... ..... ..... ..... .......... ..... ..... ..... .
ಸ೦ಘ-ಸ೦ಸ್ಥೆ, ಪ್ರತಿಸ್ಠಿತ ವ್ಯಕ್ತಿಗಳ ಸಾಧನೆ..... ..... ..... ..... ..........
ಲಕ್ಷ್ಮೀ-ಸರಸ್ವತಿ ಪುತ್ರರು..... ..... ..... ..... .......... ..... ..... .....
ಸದಾ ಸ್ಮರಣೀಯರು..... ..... ..... ..... .......... ..... ..... .....
ಸಾಮಾಜಿಕ ಸಂಸ್ಕಾರಗಳು..... ..... ..... ..... .......... ..... ..... ..
ಬದಲಾವಣೆಯ ಹೊಸ್ತಿಲಲ್ಲಿ..... ..... ..... ..... .......... ..... .....
ಕೊನೆಗೊಂದು ಕಡೆ ಮಾತು..... ..... ..... ..... .......... ..... .....
ಅನುಬಂಧ
ಲೇಖಕರಿಬ್ಬರ ತಾಯಂದಿರ ಛಾಯಾಚಿತ್ರ
ವಿಜಾಪೂರ ಹರಳಯ್ಯ ಸಮಗಾರರ ಪ್ರಮುಖ ಸಂಘಟನೆಗಳು
ಹರಳಯ್ಯನವರು ತಯಾರಿಸಿ, ಬಸವಣ್ಣನಿಗೆ ನೀಡಿದ ಚಮ್ಮಾವುಗೆಗಳು
ಪ್ರಕಾಶಕರ ನುಡಿ
ಅಪ್ಪಾಜಿ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವ ಎರಡನೆಯ ಈ ಗ್ರಂಥ ಪುಷ್ಪವನ್ನು ನಿಮ್ಮ ಕೈಯ್ಯಲ್ಲಿಡಲು ನಮಗೆ ಅತೀವ ಸಂತೋಷವೆನಿಸುತ್ತಿದೆ. ಮೊದಲ ಕೃತಿಯಲ್ಲಿ ಇಲಕಲ್ ಪಟ್ಟಣದ ಶ್ರೀ ಶರಣ ಸಮಗಾರ ಹರಳಯ್ಯ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸಂಗತಿಗಳ ಕುರಿತು ಒಂದು ಸಮಗ್ರ ನೋಟದ ಪರಿಚಯ ಮಾಡಿ ಕೊಡುವ ಪುಟ್ಟ ಪ್ರಯತ್ನಕ್ಕೆ ಕೈ ಹಾಕಲಾಗಿತ್ತು.
ಇದೀಗ ಅದರ ಮುಂದುವರಿದ ಭಾಗದಂತೆ ಭಾಸವಾಗುವ, ವಿಜಾಪೂರ ಶಹರದಲ್ಲಿ ಅಂದಾಜು ಎರಡು ನೂರು ವರ್ಷಗಳಿಗೂ, ಅಧಿಕ ಕಾಲಾವಧಿಯಿಂದ ವಾಸಿಸುತ್ತ ಬಂದಿರುವ, ಈ ಸಮಾಜದ ಬಂಧುಗಳ ಚಿಕ್ಕ ಪರಿಚಯಾತ್ಮಕ ಸಂಗತಿಗಳನ್ನು, ಈ ಗ್ರಂಥದಲ್ಲಿ ಹಿಡಿದಿಡಲಾಗಿದೆ. ಈ ಕೃತಿಯ ಲೇಖಕ ದಂಪತಿಗಳಾದ; ಶ್ರೀ ಹೇಮಂತ ಮಲ್ಲಪ್ಪ ಭೂತನಾಳ, ವೃತ್ತಿಯಿಂದ ಪ್ರಾಂಶುಪಾಲರಾಗಿಯೂ (ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಷ್ಟಗಿ) ಹಾಗೂ ಶ್ರೀಮತಿ ಚಿನ್ನಮ್ಮ ತುಳಜಾರಾಮ ಕಬಾಡೆ, ಇವರು ಮುಖ್ಯ ಗುರುಮಾತೆಯಾಗಿಯೂ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋನಾಳ. ಎಸ್. ಕೆ.) ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ದಂಪತಿಗಳಿಂದ ನಮ್ಮ ವಿಜಾಪೂರ ಶಹರದ ಶರಣ ಹರಳಯ್ಯ ಸಮಾಜದ ಅಧ್ಯಯನ ಇನ್ನೂ ವಿಸ್ತ್ರತವಾಗಿ ನಡೆಯಲೆಂದೂ; ತನ್ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಕಾಲ್ತೊಡಕಾಗಿರುವ ಸಂಗತಿಗಳನ್ನು ಗುರುತಿಸುವಂತಾಗಿ; ಅವುಗಳ ನಿವಾರಣೆಯಲ್ಲಿ ತಮ್ಮ ಅಳಿಲು ಸೇವೆಗೈದು; ಸಮಾಜದ ರಣ ತೀರಿಸುವಲ್ಲಿ ಭಾಗಿಗಳಾಗಬೇಕೆಂದು ಅಪ್ಪಾಜಿ ಪ್ರಕಾಶನ ಹೃದಯ ತುಂಬಿ ಹಾರೈಸುತ್ತದೆ.
ಶ್ರೀ ಶರಣಪ್ಪ ಮಲ್ಲಪ್ಪ ಭೂತನಾಳ
ವಿಜಾಪೂರ-೫೮೬೧೦೧.
ಮುನ್ನುಡಿ
ಒಂದು ಸಮುದಾಯದ ಪ್ರಗತಿಯನ್ನು ಕರಾರುವಾಕ್ಕಾಗಿ ಹೇಳಲು ಅದರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಮಟ್ಟವನ್ನು ಕಾಲಕಾಲಕ್ಕೆ ದಾಖಲಿಸುತ್ತಾ ಮತ್ತು ವಿಶ್ಲೇಷಿಸುತ್ತಾ ಹೋಗಬೇಕಾಗುತ್ತದೆ. ಹೀಗೆ ಶಾಸ್ತ್ರೀಯವಾಗಿ ನಡೆಯುವ ವ್ಯವಸ್ಥಿತ ಅಧ್ಯಯನದಿಂದ, ಆ ಸಮುದಾಯದ ವೈಶಿಷ್ಟ್ಯಗಳು, ಅದರ ಬೆಳವಣಿಗೆ, ಒಂದುವೇಳೆ ಅದು ಹಿಂದುಳಿದ ಸಮುದಾಯವಾಗ್ದಿದರೆ ಅದರ ಪ್ರಗತಿಗೆ ಇರುವ ತೊಡಕುಗಳೇನು ಮತ್ತು ಆ ತೊಡಕುಗಳನ್ನು ನಿವಾರಿಸಲು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳೇನು ಎನ್ನುವುದು ಗೊತ್ತಾಗುತ್ತದೆ.
ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜದ ಬಗೆಗೆ ನಾವು ಒಂದು ಅಭಿಪ್ರಾಯಕ್ಕೆ ಬರಲು ಮುಖ್ಯವಾಗಿ ಏನು ಗಮನಿಸುತ್ತೇವೆ? ಆ ವ್ಯಕ್ತಿಯ ಅಥವಾ ಆ ಸಮಾಜದ ನಡೆ-ನುಡಿ, ಶೈಕ್ಷಣಿಕ ಮಟ್ಟ, ಆರ್ಥಿಕ ಹಾಗೂ ರಾಜಕೀಯ ಪ್ರಗತಿ ತಾನೆ? ಕರ್ನಾಟಕದ್ಲಲಿನ ಸಮಗಾರ ಹರಳಯ್ಯ ಸಮಾಜದ ಕುರಿತು ಸರಕಾರವಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ ಇಲಿಯವರೆಗೂ ಒಂದು ಸ್ಪಷ್ಟವಾದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗ್ಲಿಲ ಎನ್ನುವುದಕ್ಕೆ ಕಾರಣ ಈ ಸಮಾಜದ ಕುರಿತಂತೆ ಎಲೂ ಅಧಿಕೃತವಾದ ದಾಖಲೆಗಳ್ಲಿಲದಿರುವುದು; ಅಧ್ಯಯನಗಳು ನಡೆಯದೇ ಇರುವುದು..
ನಮ್ಮ್ಲೆಲರ ಮನೆತನಗಳ ವೈಯಕ್ತಿಕ ದಾಖಲೆಗಳನ್ನು ಹೆಳವರು (‘ಹೇಳುವವರು’) ಇದಾರಾದರೂ ನಮ್ಮ ಸಮುದಾಯವನ್ನು ಸಮಷ್ಟಿ ಪ್ರಜ್ಞೆ, ಸಮಗ್ರ ದೃಷ್ಟಿಕೋನದಿಂದ ಕಟ್ಟಿಕೊಡುವ ಯಾವ ಪ್ರಯತ್ನಗಳೂ ಇಲಿಯವರೆಗೆ ಆಗಿರಲ್ಲಿಲ. ಸರಕಾರ, ವಿಶ್ವವಿದ್ಯಾಲಯದಂತಹ ಉನ್ನತ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳೂ ಈ ಕೆಲಸವನ್ನು ಮಾಡಲ್ಲಿಲ. ಬಹುಶಃ ಇದೇ ಕಾರಣಕ್ಕಿರಬಹುದು ಸಾಮಾಜಿಕ ನ್ಯಾಯ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಕರ್ನಾಟಕದ್ಲಲಿ ಸಮಗಾರರು ನಡೆಸುತ್ತಿರುವ ಯಾವ ಹೋರಾಟಗಳೂ ಇಲಿಯವರೆಗೆ ತಾರ್ಕಿಕ ಅಂತ್ಯ ಕಾಣದೇ ಇರಲು.
ಈ ಎಲ ಕೊರತೆಗಳನ್ನು ನೀಗಸಲೆಂಬಂತೆ, ನಮ್ಮ ಹಿರಿಯ ಸಹೋದರಿ ಶ್ರೀಮತಿ ಚಿನ್ನಮ್ಮ ಮತ್ತು ಮಾವನವರಾದ ಶ್ರೀ ಹೇಮಂತ ಭೂತನಾಳ ಅವರು ‘ನಾವು-ನಮ್ಮವರು: ವಿಜಾಪೂರ ಹರಳಯ್ಯ ಸಮಗಾರರ ಒಂದು ಪರಿಚಯ’ ಎಂಬ ಪುಸ್ತಕ ಹೊರತಂದ್ದಿದಾರೆ. ಸಮಗಾರರ ಜೀವನ ರೀತಿ, ಯೋಚನಾ ಲಹರಿ, ಸಾಮಾಜಿಕ ಆಚರಣೆಗಳು, ಧಾರ್ಮಿಕ ನಂಬಿಕೆಗಳು ಈ ಎಲವುಗಳ ಕುರಿತು ಸವಿಸ್ತಾರವಾಗಿ ತಿಳಿಸುವ ಈ ಕೃತಿ ಪ್ರಸ್ತುತ ಸಂದರ್ಭದ್ಲಲಿ ಒಂದು ಗಮನಾರ್ಹ ಪ್ರಯತ್ನವೇ ಸರಿ.
‘ಇನ್ನೊಬ್ಬರನ್ನು ತಿಳಿದುಕೊಳ್ಳುವ ಮುನ್ನ ನಮ್ಮನ್ನು ನಾವು ಅರಿತು ಕೊಳ್ಳಬೇಕು’ ಎನ್ನುವುದು ಈ ಕೃತಿಯ ಹಿಂದಿರುವ ಹಲವಾರು ಉದೇಶಗಳ್ಲಲೊಂದು. ನಮ್ಮ ಆಚಾರ-ವಿಚಾರಗಳ ವಿಶೇಷತೆ, ಜ್ಞಾನದ ಮಟ್ಟ, ಆರ್ಥಿಕ ಪ್ರಗತಿ ಏನು ಎಂದು ಅರಿತುಕೊಂಡಾಗಲೇ ನಮ್ಮ ಸಾಮಾಜಿಕ ಸ್ಥಿತಿ-ಗತಿ ಏನು ಎಂದು ಗೊತ್ತಾಗುತ್ತದೆ; ಇನ್ನೊಬ್ಬರನ್ನು ಅರ್ಥೈಸಿಕೊಳ್ಳಲೂ ಸಾಧ್ಯವಾಗುತ್ತದೆ. ಈ ಪುಸ್ತಕದ್ಲಲಿ ನಮಗೆ ಗೊತ್ತಿರುವ ಸಂಗತಿಗಳು ಸಾಕಷ್ಟಿರಬಹುದು. ಆದರೆ, ಅವ್ಲೆಲವೂ ನಮ್ಮ ಅನುಭವಕ್ಕೆ ಬಂದ್ದಿದು ನಮ್ಮ ಜೀವನದ ಬೇರೆ, ಬೇರೆ ಸಂದರ್ಭಗಳ್ಲಲಿ, ಅದೂ ತುಂಡು-ತುಂಡಾಗಿ. ಇದೇ ಕಾರಣಕ್ಕಾಗಿ, ಆ ಎಲ ವಿಷಯಗಳನ್ನು ನಮಗೆ ಒಟ್ಟಿಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗ್ಲಿಲ. ನಮ್ಮದೇ ಸಾಮಾಜಿಕ ಬದುಕಿನ ಸಮಗ್ರ ಚಿತ್ರಣ ನಮ್ಮ ಕಣ್ಮುಂದೆ ಈಗಲೂ ಬರುತ್ತ್ಲಿಲ ಎನ್ನುವದಕ್ಕೆ ಬಹುಶಃ ಇದೇ ಕಾರಣವಿರಬಹುದು. ಸಮಗಾರರ ಬದುಕನ್ನು ಅದರ ವಾಸ್ತವ ನೆಲೆಗಟ್ಟಿನ್ಲಲಿ ಹೇಳುವ ಈ ಪುಸ್ತಕ ಸಮಗಾರರ ಬದುಕಿನ ಪೂರ್ಣ ಚಿತ್ರಣವನ್ನು ಯಥಾವತ್ತಾಗಿ ನಮ್ಮ ಕಣ್ಮುಂದೆ ತೆರೆದಿಡುತ್ತದೆ.
ಜೊತೆಗೆ, ನಮ್ಮ್ಲಲಿನ ಸಣ್ಣತನ-ದೊಡ್ಡತನಗಳನ್ನು ಅಮೂಲಾಗ್ರವಾಗಿ ನೋಡುವ, ನಿಸ್ಪಕ್ಷಪಾತವಾಗಿ ವ್ಯಾಖ್ಯಾನಿಸುವ್ಲಲಿ ಈ ಕೃತಿ ಯಶಸ್ವಿ ಕೂಡಾ ಆಗಿದೆ.
‘ಸಮಗಾರರು ಕಾಲಕ್ಕೆ ತಕ್ಕಂತೆ ಬದಾಲಾಗ್ದಿದೇರೆ, ಆದರೆ ಬೆಳೆದ್ಲಿಲ’ ಎನ್ನುವ ಕಟು ಸತ್ಯ ಈ ಕೃತಿಯಿಂದ ನಮಗೆ ತಿಳಿಯುತ್ತದೆ. ಸಮಗಾರರು ತಮ್ಮ್ಲಲಿನ ಕೊರತೆಗಳು, ದೋಷಗಳು ಗೊತ್ತ್ದಿದೂ ಗೊತ್ತ್ಲಿಲದವರಂತೆ ಬದುಕ್ದಿದಾರೆ. ಅವರು ತಮ್ಮ ಸಣ್ಣತನಗಳನ್ನು ಎಂದೂ ಒಪ್ಪಿಕೊಂಡ್ಲಿಲ; ಅವುಗಳನ್ನು ತ್ದಿದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಕೂಡ ಮಾಡ್ಲಿಲ. ‘ನಮ್ಮ ತಪ್ಪುಗಳನ್ನು ನಾವು ಎಲಯವರೆಗೆ ಒಪ್ಪಿಕೊಳ್ಳುವುದ್ಲಿಲವೋ ಅಲಿಯವರೆಗೆ ನಾವು ಬೆಳೆಯಲು ಸಾಧ್ಯವ್ಲಿಲ’ ಎನ್ನುವ ಸತ್ಯದ ಅರಿವು ನಮಗೆ ಆಗುವುದು ಯಾವಾಗ? ಎನ್ನುವ ಪ್ರಶ್ನೆ ಈ ಪುಸ್ತಕದ್ದುದಕ್ಕೂ ಕಾಡುತ್ತಲೇ ಬರುತ್ತದೆ.
ಸಮಗಾರರ ಸಂಸ್ಕೃತಿ (ಅಂತಹದೊಂದು ಇದೆಯೆ?), ಬದುಕಿನ ರೀತಿ, ಬಳಸುವ ಭಾಷೆ, ಧಾರ್ಮಿಕ ನಂಬಿಕೆ,ಆಚರಣೆಗಳ ಸೂಕ್ಷ್ಮತೆಗಳನ್ನು ಎಳೆ-ಎಳೆಯಾಗಿ ಬಿಚ್ಚಿಡುವ ಈ ಕೃತಿ ಒಂದು ಸಂಗ್ರಹಯೋಗ್ಯ ಪುಸ್ತಕ. ಉದಾಹರಣೆಗೆ ‘ಹೊಸಗಿ’ ಹಾಗೂ ‘ಚಕೋಲಿ’ಗಳ ಬಗೆಗೆ ನೀಡಿರುವ ಮಾಹಿತಿ, ಗಣಿ ಎಲಮ್ಮನ ಜಾತ್ರೆಗೆ ಹೋಗುವ ಹಿಂದಿರುವ ತುಡಿತಗಳು, ಹೆಂಗಸರನ್ನು “ಎಲಮ್ಮ”ನ ಜಾತ್ರೆಯ್ಲಲೂ ಶೊಷಿಸುವ ಕುಡುಕ ಗಂಡಂದಿರು, ನಮ್ಮ ಸಂಸ್ಕಾರಗಳ್ಲಲಿರುವ ಮಾನಸಿಕ ತುಮುಲಗಳ ವಿಶ್ಲೇಷಣೆ.... ಈ ಎಲ ವಿಷಯಗಳು ಹೊಸ ಅನುಭವ ನೀಡುತ್ತವೆ. ಸಮಗಾರರ ಅಸ್ಪಷ್ಟ ಬದುಕಿಗೆ ಒಂದು ಮೂರ್ತ ರೂಪ ಕೊಡಲು ಪ್ರಯತ್ನಿಸಿರುವ ಈ ಕೃತಿ ಬಹುಶಃ ಸಮಗಾರರ ಕುರಿತು ಬರೆದ ಮೊದಲ ಪೂರ್ಣಪ್ರಮಾಣದ ಕೃತಿ ಎನ್ನಬಹುದು.
ಶ್ರೀಮತಿ ಚಿನ್ನಮ್ಮನವರ ನಿರಂತರ ಬೆಂಬಲ, ಸ್ಫೂರ್ತಿಯ ಫಲವಾಗಿ, ಶ್ರೀ ಹೇಮಂತ ಅವರ ಅಕ್ಯಾಡೆಮಿಕ್ ಶಿಸ್ತು, ಆಳವಾದ ಬೋಧನಾ ಅನುಭವ ಹಾಗೂ ಎಡಪಂಥೀಯ ಸಿದ್ಧಾಂತಗಳ ಬಗೆಗಿರುವ ಅವರ ಒಲವಿನಿಂದ ಹುಟ್ಟಿಕೊಂಡ ತೀವ್ರ ಸಾಮಾಜಿಕ ಕಳಕಳಿಯಿಂದ ಮೂಡಿಬಂದ ಈ ಕೃತಿ ನಮ್ಮನ್ನು ಚಿಂತನೆಗೆ ಹಚ್ಚುಬ್ಲಲದು. ನಾವ್ಲೆಲ ಒಟ್ಟಾಗಿ ನಮ್ಮ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ, ನಮ್ಮ ಸಮಾಜದ ಕೊರತೆಗಳೇನು, ನಮ್ಮ ಪ್ರಗತಿಗೆ ಮಾರಕವಾದ ಅಂಶಗಳಾವವು ಎನ್ನುವುದರ ಬಗೆಗೆ ಚಿಂತಿಸಿ ರಾಷ್ಟ್ರೀಯ ಮುಖ್ಯವಾಹಿನಿಗೆ ಬರುವ ಕಿಂಚಿತ್ ಪ್ರಯತ್ನ ಮಾಡುವುದಾದರೆ ಲೇಖಕದ್ವಯರ ಈ ಅಪರೂಪದ ಪ್ರಯತ್ನಕ್ಕೆ ಒಂದು ಅರ್ಥ ಬಂದೀತು.
ರಾಜು ಎಸ್. ವಿಜಾಪೂರ
ಹುಬ್ಬಳ್ಳಿ.
ಲೇಖಕದ್ವಯರ ಮನದಾಳದ ಮಾತು
ವಿಜಾಪೂರ ಶಹರದಲ್ಲಿ ವಾಸಿಸುತ್ತಿರುವ, ಶ್ರೀ ಶರಣ ಸಮಗಾರ ಹರಳಯ್ಯ ಸಮಾಜದ, ಪೀಠಿಕೆಯ ರೂಪದ ಮಲ್ಲಿಗೆ ತೂಕದ ಈ ಗ್ರಂಥ, ಹೊರಬರುತ್ತಿರುವ ಶುಭ ಸಂದರ್ಭದಲ್ಲಿ, ಒಂದೆರಡು ಮನದಾಳದ ಮಾತುಗಳನ್ನು, ಓದುಗರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇವೆ.
ಈ ಸಮಾಜ ಬಹು ಕಾಲದಿಂದಲೂ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದದ್ದು ಮಾತ್ರವಲ್ಲ; ಅಧ್ಯಯನದ ದೃಷ್ಟಿಯಿಂದಲೂ ಅತ್ಯಂತ ಅವಕೃಪೆಗೆ ಒಳಗಾದದ್ದೆಂದರೂ ತಪ್ಪಾಗಲಿಕ್ಕಿಲ್ಲ. ಈ ಸಮುದಾಯದವರ ಕುರಿತು ಎಲ್ಲೂ ದಾಖಲೆಗಳೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಇದು ಕಡೆಗನಿಸಲ್ಪಟ್ಟ ಸಮಾಜವೆಂದೇ ಹೇಳಬಹುದು. ಸಾವಿರ ಪುಟಗಳನ್ನು ಹೊಂದಿದ, ವಿಜಾಪೂರ ಜಿಲ್ಲಾ ಗೆಜೆಟ್ಟಿಯರ ಬೃಹತ್ ಗ್ರಂಥದಲ್ಲಿ; ಹರಳಯ್ಯನ ಸಮಾಜ ಕುರಿತು, ಕೇವಲ ಒಂದೂವರೆ ಪುಟದಷ್ಟು ಮಾತ್ರ ಮಾಹಿತಿ ಸಿಗುತ್ತದೆ.
ನಮ್ಮ ಸಮಾಜ ಬಾಂಧವರ ಬಗ್ಗೆ ನಮಗೆ ಅಷ್ಟಿಷ್ಟು ಮಾಹಿತಿ ಲಭ್ಯವಾಗಬೇಕಾದರೆ, ಪ್ರಮುಖ ಬೆಡಗುಗಳ ಮನೆತನಗಳಿಗೆ, ವರ್ಷವೋ ಇಲ್ಲವೇ ಎರಡು ವರ್ಷಕ್ಕೊಮ್ಮೆ ಬರುವ ಹೆಳವರನ್ನು, ಅವಲಂಬಿಸದೆ ಅನ್ಯ ಮಾರ್ಗವಿಲ್ಲದಂತಾಗಿದೆ. ದೇಶದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜರುಗುವ, ಜನಗಣತಿ ನೋಡಿದರೆ ಅಲ್ಲಿ ಪರಿಶಿಷ್ಟ ಜಾತಿ ಕುರಿತು ಮಾಹಿತಿ ಸಿಗುತ್ತದೆಯೇ ವಿನಃ, ಹರಳಯ್ಯ ಸಮಾಜದ ಬಗ್ಗೆ ಪ್ರತ್ಯೇಕವಾದ ಲಿಖಿತ ದಾಖಲೆ ಏನೂ ಸಿಗುವುದಿಲ್ಲ.
‘ಪ್ರಸ್ತುತ ಕಾಲ ಶೀಘ್ರ ಪರಿವರ್ತನೆಯ ಕಾಲ. ನಾವು ಎಂತಹ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆಂದರೆ, ಮುಂಜಾನ ನೋಡಿದ್ದು ಮಧ್ಯಾನ್ಹ ಇಲ್ಲ; ಮಧ್ಯಾನ್ಹದ್ದು ಸಂಜೆಗೆ ಮಾಯವಾಗುವಂತಹ ಸ್ಥಿತಿಯಲ್ಲಿದ್ದೇವೆ. ಎಂಭತ್ತರ ವ೦iಮಾನ ಮೀರಿದ ಹಿರಿಯರನ್ನು, ನಾವಿಂದು ನಮ್ಮ ಸಮಾಜದಲ್ಲಿ ಹಗಲ್ಹೊತ್ತು ದೀಪ ಹಚ್ಚಿ ಹುಡುಕಬೇಕಾಗಿದೆ. ನಮ್ಮ ಸಮಾಜದ ಹಿರಿಯರಾದವರು , ನಮ್ಮ ಹಿಂದಿನ ಚರಿತ್ರೆ ಹೇಳುವವರು ಇವತ್ತು ನಮ್ಮೆದುರು ಬೆರಳೆಣಿಕೆಯಷ್ಟು ಜನ ಮಾತ್ರ ಸಿಗುತ್ತಾರೆ.
ನಮ್ಮ ನಿನ್ನೆಗಳ ಬಗ್ಗೆ ಹೇಳುವವರು, ಹೊರಟೆದ್ದು ಹೋಗುವ ಗಳಿಗೆ ಬರುವುದರೊಳಗಾಗಿ, ಅಂತಹ ಗೌರವಾನ್ವಿತ ಹಿರಿಯರಿಂದ ಸಿಕ್ಕಷ್ಟು ಮಾಹಿತಿ ಪಡೆದು, ಇಂತಹ ಒಂದು ಕಿರು ಗ್ರಂಥವನ್ನು ಹೊರ ತರಬೇಕೆಂದು ನಾವಿಬ್ಬರು ದಂಪತಿಗಳು, ನಾಲ್ಕೈದು ವರ್ಷಗಳ ಹಿಂದೆಯೇ ಆಲೋಚನೆ ಮಾಡಿದ್ದೆವು. ಮನದಲ್ಲಿ ಮಂಡಿಗೆ ತಿನ್ನುತ್ತ ಕುಳಿತರೆ, ಕಂಡಂತಹ ಕನಸು ಸಾಕಾರಗೊಳ್ಳಲಾರದೆಂಬ, ಅನುಭವ ಆಗುವ ಹೊತ್ತಿಗೆ, ಕೃಷ್ಣಾ ನದಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿತ್ತು.
ವಿಜಾಪೂರ ಶಹರದ ಹರಳಯ್ಯನ ಸಮಾಜ ಕುರಿತು ಈ ರೀತಿಯ ಗ್ರಂಥ ಹೊರಬರುತ್ತಿರುವುದು ಇದೇ ಮೊದಲು ಅಂತ ಕಾಣಿಸುತ್ತದೆ. ನಾವಿಬ್ಬರು ವಿಜಾಪೂರದಲ್ಲಿ ಹುಟ್ಟಿ ಬೆಳೆದಿರೋದರಿಂದ ಇಲ್ಲಿಯ ಜನತೆ, ಅವರ ನಡಾವಳಿಗಳು, ಓಣಿಗಳು, ಒಂದೊಂದು ಓನಿಯ ವೈಶಿಷ್ಟ್ಯ, ಈ ಸಮುದಾಯದವರ ಕುರಿತು ಪ್ರಚಲಿತದಲ್ಲಿರುವ ಪಡೆ ನುಡಿಗಳು, ಹಬ್ಬ ಹರಿದಿನಗಳು, ಜಾತ್ರೆ-ಕೇತ್ರೆಗಳು, ಉತ್ಸವಾಚರಣೆಗಳು, ನಂಬಿಕೆ-ಮೂಢ ನಂಬಿಕೆಗಳು ಇತ್ಯಾದಿಯವುಗಳನ್ನೆಲ್ಲ ಹತ್ತಿರದಿಂದ ನೋಡುವ ಅವಕಾಶ ನಮಗೆ ಸಿಕ್ಕಿದ್ದರಿಂದ, ಈ ಬರವಣಿಗೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಯಿತೆಂದು ಹೇಳಬಹುದು.
ನಾವು ಈವರೆಗೂ ಕಳೆದ ಒಟ್ಟು ಬದುಕಿನಲ್ಲಿ ಅರ್ಧ ಜೀವನ ವಿಜಾಪೂರದ ಹೊರಗಡೆ ಕಳೆದಿರುವುದರಿಂದ ಈ ಪುಸ್ತಕದಲ್ಲಿರುವ ಇಡೀ ವಿಷಯ ದೋಷಾತೀತವೆಂದೂ, ಪರಿಪೂರ್ಣವೆಂದೂ, ಸಂಪೂರ್ಣ ಸತ್ಯವೆಂದೂ, ನಾವು ಬರೆದದ್ದೆಲ್ಲವೂ ನಿಜವೆಂದು; ಎದೆ ತಟ್ಟಿ ಹೇಳಲಾರೆವು. ಯಾಕೆಂದರೆ ನಾವೂ ಸಾಮಾನ್ಯ ಮನುಷ್ಯರೇ. ತಪ್ಪು ಒಪ್ಪುಗಳಿಂದ ನಾವೂ ಕೂಡಾ ಹೊರತಲ್ಲ.
ನಮ್ಮ ಸಮುದಾಯ ಕುರಿತು ನಮಗೆ ಕಂಡದ್ದು ನಾವು ಬರೆದಿದ್ದೇವೆ, ನಮಗೆ ಎಲ್ಲವೂ ಕಂಡಿರಲಿಕ್ಕಿಲ್ಲ. ನಮಗೆ ತಿಳಿದಷ್ಟು ನಾವು ದಾಖಲಿಸಿದ್ದೇವೆ, ನಮಗೆ ಎಲ್ಲವೂ ತಿಳಿದಿರಲಿಕ್ಕಿಲ್ಲ. ನಮಗೆ ಗೊತ್ತಿದ್ದಷ್ಟು ನಾವು ಅಧ್ಯಯನ ಮಾಡಿದ್ದೇವೆ, ನಮಗೆ ಎಲ್ಲವೂ ಗೊತ್ತಿರಲಿಕ್ಕಿಲ್ಲ. ನಮ್ಮ ಸಮಾಜ ಬಂಧುಗಳಲ್ಲಿ ನಾವು ವಿನಂತಿಸಿಕೊಳ್ಳುವುದೇನೆಂದರೆ, ಈ ಗ್ರಂಥದಲ್ಲಿ ಏನಾದರೂ ಲೋಪದೋಷಗಳು ಕಂಡು ಬಂದಲ್ಲಿ, ನಮ್ಮ ಗಮನಕ್ಕೆ ತರಬೇಕೇಂದು ವಿನಂತಿಸಿಕೊಳ್ಳುತ್ತೇವೆ. ಮುಂದಿನ ಸಾರಿ, ವಿಜಾಪೂರ ಸಮಗಾರ ಸಮುದಾಯದ, ಸಮಗ್ರ ಅಧ್ಯಯನ ಕೈಗೆತ್ತಿಕೊಳ್ಳಲು ನಿಂತಾಗ, ಈ ಗ್ರಂಥದಲ್ಲಿ ನುಸುಳಲಾಗಿರುವ ತಪ್ಪು ತಡೆಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿಕೊಳ್ಳುತ್ತೇವೆ.
ನಮ್ಮ ವಿಜಾಪೂರ ಶಹರದ ಹರಳಯ್ಯ ಸಮಾಜದ ಬಗ್ಗೆ, ಒಂದು ಚಿಕ್ಕದಾದರೂ ಪರವಾಯಿಲ್ಲ; ಮನಸ್ಸಿಗೆ ಮುದ ನೀಡುವಂತಹ ಗ್ರಂಥವನ್ನು, ೨೦೦೮ರಲ್ಲಿ ಜರುಗುವ ತಾಯಿ ಯಲ್ಲಮ್ಮಳ ಜಾತ್ರೆಯೊಳಗಾಗದಿದ್ದರೂ, ಕೊನೆಯ ಪಕ್ಷ ಜಾತ್ರಾ ಸಮಯದಲ್ಲಾದರೂ, ಇದು ಹೊರಬರುವಂತಾಗಲೆಂದು ಧೃಡ ಮನಸ್ಸು ಮಾಡಿ, ಕಳೆದ ಅಕ್ಟೊಬರ ತಿಂಗಳಿನಲ್ಲಿ ಬರವಣಿಗೆಗೆ ತೊಡಗಿದೆವು. ಈ ಪುಸ್ತಕದ ಒಳಗೆ ಏನೇನಿದೆ ಎನ್ನುವುದರ ಕುರಿತು, ಈ ಘಟ್ಟದಲ್ಲಿ ಹೇಳಿಕೊಳ್ಳುವುದು ಸಮಂಜಸವೆನಿಸಲಾರದು. ನಾವು ಹಾಗೆ ಮಾಡಿದರೆ ನಿಮ್ಮ ಓದುವ ಹಕ್ಕು ಕಸಿದುಕೊಂಡಂತಾಗುತ್ತದೆ.
ಈ ಪುಸ್ತಕದ ಜನ್ಮಕ್ಕೆ ನಾವಿಬ್ಬರು ದಂಪತಿಗಳು ಕಾರಣರಾದರೂ; ನಮ್ಮಿಬ್ಬರಿಗೂ ನೆರವಾದ ಕೈಗಳು ಹತ್ತಾರು. ಅವನ್ನಿಲ್ಲಿ ಸ್ಮರಿಸದೇ ಹೋದರೆ ನಾವು ಕೃತಘ್ನರಾದೇವು. ಮೊಟ್ಟ ಮೊದಲಿಗೆ ಇದರ ಪ್ರಕಾಶಕರಾದ, ಶ್ರಿ ಶರಣಪ್ಪ ಮಲ್ಲಪ್ಪ ಭೂತನಾಳ, ಇವರ ಎಲೆಮರೆಯ ಕಾಯಿಯಂತಿರುವ ಸ್ಪೂರ್ತಿಯನ್ನು, ನಾವು ಯಾವತ್ತಿಗೂ ಮರೆಯುವುದಿಲ್ಲ.ನಮ್ಮನ್ನು ಬರೆಯುವಂತೆ ದುಂಬಾಲು ಬಿದ್ದು; ಈ ಪುಸ್ತಕ ತಾನೇ ಬರೆದಿದ್ದೇನೋ ಎಂಬಷ್ಟು ಸಂತಸ ಪಡುತ್ತಿರುವ ಡಾ! ರಾಜು ಶಿವರುದ್ರಪ್ಪ ವಿಜಾಪೂರ. ಪತ್ರಕರ್ತರು; (ಹುಬ್ಬಳ್ಳಿ), ಸಾಹಿತ್ಯಾಭಿಮಾನಿಗಳೂ ಕಲಾರಸಿಕರೂ ಸ್ವತಃ ಸುಶ್ರ್ಯಾವ್ಯವಾಗಿ ಭಾವ ಗೀತೆ ಹಾಡುವ ಶ್ರೀ ಲಕ್ಷ್ಮಣ ತುಳಜಾರಾಮ ಕಬಾಡೆ. ಚೀಫ಼್ ಇಂಜನೀಯರ (ಶಕ್ತಿ ನಗರ), ನಮ್ಮಿಬ್ಬರ ಬರವಣಿಗೆ ಕಂಡು ಯಾವಾಗಲೂ ಹಿರಿ ಹಿರಿ ಹಿಗ್ಗುವ, ಶ್ರೀ ರಮೇಶ ಧರೆಪ್ಪ ಕಟ್ಟಿಮನಿ. ಎಕ್ಷಿಕ್ಯುಟಿವ್ ಇಂಜನೀಯರ; (ವಿಜಾಪೂರ), ಇವರ ಪ್ರೋತ್ಸಾಹಕ್ಕೆ ಯಾವತ್ತೂ ಬೆಲೆ ಕಟ್ಟಲಾಗದು.
ನಮ್ಮ ಬರವಣಿಗೆಯಲ್ಲಿರುವ ಸಂತಸದ ಕ್ಷಣಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಿರುವ- ಸದಾಸಿವ ನರಸಪ್ಪ ಭೂತನಾಳ. ಕಾರ್ಯದರ್ಶಿಗಳು, ಪೋಲೀಸ ಸಹಕಾರ ಪತ್ತಿನ ಸಂಘ,(ವಿಜಾಪೂರ), ತಬ್ಬಣ್ಣ ತೇಜಪ್ಪ ಭೂತನಾಳ, ಸಹೋದರರಾದ ದೇವೇಂದ್ರ ಕುಬೇರಪ್ಪ ಹೊನ್ನಕಸ್ತೂರಿ. (ವಿಜಾಪೂರ), ಶಶಿ, ಪ್ರಕಾಶ ಹಾಗೂ ಸಂತೋಷ ಶಿವರುದ್ರಪ್ಪ ವಿಜಾಪೂರ ಹಾಗೂ ಮದಾರಸಬ ಯಲ್ಲಪ್ಪ ಬಾಗಲಕೋಟ ಇವರನ್ನು ನೆನೆಯದೆ ಇರಲಾರೆವು.
ಸಹೋದರರಂತಿರುವ ಎಸ್. ಹಣಮಂತಪ್ಪ, ಜೈಕಿಷನ ಠಾಕೂರ, ಈರಣ್ಣ, ಚನಬಸಪ್ಪ.ಕುಂಬಾರ, ನಾಗಣ್ಣ, ಡಿ. ಎಚ್. ಕಂಬಳಿ, ರಾಮನಗೌಡ, ಶೇಕ್ಷಾ ಖಾದ್ರಿ, ಲಕ್ಷ್ಮಣ, ದೇವೇಂದ್ರಗೌಡ, ನಾಗರಾಜ (ಡಿಂಗ್ರಿ) ಶಂಕರಾನಂದ ಹುಲ್ಲೂರ, ಮಂಗೇಶ ನಾಯಿಕ, ಎಸ್.ಡಿ. ಹೊಸಮನಿ, ಎಮ್.ಐ. ಗೋಲಂದಾಜ, ಭಟ್ಟ ಗುರುಗಳು, ಬಿ.ಎಮ್. ಹಾದಿಮನಿ, ಇವರೆಲ್ಲರ ಪ್ರೀತಿ ವಾತ್ಸಲಕ್ಕೆ ಬೆಲೆ ಕಟ್ಟಲಾಗದು.
ಯಾವ ಜನ್ಮದ ನಂಟೋ ಗೊತ್ತಿಲ್ಲ; ಒಡ ಹುಟ್ಟಿದಂತಿರುವ ಪಾರ್ವತಿ, ಸರಸ್ವತಿ, ಗಾಯತ್ರಿ, ಶಾರದಾ, ನಳಿನಿ, ಅರಳಿ ಸೂರ್ಯಕಾಂತ, ಕೃಷ್ಣಮೂರ್ತಿ ಬಿಳಿಗೆರೆ, ಬಸವರಾಜ ಕಂಬಳಿ, ಶರಣ ಬಸವ ಡಾಣಿ, ಡಿ ಎಸ್. ಕಂದಗಲ್ಲ, ಶಿವಮೂರ್ತಿ, ಮಹಬೂಬ, ಶ್ರೀಮಂತ ತಂಗಡೆ, ಶಿವಣ್ಣ ಕುರಿ, ಪಟ್ಟಣಕರ, ಯಂಕಯ್ಯ, ಅಕ್ಕಶಾಣಿ ಪ್ರಧಾನೆ, ಅಮರೇಶ ವೀರಾಪೂರ, ಎಮ್.ಎಚ್. ತಳವಾರ, ಶ್ಯಾಮರಾವ್, ಅನಿತಾ, ಚೌಡಪ್ಪ, ಲಕ್ಷ್ಮಣ, ಹಣಮಪ್ಪ ಇವರೆಲ್ಲರ ಕಾಳಜಿ ಕಕ್ಕುಲಾತಿಗೆ ಕಿಮ್ಮತ್ತು ಕಟ್ಟಲಾಗದು.
ಹಿರಿಯರೂ ಮಾರ್ಗದರ್ಶಿಗಳೂ ಹಾಗೂ ನನ್ನ ವಿದ್ಯಾ ಗುರುಗಳೂ ಆದ ಶ್ರೀ ಎಸ್.ಎಸ್.ಕನಮಡಿ. ನಿವೃತ್ತ ಪ್ರಾಂಶುಪಾಲರು. (ವಿಜಾಪೂರ), ಶ್ರೀ ರಮೇಶ ಹುಲಗೆರಿ. (ಗಂಗಾವತಿ), ಕಾ.ಹು. ವಿಜಾಪೂರ. (ಗೊಳಸಂಗಿ) ಶ್ರೀ ಹಣಗಿಯವರು (ನರಗುಂದ) ಮಿತ್ರರಾದ ಎಸ್. ಎಸ್. ಬಿರಾದಾರ.(ವಿಜಾಪೂರ). ಮೇಡಮ್ ಪುರೋಹಿತ. ಪ್ರಾಂಶುಪಾಲರು (ಗೊಳಸಂಗಿ) ಬೇಬಿ ಕೂಡಗಿ, ಬೇಗಮ್, ಮಲ್ಲಣ್ಣ ಕುಂಬಾರ, ಇವರ ಪ್ರೀತಿ ವಾತ್ಸಲ್ಯ ಅನನ್ಯವಾದದ್ದು.
ನಮ್ಮ ಸಹೋದರರೂ ಆಪ್ತರೂ ಆದ ಶ್ರೀಯುತ, ಹಣಮಂತಪ್ಪ ಕಾಂಬಳೆ (ಹುಬ್ಬಳ್ಳಿ), ಅಶೋಕ ಕುಂದರಗಿ (ಬೆಂಗಳೂರ), ಅಶೋಕ ರಾಜಾಪೂರ (ಕಮತಗಿ), ಪರಸರಾಮ ಕಟ್ಟಿಮನಿ (ವಿಜಾಪೂರ), ಯಲ್ಲಪ್ಪ ವಿಜಾಪೂರ (ವಿಜಾಪೂರ) ಹಾಗೂ ಪವನ ಮಬ್ರುಮಕರ (ದೇವಲ ಗಾಣಗಾಪೂರ) ನಮ್ಮ ಮೇಲಿರುವ ಇವರ ಅಭಿಮಾನ ಮರೆಯಲಿಕ್ಕಾಗದು.
ನಮ್ಮ ಮನೆ ದೇವರುಗಳಾದ ದಿ. ತುಳಜಾರಾಮ ಕಬಾಡೆ, ದಿ. ಶಿವರುದ್ರಪ್ಪ ವಿಜಾಪೂರ, ಶ್ರೀ ಯಮನಪ್ಪ ಹೊಸಮನಿ, ಬಲರಾಮ ಬಾಲಗಾವಿ, ಗೋಪಾಲ ಮುಂಡೇವಾಡಿ, ಗಣೇಶ ಕಬಾಡೆ, ಸುರೇಶ ಕುಂದರಗಿ, ಹಾಗೂ ನಮ್ಮ ಮನೆತನದ ಆರತಿಗಳಾದ ಶ್ರೀಮತಿ ಅನಸೂಯಾ, ಗೌರಮ್ಮ, ವಾಣಕ್ಕ ಮತ್ತು ದೀಪಗಳಾದ ಶಿವಾನಂದ, ನಿತ್ಯಾನಂದ, ಮಂಜುನಾಥ, ವಿನೋದಕುಮಾರ ಮತ್ತು ಮಹಾನ್ ಇವರೆಲ್ಲರ ಸದಾಶಯಗಳು ಸದಾ ಕಾಲ ನಮ್ಮ ಬೆನ್ನಿಗಿರುವುದು ಸುಳ್ಳಲ್ಲ.
ಈ ಚಿಕ್ಕ ಕೃತಿಗೆ ಮುನ್ನುಡಿ ಬರೆದು, ಇದರ ಗೌರವ ಹೆಚ್ಚಿಸಿದ್ದಕ್ಕೆ, ಶ್ರೀ ರಾಜು ಎಸ್ ವಿಜಾಪೂರ ಪತ್ರಕರ್ತರು (ಡೆಕ್ಕನ ಹೆರಾಲ್ಡ್) ಎಮ್ ಎ ಪಿಎಚ್ ಡಿ, ಬೆನ್ನುಡಿ ಬರೆದು ಸಮಾಜ ಸೇವೆಯಲ್ಲಿ ತಮ್ಮನ್ನು ಅಪೂರ್ವವಾಗಿ ತೊಡಗಿಸಿಕೊಂಡಿರುವ ಶ್ರೀ ರಮೇಶ ಡಿ ಕಟ್ಟಿಮನಿ. ಎಕ್ಷಿಕ್ಯುಟಿವ್ ಇಂಜನೀಯರ ವಿಜಾಪೂರ, ಹಾಗೂ ಲಕ್ಷ್ಮಣ ತುಳಜಾರಾಮ ಕಬಾಡೆ. ಚೀಫ಼್ ಇಂಜನೀಯರ ಶಕ್ತಿ ನಗರ, ಇವರನ್ನು ಯಾವ ಕಾಲಕ್ಕೂ ಮರೆಯಲಿಕ್ಕಾಗದು.
ನಮ್ಮ ತಾಯಂದಿರಾದ ಶ್ರೀಮತಿ ಮಹಾದೇವಿ ತುಳಜಾರಾಮ ಕಬಾಡೆ, ಶಾಂತಾಬಾಯಿ ಯಮನಪ್ಪ ಹೊಸಮನಿ, ಲಕ್ಷ್ಮೀಬಾಯಿ ಶಿವರುದ್ರಪ್ಪ ವಿಜಾಪೂರ, ಹಾಗೂ ದಿ. ಶ್ಯಾವಕ್ಕ ಬಲರಾಮ ಬಾಲಗಾವಿ ಹಾಗೂ ಇವರೆಲ್ಲರ ಮಹಾ ತಾಯಿಯಾದ, ಶ್ರೀಮತಿ ತಿಪ್ಪವ್ವ ಮಲ್ಲಪ್ಪ ಭೂತನಾಳ, ಇವರೆಲ್ಲರ ಮಾತೃ ಕರುಳಿನ ಮಮತೆ ಯಾವತ್ತೂ ನಮಗೆ ಶ್ರೀರಕ್ಷೆಯಾಗಿರುವುದು, ಹಾಗೂ ನಮ್ಮ ಬೆನ್ನ ಹಿಂದಿರುವ ಪೂಜ್ಯನೀಯರಾದ, ದಿ. ಮಲ್ಲಪ್ಪ ಪರಸಪ್ಪ ಭೂತನಾಳ ಇವರ ಅಗೋಚರ ಪ್ರೀತಿ ವಾತ್ಸಲ್ಯ, ನಮ್ಮೆಲ್ಲರ ಮೇಲಿರುವುದು ಸೂರ್ಯ ಪೂರ್ವಕ್ಕೆ ಹುಟ್ಟಿದಷ್ಟೇ ಸತ್ಯ. ಕಂಪ್ಯುಟರ ಟೈಪಿಂಗ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಕೊಟ್ಟ ಕು. ಆರ್.ಎನ್. ಕಂದಗಲ್ ಇವರನ್ನು ನೆನೆಯೆದೆ ಇರಲಾರೆವು.
ಶ್ರೀ ಹೇಮಂತ ಮಲ್ಲಪ್ಪ ಭೂತನಾಳ, ಎಮ್.ಎ.
ಪ್ರಾ೦ಶುಪಾಲರು
ಶ್ರೀಮತಿ ಚಿನ್ನಮ್ಮ ತುಳಜಾರಾಮ ಕಬಾಡೆ, ಎಮ್.ಎ.
ಮುಖ್ಯ ಗುರುಮಾತೆ
ನಾವು-ನಮ್ಮವರು
(ವಿಜಾಪೂರ ಹರಳಯ್ಯ ಸಮಗಾರರ ಒಂದು ಪರಿಚಯ)

ಪ್ರಸ್ತಾವನೆ
ವಿಜಾಪೂರ ಎ೦ದಾಕ್ಷನ ಥಟ್ಟನೆ ನನಪಾಗುವ ಸ೦ಗತಿಗಳು- ಇಲ್ಲಿಯ ಪಿಸುಗುಟ್ಟುವ ಗೋಲಗುಮ್ಮಟ, ದೆವ್ವ ಬಿಡಿಸುವ ಜೋಡಗುಮ್ಮಟ, ಏನೋ ಮಾಡಲು ಹೋಗಿ; ಇನ್ನೇನೋ ಆದ ಬಾರಾ ಕಮಾನು, ಊರೆ೦ಬ ಊರು ಅ೦ಗೈಯ್ಯಲ್ಲಿ ಕಾಣುವ೦ತಾಗಲು; ಏರಿ ನೋಡಲು ಕಟ್ಟಿದ೦ತಿರುವ ಉಪ್ಪಲಿ ಬುರುಜು, ಜೀವ ಬೇಕಾದವರಿಗೆ ಈಜು ಕಲಿಯಲು ತಾಜಬಾವಡಿ; ಅದು ಬೇಡಾದವರಿಗೆ ಹಾರಿಕೊಳ್ಳಲು ಚ೦ದಾಬಾವಡಿ, ಶ್ವೇತ ವಸ್ತ್ರಧಾರಿಣಿಯಾದ ಮುತ್ತಿನ ಮಸೀದಿ, ಮುತೈದೆತನದ ಎರಡೂ ಬಳೆ ಕಳೆದುಕೊ೦ಡ; ಮುಲಕ್ ಮೈದಾನಿನ ದೈತ್ಯಾಕಾರದ ತೋಪು; ಅವೆರಡು ಬಳೆಗಳು ಅಂತಿಂಥವುಗಳಾಗಿರಲಿಲ್ಲ; ಒಂದೊಂದು ಬಳೆ ಎತ್ತಲು ಪೈಲ್ವಾನನೇ ಬೇಕಾಗಿತ್ತು.
ಇನ್ನಷ್ಟು ನೆನಪಿಸಿಕೊ೦ಡರೆ- ದೆಹಲಿಯಲ್ಲಿರುವ೦ತಹದ್ದೇ ಜುಮ್ಮಾ-ಮಸೀದಿ, ಅಪೂರ್ವ ಕುಸುರಿ ಕಲೆಯನ್ನು ಮೈಯೆಲ್ಲಾ ಮೆತ್ತಿಕೊ೦ಡಿರುವ ಇಬ್ರಾಹಿ೦ ರೋಜಾ, ನೆತ್ತಿ ಸುಡುವ ಉರಿ ಬಿಸಿಲು, ಧೂಳು ಉಗುಳುವ ರೋಡುಗಳು, ಹೂಳು ತು೦ಬಿದ ಭೂತನಾಳ ಕೆರೆ, ವಾರಕ್ಕೊಮ್ಮೆ ಬರುವ ನಳದ ನೀರು, ಊರಿನ ಪಶ್ಚಿಮಕ್ಕೆ ಕರ್ನಾಟಕ ವಿಶ್ವ ವಿದ್ಯಾಲದ ಸ್ನಾತಕೋತ್ತರ ವಿದ್ಯಾ ಕೇಂದ್ರ; ಹಾಗೂ ಆಲಮೀನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಪೂರ್ವಕ್ಕೆ ರೈಲು (ಭವಿಷ್ಯದಲ್ಲಿ ವಿಮಾನ ) ನಿಲ್ದಾಣ; ಹಾಗೂ ಇವೆರಡರ ನಡುವೆ; ಆಡು ಮರಿ ನು೦ಗಿದ ಹೆಬ್ಬಾವಿನ೦ತೆ; ಸುಸ್ತು ಹೊಡೆದು ಉದ್ದಕ್ಕೆ ಬಿದ್ದುಕೊ೦ಡಿರುವ; ಹತ್ತಾರು ಕಿಲೋಮೀಟರುಗಳ ಡಾ೦ಬರು ರಸ್ತೆ.
ಇಷ್ಟೇ ಅಲ್ಲ- ಕವಳಿ ಗ್ಯಾಟಿಗೆ ಖಡ್ಗಧಾರಿ ಛತ್ರಪತಿ ಶಿವಾಜಿ, ಶಹರದ ಹೃದಯ ಭಾಗದಲ್ಲಿ ಮೌನಧಾರಿ ಮಹಾತ್ಮಾ ಗಾ೦ಧಿ, ಮು೦ದಿನ ಸರ್ಕಲ್ಲಿನಲ್ಲಿ ಅಶ್ವಾರೋಹಿ ಬಸವಣ್ಣ; ಮಹಿಳಾ ವಿಶ್ವ ವಿದ್ಯಾಲಯಕ್ಕೆ ಎದುರಾಗಿ ಸ೦ವಿಧಾನ ಶಿಲ್ಪಿ ಡಾ. ಬಾಬಾಸಾಹೇಬರ ಪುತ್ಥಳಿಗಳು-ಈ ಊರ ಅ೦ತಃಸ್ಸಾಕ್ಷಿಗಳಾಗಿ ನಿ೦ತುಕೊ೦ಡ೦ತಿವೆ. ಇಲ್ಲಿಯ ಜವಾರಿ ಜೋಳದ ಬಿಳಿ ರೊಟ್ಟಿ, ತಾಜಾ ಹಾಗೂ ಸೋವಿಯಾದ ಸತ್ವಯುತ ಕಾಯಿಪಲ್ಲೆ, ರವಿವಾರ ಸೇರುವ ರ೦ಗು ರ೦ಗಾದ ವಾರದ ಸ೦ತೆ, ಶುಕ್ರವಾರ ಬದಲಾಗುವ ಚಲನ ಚಿತ್ರಗಳು, ಸ೦ಕ್ರಮಣ ಜಾತ್ರೆಯಲ್ಲಿ ಗಾ೦ಧೀ ಚೌಕದಿ೦ದ ಸಿದ್ರಾಮೇಶ್ವರ ದೇವಸ್ಥಾನಕ್ಕೆ, ಮತ್ತೆ ಅಲ್ಲಿ೦ದ ಚೌಕದವರೆಗೆ ಪರೇಡ್ ಮಾಡುವ ಹದಿ ಹರೆಯದ ಹುಡುಗ-ಹುಡುಗಿಯರು. ಅಣ್ಣ-ತಮ್ಮ೦ದಿರ೦ತಿರುವ ಹಿ೦ದೂ-ಮುಸ್ಲಿ೦ರು, ಅಳವಿ ಮಸೀದಿಯ ಹಸಿರು ಡೋಲಿ ಹಾಗೂ ಎರಡೇ ಎರಡು ತಾಸಿನಲ್ಲಿ; ತುರುಸಿನಿ೦ದಾಚರಿಸುವ ಶಿರಿಯಾಳ ಶೆಟ್ಟಿ ಜಾತ್ರೆ.
ಎ೦ತಹ ಬಡವನೂ ಜೀವನ ನಿರ್ವಹಿಸಬಲ್ಲನೆ೦ಬಷ್ಟು ಚೀಪ್ ರೇಟಿನ ಈ ಊರನ್ನು, ಮೊನ್ನೆ ಮೊನ್ನೆಯವರೆಗೆ ಅ೦ದರೆ, ಇಲ್ಲಿ ಆಲಮೀನ್ ಹಾಗೂ ಬಿಎಲ್ಡಿಇಯ ವೈದ್ಯಕೀಯ ಕಾಲೇಜುಗಳು, ಪ್ರಾರ೦ಭವಾಗುವ ಮೊದಲು, ಫ಼ಕೀರ ಬಸ್ತಿ ಎ೦ದು ಕರೆಯುತ್ತಿದ್ದರು. ಅದೇ ವಿಜಾಪೂರ ಇ೦ದು ಅಕ್ಷರಶಃ ಕುಬೇರ ಬಸ್ತಿಯಾಗಿ ಬದಲಾಗಿ ಬಿಟ್ಟಿದೆ. ವಿಜಾಪೂರದ ನೆಲ ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದರೂ, ಇಲ್ಲಿಯ ಜನರ ಹೃದಯ ಶ್ರೀಮಂತಿಕೆ ಬಂಗಾರಕ್ಕಿಂತಲೂ ಬೆಲೆಯುಳ್ಳದ್ದು. ಎಪ್ಪತ್ತರ ದಶಕದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ-ಗಾಂಧಿಯವರ ತೂಕಕ್ಕೆ ಸಮ ಸಮವಾಗಿ ಬಂಗಾರವನ್ನೆ ತೂಗಿ ದೇಶಕ್ಕೆ ಸಮರ್ಪಿಸಿದ ಹೊನ್ನಾಡು ಈ ಊರು. ಹಾಗಾಗಿ ವಿಜಾಪೂರ- ಇದು ಬರದ ನಾಡೂ ಹೌದು; ಬಂಗಾರದ ಬೀಡೂ ಹೌದು!
ವಿಜಾಪೂರದ ಹಿನ್ನೆಲೆ
ರಾಜ್ಯದ ಉತ್ತರ ಭಾಗದ ಮಧ್ಯದಲ್ಲಿರುವ ವಿಜಾಪೂರ ಜಿಲ್ಲೆಯು ಒಟ್ಟು ೧೭೦೮೯ ಚ. ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದು ಭಾರತದ ಪ್ರಸ್ಥ ಭೂಮಿಯಲ್ಲಿರುವ ಒಣ ಪ್ರದೇಶವಾಗಿದ್ದು, ಪಶ್ಚಿಮ ಕರಾವಳಿಯಿಂದ ಸುಮಾರು ೩೦೦ ಕಿ.ಮೀ. ದೂರದಲ್ಲಿದೆ. ವಿಜಾಪೂರ ಜಿಲ್ಲೆಯ ಉತ್ತರ ಮತ್ತು ವಾಯುವ್ಯ ದಿಕ್ಕುಗಳಲ್ಲಿ; ಮಹಾರಾಷ್ಟ್ರ ರಾಜ್ಯದ ಸೋಲಾಪೂರ ಮತ್ತು ಸಾಂಗ್ಲಿ ಜಿಲ್ಲೆಯ ಗಡಿ ಪ್ರದೇಶವಿದೆ. ಉಳಿದ ಭಾಗ ಕರ್ನಾಟಕ ರಾಜ್ಯದ ವಿಭಿನ್ನ ಜಿಲ್ಲೆಗಳಿಂದ ಸುತ್ತುವರೆಯಲ್ಪಟ್ಟಿದ್ದು; ಪೂರ್ವದಲ್ಲಿ ಗುಲ್ಬರ್ಗ ಜಿಲ್ಲೆ; ಆಗ್ನೇಯ ಮತ್ತು ದಕ್ಷಿಣದಲ್ಲಿ ರಾಯಚೂರ ಹಾಗೂ ಬಾಗಲಕೋಟ ಜಿಲ್ಲೆ; ಪಶ್ಚಿಮದಲ್ಲಿ ಬೆಳಗಾವಿ ಜಿಲ್ಲೆಯ ಗಡಿ ಪ್ರದೇಶವನ್ನು ಹೊಂದಿದೆ.
ಭೌಗೋಳಿಕವಾಗಿ ಒಣ ಹವೆಯನ್ನು ಹೊಂದಿರುವ; ಈ ಜಿಲ್ಲೆಯು ಬಯಲು ಸೀಮೆಯ ನಾಡಾಗಿದೆ. ಅವಿಭಜಿತ ವಿಜಾಪೂರ ಜಿಲ್ಲೆಯಲ್ಲಿ ಭೀಮಾ, ಕೃಷ್ಣಾ, ಡೋಣಿ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಹರಿಯುತ್ತಿದ್ದವು. ಇದು ಪಂಚ ನದಿಗಳ ನಾಡೆಂದು ಜನಪ್ರೀಯವಾಗಿತ್ತು. ಹಾಗೂ ಇದಕ್ಕೆ “ಕರ್ನಾಟಕದ ಪಂಜಾಬ” ಎಂದು ಕರೆಯಲಾಗುತ್ತಿತ್ತು.
ಒಣ ಹವೆ ಹಾಗೂ ಹಿತಕರವಾದ ಹವಾಗುಣದಿಂದಾಗಿ; ಶ್ರೇಷ್ಠ ಮಟ್ಟದ ಬಿಳಿ ಜೋಳ ಹಾಗೂ ಗೋದಿಯನ್ನು ಇಲ್ಲಿ ಬೆಳೆಯಲಾಗುತ್ತಿದೆ. ‘ಡೋಣಿ ಬೆಳೆದರೆ ಓಣಿಯಲ್ಲಾ ಕಾಳು’; ಎಂಬ ನಾಣ್ಣುಡಿ ಇಲ್ಲಿಯ ಪ್ರಾದೇಶಿಕ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಸರಾಸರಿ ೫೦೦ ಮಿ. ಮೀ. ಮಳೆಯಾಗುತ್ತಿದ್ದರೂ, ಅದರ ಅನಿಶ್ಚಿತತೆಯಿಂದಾಗಿ, ಸತತ ಬರಗಾಲದ ಬವಣೆಗೆ ಒಳಗಾಗಿ, ಇದು ಬರಗಾಲದ ಜಿಲ್ಲೆಯೆಂದು ಕರೆಯಿಸಿಕೊಳ್ಳುತ್ತಿರುವುದು, ನಿಸರ್ಗದ ವೈಪರಿತ್ಯಗಳಲ್ಲಿ ಒಂದಾಗಿದೆ.
ಪಂಚ ನದಿಗಳ ಬೀಡು, ಬಿಳಿ ಜೋಳ ಗೋದಿ ಹತ್ತಿಗಳ ಪೆರ್ನಾಡು, ವಿಭಿನ್ನ ಸಂಸ್ಕೃತಿಗಳ ನಾಡು, ಎಂದೆಲ್ಲ ಖ್ಯಾತಿ ಪಡೆದಿರುವ ವಿಜಾಪೂರ; ಇದು ೧೮೮೫ರಲ್ಲಿ ಜಿಲ್ಲಾ ಕೆಂದ್ರವಾಗುವುದಕ್ಕೆ ಮೊದಲು, ೮ ತಾಲ್ಲೂಕುಗಳನ್ನು ಒಳಗೋಂಡ ಕಲಾದಗಿ ಜಿಲ್ಲೆಯು ೧೮೬೪ರಿಂದಲೇ ಅಸ್ತಿತ್ವದಲ್ಲಿದ್ದು, ೧೯೪೭ರ ನಂತರ ಬೀಳಗಿ, ಮುಧೋಳ ಹಾಗೂ ಜಮಖಂಡಿಗಳ ಸೇರ್ಪಡೆಯಿಂದಾಗಿ; ತಾಲ್ಲೂಕುಗಳು ೧೧ಆಗಿ, ಭೌಗೋಳಿಕವಾಗಿ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ೧೯೯೭ರ ಅಗಸ್ಟನಲ್ಲಿ ಜಿಲ್ಲಾ ವಿಭಜನೆಯಿಂದಾಗಿ, ಆ ಹೆಗ್ಗಳಿಕೆಯೂ ಹೋಯಿತು. ಜಿಲ್ಲೆಗಳ ಪುನರ್ವಿಂಗಡನೆಯ ಬಳಿಕ; ರಾಜ್ಯದಲ್ಲಿ ಹೆಚ್ಚು ಭೂಪ್ರದೇಶ ಹೊಂದಿದ್ದ ವಿಜಾಪೂರ ಜಿಲ್ಲೆಯು; ಆ ಸ್ಥಾನವನ್ನು ಗುಲ್ಬರ್ಗಾ ಜಿಲ್ಲೆಗೆ ಬಿಟ್ಟು ಕೊಟ್ಟಿದೆ.
ವಿಜಾಪೂರ ಜಿಲ್ಲೆಗೆ ಸಂಬಂಧಿಸಿದಂತೆ; ಈ ಹಿಂದೆ ಜೆ.ಎಮ್. ಕ್ಯಾಂಬೆಲ್ ಅವರು, ಆಂಗ್ಲ ಭಾಷೆಯಲ್ಲಿ ಸಂಪಾದಿಸಿದ ‘ವಿಜಾಪೂರ ಜಿಲ್ಲಾ’ ಗೆಜೆಟೀಯರನ್ನು ಮುಂಬಯಿ ಸರ್ಕಾರ ೧೮೮೪ರಲ್ಲಿ ಪ್ರಕಟಿಸಿದ್ದು; ವೆಂಕಟರಿಂಗೋ ಕಟ್ಟಿಯವರು, ಅದನ್ನು ಪರಿಷ್ಕರಿಸಿ ಸಿದ್ಧಪಡಿಸಿದ; ಕನ್ನಡ ಆವೃತ್ತಿಯು ೧೮೯೩ರಲ್ಲಿ ಪ್ರಕಟಗೊಂಡಿತು. ಅನಂತರ ಬಿ. ಎನ್. ಸತ್ಯನ್ ಅವರು, ಆಂಗ್ಲ ಭಾಷೆಯಲ್ಲಿ ಸಂಪಾದಿಸಿದ ವಿಜಾಪೂರ ಜಿಲ್ಲಾ ಗೆಜೆಟೀಯರನ್ನು, ಗೆಜೆಟೀಯರ ಇಲಾಖೆಯು ೧೯೯೬ರಲ್ಲಿ ಪ್ರಕಟಿಸಿತು.
ವಿಜಾಪೂರ ಹೆಸರಿನ ಮೂಲ
ವಿಜಾಪೂರ ಇತಿಹಾಸವು ಬಹು ಪ್ರಾಚೀನವಾದುದು. ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಭಾಗಗಳು, ರಾಮಾಯಣ ಕಾಲದ ದಂಡಕಾರಣ್ಯದ ಒಂದು ಭಾಗವಾಗಿತ್ತೆಂದು ಹೇಳುತ್ತಾರೆ. ಈಲ್ಲೆಯ ಸಿಂದಗಿ ತಾಲ್ಲೂಕಿನ ದೇವೂರಿನಲ್ಲಿ ದೊರಕಿರುವ; ೨ನೆಯ ಜಯಸಿಂಹನ ೧೯೨೯ರ ಶಾಸನದಲ್ಲಿ, ವಿಜಾಪೂರವನ್ನು ‘ವಿಜಯಾಪೂರ’ ಎಂದು ಉಲ್ಲೇಖಿಸಲಾಗಿದೆ.
ಒಂದು ಹೇಳಿಕೆಯಂತೆ ಬಾದಾಮಿ ಚಾಲುಕ್ಯರ ಮಾಂಡಲೀಕನೊಬ್ಬ; ವಿಜಾಪೂರ ಪಟ್ಟಣವನ್ನು ಕಟ್ಟಿಸಿದನೆಂದು; ಹಾಗೂ ಇನ್ನೊಂದು ಹೇಳಿಕೆಯಂತೆ ‘ಬಿಜ್ಜನ ಹಳ್ಳಿಯು’ ಮಾಂಡಲೀಕನೊಬ್ಬನ ರಾಜಧಾನಿಯಾದಾಗ ‘ಬಿಜ್ಜಪುರ’ವು ಅದೆ ‘ವಿದ್ಯಾಪುರ’ವಾಗಿರಲೂಬಹುದು.
ಗಜಕನಹಳ್ಳಿ, ಚಂದನಕೇರಿ, ಕ್ಯಾದಿಗ, ಕಾತರಕೇರಿ, ಕುರುಬನಹಟ್ಟಿ, ಮತ್ತು ಕುಜನಕಲಟ್ಟಿ ಎಂಬ ಆರು ಹಳ್ಳಿಗಳು ಸೇರಿ, ‘ಬಿಜ್ಜನಹಳಿ’ಯಾಯಿತೆಂದೂ ಸ್ಥಳೀಯವಾಗಿ ಹೇಳಲಾಗುತ್ತಿದೆ. ಅದೇ ಬಿಜ್ಜನಹಳ್ಳಿ ಸಂಸ್ಕೃತೀಕರಣಗೊಂಡು, ‘ವಿದ್ಯಾಪುರ’ವಾಗಿ, ‘ವಿಜಯಪುರ’ವಾಯಿತೆಂದು, ಮುಂದೆ ವಿಜಾಪೂರ ಅಥವಾ ಬಿಜಾಪೂರ ಎಂದು ರೂಢಿಯಾಗಿರಬೇಕು.
ಆದಿಲಶಾಹಿ ಅರಸರ ಆಳ್ವಿಕೆಯ ಕಾಲದಲ್ಲಿ, ೨ನೆಯ ಇಬ್ರಾಹಿಮ್ ರಾಜನು ವಿಜಾಪೂರದ ಹೆಸರನ್ನು, ‘ವಿದ್ಯಾಪುರ’ವೆಂದೂ, ಹಾಗೂ ಸುಲ್ತಾನ್ ಮಹಮ್ಮದನು, ‘ಮಹಮ್ಮದಪುರ’ವೆಂದು ಬದಲಾಯಿಸಿದನು. ಇಬ್ರಾಹಿಂ ರೋಜಾದ ಬಾಗಿಲಿನಲ್ಲಿ ಕೆತ್ತಲಾಗಿರುವ; ಪರ್ಷಿಯನ್ ಶಾಸನವು; ವಿಜಾಪೂರವನ್ನು, ‘ವಿದ್ಯಾಪುರ’(ಅಧ್ಯಯನ ಕೇಂದ್ರ) ಎಂದು ಉಲ್ಲೇಖಿಸುತ್ತದೆ. ಪರ್ಷಿಯನ್ ಭಾಷೆಯಲ್ಲಿರುವ ಪ್ರಾಚೀನ ಭೂಪಟದಲ್ಲಿ, ವಿಜಾಪೂರವನ್ನು ‘ದರ್-ಉಲ್-ಜಫ಼ರ್’ ಅಂದರೆ, ‘ವಿಜಯದ ಪೀಠ’ ಎಂದು ಹೆಸರಿಸಿದೆ. ಈಗ ‘ವಿಜಾಪೂರ’ ಎಂಬ ಹೆಸರು ಪ್ರಚಲಿತದಲ್ಲಿದೆ. ಆಂಗ್ಲರ ಪ್ರಭಾವದಿಂದ ವಿಜಾಪೂರವು, ‘ಬಿಜಾಪೂರ’ ಎಂದು ರೂಢಿಗೆ ಬಂದಿರುವ ಸಾಧ್ಯತೆಯಿದೆ. ಬಹಮನಿ ರಾಜ್ಯವು ಸ್ಥಾಪನೆಯಾದಾಗ ವಿಜಾಪೂರವು, ಗುಲ್ಬರ್ಗಾ ಪ್ರಾಂತ್ಯಕ್ಕೆ ಸೇರಿತ್ತು. ಆದಿಲಶಾಹಿ ರಾಜ್ಯ ಸ್ಥಾಪನೆಯಾದಾಗ ವಿಜಾಪೂರವು ಅದರ ರಾಜಧಾನಿಯಾಯಿತು.
ಸಮಗಾರ ಪದದ ಉತ್ಪತ್ತಿ
ಕೈ ಕಸಬುದಾರರು ಮತ್ತು ಕುಶಲ ಕರ್ಮಿಗಳು ವಿಶ್ವದಾದ್ಯಂತ ಎಲ್ಲ ಕಾಲಗಳಲ್ಲೂ ಕಾಣ ಸಿಗುತ್ತಾರೆ. ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕದಲ್ಲಿ ಕಂಡು ಬರುತ್ತಿರುವ ಐದು ಪ್ರಮುಖ ಪರಿಶಿಷ್ಟ ಜಾತಿಗಳಲ್ಲೊಂದು ಸಮಗಾರರದ್ದು.
‘ಸಮಗಾರ’ ಎ೦ಬುದು ಕನ್ನಡದ ಶಬ್ದ. ಇದರ ಇನ್ನೊ೦ದು ರೂಪ ಸಮ್ಮಗಾರ. ಇದು ಚಮ್ಮಾರ ಎ೦ಬುದರ ನ೦ತರದ ಪದ. ಚ>ಸ ತೌಲವ್ಯೀಕರಣ ಹೊ೦ದಿ, ಚಮ್ಮಾರ ಆಗಿ; ಸಮ್ಮಾರ> ಸಮ್ಮಗಾರ>ಸಮಗಾರ ಎ೦ದಾಗಿರಬಹುದು. ಸಮಗಾರರಿಗೆ ಹಿ೦ದಿಯಲ್ಲಿ ಮೋಚಿ, ಉರ್ದುವಿನಲ್ಲಿ ಚಮಾರ, ಮರಾಠಿಯಲ್ಲಿ ಚಾ೦ಭಾರ, ತಮಿಳಿನಲ್ಲಿ ಚಕ್ಕುಲಿಯನ್ ಹಾಗೂ ತೆಲುಗುವಿನಲ್ಲಿ ರಜಕಾರ ಎ೦ದು ಕರೆಯಲಾಗುತ್ತಿದೆ. ‘ಚಮ’ ಮತ್ತು ‘ಮಚ’ ಪದಗಳ ಮು೦ದೆ ಕಾ (ಗಾ) ರ ಆದೇಶಿಸಿದಾಗ, ಅಲ್ಲೊಬ್ಬ ವ್ಯಕ್ತಿ ಸೇರಿಕೊ೦ಡು; ಚಮಗಾರ ಮತ್ತು ಮಚಗಾರ ಪದಗಳ ಉಪಲಬ್ಧವಾಗುತ್ತದೆ. ಚರ್ಮಾಧಾರಿತ ಉತ್ಪಾದನಾ ವೃತ್ತಿಯಲ್ಲಿ ಪರ೦ಪರಾಗತವಾಗಿ ತೊಡಗಿಸಿಕೊ೦ಡಿರುವವನು- ಈ ಚರ್ಮಕಾರ> ಚಮಗಾರ>ಸಮ್ಮಗಾರ>ಸಮಗಾರ ಎ೦ತಾಗಿದೆ. (ಸುಣಗಾರ ಹೂಗಾರ ಆದ೦ತೆ)
ಹರಳಯ್ಯನ ವ೦ಶಸ್ಥರು
ಪರಿಶಿಷ್ಠ ಜಾತಿಗಳಲ್ಲಿ ಸಮಗಾರ ಸಮುದಾಯವೂ ಒ೦ದು ಉಪಜಾತಿ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನೆಲೆಸಿರುವ ಇವರು, ಅವಿಭಜಿತ ವಿಜಾಪೂರ ಜಿಲ್ಲೆಯಲ್ಲಿ ಬಹುವಾಗಿ ಕಾಣ ಸಿಗುತ್ತಾರೆ. ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಜೊತೆಯಲ್ಲಿ, ಶಿವಶರಣ ಹರಳಯ್ಯನವರ ಪ್ರಸ್ತಾಪ ಬರುತ್ತದೆ. ಭಕ್ತಿ ಭಾ೦ಡಾರಿ ಬಸವಣ್ಣನಿಗೆ ತಮ್ಮ ತೊಡೆ ಚರ್ಮದಿ೦ದ, ಪಾದರಕ್ಷೆಗಳನ್ನು ನಿರ್ಮಿಸಿ ಕೊಟ್ಟ ಮಹಾನ್ ಶರಣ ದ೦ಪತಿಗಳೆ೦ದೂ ಇವರ ಪ್ರತೀತಿ ಇದೆ. ತಾವು ಶರಣ ಹರಳಯ್ಯನ ವ೦ಶಸ್ಥರೆ೦ದು ಸಮಗಾರರ ನ೦ಬಿಕೆ.
ಮೂಲ ಪುರುಷ ಹರಳಯ್ಯ
ಕರ್ನಾಟಕ ರಾಜ್ಯದಲ್ಲಿ ಹನ್ನೆರಡನೆಯ ಶತಮಾನಕ್ಕೆ ತನ್ನದೇ ಆದ ಮಹತ್ವವಿದೆ. ದುಡಿಯುವ ಜೀವಿಗಳ ಬಾಳಿನಲ್ಲಿ, ಸಮ ಸಮಾಜದ ಬೆಳಕಿನ ಕಿರಣ ಕುಡಿಯೊಡೆದ ಕಾಲವದು. ಅಣ್ಣ ಬಸವಣ್ಣನ ನೇತೃತ್ವದಲ್ಲಿ ಕಾಯಕ ಜೀವಿಗಳು ಒಗ್ಗಟ್ಟಾಗಿ, ವೈದಿಕ ಪರಂಪರೆಯ ಅಸಮಾನತೆಯ ಜಾಡಿನಿಂದ ಹೊರ ಬರುವ ಪ್ರಯತ್ನಕ್ಕೆ, ಮೊದಲ ಹೆಜ್ಜೆ ಇಟ್ಟ ಹೊಸ ಮನ್ವಂತರವದು. ಒಡನಾಡಿಗಳನ್ನು ನಾಯಿ ನರಿಗಳಿಗಿಂತಲೂ ಕಡೆಯಾಗಿ ಕಾಣುತ್ತಿದ್ದ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೊಗೆದು ದುಡಿಮೆಯ ಘನತೆಯನ್ನು ಎತ್ತಿ ಹಿಡಿದ ಪರ್ವ ಗಳಿಗೆಯದು.
ಸಗರ ಶಹಾಪೂರ
ಇಂದಿನ ಗುಲಬರ್ಗಾ ಜಿಲ್ಲೆಯ ಶಹಾಪೂರ ತಾಲ್ಲೂಕಿನಲ್ಲಿ ‘ಸಗರ’ ಎನ್ನುವ ಗ್ರಾಮವೊಂದಿದೆ. ಅಲ್ಲಿ ಹರಳಯ್ಯ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳು ವಾಸಿಸುತ್ತಿದ್ದರು. ತಮ್ಮ ಕುಲ ಕಸುಬಾದ ಜೋಡು (ಪಾದರಕ್ಷೆ) ತಯಾರಿಕೆಯಲ್ಲಿ ತೊಡಗಿದ್ದ, ಇವರು ಕಲ್ಯಾಣ ನಾಡಿನ ಅಣ್ಣ ಬಸವಣ್ಣನವರ ಕೀರ್ತಿಯನ್ನೂ, ಅವರ ದಲಿತ ಪರ ಕಾಳಜಿ- ಕಕ್ಕುಲಾತಿಯನ್ನು, ಅವರಿವರ ಬಾಯಿಯಿಂದ ಕೇಳುತ್ತಲೇ ಇದ್ದರು. ತಮ್ಮೂರು ಹಾಗೂ ಸುತ್ತಮತ್ತಲಿನ ಕೈ-ಕಸಬುದಾರರು, ಬಸವಣ್ಣನ ಪ್ರಸಿದ್ಧಿಯನ್ನು ಕೇಳಿಸಿಕೊಂಡವರು, ಕಲ್ಯಾಣ ನಾಡಿನತ್ತ ವಲಸೆ ಹೋಗುತ್ತಿರುವುದನ್ನೂ ನೋಡುತ್ತಿದ್ದರು.
ಕಲ್ಯಾಣ ನಾಡಿಗೆ ಹೋಗಿ ಬಂದವರಂತೂ, ಅಣ್ಣ ಬಸವಣ್ಣನವರನ್ನು ಹೊಗಳಿದ್ದೋ ಹೊಗಳಿದ್ದು. ಕಾಯಕ ಜೀವಿಗಳ ಕುರಿತು ಅಣ್ಣನಿಗಿರುವ ಅಭಿಮಾನ ಮತ್ತು ಅಪೂರ್ವವಾದ ಗೌರವಕ್ಕೆ, ಮಾರು ಹೋಗದವರೇ ಪಾಪಿಗಳು, ಎನ್ನುವಷ್ಟು ಬಸವನ ಪ್ರಭಾವ ಹಬ್ಬತೊಡಗಿತು. ಹರಳಯ್ಯ ದಂಪತಿಗಳು ಇದೆಲ್ಲವನ್ನು ಶಾಂತ ಚಿತ್ತರಾಗಿ ಗಮನಿಸುತ್ತಲೇ ಇದ್ದರು.
ತಾವಾಯಿತು ತಮ್ಮ ಹಿರಿಯರಾಯಿತು, ತಲೆತಲಾಂತರದಿಂದ ಮಾನವ ಶರೀರದ ಅಡಿಪಾಯದಂತಿರುವ ಪಾದಗಳಿಗೆ, ಪಾದರಕ್ಷೆಗಳನ್ನು ಮಾಡಿ ಕೊಡುವುದೇ ಆಯಿತು. ಸಮಾಜ ತಮ್ಮನ್ನು ಯಾವ ಕಾಲಕ್ಕೂ ಗೌರವದಿಂದ ಕಾಣುವ ಮಾತು, ಅದೊಂದು ಕನಸಿನ ಸಂಗತಿಯೇ ಸರಿಯೆಂದು, ತೀರ್ಮಾನಿಸಿದ ಹರಳಯ್ಯ್ಯ ದಂಪತಿಗಳು, ತಾವೂ ಅಣ್ಣನ ನಾಡಿಗೆ ಹೊರಡಲು ಸನ್ನದ್ಧರಾಗಿಯೇ ಬಿಟ್ಟರು.
ಶರಣು ಶರಣಾರ್ಥಿಗಳು
ಒಮ್ಮೆ ಕಲ್ಯಾಣ ಪಟ್ಟಣದ ರಾಜ ಬೀದಿಯಲ್ಲಿ, ದಿನ ನಿತ್ಯದಂತೆ ಹರಳಯ್ಯನವರು ಪಾದರಕ್ಷೆಗಳನ್ನು ಮಾರಿಕೊಂಡು ಬರುತ್ತಿದ್ದರು. ಆಕಸ್ಮಿಕವೋ ಏನೋ, ಅದೇ ಸಮಯಕ್ಕೆ ಅಣ್ಣ ಬಸವಣ್ಣನವರು ಹರಳಯ್ಯನವರಿಗೆದುರಾದರು. ಇವರನ್ನು ಕಂಡ ತಕ್ಷಣ್ ಹರಳಯ್ಯನವರು; “ಅಣ್ಣನವರೇ ಶರಣು” ಎಂದು ಕೈ ಮುಗಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣನವರು, “ಶರಣು ಶರಣಾರ್ಥಿಗಳು ಹರಳಯ್ಯನವರಿಗೆ”; ಎಂದು ಬಾಗಿ ನಮಸ್ಕರಿಸಿದರು. ಮೊದಲೇ ಬಸವಣ್ಣನವರು; “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂದು ನಂಬಿಕೊಂಡು ಬಂದವರು.
ಇತ್ತ ತನ್ನ ಒಂದು “ಶರಣು ಸ್ವೀಕರಿಸಿದರೆ ತನ್ನ ಜನ್ಮವೇ ಪಾವನವಾಯಿತೆಂದು ತಿಳಿದ ಹರಳಯ್ಯನನವರಿಗೆ; ಬಸವಣ್ಣನವರು ಪ್ರತಿಯಾಗಿ ಎರಡು ಬಾರಿ ಶರಣು ಹೇಳಿದ್ದು ಕೇಳಿಸಿಕೊಂಡಾಗ; ದಿಕ್ಕು ತೋಚದಂತಾಯಿತು; ಆಕಾಶ ಕಳಚಿ ಮೈ ಮೇಲೆ ಬಿದ್ದಂತಾಯಿತು. ಇದು ಕನಸೋ ನನಸೋ ಒಂದೂ ತಿಳಿಯದಾಯಿತು. ಯಾಕೆಂದರೆ ಇಲ್ಲಿಯವರೆಗೂ ಊರಲ್ಲಿ ಸವರ್ಣೀಯರು, ತನಗೆ ಹಾಗೂ ತನ್ನ ಕುಲ ಬಾಂಧವರಿಗೆ ನಮಸ್ಕಾರ ಮಾಡುವುದಂತೂ ಒತ್ತಟ್ಟಿಗಿರಲಿ; ನೆರಳೂ ಕೂಡಾ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವರೆಲ್ಲಿ? ಸ್ವತಃ ಪ್ರಧಾನಿಯಾದ, ಹುಟ್ಟು ಬ್ರಾಹ್ಮಣನಾದ ಹಾಗೂ ಕಲ್ಯಾಣ ರಾಜ್ಯದ ಬಿಜ್ಜಳ ರಾಜನ ಅಳಿಯನಾದ; ಬಸವಣ್ಣ ತನಗೆ ಎರಡು ಸಲ ಶರಣು ಅನ್ನುವುದೆಂದರೇನು?
ಆತಂಕಗೊಂಡ ಕಲ್ಯಾಣಮ್ಮ
ಒಂದು ರಾಜ್ಯದ ಪ್ರಧಾನ ಮಂತ್ರಿಯಿಂದ, ಎರಡು ಬಾರಿ ನಮಸ್ಕರಿಸಿಕೊಂಡ ಸಂಗತಿಯನ್ನು, ಮನದಲ್ಲೇ ಮೆಲಕು ಹಾಕುತ್ತ, ಮನೆಗೆ ಬಂದ ಹರಳಯ್ಯನರನ್ನು ಇದಿರುಗೊಂಡ ಕಲ್ಯಾಣಮ್ಮ, ಕೈ ಕಾಲು ಮುಖ ತೊಳೆದುಕೊಳ್ಳಲು, ನೀರು ಕೊಡಲು ಹೋದಾಗ, ಹರಳಯ್ಯನವರ ಚಿಂತಾಕ್ರಾಂತವಾದ ಮುಖ ಗಮನಿಸಿ ತಾನೂ ಆತಂಕಗೊಳ್ಳುತ್ತಾಳೆ.
ಹರಳಯ್ಯನವರ ಮನದಾಳದಲ್ಲಿ, ಬಸವಣ್ಣನವರು ಎರಡು ಬಾರಿ ಶರಣು ಹೇಳಿದ ಸಂಗತಿಯು, ತಲೆ ತಿನ್ನುತ್ತಲೇ ಇತ್ತು. ಮಾನಸಿಕವಾಗಿ ಹೊರಲಾರದ ಹೊರೆಯನ್ನು ಹೇಗೆ ಇಳಿಸಿಕೊಳ್ಳುವುದು? ಆ ಭಾರದಿಂದ ಮುಕ್ತಿ ಪಡೆಯುವ ಮಾರ್ಗ ಯಾವುದೆಂದು, ಚಿಂತಿಸುತ್ತಲೇ ಇದ್ದ ಪತಿಗೆ ತಕ್ಕ ಸತಿಯಾದ ಕಲ್ಯಾಣಮ್ಮ, ಹರಳಯ್ಯನವರ ಧರ್ಮ ಪತ್ನಿ. ಪತಿಯ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆಯುವ ಸದ್ಗೃಹಿಣಿ. ಗಂಡನ ಚಿಂತಾಕ್ರಾಂತಕ್ಕೆ ತಾನೂ ಖಿನ್ನವದಳಾಗಿ ಕಾರಣ ತಿಳಿಯಲು ಯತ್ನಿಸಿದಳು. ಉಹೂ ಹರಳಯ್ಯ ಜಪ್ಪೆನ್ನುತ್ತಿಲ್ಲ. ಕೊನೆಗೂ ಬಾಯಿ ಬಿಟ್ಟ ಹರಳಯ್ಯ, ತಾನು ದಾರಿಯಲ್ಲಿ ಬರುವಾಗಿನ ಘಟನೆಯನ್ನೆಲ್ಲ, ಸವಿವರವಾಗಿ ಪತ್ನಿಗೆ ವಿವರಿಸಿ ಹೇಳಿ ಮೂಕವಿಸ್ಮಿತನಾದ. ಮುಂದೆ ಯಾವುದಕ್ಕೂ ಬಾಯಿಯಿಂದ ಮಾತೇ ಹೊರಡುತ್ತಿಲ್ಲ. ಪತಿಯ ಮುಗ್ಧತೆ ಹಾಗೂ ದುಗುಡವನ್ನರಿತ ಕಲ್ಯಾಣಮ್ಮ ಕೊನೆಗೆ; “ಆ ಅಣ್ಣ ಮಾಡಿದ್ದುದಾಗಲಿ, ಹೀಗೆ ಚಿಂತೆ ಮಾಡುತ್ತ ಕಾಲ ಹರಣ ಮಾಡುವುದು ತರವಲ್ಲ; ಅದಕ್ಕೇನಾದರೂ ಒಂದು ಮಾರ್ಗೋಪಾಯ ಹುಡುಕಿದರಾಯಿತು; ಎದ್ದೇಳಿ ಮೊದಲು ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಬನ್ನಿ”ಎಂದಾಗ, ಪತಿಗೆ ಎಲ್ಲೋ ಒಂದು ಕಡೆ ಕಪ್ಪು ಮೋಡದಲ್ಲೊಂದು ಬೆಳ್ಳಿಯ ಕೋಲ್ಮಿಂಚು ಕಂಡಂತಾಯಿತು.
ಪರಿಹಾರ ಕಂಡುಕೊಂಡ ದಂಪತಿಗಳು
ಒಂದೆರಡು ದಿನಗಳ ತರುವಾಯ ಕಲ್ಯಾಣಮ್ಮ, “ಪತಿ ದೇವಾ ಚಿಂತಸದಿರಿ, ಇದೋ ಅಣ್ಣ ಬಸವಣ್ಣನವರಿಗೆ ಸುಂದರತರವಾದ ಚಮ್ಮಾವುಗೆಗಳನ್ನು ಮಾಡೋಣ. ಆದರೆ ಸಾಮಾನ್ಯ ರೀತಿಯಾಗಿ ಬೇಡ. ಚಮ್ಮಾವುಗೆಯ ಅಟ್ಟಿಯಲ್ಲಿ ನಮ್ಮ ತೊಡೆಯ ಚರ್ಮವನ್ನು ಸೇರಿಸೋಣ. ಹೀಗೆ ಪವಿತ್ರ ಮನದಿಂದ ತಯಾರಿಸಿದ ಪಾದರಕ್ಷೆಗಳನ್ನು ಅಣ್ಣನವರು ಮೆಟ್ಟಿದರೆ ನಾವು ಪುನೀತರಾಗುವುದಿಲ್ಲವೇ?” ಎಂದು ಪತಿಗೆ ಸೂಕ್ತ ಸಲಹೆ ನೀಡಿದ ತಕ್ಷಣ, ಹರಳಯ್ಯನವರಿಗೆ ಒಪ್ಪಿಗೆಯಾಯಿತು.
ಶಿವನಾಮ ಭಜಿಸುತ್ತ ಬಸವನಾಮ ಸ್ಮರಿಸುತ್ತ, ಹರಳಯ್ಯನವರು ತಮ್ಮ ಬಲ ತೊಡೆಯ, ಕಲ್ಯಾಣಮ್ಮನವರು ತಮ್ಮ ಎಡ ತೊಡೆಯ ಚರ್ಮ ಕೊಯ್ದು ಅಟ್ಟೆಯಲ್ಲಿ ಸೇರಿಸಿದರು. ಪಾದರಕ್ಷೆಗಳನ್ನು ತಯಾರಿಸುವ ಅನುಭವವನ್ನೆಲ್ಲ ಎರಕಹೊಯ್ದು, ತಮ್ಮ ಕಲಾ ನೈಪುಣ್ಯವನ್ನೆಲ್ಲ ವಿನಿಯೋಗಿಸಿ ಚಮ್ಮಾವುಗೆಗಳನ್ನು ಸಿದ್ಧಪಡಿಸಿದರು. ಭಕ್ತಿ ಭಾಂಡಾರಿ ಬಸವೇಶ್ವರರು ಮೆಟ್ಟಿದರೆ, ತಾವು ಪುನೀತರಾಗುವೆವೆಂದು ಹರಳಯ್ಯ ದಂಪತಿಗಳು ಆನಂದಭರಿತರಾದರು.
ಅಣ್ಣನ ಮನೆಯತ್ತ ಹರಳಯ್ಯ
ಸಡಗರದಿಂದ ರೇಶ್ಮೆಯ ವಸ್ತ್ರವನ್ನು ಚಮ್ಮಾವುಗೆಗಳಿಗೆ ಹೊದಿಸಿ, ಭಯ ಭಕ್ತಿಯಿಂದ ಬಸವನನ್ನು ಸ್ಮರಿಸುತ್ತ ಅಣ್ಣನ ಮಹಾಮನೆಗೆ ಹೊರಟರು. ಅಣ್ಣನವರು ದೂರದಿಂದಲೇ ಕಲ್ಯಾಣಮ್ಮ ಮತ್ತು ಹರಳಯ್ಯನವರನ್ನು ಕಂಡು, ಪತ್ನಿ ಸಮೇತರಾಗಿ ಬಂದು ಇದಿರ್ಗೊಂಡು, ಕೈಕಾಲು ಮುಖ ತೊಳೆಯಲು ನೀರಿತ್ತು, ಸತ್ಕರಿಸಿ ಒಳಗೆ ಕರೆದೊಯ್ದರು. ಹರಳಯ್ಯನವರು ತಮ್ಮಲ್ಲಿಗೆ ಆಗಮಿಸಿದ ಕಾರಣವನ್ನು ಕೇಳಿದಾಗ, ಭಾವ ಪುನೀತರಾದ ಹರಳಯ್ಯನವರು, ತಾವು ತಂದ ಚಮ್ಮಾವುಗೆಗಳನ್ನು ಅಣ್ಣನವರಿಗೆ ತೋರಿಸಿ, ಅವನ್ನು ಸ್ವೀಕರಿಸಬೇಕೆಂದು ಬಹು ನಮೃತೆಯಿಂದ ಬೇಡಿಕೊಂಡರು.
ಆ ಚಮ್ಮಾವುಗೆಗಳ ವಿಶೇಷತೆಯನ್ನರಿತ ಬಸವಣ್ಣನವರು, ಅವುಗಳನ್ನು ಮೆಟ್ಟಿಕೊಳ್ಳದೇ ಭಯ ಭಕ್ತಿಯಿಂದ, ತಮ್ಮ ತಲೆಯ ಮೇಲೆ ಇಟ್ಟುಕೊಂಡು, “ಈ ಪವಿತ್ರ ಚಮ್ಮಾವುಗೆಗೆಳನ್ನು ಮೆಡುವ ಯೋಗ್ಯತೆ, ನನ್ನೊಡೆ೦ii ಕೂಡಲ ಸಂಗಮನಿಗಲ್ಲದೆ ನನಗೆ ಸಲ್ಲವು”; ಎಂದು ನುಡಿದಾಗ, ಹರಳಯ್ಯನವರಿಗೆ ನಿರಾಶೆಯಾಯಿತು. ಅವರು ಬಸಣ್ಣನವರ ಕಿಂಕರತ್ವವನ್ನು ಮನದಲ್ಲೇ ಕೊಂಡಾಡುತ್ತಲಿದ್ದರು.
ದುಡುಕಿದ ಮಧುವರಸ
ಒಂದು ಭಾರವನ್ನು ಇಳಿಸಿಕೊಳ್ಳಲು ಹೋಗಿ, ಅದರ ಹತ್ತಾರು ಪಟ್ಟು ಹೊರೆ ಹೊರುವುದು ಬರಬೇಕೆ? ಹರಳಯ್ಯನವರು ಖಿನ್ನ-ಮನಸ್ಕರಾದರು. ನೊಂದ ಮನದಿಂದ ಬಾಡಿದ ಮುಖದಿಂದ ಹರಳಯ್ಯ ದಂಪತಿಗಳು ಮನೆಯತ್ತ ಸಾಗಿದರು. ರಾಜ ಮಾರ್ಗದಲ್ಲಿ ಹಾಗೂ ಮಹಾಮನೆಯ ಘಟನೆಯ ವಿಚಾರದಲ್ಲಿ ಮುಳುಗಿ ದಾರಿ ಕ್ರಮಿಸುತ್ತಿದ್ದ ಶರಣ ದಂಪತಿಗಳಿಗೆ, ಗಡುಸಾದ ಹಾಗೂ ದರ್ಪಯುಕ್ತವಾದ ಒಂದು ಧ್ವನಿ ಕೇಳಿ ಎಚ್ಚರಾಗಿ ನೋಡಿದಾಗ, ಎದುರಿಗೆ ಮಧುವರಸರು ಕಂಡರು. ಹರಳಯ್ಯನವರ ತಲೆಯ ಮೇಲಿದ್ದ ಚಮ್ಮಾವುಗೆಗಳಿಗೆ ಮಾರು ಹೋಗಿ, ಅದನ್ನು ಮಧುವರಸರು ತಮಗೆ ಕೊಡುವಂತೆ ಕೇಳಿಕೊಂಡರು. ಹರಳಯ್ಯನವರು ಕೊಡಲು ನಿರಾಕರಿಸಿದಾಗ, ಮಧುವರಸರು ತಮ್ಮ ಸೇವಕರಿಂದ ಚಮ್ಮಾವುಗೆಗಳನ್ನು ಕಿತ್ತುಕೊಂಡು, ಹೆಮ್ಮೆ ಮಿಶ್ರಿತ ಅಹಂಕಾರದಿಂದ ಮೆಟ್ಟಿದರು. ಮೆಡುವುದೊಂದೇ ತಡ, ಮಧುವರಸರ ಮೈಯ್ಯಲ್ಲಾ ಉರುಪಿನಿಂದ ಭಯಂಕರವಾಗಿ ಉರಿಯ ಹತ್ತಿತು.
ಹರಳಯ್ಯನವರ ಮಾತಿಗೆ ಬೆಲೆ ಕೊಡದೆ, ಶರಣರ ಮಹಿಮೆಯನ್ನರಿಯದೆ, ಅವರನ್ನು ತಿರಸ್ಕರಿಸಿ ತಾನು ಮಾಡಿದ ಅಪರಾಧಕ್ಕಾಗಿ ಮಧುವರಸರಿಗೆ ದಿಕ್ಕೇ ತೋಚದಂತಾಯಿತು. ಮೈಯ್ಯುರಿ ಹೆಚ್ಚುತ್ತಲೇ ಇತ್ತು. ಯಾರ ಸಲಹೆ ಸೂಚನೆಗಳಾಗಲೀ, ಯಾವ ಪಂಡಿತ ವೈದ್ಯರ ಔಷಧೋಪಚಾರವಾಗಲೀ, ಮಧುವರಸರ ಶರೀರ ತಾಪಕ್ಕೆ ಶಾಂತಿಯನ್ನೀಯಲಿಲ್ಲ. ಖ್ಯಾತ-ವಿಖ್ಯಾತ, ದೇಶ-ವಿದೇಶಗಳ ತಜ್ಣ ವೈದ್ಯರ ಉಪಚಾರವೆಲ್ಲ, ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಯಿತು. ಅದ್ಯಾವ ಪುಣ್ಯಾತ್ಮ ಸಲಹೆ ಕೊಟ್ಟನೋ ಏನೋ, ಹರಳಯ್ಯನವರ ಮನೆಯ ಬಚ್ಚಲು ನೀರು ಚುಮುಕಿಸಿದರೆ ಮೈಯುರಿ ಪ್ರಶಾಂತಗೊಳ್ಳುವುದೆಂದರಂತೆ. ಹಾಗೆ ಮಾಡಿದಾಗ ಮಧುವರಸರ ಮೈ ತಾಪ ತಣ್ಣಗಾಗಿ ಯಥಾಸ್ಥಿತಿಗೆ ಮರಳಿತಂತೆ.
ಜಾತಿ ಮೀರಿದ ಮದುವೆ
ಈಗ ಮಧುವರಸರಿಗೆ ಶರಣರ ಜೀವನದ ಹಿರಿಮೆ ಹಾಗೂ ಮಹಿಮೆಯ ಅರಿವಾಯಿತು. ಅವರಿಗೆ ಜ್ಣಾನೋದಯವಾಯಿತು. ಅವರು ಹರಳಯ್ಯನವರಲ್ಲಿ ಕ್ಷಮೆ ಕೇಳಿದರು. ಅವರ ಶಿಷ್ಯರಾದರು, ಶಿವಭಕ್ತರಾದರು, ಗುರುಕರುಣೆಯಿಂದ ಲಿಂಗಧಾರಿಗಳಾದರು. ಶರಣ ಧರ್ಮವನ್ನು ಅಂಗೀಕರಿಸಿದ ಅವರು ತಮ್ಮ ಮುದ್ದು ಮಗಳು ಲಾವಣ್ಯವತಿಯನ್ನು ಹರಳಯ್ಯನವರ ಪುತ್ರ ಶೀಲವಂತನಿಗೆ ಮದುವೆ ಮಾಡಿ ಕೊಡಲು ಮುಂದಾದರು.
“ ಶಿವಶರಣರ ಮಗಳನ್ನು ಶಿವಶರಣರ ಮಗನಿಗೆ ಕೊಡಲು ಯಾವ ತಪ್ಪೂ ಇಲ್ಲ” ಎಂದು ಅನುಭವ ಮಂಟಪವೂ ಒಪ್ಪಿಗೆ ನೀಡಿತು. ಆದರೆ ಲೋಕದ ಕಣ್ಣಿಗೆ ಇದು ಸಮಾಜ ವಿರೋಧಿ ಕಾರ್ಯವಾಗಿತ್ತು, ಪ್ರತಿಲೋಮ ವಿವಾಹದ ಪ್ರಕಾರವಾಗಿತ್ತು. ಜನ ಮರುಳೋ ಜಾತ್ರೆ ಮರುಳೋ, ಎಂಬಂತೆ ಈ ಮದುವೆಯು ಸಂಪ್ರದಾ೦iiಕ್ಕೆ ಕೊಡಲಿ ಏಟು ಹಾಕಿತ್ತು. ಜನ ಸಾಮಾನ್ಯರನ್ನು ರೊಚ್ಚಿಗೇಳುವಂತೆ ಪಟ್ಟಭದ್ರ ಹಿತಾಸಕ್ತಿಗಳು ಕುಮ್ಮಕ್ಕು ನೀಡಿದವು. ಜಾತಿ ಕೆಟ್ಟು ಹೋಯಿತೆಂದರು. ಧರ್ಮ ಹಾಳಾಯಿತೆಂದರು. ಕೆಳ ಜಾತಿಗಳಿಗೆ ಸೊಕ್ಕು ಹೆಚ್ಚಾಯಿತೆಂದರು. ನಾಯಿಗಳಿಗೆ ಸಲುಗೆ ಕೊಟ್ಟರೆ ಹೆಗಲೇರುತ್ತವೆಯೆಂದರು. ಮೇಲ್ಜಾತೀಯ ಸವರ್ಣೀಯರು ಸಹಜವಾಗಿ ದೊರೆಗೆ ದೂರಿತ್ತರು.
ಕಲ್ಯಾಣ ಕ್ರಾಂತಿಗೆ ಮುನ್ನುಡಿಯಾದ ಚಮ್ಮಾವುಗೆಗಳು
ದೊರೆಗೆ ಮತ್ತಿನ್ನೇನು ಬೇಕು? “ವರ್ಣ ಸಂಕರ ಮಾಡಿದವರಿಗೆ ಎಳೆ ಹೂಟೆ ಶಿಕ್ಷೆ ವಿಧಿಸಿ” ಎಂಬ ಆಜ್ಣೆಯನ್ನು ಹೊರಡಿಸಿದರು ಹರಳಯ್ಯ- ಮಧುವರಸರ ಕಣ್ಣು ಕೀಳಿಸಿ, ಆನೆಯ ಕಾಲಿಗೆ ಕಟ್ಟಿ. ಕಲ್ಯಾಣದ ತುಂಬೆಲ್ಲ ಎಳೆದಾಡಿಸಿದರು. ಶರಣರ ಜಂಘಾ ಬಲ ಉಡುಗುವಂತೆ ಕೊಂಡಿ ಮಂಚಣ್ಣಗಳು ನೋಡಿಕೊಂಡರು. ಹರಳಯ್ಯ ಮಧುವಯ್ಯನವರು ಆತ್ಮಾರ್ಪನೆಗೈದರು. ಇದರಿಂದ ಕಲ್ಯಾಣದಲ್ಲಿ ಮಹಾಕ್ರಾಂತಿಯಾಯಿತು. ಸಿಕ್ಕ ಸಿಕ್ಕಲ್ಲಿ ಶರಣರ ಕಗ್ಗೊಲೆ ನಡೆಯಿತು. ಶರಣ ತತ್ವ ಉಳಿಸಿ ಪ್ರಸಾರ ಕೈ ಗೊಳ್ಳಲು ಅಸಂಖ್ಯ ಶರಣ ಶರಣೆಯರು, ಕಲ್ಯಾಣ ಬಿಟ್ಟು ಹೊರ ಬಂದರು. ಆದರೂ ಹಲವಾರು ಶರಣರನ್ನು ಅರಸನ ಸೈಕರು, ಸಂಪ್ರದಾಯವಾದಿಗಳು, ಜಾತಿವಾದಿಗಳು ಹಿಡಿದು, ಕೊಲ್ಲುವ ಕಾಯಕ ಮಾಡುತ್ತಲೇ ಹೋದರು.
ಕ್ರಾಂತಿಯು ಉತ್ತುಂಗಕ್ಕೇರಿದಾಗ ಇಡೀ ಕಲ್ಯಾಣವು ಗೊಂದಲದ ಗೂಡಾಯಿತು. ಅರಾಜಕತೆಯ ಅಟ್ಟಹಾಸದ ಜ್ವಾಲೆ ಆಗಸದೆತ್ತರಕ್ಕೆ ಚಿಮ್ಮುತ್ತಿತ್ತು. ಮಹಾಕ್ರಾಂತಿಯ ಉತ್ತುಂಗದ ಪರಿಣಾಮವೆನ್ನುವಂತೆ ಬಿಜ್ಜಳರಸನ ಕಗ್ಗೊಲೆಯೂ ನಡೆದು ಹೋಯಿತು. ಕಲ್ಯಾಣ ಕ್ರಾಂತಿಗೆ ಮೂಲ ಕಾರಣವೆಂದರೆ ಕಲ್ಯಾಣಮ್ಮ ಮತ್ತು ಹರಳಯ್ಯನವರ ತೊಡೆಯ ಚರ್ಮದಿಂದ ತಯಾರಿಸಿದ ಪವಿತ್ರ ಚಮ್ಮಾವುಗೆಗಳೇ!
ಪಾದರಕ್ಷೆಗಳು ಈಗಲೂ ಇವೆ
ಇವತ್ತಿನ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿಯಲ್ಲಿ; ಈ ಪಾದರಕ್ಷೆಗಳನ್ನು ಸಮಗಾರ ಹರಳಯ್ಯ ದಂಪತಿಗಳು ತಯಾರಿಸಿದ ಪವಿತ್ರ ಪಾದರಕ್ಷೆಗಳೆಂದೇ; ಭಯ ಭಕ್ತಿಯಿಂದ ಇಂದಿಗೂ ಕೂಡ ಪೂಜಿಸಲಾಗುತ್ತದೆ. ಹರಳಯ್ಯನವರ ಹೆಸರಿನಿಂದ; ವರುಷಕ್ಕೊಮ್ಮೆ ದಾಸೋಹ ನಡೆಯುತ್ತದೆ. ಬಿಜನಳ್ಳಿಯ ಈ ಚಮ್ಮಾವುಗೆಗಳು; ಹರಳಯ್ಯನವರು ತಯಾರಿಸಿದ ಪಾದರಕ್ಷೆಗಳೆಂದೇ, ಸಮಗಾರ ಸಮುದಾಯದ ಬಹುತೇಕ ಸದಸ್ಯರು ನಂಬುತ್ತಾರೆ.
ಚರ್ಮಕಾರರೆಲ್ಲರೂ ಸಮಗಾರರಲ್ಲ
ಸಮಗಾರರ ಕುಲಕಸಬು ಚರ್ಮಗಾರಿಕೆಯಾದರೂ ಎಲ್ಲ ಚರ್ಮಕಾರರು ಸಮಗಾರರಲ್ಲ. ಚರ್ಮಾಧಾರಿತ ವೃತ್ತಿಯಲ್ಲಿ ಇನ್ನುಳಿದ ಪರಿಶಿಷ್ಟ ಉಪಜಾತಿಗಳೂ ಸೇರಿಕೊ೦ಡಿವೆ. ಅಲ್ಪ-ಸ್ವಲ್ಪ ಮಾದಿಗ ಹಾಗೂ ಮಚಗಾರರೂ ಈ ವೃತ್ತಿಯಲ್ಲಿರುವುದು ಸುಳ್ಳಲ್ಲ. ಹಾಗಾಗಿ ವಿಜಾಪೂರದ ಬಹಳಷ್ಟು ಕಡೆಗೆ, ಪರಿಶಿಷ್ಟರಲ್ಲದ ಸವರ್ಣೀಯರು; ಸಮಗಾರರನ್ನು ಮಚಗಾರರೆ೦ದೇ ಕರೆಯುವ ರೂಢಿಯಿದೆ. ಅವರ ದೃಷ್ಟಿಯಲ್ಲಿ ಸಮಗಾರ ಹಾಗೂ ಮಚಗಾರ ಎರಡೂ ಒ೦ದೇ. ಆದರೆ ಇವೆರಡೂ ಉಪಜಾತಿಗಳ ಮಧ್ಯ; ವಿಜಾಪೂರದ ಮಟ್ಟಿಗ೦ತೂ; ಯಾವುದೇ ಕೊಡು ಕೊಳ್ಳುವ ರಕ್ತ ಸ೦ಬಂಧ ಏರ್ಪಟ್ಟಿದ್ದು ಕಾಣಲಾಗುತ್ತಿಲ್ಲ.
ಎಲ್ಲ ಚರ್ಮಕಾರರೂ ಹರಳಯ್ಯನನ್ನು ತಮ್ಮ ಮೂಲ (ಕುಲ) ಪುರುಷನೆ೦ದು ಭಾವಿಸುವುದಿಲ್ಲ, ಕೇವಲ ಸಮಗಾರರು ಮಾತ್ರ ಹಾಗೆ೦ದು ನ೦ಬುತ್ತಾರೆ. ಹರಳಯ್ಯನ ಕುರಿತ ಇವರ ಅಚಲ ನ೦ಬಿಕೆಯೇ; ಸಮಗಾರರನ್ನು ಇನ್ನುಳಿದ ಚರ್ಮಕಾರ ಜಾತಿಗಳಿ೦ದ ವಿಭಿನ್ನ ಸಮುದಾಯವಾಗಿ ಗುರುತಿಸಿಕೊಳ್ಳುವ೦ತೆ ಮಾಡಿದೆ. ಇವರು ತಾವೊಂದು ಜಾತಿಯಾಗಿ ಗುರುತಿಸಿಕೊಳ್ಳುವುದಕ್ಕಿಂತಲೂ, ಬಂಧುಗಳಾಗಿ ತಮ್ಮ ಅನ್ಯೋನ್ಯತೆಯನ್ನು ಪ್ರದರ್ಶಿಸಲು ಹೆಚ್ಚು ಇಷ್ಟ ಪಡುವುದಿದೆ.
ಸಮಗಾರರಲ್ಲಿ ಬಹು ಪಾಲು ಚರ್ಮಕಾರರು
ಹರಳಯ್ಯನ ವ೦ಶಸ್ಥರಾದ ಸಮಗಾರರು, ಇ೦ದೂ ಕೂಡ ಬಹುಪಾಲು ಚರ್ಮೋದ್ಯೋಗದಲ್ಲಿಯೇ ತೊಡಗಿಸಿಕೊ೦ಡಿದ್ದಾರೆ. ಸಮಗಾರರಲ್ಲದವರು ಚಪ್ಪಲ್ ಉದ್ದಿಮೆಯಲ್ಲಿ ಕಾಲಿಟ್ಟಿದ್ದರಿ೦ದ, ಸಮಗಾರನ ಹೆ೦ಡತಿಯ ಪಾದಗಳಿಗೆ ರಕ್ಷಣೆ ಇಲ್ಲದ೦ತಾಗಿದೆ. ಈ ಕ್ಷೇತ್ರ ಬ್ರಹತ್ ಲಾಭದಾಯಕ ಉದ್ದಿಮೆಯಾಗಿ ಬೆಳೆದು ನಿ೦ತಿರುವುದರಿ೦ದ, ಸವರ್ಣೀಯ ಜಾತಿ ಜನಾ೦ಗದವರು ಇದನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊ೦ಡಿರುವುದು ವಿಚಿತ್ರವೇನಲ್ಲ.
ಇ೦ದು ಬಹುಪಾಲು ಸಮಗಾರರಿಗೆ ಉಳಿದಿರುವುದು, ಚಪ್ಪಲ್ ರಿಪೇರಿ, ಎಲ್ಲೆಲ್ಲಿಂದಲೋ ಸಗಟು ಖರೀದಿಸಿ ಕಿರುಕಳವಾಗಿ ಮಾರಾಟ ಮಾಡುವುದು, ಕೈಗೆಲಸದಿಂದ ಸಿದ್ಧ ಪಡಿಸಿದ ಪಾದರಕ್ಷೆಗಳನ್ನು ಇಂದು ಹಗಲಲ್ಲಿ ದೀಪ ಹಚ್ಚಿ ಹುಡುಕಬೇಕಾಗಿದೆ. ಪ್ಲ್ಯಾಸ್ಟಿಕ್ ಹಾಗೂ ರಬ್ಬರ ಚಪ್ಪಲುಗಳು ಮಾರುಕಟ್ಟೆ ಪ್ರವೇಶಿಸಿದ್ದರಿಂದ, ಸಮಗಾರರ ಕುಶಲ ಕಲೆಯು ಮರೆಯಾಗಿ ಹೋಯಿತು. ಬ್ರಹತ್ ಪ್ರಮಾಣದಲ್ಲಿ ಚಪ್ಪಲ್ ಮಾರಾಟ; ಝಗಮಗಿಸುವ ಶೋರೂಮುಗಳು; ಎಕ್ಸಪೋರ್ಟ-ಇ೦ಪೋರ್ಟುಗಳು, ಏನಿದ್ದರೂ, ಸಮಗಾರರಲ್ಲದವರ ಸುಪರ್ದಿಯಲ್ಲಿವೆ.
ಅಲ್ಲೊ೦ದು ಇಲ್ಲೊ೦ದು ಸಮಗಾರರ ಶೋರೂಮುಗಳಿದ್ದರೂ; ಆ ರೂಮುಗಳಲ್ಲಿದ್ದವರು ಇ೦ದು ಸಮಗಾರರಾಗಿ ಉಳಿದ೦ತೆ ಕಾಣುತ್ತಿಲ್ಲ. ಬಹುಪಾಲು ಬಡಪಾಯಿ ಸಮಗಾರರು, ಇ೦ತಹ ಶೋರೂಮುಗಳ ಕಾಜಿನ ಕಪಾಟುಗಳ ಹಿ೦ದೆ ಕಾಣದ೦ತಾಗಿ ಹೋಗಿದ್ದಾರೆ. ಇವತ್ತಿಗೂ ಮಳೆಗಾಲ ಬ೦ತೆ೦ದರೆ, ಹೊಟ್ಟೆಗೆ ತಣ್ಣೀರು ಪಟ್ಟಿ ಕಟ್ಟಿಕೊ೦ಡು, ಕಾಲ ನೂಕುವ ಬೇಕಾದಷ್ಟು ಸಮಗಾರರು ನಮ್ಮ ಕಣ್ಣ ಮು೦ದಿದ್ದಾರೆ.
ಎಲ್ಲಿಂದ ಬಂದವರು?
ಪ್ರಮುಖ ಬೆಡಗುಗಳ ಹಿರಿಯರ ಅಭಿಪ್ರಾಯ ಹಾಗೂ ಅವರ ಕುಟು೦ಬಗಳಿಗೆ ಆಗಮಿಸುವ ಹೆಳವರು ಹೊ೦ದಿರುವ ದಾಖಲಾತಿಗಳ ಪ್ರಕಾರ- ಕಬಾಡೆ ಹಾಗೂ ಮಬ್ರುಮಕರ ಮನೆತನಗಳು ಮಹಾರಾಷ್ಟ್ರದ ಕರಾಡಿನಿ೦ದಲೂ, ಬಾಲಾಗಾವಿಯವರು ಜತ್ತ ತಾಲೂಕಿನಿ೦ದಲೂ, ವಿಜಾಪೂರ(ಜಿಲ್ಲೆ) ಶಹರಕ್ಕೆ ಬ೦ದವರೆ೦ದು ಹೇಳಿಕೊಳ್ಳುತ್ತಾರೆ. ಕಾ೦ಬಳೆ, ಸಿ೦ಧೆ, ಕದಮ, ಹಾಗೂ ಪುಣೆಕರ ಇವರು ಮಹಾರಾಷ್ಟ್ರ ಮೂಲದಿ೦ದಲೇ ಇಲ್ಲಿಗೆ ಆಗಮಿಸಿರುವ ಸಾಧ್ಯತೆಗಳಿವೆ.
ಸಾತಪೋತೆ ಹಾಗೂ ಮನಗೂಳಿ ಮನೆತನಗಳು, ತಮ್ಮ ಮೂಲ ಸ್ಥಳ ಮನಗೂಳಿ ಗ್ರಾಮವೆಂದು ಹೇಳಿಕೊಳ್ಳುತ್ತವೆ. ಕಾಶೆ ಮನೆತನದ ಮೂಲ ದ್ಯಾವಪುರ ಗ್ರಾಮ ಎಂತಲೂ ಹಾಗೂ ವಗ್ಯಾನವರ ಇವರ ಮೂಲ ತಾಳಿಕೋಟೆ ಎ೦ದು ಹೇಳಲಾಗುತ್ತಿದೆ. ಶಹಾಪೂರ, ಕಟ್ಟಿಮನಿ ಹಾಗೂ ಭೂತನಾಳ ಇವರು ಗುಲಬರ್ಗಾ ಜಿಲ್ಲೆಯ ಸಗರ ನಾಡಿನಿ೦ದ ಬ೦ದವರೆ೦ದು ಹೇಳಲಾಗುತ್ತದೆ. ಗುಲ್ಬರ್ಗದ ಹತ್ತಿರವಿರುವ ರಾಜಾಪೂರ ಎಂಬ ಊರು; ರಾಜಾಪೂರ (ಜೋಗಿ) ಮನೆತನದ ಮೂಲವೆಂದು ಭಾವಿಸಲಾಗಿದೆ.
ಅ೦ದು ಏಳು; ಇ೦ದು ಹದಿನಾಲ್ಕು ಓಣಿಗಳು
ವಿಜಾಪೂರದಲ್ಲಿ ಏಳು ಅಗಸಿಗಳಿರುವ ಪ್ರಯುಕ್ತ; ತೀರ ಇತ್ತೀಚಿನವರೆಗೂ ಅಗಸಿಗೊ೦ದರ೦ತೆ ಏಳು ಸಮಗಾರ ಒಣಿಗಳಿದ್ದವು. ಇ೦ದು ವಿಜಾಪೂರ ಶಹರದ ಹದಿನಾಲ್ಕು ವಿವಿಧ ಒಣಿಗಳಲ್ಲಿ ಈ ಸಮುದಾಯ ವಾಸಿಸುತ್ತಿದೆ. ಅವುಗಳಲ್ಲಿ- ಜೋರಾಪೂರ, ಮುಳ್ಳಗಸಿ, ಜುಮ್ಮಾ-ಮಸೀದ್, ಹಾಗೂ ಗಚ್ಚಿನ-ಮಹಲ್ ದೊಡ್ಡ ಗಾತ್ರದವುಗಳಾದರೆ, ಚ೦ದಾಬಾವಡಿ, ಗ್ಯಾ೦ಗ-ಬಾವಡಿ, ಯೋಗಾಪೂರ ಕಾಲನಿಗಳು ಮಧ್ಯಮ ಹಾಗೂ ಜಗಜೀವನರಾ೦, ಲಿಡ್ಕರ, ಟ್ರೇಜರಿ ಕಾಲನಿ, ಕೆಎಚ್ಬಿ ಮತ್ತು ಆದರ್ಶ ನಗರ, ಜಲನಗರ, ಖುದಾನಪೂರ, ಮತ್ತು ಶಕ್ತಿ ನಗರ ಇವು ಕಡಿಮೆ ಸಾ೦ದ್ರತೆಯ (ಬಚಗಾಣಿ) ಓಣಿಗಳಾಗಿವೆ.
ವಿಜಾಪೂರದ ಸಮಗಾರ ಸಮುದಾಯದಲ್ಲಿ; ಅತ್ಯಧಿಕ ಸ೦ಖ್ಯೆಯ ಕುಟು೦ಬಗಳು ಜೋರಾಪೂರ (೧೧೦) ಹಾಗೂ ಮುಳ್ಳಗಸಿಯಲ್ಲಿ (೧೦೮) ವಾಸಿಸುತ್ತಿದ್ದು , ಶಕ್ತಿನಗರದಲ್ಲಿ ಅತ್ಯ೦ತ ಕಡಿಮೆ ಕುಟು೦ಬಗಳು (೫) ಇರುವುದನ್ನು ಗಮನಿಸಬಹುದಾಗಿದೆ. ಜೋರಾಪೂರದ ವೈಶಿಷ್ಟ್ಯವೇನೆ೦ದರೆ, ಉಳಿದ ಓಣಿಗಳಲ್ಲಿ ಕೆಲವುಗಳ ಹೆಸರುಗಳು ‘ಜ’ ದಿ೦ದಲೇ ಪ್ರಾರ೦ಭಗೊಳ್ಳುತ್ತವೆ. ಅವು- ಜುಮ್ಮಾಮಸೀದ್, ಜಲನಗರ ಹಾಗೂ ಜಗಜೀವನರಾ೦ ಕಾಲನಿಗಳು. ಅತ್ಯ೦ತ ದೊಡ್ಡ ಓಣಿಯಾದ ಜೋರಾಪೂರ ಹಾಗೂ ಚಿಕ್ಕದಾದ ಶಕ್ತಿ ನಗರಗಳು ಈ ಊರಿನ ಪಶ್ಚಿಮಕ್ಕಿರುವುದು ಕಾಕತಾಳೀಯವೇ ಆಗಿದೆ.
ಹದಿನಾಲ್ಕು ಓಣಿಗಳಲ್ಲಿ - ಜೋರಾಪೂರ, ಮುಳ್ಳಗಸಿ, ಚ೦ದಾಬಾವಡಿ (ಶಹಾಪೂರ ಅಗಸಿ) ಖುದಾನಪೂರ, ಜುಮ್ಮಾಮಸೀದ್ ಹಾಗೂ ಗಚ್ಚಿನ ಮಹಲಗಳು; ಅತ್ಯ೦ತ ಹಳೆಯ ಓಣಿಗಳು. ಅದರಲ್ಲೂ ಚಂದಾಬಾವಡಿ ಓಣಿಯು ಅತ್ಯಂತ ಹಳೆ೦ii ದು ಎನ್ನಲಾಗುತ್ತದೆ. ಉಳಿದವುಗಳು ಇತ್ತೀಚಿನ ಸೃಷ್ಟಿಗಳು.
ವಿಜಾಪೂರದಲ್ಲಿ ಬಹುಕಾಲದಿ೦ದ ವಾಸಿಸುತ್ತಿರುವ ಮನೆತನಗಳೆ೦ದರೆ- ಕಬಾಡೆ, ಕಟ್ಟಿಮನಿ, ಶಹಾಪೂರ, ಕಾಶೆ, ಹಲಗಿಮನಿ, ಜಮಖ೦ಡಿ, ನಾಗಠಾನ, ವಗ್ಯಾನವರ, ಭೂತನಾಳ (ಹೊನ್ನಕಸ್ತೂರಿ) ಸೌದಾಗಾರ, ಕಾ೦ಬಳೆ, ಸಾತಪೋತೆ, ಹೊಸಮನಿ, ಹಾಗೂ ಮೆಳ್ಯಾನವರ ಇತ್ಯಾದಿಗಳಾದರೆ; ನಿಮಾದಾರ, ನಿರ೦ಜನ, ಬಾಮನೆ, ಹದಗಲ್, ಕಾರಿಕೊಳ್ಳ, ಕದ೦, ಪಡತರಟ್ಟಿ, ಅ೦ಚುಟರಾವ್, ಜಾಡಬಬಲಾದ, ಕು೦ದರಗಿ ಹಾಗೂ ಮಬ್ರು೦ಕರ ಈ ಮನೆತನಗಳು ವಿಜಾಪೂರ ಶಹರಕ್ಕೆ ಇತ್ತೀಚಿನ ಸೇರ್ಪಡೆಗಳು.
ವಿಜಾಪೂರ ಶಹರದಲ್ಲಿ ಅತ್ಯಧಿಕ ಕಟು೦ಬಗಳನ್ನು (೯೧) ಕಬಾಡೆ ಮನೆತನದವರು ಹೊ೦ದಿದ್ದರೆ, ಶಹಾಪೂರ (ಕಾಶೆ) ೪೧, ಕಾ೦ಬಳೆ ೩೮, ಭೂತನಾಳ (ಹೊನ್ನಕಸ್ತೂರಿ) ೩೨, ಸೌದಾಗಾರ ೨೫, ಕಟ್ಟಿಮನಿ ೨೩, ಹೊಸಮನಿ ೨೧, ವಗ್ಯಾನವರ ೧೯, ಸಾತಪೋತೆ (ಮನಗೂಳಿ) ೧೬, ಹೊನಮೋಡೆ ೧೩, ಸಿ೦ಧೆ ಹಾಗೂ ಚವ್ಹಾಣ ತಲಾ ೧೨, ಮತ್ತು ನಾಗಠಾನ ೧೦ ಮನೆತನಗಳನ್ನು ಹೊ೦ದಿರುತ್ತವೆ.
ಹಲಗಿಮನಿ ಮತ್ತು ಜೋಗಿ ತಲಾ ೮, ಹ೦ಜಗಿ ೭, ಮಾನೆ, ಚೌದರಿ ಮತ್ತು ವಿಜಾಪೂರ ತಲಾ ೫, ಕು೦ದರಗಿ, ಸರಜಾಪೂರ ಮತ್ತು ಹೊನ್ನಾಕಟ್ಟಿ ತಲಾ ೪, ಧಾನವಾಡಕರ, ಪಡಗನ್ನವರ, ಸಪ್ತಾಳಕರ, ಬಾಗಲಕೋಟ, ಸಾನಕ್ಯಾನವರ, ಕನಸೆ ಮತ್ತು ಸೂರ್ಯವ೦ಸಿ ತಲಾ ೩, ಬೋರಗಿ, ಕೋಟಕರ, ಇಲಕಲ್, ಹೊನಕೋರೆ, ಮು೦ಡೇವಾಡಿ, ಮ೦ಟುರ, ಸಿ೦ಧೂರ, ಗದ್ಯಾಳ, ಗೌಳಿ, ಅ೦ಚುಟರಾವ್, ಪವಾರ, ಸೇಕ್ರಾ, ಕೋರೆ, ಪಾಟೀಲ, ಕೊಡತೆ, ಬಾಲಾಗಾವಿ, ರಾಜಾಪೂರ, ಹೊನಕಾ೦ಬಳೆ, ಇ೦ಡಿ, ನಿಮಾದಾರ, ವಾಗಮೋರೆ, ಅಭ೦ಗೆ, ಮತ್ತು ಬಿದರಿ ತಲಾ ೨, ಮನೆತನಗಳನ್ನು ಹೊ೦ದಿರುತ್ತವೆ. ಒ೦ದೊ೦ದೇ ಅಡ್ಡ ಹೆಸರುಗಳನ್ನು ಹೊ೦ದಿದ ಒಟ್ಟು ೪೧ ಮನೆತನಗಳನ್ನು ನಾವಿಲ್ಲಿ ನೋಡಬಹುದಾಗಿದೆ.
ಕೇರಿ ಅಲ್ಲ ಓಣಿ
ಸಾಮಾಜಿಕವಾಗಿ ಸಮಗಾರರು ಅಸ್ಪ್ರುಶ್ಯರಾದರೂ, ಇವರು ವಾಸಿಸುತ್ತಿರುವ ಪ್ರದೇಶಕ್ಕೆ ಕೇರಿ ಎನ್ನಲಾಗುವುದಿಲ್ಲ. ಓಣಿ ಎನ್ನುತ್ತಾರೆ. ವಿಜಾಪೂರದಲ್ಲಿ ಇವರು ಸವರ್ಣೀಯರ (ಓಣಿಗಳ) ನೆರೆ-ಹೊರೆಯವರಾಗಿ ಜೀವಿಸುವುದನ್ನು ಕಾಣಬಹುದಾಗಿದೆ. ಇನ್ನುಳಿದ ಪರಿಶಿಷ್ಟ ಜಾತಿಗಳಾದ ಹೊಲೆಯ ಮಾದಿಗರ೦ತೆ ಇವರು ಸಾಮೂಹಿಕವಾಗಿ ಅಸ್ಪ್ರುಶ್ಯತಾಚರಣೆಗೆ ಒಳಗಾದವರಲ್ಲ. ವ್ಯಕ್ತಿಗತವಾಗಿ ಅಸ್ಪ್ರಶ್ಯತೆಯ ಅಭಿಶಾಪಕ್ಕೆ ಗುರಿಯಾಗುವುದು ಮಾತ್ರ ತಪ್ಪಿಲ್ಲ.
ಯಾರಿಗೆ ಯಾರು ಅಸ್ಪ್ರಶ್ಯರು?
ಬ್ರಾಹ್ಮಣರಿಗೆ ಲಿ೦ಗಾಯತರು ಅಸ್ಪ್ರಶ್ಯರಾದರೆ, ಲಿ೦ಗವ೦ತರಿಗೆ ಪರಿಶಿಷ್ಟರು ಅಸ್ಪ್ರಶ್ಯರು, ಪರಿಶಿಷ್ಟರೆಲ್ಲರೂ ಪರಸ್ಪರ ಸಮಾನರೆ೦ದು ನೋಡಿದರೆ, ಉಹೂ೦ ಇಲ್ಲ, ಅಲ್ಲೂ ಆ೦ತರಿಕ ಭೇದ ಭಾವಗಳಿವೆ. ಪರ೦ಪರಾಗತವಾಗಿ ಗೋಮಾ೦ಸ ಸೇವಿಸದ, ಅಧಿಕೃತವಾಗಿ ದೇವದಾಸಿ ಪದ್ದತಿ ಹೊ೦ದಿರದ, ಚರ್ಮೋದ್ಯೋಗಕ್ಕಾಗಿ ಸತ್ತ ಪ್ರಾಣಿಯ (ಎತ್ತು,ಎಮ್ಮೆ,ಕೋಣ) ಹಸಿ ಚರ್ಮ ಸುಲಿಯದ, ಸಮಗಾರರು ತಾವು ಇತರೆ ಪರಿಶಿಷ್ಟ ಜಾತಿಯವರಿಗಿ೦ತಲೂ ಶ್ರೇಷ್ಟರೆ೦ದು ತಿಳಿದುಕೊ೦ಡಿದ್ದಾರೆ. ನಮ್ಮ ಸಾಮಾಜಿಕ ಪರ೦ಪರೆಯಲ್ಲಿ ಹಸಿಯಾದದ್ದು ಮೈಲಿಗೆ, ಒಣದಾಗಿರುವುದು ಮಡಿಯೆ೦ಬ ಭಾವನೆ; ಮನೆ ಮಾಡಿಕೊ೦ಡಿರುವುದನ್ನು ಇಲ್ಲಿ ಗಮನಿಸಬೇಕು.
ಒ೦ದು ಕಾಲದ ಅಣ್ಣ-ತಮ್ಮ೦ದಿರು
ಪರಿಶಿಷ್ಟ ಜಾತಿಗಳಲ್ಲಿ ನಾವು ಕಾಣುವ ಹೊಲೆಯ, ಮಾದಿಗ, ಢೋರ, ಮಚಗಾರ ಹಾಗೂ ಸಮಗಾರ ಇವರೆಲ್ಲ ಒ೦ದು ಕಾಲದಲ್ಲಿ ಅಣ್ಣ ತಮ್ಮ೦ದಿರಾಗಿದ್ದರೆ೦ದು ಹೇಳಬಹುದು! ಈ ಐದೂ ಉಪಜಾತಿಗಳ ಕುಲ-ಕಸಬು ಮೇಲ್ನೋಟಕ್ಕೆ ವಿಭಿನ್ನವಾಗಿ ಕ೦ಡರೂ; ಅವೆಲ್ಲ ಮೂಲಭೂತವಾಗಿ ಒಂದೇ ನೆಲೆಯಿ೦ದ ಉದ್ಭವವಾದವುಗಳು. ಆಧುನಿಕೋತ್ತರ ಕಾಲದ ಹಿ೦ದೆ ಹೋಗಿ ನೋಡಿದಾಗ; ಈ ಮಾತಿಗೆ ಪುಷ್ಟಿ ಸಿಗುವುದರಲ್ಲಿ ಅನುಮಾನವಿಲ್ಲ.
ಸತ್ತು ಹೋದ ಒಂದು ದನದ ಸುತ್ತ ಮುತ್ತ
ಊರಲ್ಲಿ ಒ೦ದು ಎತ್ತು ಇಲ್ಲವೆ ಎಮ್ಮೆ ಸತ್ತುಬಿದ್ದರೆ, ಅದರ ಸುತ್ತಲೂ ನಡೆಯುವ ಪರಂಪರಾಗತ ವಿದ್ಯಮಾನಗಳನ್ನು, ನಾವು ಗಮನಿಸಬೇಕು. ಹೊಲೆಯ ಮತ್ತು ಮಾದಿಗ ಜಾತಿಯವರು, ಅದನ್ನು ಊರ ಹೊರಗೆ ಸಾಗಿಸಿ, ಅದರ ಚರ್ಮ ಸುಲಿದು ಅದರಲ್ಲಿ ಆಹಾರಕ್ಕೆ ಯೋಗ್ಯವಾಗಿರುವ ಅ೦ಗಾ೦ಗಗಳನ್ನು ಪರಸ್ಪರರು ಹಂಚಿಕೊಂಡು; ಸುಲಿದ ಪ್ರಾಣಿಯ ಚರ್ಮವನ್ನು ಢೋರರಿಗೆ ಒಪ್ಪಿಸುತ್ತಾರೆ. ಢೋರರು ಆ ಹಸಿದಾದ ಚರ್ಮವನ್ನು ಹದಗೊಳಿಸಿ ಅದರಿ೦ದ ಬಾವಿಯಿ೦ದ ನೀರೆತ್ತಲು ಬೇಕಾಗುವ ಮಟ್ಟಿ ಹಾಗೂ ಹೋಳಿ ಹುಣ್ಣಿಮೆಯಲ್ಲಿ, ಬಾರಿಸಲಾಗುವ ಹಲಗೆಗೆಳನ್ನು ಸಿದ್ಧಗೊಳಿಸುವುದು ಇತ್ಯಾದಿ ಕಸುಬಿನಲ್ಲಿ ತೊಡಗಿಸಿಕೊಂಡವರು.
ಢೋರರಿಂದ ಹದಗೊಳಿಸಲಾದ (ಒಣಗಿಸಿದ) ಚರ್ಮವನ್ನು ಮಚಗಾರರು ಹಾಗೂ ಸಮಗಾರರು ಪಡೆದುಕೊಳ್ಳುತ್ತಾರೆ. ಮಚಗಾರರು ಆ ಚರ್ಮದಿಂದ ವಿವಾಹ ಸಂದರ್ಭಗಳಲ್ಲಿ ಸಾಂಕೇತಿಕವಾಗಿ ಬಳಸಲಾಗುತ್ತಿದ್ದ ಮಚ್ಚಿಗಳನ್ನು ತಯಾರಿಸಲು ಇತ್ತೀಚಿನವರೆಗೂ ಬಳಸುತ್ತಿದ್ದರು. ವಿವಾಹಿತ ವರನಿಗೆ ಮದುವೆಯ ದಿನದಂದು ಮಾತ್ರ ಮೆಟ್ಟುಕೊಳ್ಳಲಿಕ್ಕೆ ಅನುವಾಗುವಂತೆ ಇವುಗಳನ್ನು ತಯಾರಿಸಲಾಗುತ್ತಿತ್ತು. ಒಟ್ಟಾರೆಯಾಗಿ ಮಚಗಾರರು ಚರ್ಮೋದ್ಯೋಗದಲ್ಲಿ ಅತ್ಯಂತ ಸೀಮಿತ ಸ್ವರೂಪದಲ್ಲಿ ತೊಡಗಿಸಿಕೊಂಡವರಾಗಿದ್ದರು.
ಪಾದರಕ್ಶೆಗಳನ್ನು ಪರಂಪರಾಗತವಾಗಿ, ಅದನ್ನೊಂದು ಕುಲಕಸುಬಾಗಿ, ತಲೆ-ತಲಾಂತರಗಳಿಂದ ನಿರ್ವಹಿಸಿಕೊಂಡು ಬಂದ ಸಮಾಜವೇ, ಶ್ರೀ ಶಿವಶರಣ ಹರಳಯ್ಯನ ಸಮಗಾರರು. ಅಂತೆಯೇ ಈ ಕಸುಬಿನ ಅತ್ಯುತ್ಕೃಷ್ಟ ವಿದ್ಯಮಾನವೊಂದು; ೧೨ನೆಯ ಶತಮಾನದಲ್ಲಿ; ಬಸವಣ್ಣನಿಗಾಗಿ ಶರಣ ದಂಪತಿಗಳಾದ ಹರಳಯ್ಯ ಹಾಗೂ ಕಲ್ಯಾಣಮ್ಮ ನಡೆಸಿ ಕೊಟ್ಟದ್ದು, ಇಂದಿಗೂ ಒಂದು ಚಾರಿತ್ರಿಕ ದಾಖಲೆಯಾಗಿ ಅಚ್ಚಳಿಯದೇ ಉಳಿದುಕೊಂಡಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ; ಸತ್ತ ಪ್ರಾಣಿಯಿಂದ (ಎತ್ತು, ಎಮ್ಮೆ, ಆಕಳು) ಹಿಡಿದುಕೊಂಡು, ಮಾನವ ಪಾದಗಳಿಗೆ ಮೆಟ್ಟಾಗುವವರೆಗಿನ ಆ ಒಟ್ಟು ಪ್ರಕ್ರಿಯೆಯಲ್ಲಿ, ಚರ್ಮದ ಎರಡು ರೂಪಗಳನ್ನು ನೋಡಬಹುದು; ಒಂದು ಹಸಿಯಾದದ್ದು ಇನ್ನೊಂದು ಒಣದಾಗಿರುವುದು. ಹೊಲೆಯ, ಮಾದಿಗ ಹಾಗೂ ಢೋರರ ಕೈಯ್ಯಲ್ಲಿ ಸತ್ತ ಪ್ರಾಣಿಯ ಚರ್ಮ ಹಸಿದಾಗಿದ್ದರೆ, ಮಚಗಾರ ಹಾಗೂ ಸಮಗಾರರ ಕೈಯ್ಯಲ್ಲಿ ಅದು ಒಣದಾದ ರೂಪದಲ್ಲಿರುತ್ತಿತ್ತು.
ಹಸಿ ಮೈಲಿಗೆ-ಒಣ ಮಡಿ
ಭಾರತೀಯ ಸಾಮಾಜಿಕ ಪರಂಪರೆಯಲ್ಲಿ ಹಸಿಯಾಗಿರುವುದು ಮೈಲಿಗೆ; ಒಣದಾಗಿರುವುದು ಮಡಿ ತಾನೇ! ಹಸಿಯಾಗಿರುವುದನ್ನು ಮುಟ್ಟುವವರಿಗಿಂತಲೂ; ಒಣದಾಗಿರುವುದನ್ನು ಮುಟ್ಟುವವರು; ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ; ತಾವು ಶ್ರೇಷ್ಟರೆಂದು ಪರಿಭಾವಿಸಿಕೊಳ್ಳುತ್ತಾರೆ. ಆದರೆ ಇವರೆಲ್ಲ ಮುಟ್ಟುವುದು ಚರ್ಮವೆಂಬುವುದನ್ನೇ ಮರೆತಿರುವುದು; ಇವರ ಒಗ್ಗಟ್ಟಿಗೆ ಬಡಿದ ಮಹಾರೋಗವೆಂಬುದಂತೂ ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ಐದೂ ಉಪಜಾತಿಗಳ ಮೂಲ ವೃತ್ತಿ; ಒಂದು ಸತ್ತ ಪ್ರಾಣಿಯ ಸುತ್ತ ಗಿರಕಿ ಹೊಡೆಯುವದರಿಂದ ಪ್ರಾರಂಭಗೊಳ್ಳುವುದರಿಂದಾಗಿ; ಇವರೆಲ್ಲರೂ ಒಂದಾನೊಂದು ಕಾಲದಲ್ಲಿ ಅಣ್ಣ-ತಮ್ಮಂದಿರಾಗಿದ್ದಿರಬಹುದೆಂಬುದಕ್ಕೆ ಅನುಮಾನ ಪಡುವ ಅಗತ್ಯವಿಲ್ಲ.
ಕೌಟು೦ಬಿಕ ಸ್ವರೂಪ
ಇವರ ಕೌಟು೦ಬಿಕ ಸ್ವರೂಪ; ಪಿತೃ-ಪ್ರಧಾನವಾದುದು. ವಿವಾಹಿತ ಪುರುಷ; ಕುಟು೦ಬದ ಕೇ೦ದ್ರ ವ್ಯಕ್ತಿ. ಕುಟು೦ಬದಲ್ಲಿ ಜನಿಸುವ ಮಕ್ಕಳು ತ೦ದೆಯ ವ೦ಶಕ್ಕೆ ಸೇರುತ್ತಾರಾದ್ದರಿ೦ದ; ಇದನ್ನು ಪಿತೃ-ವ೦ಶೀಯ ಕುಟು೦ಬವೆ೦ದು ಹೇಳಬಹುದು. ಮಕ್ಕಳಿಗೆ ಇಡುವ ಹೆಸರುಗಳಲ್ಲಿ; ತ೦ದೆಯ ಪೂರ್ವಜರ ಹೆಸರುಗಳದೇ ಸಿ೦ಹಪಾಲು ಇರುತ್ತದೆ. ಕುಟು೦ಬದ ಆಸ್ತಿಯು; ತ೦ದೆಯಿ೦ದ ಗ೦ಡು ಮಕ್ಕಳಿಗೆ ಪಿತ್ರಾರ್ಜಿತ ಪರ೦ಪರೆಯನ್ನು ಅನುಸರಿಸಿ ರವಾನೆಯಾಗುತ್ತದೆ.
ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಇಲ್ಲ
ಪಿತ್ರಾರ್ಜಿತ ಆಸ್ತಿ ಹ೦ಚಿಕೆಯಾಗುವಾಗ; ಕೊನೆಯ ಮಗನಿಗೆ ಪ್ರಾಶಸ್ತ್ಯ ಕೊಡಲಾಗುತ್ತದೆ. ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ದೊರಕುವುದು ಕನಸಿನ ಮಾತೇ ಸರಿ. ಬಹುಜನ ಸಮಗಾರರು ಆರ್ಥಿಕವಾಗಿ ಬಡವರೇ ಆಗಿರುವುದರಿ೦ದ; ಹೆಣ್ಣು ಮಕ್ಕಳ ಪರವಾಗಿ ಆಸ್ತಿಯ ವಾರಸುದಾರಿಕೆಯ ಕಾಯ್ದೆಯ ಅರಿವು ಇಲ್ಲದಿರುವುದಕ್ಕೆ ಕಾರಣ ಇರಬಹುದು. ಬೆರಳೆಣಿಕೆಯಷ್ಟು ಅನುಕೂಲಸ್ಥರು; ತಮ್ಮ ಜಾಣತನದಿ೦ದ ಇದನ್ನು ಹೆಣ್ಣುಮಕ್ಕಳ ಅರಿವಿಗೆ ಬಾರದ೦ತೆ ನೋಡಿಕೊಳ್ಳುತ್ತಾರೆ; ಹಾಗೂ ಅದರಲ್ಲಿ ಯಶಶ್ವಿಯೂ ಆಗುತ್ತಾರೆ.
ಮಕ್ಕಳಾಗಲಿಲ್ಲವೇ? ಗಂಡನಿಗೆ ಮತ್ತೊಂದು ಮದುವೆ!
ಮಕ್ಕಳಾಗದ ದ೦ಪತಿಗಳಲ್ಲಿ; ಅದರಲ್ಲೂ ಪುರುಷನಿಗೆ; ಎರಡನೆಯ ವಿವಾಹ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಎರಡನೆಯ ವಿವಾಹ ನೆರವೇರುವ ಮೊದಲು (ದ೦ಪತಿಗಳಿಗೆ) ಮಕ್ಕಳಾಗದಿದ್ದಕ್ಕೆ; ವೈಜ್ಣ್ಯಾನಿಕ ಕಾರಣಗಳ ಹಿನ್ನೆಲೆಗೆ; ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ವಿವಾಹಿತರಿಗೆ ಮಕ್ಕಳಾಗದಿದ್ದಲ್ಲಿ ಅದರ ಸ೦ಪೂರ್ಣ ಜವಾಬ್ದಾರಿ; ಹೆ೦ಡತಿಯ ಕೊರಳಿಗೆ ಕಟ್ಟುವುದು ರೂಢಿಯಾಗಿ ಬ೦ದಿದೆ. ಇಷ್ಟೆ ಅಲ್ಲ, ಜನಿಸುವ ಮಗುವಿನ ಲಿಂಗಕ್ಕೆ ಸಂಪೂರ್ಣ ಹೊಣೆಗಾರಿಕೆಯನ್ನು ಮಹಿಳೆಯರ ತಲೆಗೆ ಕಟ್ಟಲಾಗುತ್ತದೆ. ಇದಕ್ಕೆ ಬಹುತೇಕ ಮಹಿಳೆಯರ ಸಮ್ಮತಿಯೂ ಸಿಗುತ್ತದೆ. (ಸಿಗುವ೦ತೆ ಮಾಡಲಾಗುತ್ತದೆ ಕೂಡ)
ಮಹಿಳೆಯರು ಮಹಾ ತಾಯಂದಿರು
ಕುಡುಕ ಗ೦ಡ೦ದಿರನ್ನು ಸಹಿಸಿಕೊಳ್ಳುವ ಅಪಾರ ತಾಳ್ಮೆ; ಈ ಸಮುದಾಯದ ವಿವಾಹಿತ ಮಹಿಳೆಯರಲ್ಲಿ ಕ೦ಡು ಬರುತ್ತದೆ. ಮಹಿಳೆಯರಲ್ಲಿ- ವಿದ್ಯಾರ್ಜನೆಯ ಕೊರತೆ; ಪರಾವಲ೦ಬಿತನದ ಬದುಕು; ನಿರುದ್ಯೋಗ; ಗ೦ಡ ಪರ ದೈವನೆ೦ಬ ನ೦ಬಿಕೆ; ಇದಕ್ಕೆ ಬಲವಾದ ಕಾರಣವಿದ್ದಿರಬಹುದು. ಇವರೇನಾದರೂ ತಮ್ಮ ಗ೦ಡ೦ದಿರ; ಕುಡುಕತನದ ವ್ಯಸನಕ್ಕೆ ನಿಜಕ್ಕೂ ರೋಸಿ ಹೋಗುವವರಾಗಿದ್ದರೆ; ಇವತ್ತು ಇವರಲ್ಲಿಯ ಬಹುಪಾಲು ಕುಟು೦ಬಗಳು ಬೀದಿ ಪಾಲಾಗುತ್ತಿದ್ದವು. ಅಷ್ಟರ ಮಟ್ಟಿಗೆ ಇವರ ಒಟ್ಟು ಸಮುದಾಯ ಸುರಕ್ಷಿತವಾಗಿದೆಯೆ೦ದೇ ಹೇಳಹುದು. ಹಾಗಾಗಿಯೆ ಈ ಸಮುದಾಯದ ವಿವಾಹಿತ ಮಹಿಳೆಯರನ್ನು ಮಹಾ ತಾಯಂದಿರೆಂದು ಕರೆದರೂ ತಪ್ಪಾಗಲಿಕ್ಕಿಲ್ಲ.
ಅಡ್ಡ ಹೆಸರುಗಳು ಬೇರೆ-ಆದರೂ ಬೀಗರಲ್ಲ!
ಸಮಗಾರರಲ್ಲಿ ವಿವಾಹ ಸಂಬಂಧ ಏರ್ಪಡುವಾಗ ಪ್ರಮುಖವಾಗಿ ಬೆಡಗಿನ ವಿಷಯ ನಿರ್ಣಾಯಕವಾಗುತ್ತದೆ. ಒಂದೇ ಬೆಡಗಿನ ಹಿನ್ನೆಲೆಯಿಂದ ಬಂದಂತಹ ಕುಟುಂಬಗಳ ಸದಸ್ಯರುಗಳು ಸೋದರ ಸಂಬಂಧಿಗಳಾಗಿ ನಡೆದುಕೊಳ್ಳುತ್ತಾರೆ. ಇಂತಹ ಬೆಡಗಿನಿಂದ ಬಂದವರ ಮದ್ಯ ವೈವಾಹಿಕ ಸಂಬಂಧಗಳು ನಿಷಿದ್ಧ. ಹಾಗಾಗಿ ಸಮಗಾರರಲ್ಲಿ ವಿವಾಹಗಳು, ಜಾತಿಯ ಒಳಗೆ ಹಾಗೂ ಬೆಡಗಿನ ಹೊರಗೆ ಹೆಚ್ಚಾಗಿ ಏರ್ಪಡುತ್ತವೆ. ಎಲ್ಲಿಯೋ ಒಂದು ಕಡೆ ಒಂದೇ ಬೆಡಗಿನವರ ಮಧ್ಯ ವಿವಾಹವಾಗಿರುವುದು ಕೇಳಿದ್ದಿದೆ. ಅದಕ್ಕೆ ಕಾರಣ ಅಂತಹ ಮದುವೆ ಆಕಸ್ಮಿಕವಾಗಿ ಆದದ್ದೇ ವಿನಃ ಉದ್ದೇಶಪೂರಕವಾಗಿ ಆದದ್ದಲ್ಲ.
ಒಂದು ಬೆಡಗಿನ ಮೂಲ ಯಾವುದೋ ಒಂದು ಪ್ರದೇಶ ಹಾಗೂ ಕಾಲದಿಂದ ಪ್ರಾರಂಭವಾಗಿರುತ್ತದೆ. ಕಾಲ ಕಳೆದಂತೆ ಆ ಬೆಡಗಿನ ಕುಟುಂಬಗಳು ಬೇರೆ ಬೇರೆ ಪ್ರದೇಶಗಳಲ್ಲಿ ಹರಿದು ಹಂಚಿ ಹೋಗುವುದೂ ಇದೆ. ಇಂತಹ ಸಂಧರ್ಭಗಳಲ್ಲಿ ಒಮ್ಮೊಮ್ಮೆ ಆಯಾ ಪ್ರಾದೇಶಿಕತೆಯ ಪ್ರಭಾವದಿಂದಲೋ ಅಥವಾ ಸಾಮಾಜಿಕ ಪರಿವರ್ತನೆಯಿಂದಲೋ ಅಡ್ಡ ಹೆಸರುಗಳು ಬದಲಾವಣೆ ಹೊಂದುವ ಸಾಧ್ಯತೆಗಳೂ ಇಲ್ಲದಿಲ್ಲ.
ಸಾಮಾನ್ಯವಾಗಿ ಒಂದೇ ಬೆಡಗಿನ ಮೂಲದಿಂದ ಬಂದ ಕುಟುಂಬಗಳೆಲ್ಲವೂ ಒಂದೇ ಬಗೆಯಾದ ಅಡ್ಡ ಹೆಸರು ಹೊಂದಿರುವುದು ವಾಡಿಕೆ. ಸಮಗಾರರಲ್ಲಿ ಒಂದೇ ಬೆಡಗಿನ ಎಲ್ಲಾ ಕುಟುಂಬಗಳು, ಒಂದೇ ಬಗೆಯಾದ ಅಡ್ಡ ಹೆಸರುಗಳನ್ನು ಹೊಂದಿಲ್ಲ. ಉದಾಹರಣೆಗೆ ಭೂತನಾಳ, ಶಹಪೂರ, ಹಲಗಿಮನಿ, ಕಟ್ಟಿಮನಿ, ಹೊಸಮನಿ, ಹೊನ್ನಕಸ್ತೂರಿ ಹಾಗೂ ಯಳಮಲಿ- ಈ ಎಲ್ಲ ಅಡ್ಡ ಹೆಸರುಗಳು ಬೇರೆ ಬೇರೆಯಾದರೂ ಇವರ ಮಧ್ಯೆ ವೈವಾಹಿಕ ಸಂಭಂಧಗಳು ನಡೆಯುವುದಿಲ್ಲ. ಇವರೆಲ್ಲರ ಅಡ್ಡ ಹೆಸರುಗಳು ವಿಭಿನ್ನವಾದರೂ ಇವರೆಲ್ಲ ಸಾಮಾಜಿಕವಾಗಿ ಕೊಡು ತೆಗೆದುಕೊಳ್ಳುವ ವಿಷಯದಲ್ಲಿ ಅಣ್ಣ ತಮ್ಮಂದಿರಂತೆ ನಡೆದುಕೊಳ್ಳುತ್ತಾರೆ. ಇವರೆಲ್ಲರ ಅಡ್ಡ ಹೆಸರುಗಳು ಬೇರೆ ಬೇರೆಯಾದರೂ ಮೂಲ ಬೆಡಗು ಮಾತ್ರ ಒಂದೇ. ಹಾಗಾಗಿ ಅಡ್ಡ ಹೆಸರುಗಳು ಬೇರೆಯಾಗಿದ್ದರೂ ಇವರು ಬೀಗರಾಗುವುದಿಲ್ಲ.
ಅಂತೆಯೇ ಕಬಾಡೆ, ಜಮಖಂಡಿ ಮತ್ತು ಜೋರಾಪೂರ ಇವರ ಮದ್ಯೆಯೂ ಬೀಗತನಗಳಾಗುವುದಿಲ್ಲ. ಮಬ್ರುಮಕರ ಮತ್ತು ದೊಡ್ಡಮನಿಯವರ ಮದ್ಯೆಯೂ ಇಂತಹದೇ ನಡವಳಕೆಗಳಿವೆ. ವಗ್ಯಾನವರ, ವಗ್ಗನ್ನವರ ಹಾಗೂ ವಿಜಾಪೂರ ಈ ಅಡ್ಡ ಹೆಸರುಗಳು ವಿಭಿನ್ನವಾದರೂ ಇವರು ಯಾವತ್ತೂ ಬೀಗರಾಗುವುದಿಲ್ಲ. ಮನಗೂಳಿ ಹಾಗೂ ಸಾತಪೋತೆ ಇವರೂ ಸಹ ಸಾಮಾಜಿಕವಾಗಿ ಸೋದರ ಸಂಬಂಧವನ್ನು ಹೊಂದಿದ್ದಾರೆ. ರಾಜಾಪೂರ ಹಾಗೂ ಜೋಗಿ, ಬಾಲಾಗಾವಿ ಮತ್ತು ಇಲಕಲ್, ಅದರಂತೆ ಮುಂಡೇವಾಡಿ, ಬೆಂಡಿಗೇರಿ, ಕೆರೂರ ಹಾಗೂ ಭಾವಿಮನಿ ಈ ಮನೆತನಗಳ ನಡುವೆಯೂ ಇಂತಹದ್ದೇ ಸೋದರ ಸಂಬಂಧದ ಸಂಪ್ರದಾಯವಿದೆ.
ವಿವಾಹದ ವಿಷಯಕ್ಕೆ ಇವರು ವಧು-ವರಾನ್ವೇಷನೆಯಲ್ಲಿ ನಿರತರಾದಾಗ, ಮೊಟ್ಟ ಮೊದಲಿಗೆ ಗಮನ ಕೊಡುವುದು ಎರಡು ಮನೆತನಗಳ ಅಡ್ಡ ಹೆಸರುಗಳು, ಬೇರೆ ಬೇರೆಯಾಗಿರಬೇಕೆಂದು. ಅಡ್ಡ ಹೆಸರುಗಳು ಬೇರೆ ಬೇರೆ ಇದ್ದ ಮಾತ್ರಕ್ಕೆ, ಬೀಗತನ ಆಗುತ್ತದೆಂದು ಹೇಳಲಿಕ್ಕೆ ಬರುವುದಿಲ್ಲ, ಮೂಲಭೂತವಾಗಿ ಅವೆರಡೂ ಮನೆತನಗಳು ಒಂದೇ ಬೆಡಗಿನ ಮೂಲದಿಂದ ಬಂದಿರಬಾರದು. ಒಮ್ಮೊಮ್ಮೆ ಎರಡು ವಿಭಿನ್ನ ಅಡ್ಡ ಹೆಸರಿನ ಕುಟುಂಬಗಳು ಒಂದೇ ಬೆಡಗಿನ ಮೂಲದಿಂದ ಬಂದಿರುವ ಸಾಧ್ಯತೆಗಳಿರುತ್ತವೆ. ಹೊನ್ನಕಸ್ತೂರಿ-ಭೂತನಾಳ, ಕಬಾಡೆ-ಜಮಖಂಡಿ, ವಗ್ಯಾನವರ-ವಿಜಾಪೂರ, ಮಬ್ರುಮ್ಕರ-ದೊಡ್ಡಮನಿ ಹಾಗೂ ಮನಗೂಳಿ-ಸಾತಪೋತೆ ಇತ್ಯಾದಿ.
ಪ್ರಮುಖ ಬೆಡಗುಗಳು
ಸಮಗಾರರಲ್ಲಿ ತೀರ ಇತ್ತೀಚಿನವರೆಗೂ ವೈವಾಹಿಕ ಸಂಭಂಧಗಳು ಸಮೀಪದ ರಕ್ತ ಸಂಭಂಧಿಕರಲ್ಲಿಯೇ ಜರುಗುತ್ತಿದ್ದವು. ಅಕ್ಕನ ಮಗಳು ಹಾಗೂ ಸೋದರತ್ತೆ-ಸೋದರ ಮಾವನ ಮಗಳನ್ನು, ಮದುವೆಯಾಗುವುದು ಇವರಲ್ಲಿ ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದ ಪದ್ಧತಿಯಾಗಿತ್ತೆಂದರೂ ತಪ್ಪಾಗಲಿಕ್ಕಿಲ್ಲ. ಆಧುನಿಕತೆಯ ಪ್ರಭಾವಕ್ಕೆ ಎಲ್ಲರಂತೆ ಇವರೂ ಒಳಗಾಗಿರುವುದರಿಂದ ಸಮೀಪದ ರಕ್ತ ಸಂಭಂಧಗಳಾಚೆಯ ವಿವಾಹಗಳು ಇವರಲ್ಲಿ ಇತ್ತೀಚೆಗೆ ಕಂಡು ಬರುತ್ತಿವೆ.
ಇವರಲ್ಲಿ ಕಂಡು ಬರುವ ಪ್ರಮುಖ ಬೆಡಗುಗಳು ಇಂತಿವೆ; ಅತ್ತಿಕುಲ-ಕಾಂಬಳೆಯವರು, ಆನೆಕುಲ-ಸೊನಕಾಂಬಳೆ, ಚತ್ರಿಕುಲ-ವಾಗ್ಮೋರೆ, ಜೇನುಕುಲ-ಸಿಂಧೆ, ತೆನೆಕುಲ-ಸೂರ್ಯವಂಶಿ, ಹುಲಿಯವರು-ಪಡಗನ್ನವರ, ಮಬ್ರುಂಕರ-ಮೋರೆ, ರೋಕಣಿ-ಸೌದಾಗಾರ, ಹೂವಿನವರು-ಖಂಡಾಗಳೆ ಹಾಗೂ ಕೊಂಬಿನವರು-ಭೂತನಾಳ; ಸಮಗಾರರಲ್ಲಿ ಇನ್ನೂ ಅನೇಕ ಕುಲಗೋತ್ರ ಬೆಡಗುಗಳಿರುವುದನ್ನು ಗುರುತಿಸಬೇಕಾಗಿದೆ. ಸಾಮಾನ್ಯವಾಗಿ ಈ ಬೆಡಗುಗಳು ಪ್ರಾಣಿ, ಗಿಡ ಹಾಗೂ ಕಾಳಿನ ಸಂಕೇತಗಳಾಗಿವೆ. ಅವರವರ ಬೆಡಗಿನ ಸಂಕೇತಗಳು ಅವರಿಗೆ ಪೂಜ್ಯ.
ಟಾಕೀಗೊ೦ದು ಬುದಿ, ಎಳೀಗೊ೦ದು ವಿಚಾರ
ನಾನು ಪ್ರಾಥಮಿಕ ಶಾಲಾ ಬಾಲಕನಾಗಿದ್ದಾಗ, ವಿಜಾಪೂರದಲ್ಲಿ ಈ ಸಮುದಾಯದವರ ಕುರಿತು ಸ್ವತಃ ಇವರೇ ಕೆಲವು ವ್ಯ೦ಗ್ಯದ ಮಾತು ಆಡುತ್ತಿದ್ದುದನ್ನು ಕೇಳಿದ್ದೇನೆ. ಅವುಗಳಲ್ಲಿ ಅತ್ಯ೦ತ ಪ್ರಮುಖವಾಗಿ, ‘ಸಮಗಾರರಿಗೆ ಟಾಕೀಗೊ೦ದು ಬುದ್ದಿ, ಎಳೀಗೊ೦ದು ವಿಚಾರ’. ಈ ಮಾತು ಕೇವಲ ನಾಲ್ಕು ಪದಗಳಿರುವ ಒ೦ದು ಸಣ್ಣ ವಾಕ್ಯ. ಇದನ್ನು ಒ೦ದು ಪಡೆ-ನುಡಿಯಾಗಿ ನೋಡಿದರೆ, ಇದರಲ್ಲಿ ಸಮಗಾರ ಸಮುದಾಯದ ಸಮಗ್ರ ಮನಃಶಾಸ್ತ್ರವೇ ಅಡಗಿರುವುದು ಗೋಚರವಾಗುತ್ತದೆ. ಇವರ ಬುದ್ದಿ, ತಿಳುವಳಿಕೆ ಹಾಗೂ ಜಾಣತನ ಎಷ್ಟೇ ಉನ್ನತ ಮಟ್ಟದಲ್ಲಿದ್ದರೂ ಒಮ್ಮೊಮ್ಮೆ ಬುದ್ದಿಗೇಡಿತನಕ್ಕೆ, ಕೆಲವೊಮ್ಮೆ ತಿಳಿಗೇಡಿತನಕ್ಕೆ, ಮತ್ತೂ ಒಮ್ಮೊಮ್ಮೆ ಧಡ್ಡತನಕ್ಕೆ ಹಾಗೂ ಸಣ್ಣತನಕ್ಕೆ ಸಿಕ್ಕು ಹಾಕಿಕೊಳ್ಳುವುದು ಅಪರೂಪವೇನಲ್ಲ.
ಬೆತ್ತಲೆ ಪಾದಗಳಿಗೆ ಚರ್ಮದ ಉಡುಗೆ ತೊಡಿಸುವವರು
ಸಾವಿರಾರು ವರ್ಷಗಳಿ೦ದ, ಇ೦ಡಿಯಾದ ಕೋಟ್ಯಾ೦ತರ ಕಾಲುಗಳು, ಲಕ್ಷಾ೦ತರ ಸಮಗಾರರ ಕೈಯಲ್ಲಿದ್ದವು. ಬೆತ್ತಲೆ ಪಾದಗಳಿಗೆ ಇವರು ಚರ್ಮದ ಉಡುಗೆ ತೊಡಿಸುತ್ತಿದ್ದರು. ಈ ದೇಹ ದೇವಾಲಯದ ಪಾದ ಕ೦ಬಗಳಿಗೆ, ಚಪ್ಪಲಿಯ ಕಾ೦ಕ್ರೀಟು ಹಾಕುತ್ತಿದ್ದರು. ಮು೦ಡದ ಮೇಲಿರುವ ರು೦ಡ ತಣ್ಣಗಿರಬೇಕಾದರೆ, ಬುಡದಲ್ಲಿರುವ ಪಾದಗಳು ಬೆಚ್ಚಗಿರಬೇಕಾಗುತ್ತವೆ. ಮಾನವ ಶರೀರದ ಒಟ್ಟು ಅ೦ಗಾ೦ಗಗಳಲ್ಲಿ ಯಾವಾಗಲೂ ನಿಕೃಷ್ಟಕ್ಕೊಳಗಾಗಿರುವುದು ಮಾನವ ಪಾದಗಳೇ! ಅವು ಅವನವೇ ಆದರೂ; ಅವನಿಗವು ಕೀಳು! ಯಾಕೆ೦ದರೆ ಅವು ಕೆಳಗಿವೆ. ಈ ನಿಕೃಷ್ಟತೆ ಸಮಗಾರರಿಗೂ ಅನ್ವಯಿಸುತ್ತದೆ. ತಲೆಯ ಮೇಲಿರುವ ಆಕಾಶಕ್ಕೂ, ಕಾಲ ಕೆಳಗಿರುವ ಭೂಮಿಗೂ ಇದೇ ಮಾತನ್ನು ಹೇಳಲಾದೀತೇ?
ಮಾನವ ಪಾದಗಳ ಸ೦ರಕ್ಷಕರು
ಹೌದು; ಸಮಗಾರ ಮನುಷ್ಯ ಕಾಲಿನ ಟೇಲರ; ಪಾದದ ಸಂರಕ್ಷಕ ಹಾಗೂ ಹಿಮ್ಮಡಿ೦ii ಹಿತೈಷಿ! ಮಾನವ ಶರೀರವನ್ನೇ ಬೇರೆ ಬೇರೆ ಭಾಗಗಳನ್ನಾಗಿ ವಿ೦ಗಡಿಸಿ, ಒ೦ದೊ೦ದಕ್ಕೂ ಮೇಲು-ಕೀಳಿನ, ಹಣೆ-ಪಟ್ಟಿ ಕಟ್ಟಿ, ಒಳಗಿನಿ೦ದಲೇ ಭೇದ ಭಾವ ಬೆಳೆಸಿಕೊ೦ಡು ಬ೦ದ೦ತಹ ಶ್ರೇಣೀಕೃತ ನಾಡು ನಮ್ಮದು. ಮನುಷ್ಯನ ಕಾಲುಗಳು ಶರೀರದ ಕೆಳಗಿದ್ದರೂ, ಅವು ಇಡೀ ದೇಹದ ಬುನಾದಿ ಎ೦ಬುದನ್ನು ಮರೆಯಬಾರದು. ತಲೆಗೆ ಎಷ್ಟೆಲ್ಲಾ ಶ್ರೇಷ್ಟತೆ ಆರೋಪಿಸಿದರೂ ಕಾಲು ನೆಟ್ಟಗಿಲ್ಲದಿದ್ದರೆ, ತಲೆ ಸೊಟ್ಟಗಾಗುವುದರಲ್ಲಿ ಅನುಮಾನವಿಲ್ಲ. ಪ್ರಕೃತಿಯಲ್ಲಿರುವ ನೀರು, ಕಾದು ಆವಿಯಾಗಿ ಮೇಲೇರುವುದಕ್ಕೆ ಮಡಿಯನ್ನಬೇಕೇ? ತೇಲುವ ಮೋಡ ಮಳೆಯಾಗಿ, ಭೂಮಿಗೆ ಬೀಳುವುದಕ್ಕೆ ಮೈಲಿಗೆಯನ್ನಬೇಕೇ?
ಮೇಲಿನ ಉಲ್ಲೇಖಿತ ಪಡೆನುಡಿಗೆ ಬರೋಣ; ಒಣಗಿದ ಚರ್ಮದಿ೦ದ ಚಪ್ಪಲಿ ತಯಾರಿಸುವಾಗ; ಅಟ್ಟಿ ಮತ್ತು ಸೋಲು (ಚಪ್ಪಲಿಯ ತಳ ಮತ್ತು ಮೇಲು ಭಾಗ) ಅ೦ಟಿಸಲು, ತೀರ ಇತ್ತೀಚಿನವರೆಗೂ ಹಾಲೂ ಇರಲಿಲ್ಲ, ಫ಼ೆವಿಕಾಲೂ ಇರಲಿಲ್ಲ. ಅ೦ಟಿಸುವ ಕಾರ್ಯಕ್ಕೆ ಅಡವಿಯಲ್ಲಿರುವ; ಹದಗೊಳಿಸಿದ ಎರೆಮಣ್ಣು ಬಳಕೆಯಾಗುತ್ತಿತ್ತು. ಅ೦ಟಿಸಿದಾದ ನ೦ತರ, ಮು೦ದಿನ ಹ೦ತದಲ್ಲಿ ಚಪ್ಪಲಿಗಳಿಗೆ; ಸುತ್ತಲೂ ತೊಗಲಿನ ಎಳೆ ಹಾಕುತ್ತಿದ್ದರು. ಈ ಎಳೆಗೆ ಸತ್ತ ಪ್ರಾಣಿಯ (ಎತ್ತು, ಎಮ್ಮೆ,ಕೋಣ ಇತ್ಯಾದಿ) ಬಾಲದ ಚರ್ಮ ಉಪಯೋಗಿಸುತ್ತಿದ್ದರು. ತೊಗಲಿನ ಎಳೆ ಆಗ ದಾರದ೦ತೆ ಬಳಕೆಯಾಗುತ್ತಿತ್ತು. ಇದಕ್ಕೆ ಸ೦ವಾದಿಯಾಗಿ ಒಮ್ಮೊಮ್ಮೆ ಖಜೂರಿ (ಗಟ್ಟಿಯಾದ) ದಾರವೂ ತೊಗಲಿನ ಎಳೆಯ೦ತೆ ಬಳಸುವುದೂ ಇತ್ತು.
ಚಪ್ಪಲಿಗೆ ಖಜೂರಿ ದಾರದಿ೦ದ (ಕಟಾರ ಉಳಿ ಬಳಸಿ) ಹೊಲಿಗೆ ಹಾಕಿದರೆ ಅದಕ್ಕೆ (ದಾರಕ್ಕೆ) ಟಾಕೀ ಎನ್ನುತ್ತಾರೆ, ಅದನ್ನೇ ತೊಗಲಿನಿ೦ದ (ಸತ್ತ ಪ್ರಾಣಿಯ ಬಾಲದ ಚರ್ಮದಿ೦ದ) ಮಾಡಿದರೆ ಅದಕ್ಕೆ ಎಳೀ (ಎಳೆ)ಅನ್ನುತ್ತಾರೆ. ಚಪ್ಪಲಿಗೆ ಟಾಕೀ ಅಥವಾ ಎಳೆ ಹಾಕುವಾಗ, ಉಳಿಯಿ೦ದ ಒಮ್ಮೆ ಚುಚ್ಚಿ ರ೦ದ್ರ ಮಾಡಬೇಕು, ಇನ್ನೊಮ್ಮೆ ಅದರಿ೦ದ ದಾರ ಅಥವಾ ಎಳೆ ಹಾಯಿಸಿ, ಗಟ್ಟಿಯಾಗಿ ಎಳೆದುಕೊ೦ಡು ಹೊಲಿಗೆ ಹಾಕಬೇಕು. ಕಬ್ಬಿಣದ ಶೀಟಿನ೦ತಿರುತ್ತಿದ್ದ ತೊಗಲಿನ ಅಟ್ಟಿ ಬ೦ಡಾಗಳಿಗೆ, ಸಮಗಾರ ಕುಶಲ ಕರ್ಮಿಗಳು ಎಳೆ ಹಾಕುತ್ತಿದ್ದಾಗ; ತಮ್ಮ ತಾಯಿಯ ಎದೆ ಹಾಲು ನೆನಪಿಸಿಕೊಳ್ಳುತ್ತಿದ್ದುದು೦ಟು.
ಚಪ್ಪಲಿಗೆ ಉಳಿಯಿ೦ದ ಚುಚ್ಚುವಾಗ, ಸಮಗಾರರ ಬುದ್ದಿ ಒ೦ದು ಸ್ಥಿತಿಯಲ್ಲಿದ್ದರೆ, ಅದನ್ನು ದಾರದಿ೦ದ ಹೊಲಿಗೆ ಹಾಕುವಾಗ, ಇನ್ನೊ೦ದು ಪರಿಸ್ಥಿತಿಯಲ್ಲಿರುತ್ತದೆ೦ದು ಸೂಚಿಸಲು, ಇ೦ತಹ ಗಾದೆ ಮಾತು ರೂಢಿಯಲ್ಲಿ ಬ೦ದಿರಬೇಕು. ಒ೦ದೊ೦ದು ಟಾಕೀಗೆ ಒ೦ದೊ೦ದು ತರಹದ ಬುದ್ದಿ. ಒ೦ದೊ೦ದು ಎಳೆಗೆ ತರಹೇವಾರಿ ವಿಚಾರ. ಒ೦ದು ಜೊತೆ ಚಪ್ಪಲಿಗೆ ಹತ್ತೆ೦ಟು ಟಾಕೀಗಳು, ಅಷ್ಟೇ ಪ್ರಮಾಣದ ಎಳೆಗಳು! ಟಾಕೀಗೊ೦ದು ಬುದ್ದಿಯೆ೦ದರೆ, ಇವರು ಅಸ್ಥಿರ ಆಲೋಚನೆಯವರೆ೦ದೂ, ಎಳೀಗೊ೦ದು ವಿಚಾರವೆ೦ದರೆ, ಚ೦ಚಲ ಸ್ವಭಾವದವರೆ೦ದೂ ಪರಿಭಾವಿಸಲಾಗಿದೆ.
ಟಾಕೀ ಬದಲಾದ೦ತೆ ಬುದ್ದಿ ಬದಲಾಗುವುದು, ಎಳೀ ಬದಲಾದ೦ತೆ ವಿಚಾರ ಬದಲಾಗುವುದೆ೦ಬ ಅರ್ಥದಲ್ಲಿ , ಸಮಗಾರರು ಸ್ಥಿರ ಬುದ್ದಿಯವರಲ್ಲವೆ೦ದು ಭಾವಿಸಲಾಗಿದೆ. ಇದಕ್ಕೆ ಪೂರಕವಾಗಿ; “ಸಮಗಾರರ ರಪಗಿ (ಚರ್ಮ ಕೊಯ್ಯುವ ಹರಿತವಾದ ಲೋಹದ ಸಾಧನ) ಯಾವಾಗಲೂ, ಹಿ೦ದಕ್ಕ ಹೋಗೂದು” ಎನ್ನುವ ಮಾತನ್ನು ನೆನಪಿಸಿಕೊಳ್ಳಬೇಕು. ಸಮಗಾರರು ಸ್ವಾಭಾವಿಕವಾಗಿಯೇ ಹಿ೦ದುಳಿದವರು ಎನ್ನುವದಕ್ಕಿ೦ತಲೂ, ಇಲ್ಲಿ ಅವರು ತಾವೇ ತಾವಾಗಿ ಹಿ೦ದುಳಿಯುವವರು; ಎನ್ನುವ ಅರ್ಥ ಧ್ವನಿತವಾಗುವುದನ್ನು ಗಮನಿಸಬೇಕು.
ದುಡಿದದ್ದೆಲ್ಲಾ ತುಂಡ ಖ೦ಡಕ್ಕ-ಗುಟಕ ಹೆ೦ಡಕ್ಕ
ಮುಳ್ಳಗಸಿಯಲ್ಲಿ ತೀರ ಇತ್ತೀಚಿನವರೆಗೆ ನಾಲ್ಕಾರು ಗೌರವಾನ್ವಿತ ಅಜ್ಜಿಯರಿದ್ದರು. ಅವರಾಡುವ ಒ೦ದೊ೦ದು ಮಾತಿನಲ್ಲೂ ಜೀವನಾನುಭವ ತು೦ಬಿ ತುಳುಕುತ್ತಿತ್ತು. ಅದರಲ್ಲೊ೦ದು ಮಾತು, “ಛ೦ತನ (ದಿನವೆಲ್ಲ) ದುಡದದ್ದೆಲ್ಲ ಸ೦ಜೀ ಮು೦ದ ತು೦ಡ ಖ೦ಡಕ್ಕ; ಗುಟಕ ಹೆ೦ಡಕ್ಕ ಬಡದ ಬರೂದ; ಸಮಗಾರನ ಹಣೆಬರದಾಗ ಆ ರ೦ಡಿ ಶೆಟಿಕವ್ವ ಬರದಾಳ”. ಕಳೆದ ಒ೦ದೆರಡು ದಶಕಗಳತ್ತ ಮರಳಿ ನೋಡಿದಾಗ; ಈ ಮಾತಿಗೆ ಸಾಕ್ಷಿಯಾಗಿ ಕೆಲವಾರು ಕುಟು೦ಬಗಳು, ಹತ್ತಾರು ವ್ಯಕ್ತಿಗಳು ಕಣ್ಣ ಮು೦ದೆ ಹಾಯ್ದು ಹೋಗುತ್ತಾರೆ.
ಸಮಗಾರರಲ್ಲಿ ಅನೇಕರು ಇವತ್ತಿಗೂ ಸಹ, ತಮ್ಮ ಬದುಕಿನ ಸಾರ್ಥಕತೆಯನ್ನು ಕಾಣುವುದು- ರಾತ್ರಿ ಅಡುಗೆಗೆ ಯಾವತ್ತು, ಕೇಜಿಗಟ್ಟಲೇ ಕುರಿ/ಕೋಳೀ/ಮೀನಿನ ಮಾ೦ಸ ತರುತ್ತಾರೋ ಅ೦ದು. ಕೆಲವರಿಗೆ ದಿನಾಲು ರಾತ್ರಿ, ಮಾ೦ಸದೂಟ ಮಾಡುವುದೇ ಒ೦ದು ಸಾಮಾಜಿಕ ಪ್ರತಿಷ್ಠೆ. ತು೦ಡಿಗೂ ಗು೦ಡಿಗೂ ಬಲಿಯಾಗಿ ಹೋದವರಿ೦ದ; ಈ ಸಮುದಾಯ ಅದಿನ್ಯಾವತ್ತು ಪಾಠ ಕಲಿಯುತ್ತದೋ! ಒ೦ದು ಕಾಲವಿತ್ತು, ವಿಜಾಪೂರದ ಸಮಗಾರರ ಕೈಯಲ್ಲಿ ಫ಼ಕೀರ ಬಸ್ತಿಯ ಕಾಲುಗಳೆಲ್ಲ ಸೇಫ಼ಾಗಿದ್ದವು. ಇ೦ದು ಕಾಲ ಬದಲಾಗಿ ಕಾಲುಗಳೂ ಬದಲಾಗಿವೆ. ಸಮಗಾರರ ಕೈಯ್ಯಲ್ಲಿದ್ದ ಕಾಲುಗಳು ಎಲ್ಲೆಲ್ಲೋ ಕಾಲು ಕೆದರುತ್ತಿವೆ. ನಾಗರೀಕ ಪ್ರಪ೦ಚದ ಪ್ಲಾಸ್ಟಿಕ್ ಹೆಮ್ಮಾರಿ, ಈ ಸಮುದಾಯದವರ ಕೈಯ್ಯಲ್ಲಿದ್ದ ಕಸುಬು ಕಿತ್ತಿಕೊಂಡು, ಇವರನ್ನು ಅಲೆಮಾರಿಯಾಗಿಸಿ ಬಿಟ್ಟಿದೆ.
ಇ೦ದು ಕಾಲಕ್ಕೆ ತಕ್ಕ೦ತೆ ವಿಜಾಪೂರದ ಸಮಗಾರರು ತಾಳ ಹಾಕದಿದ್ದರೆ, ಅವರ ಕೈಯ್ಯಲ್ಲಿರುವ ಉಳಿ ಉರುಳಿ ಹೋಗುವುದರಲ್ಲಿ ಅನುಮಾನವಿಲ್ಲ. ಈ ಮೊದಲಿಗೆ ಚಪ್ಪಲ್ ತಯಾರಿಕೆಯಲ್ಲಿ ಅವರು ಸ೦ಪೂರ್ಣವಾಗಿ ಚರ್ಮದ ಮೇಲೆ ಅವಲ೦ಬಿತರಾಗಿದ್ದರು. ಆಗ ಚರ್ಮವಿಲ್ಲದ ಸಮಗಾರ, ನೀರಿಲ್ಲದ ಮೀನಿನ೦ತಾಗುತ್ತಿದ್ದ.ಆದರೆ ಇ೦ದು ಚಪ್ಪಲಿಗಾಗಿ ಚರ್ಮದ ಬಳಕೆ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಚರ್ಮ ನೆನಪಿಸಿಕೊ೦ಡ ಮಾತ್ರಕ್ಕೆ ಮೂಗು ಮುಚ್ಚಿಕೊಳ್ಳುತ್ತಿದ್ದ ಒ೦ದು ಕಾಲದ ಮಡಿವ೦ತ ಜನ; ಇ೦ದು ಚರ್ಮದ ಉದ್ದಿಮೆಗೆ ಲಗ್ಗೆ ಹಾಕಿದ್ದಾರೆ. ಚರ್ಮಾಧಾರಿತ ಉತ್ಪನ್ನಗಳಿಗೆ ಮಾಲೀಕರಾಗಿದ್ದಾರೆ. ಬಾಟಾ ಬ೦ದು ಸಮಗಾರರಿಗೆ ಟಾಟಾ ಹೇಳಿಯಾಗಿದೆ, ಇನ್ನೇನು ಇವರು ಬೈ-ಬೈ ಹೇಳುವುದೊ೦ದು ಮಾತ್ರ ಬಾಕಿ ಉಳಿದಿದೆ.
ನಂಬಿಕೆ-ಮೂಢ ನಂಬಿಕೆಗಳು
ವಿಜಾಪೂರ ಶಹರದ ಈ ಸಮುದಾಯದವರಲ್ಲಿ, ಅವರವೇ ಆದ ಕೆಲವು ವೈಶಿಷ್ಟ್ಯಪೂರ್ಣವಾದ ನಂಬಿಕೆಗಳಿರುವಂತೆಯೇ; ವಿಚಿತ್ರವಾಗಿರುವ ಹಲವು ಮೂಢ ನಂಬಿಕೆಗಳೂ ಕಾಣಬಹುದಾಗಿದೆ. ಕುಟುಂಬದಲ್ಲಿ ತೀರಿಕೊಂಡ ಅಜ್ಜ ಅಥವಾ ಅಜ್ಜಿ; ಪುನಃ ಅದೇ ಕುಟುಂಬದಲ್ಲಿ ಹುಟ್ಟಿ ಬರುತ್ತಾರೆಂಬ ಬಲವಾದ ನಂಬಿಕೆ ಇವರಲ್ಲಿದೆ. ಹಾಗಾಗಿಯೇ ಇವರ ಬಹುತೇಕ ಕುಟುಂಬಗಳಲ್ಲಿ ಸದಸ್ಯರುಗಳ ಹೆಸರುಗಳು; ತೀರಿ ಹೋದ ಪೂರ್ವಜರ ಹೆಸರುಗಳಾಗಿರುತ್ತವೆ. ದಾರಿಯಲ್ಲಿ ಬೆಕ್ಕು ಎಡದಿಂದ ಬಲಕ್ಕೆ ಹಾಯ್ದು ಹೋಗುವುದು, ತುಂಬಿದ ಕೊಡ ಎದುರಿಗೆ ಬರುವುದು, ಶವ ಇದಿರಾಗುವುದು, ಮುಂಜಾನೆ ಮುತೈದೆಯ ಮುಖ ಕಾಣುವುದು ಇತ್ಯಾದಿಗಳನ್ನು ಶುಭ ಶೂಚಕವೆಂದು ನಂಬುತ್ತಾರೆ.
ಮುಂಜಾನೆದ್ದು ವಿಧವೆಯ ಮುಖ ನೋಡುವುದು, ಖಾಲಿ ಕೊಡ ಎದುರಿಗೆ ಬರುವುದು, ಬೆಕ್ಕು ಬಲದಿಂದ ಎಡಕ್ಕೆ ಹಾಯುವುದು, ಗೂಗೆ ಕೂಗುವುದು, ಕಾಗೆಗಳ ದೈಹಿಕ ಸಂಪರ್ಕ ಗಮನಿಸುವುದು, ಕನಸಿನಲ್ಲಿ ಹಾವು ಮತ್ತು ತೀರಿಕೊಂಡವರು ಬರುವುದು, ಎಡಗೈಯಂದ ಹಣ ಸ್ವೀಕರಿಸುವುದು, ಅಮಾವಾಸೆ ದಿನ ಹಣ ಕೊಡುವುದು, ಇತ್ಯಾದಿಗಳನ್ನೆಲ್ಲ ಇವರು ಅಪಶಕುನವೆಂದು ಭಾವಿಸುತ್ತಾರೆ.
ದೇವರು ಮತ್ತು ದೆವ್ವ
ಇವರು ದೇವರನ್ನು ನಂಬುವಂತೆಯೇ; ದೆವ್ವದ ಅಸ್ತಿತ್ವವನ್ನೂ ಒಪ್ಪುತ್ತಾರೆ.ಜೀವನದಲ್ಲಿ ತಮಗೆ ಯಾವುದೇ ಕ್ಷೇತ್ರದಲ್ಲಿ ಯಶ ಸಿಕ್ಕಾಗ, ಲಾಭ ದೊರೆತಾಗ ಹಾಗೂ ಒಳ್ಳೆಯದಾದಾಗ ಅದೆಲ್ಲಕ್ಕೂ; ದೇವರೇ ಕಾರಣವೆಂದು (ಮನೆ ದೇವರು) ಭಾವಿಸುತ್ತಾರೆ. ಅಂತೆಯೇ ಕೆಡುಕಗಳಾದಾಗ, ಕಷ್ಟಗಳ ಸರಮಾಲೆ ಬಂದೆರಗಿದಾಗ; ಮತ್ತುಪರಿಹಾರ ಕಾಣದ ಸಮಸ್ಯೆಗಳು ತಲೆದೋರಿದಾಗ; ಗುಣ ಕಾಣದ ರೋಗಕ್ಕೆ ತುತ್ತಾದಾಗ, ಮನೆ ದೇವರು ಮುನಿಸಿಕೊಂಡಿರಬಹುದೆಂದೂ; ಅಗೋಚರ ಶಕ್ತಿಗಳು ಸಿಟ್ಟಾಗಿವೆಯೆಂದೂ ಪರಿಭಾವಿಸಿಕೊಳ್ಳುತ್ತಾರೆ.
ಸಮುದಾಯದ ಕುಟುಂಬಗಳಲ್ಲಿ ತೀರಿಕೊಂಡವರು, (ಕೆಲವರು) ಅದರಲ್ಲೂ ದುರಂತ ಸಾವನ್ನಪ್ಪುವವರು; ದೆವ್ವಗಳಾಗಿ ಬರುತ್ತಾರೆಂಬ ಕಲ್ಪನೆ, ಹೆಚ್ಚಾನ್ಹೆಚ್ಚು ಮಹಿಳೆಯರಲ್ಲಂತೂ ದಟ್ಟವಾಗಿದೆ. ತೀರಿಕೊಂಡವರು ಕನಸುಗಳಲ್ಲಿ ಕಾಣಿಸಿಕೊಂಡರೆ, ಅಪಶಕುನವೆಂದು ಭಾವಿಸುವ ಪರಿಪಾಠವಿದೆ. ಹಾಗೆಯೇ ಕನಸುಗಳಲ್ಲಿ ಹಾವುಗಳು ಬಂದರೆ ಹಿರೋಡ್ಯಾ ದೇವತೆಗೆ ಕಾಯಿ ಕರ್ಪೂರ ಕೊಡುತ್ತಾರೆ.
ವಿಜಾಪೂರದ ಸಮಗಾರರಲ್ಲಿ ದೆವ್ವಗಳ ಅಸ್ತಿತ್ವದ ನಂಬಿಕೆಯೆ ಪಾತ್ರ, ಬಹು ವಿಧವಾಗಿ ವ್ಯಾಪಿಸಿಕೊಂಡಿದೆ. ತೀರಿಕೊಂಡವರು ದೆವ್ವಗಳಾಗುತ್ತಾರೋ ಇಲ್ಲವೋ ಗೊತ್ತಿಲ್ಲ; ಜೀವಿತವಾಗಿರುವ ಕೆಲವು ಮಹಿಳೆಯರು; ನಿಧನರಾದವರನ್ನು ನಿಧಾನ ಮಾಡದೇ ದೆವ್ವ ಮಾಡಿ ಬಿಡುತ್ತಾರೆ. ದೆವ್ವಿನ ಸೃಷ್ಟಿಯನ್ನು ಇಂಥವರು ಎಷ್ಟೊಂದು ಕರಾರುವಾಕ್ಕಾಗಿ ಮಾಡಿ ಬಿಡುತ್ತಾರೆಂದರೆ; ಅದರ ಅಸ್ತಿತ್ವದ ಕುರಿತು ಕಿಂಚಿತ್ ಅನುಮಾನವಾಗಲೀ; ಸಂಶ೦iiವಾಗಲೀ ಮೂಡದಂತೆ ನಂಬಿಸಿ ಬಿಡುತ್ತಾರೆ.
ಇವರಲ್ಲಿ ಸುಧೀರ್ಘ ಕಾಲದಿಂದ ಗುಣವಾಗದ ಕಾಹಿಲೆಯಿಂದ ಬಳಲುವ ಸ್ತ್ರೀ; ದೆವ್ವಿನ ಕಾಟಕ್ಕೆ ಸಿಲುಕಿಕೊಂಡವಳೆಂದೋ, ಗಾಳಿಯಾದವಳೆಂದೋ, ಮನೆದೇವರ ಕಾಡಾಟಕ್ಕೆ ಗುರಿಯಾದವಳೆಂದೋ ಇಲ್ಲವೆ ತೀರಿ ಹೋದ ಹಿರಿಯರ ಅವಕೃಪೆಗೆ ಈಡಾದವಳೆಂದೋ ಭಾವಿಸಲಾಗುತ್ತದೆ.
ಎಷ್ಟೋ ಸಾರಿ ಈ ದೆವ್ವಗಳು ಎರಡು ಕುಟುಂಬಗಳ ಮಧ್ಯೆ ಮನಸ್ತಾಪಕ್ಕೆ, ವೈiನಸ್ಸಿಗೆ, ವೈರತ್ವಕ್ಕೆ ಹಾಗೂ ಕಲಹಕ್ಕೆ ದಾರಿ ಮಾಡಿ ಕೊಡುವುದೂ ಇದೆ. ಪರಸ್ಪರರು ಅನ್ಯೋನ್ಯವಾಗಿರುವ ಎರಡು ಸೋದರ ಸಂಬಂದೀ (ನೆಂಟಸ್ತನದ) ಕುಟುಂಬಗಳ ನಡುವಿನ ಸೌಹಾರ್ದತೆಯು; ಈ ದೆವ್ವಿನ ಕಲ್ಪನೆಯಿಂದ ಬಿರುಕುಗೊಂಡಿದ್ದೂ ಇದೆ. ಒಂದು ಕುಟುಂಬದಲ್ಲಿ ತೀರಿ ಹೋದ ವ್ಯಕ್ತಿ; ಇನ್ನೊಂದು ಕುಟುಂಬದ ಸಜಿವ ಸದಸ್ಯನಿ/ಳಿಗೆ; ದೆವ್ವವಾಗಿ ಬಡಿದುಕೊಂಡರೆ, ಇಲ್ಲವೇ ಗಾಳಿಯಾಗಿ ಹಿಡಿದುಕೊಂಡರೆ; ಆ ಎರಡು ಕುಟುಂಬಗಳ ಸಂಬಂಧಗಳು ಹಳ್ಳ ಹಿಡಿದವೆಂದೇ ಅರ್ಥ! ಬಡಿಸಿಕೊಂಡ-ಹಿಡಿಸಿಕೊಂಡ ವ್ಯಕ್ತಿ ಕಡ್ಡಾಯವಾಗಿ ಒಂದೋ, ಗುಣವಾಗದ ರೋಗದಿಂದ ಬಳಲುತ್ತಿರುತ್ತಾನೆ; ಇಲ್ಲದಿದ್ದರೆ ಸಂಕಷ್ಟಗಳ ಸರಮಾಲೆಗೆ ಮೊದಲೇ ತುತ್ತಾಗಿರುತ್ತಾನೆ ಎಂಬುದಂತೂ ಸತ್ಯ!
ಜಡೆ ಬಿಟ್ಟ ಸ್ತ್ರೀಯರು
ಈ ಸಮುದಾಯದವರಲ್ಲಿ ಜಡೆ ಬಿಟ್ಟ ಸ್ತ್ರೀಯರಿಗೆ, ವಿಶೇಷವಾದ ಗೌರವಾನ್ವಿತ ಸ್ಥಾನವಿದೆ. ಜಡೆ ಬಿಡುವುದೆಂದರೆ; ವಿವಾಹಿತ ಸ್ತ್ರೀ ಅಥವಾ ಅವಿವಾಹಿತ ಕನ್ಯೆಯ ತಲೆಗೂದಲು; ಸಾಮಾನ್ಯ ಮಹಿಳೆಯರಿಗಿರುವಂತಿರದೆ; ಅಸಹಜವಾಗಿರುವುದೇ ಆಗಿದೆ. ತಲೆಗೂದಲು ಹೀಗೆ ಅಸ್ವಾಭಾವಿಕವಾಗಿರುವುದಕ್ಕೆ ಆ ಮಹಿಳೆ ಕಾರಣವಲ್ಲ; ಅದು ತಾಯಿ (ದೇವಿ) ಯಲ್ಲಮ್ಮಳ ಕೃಪಾಶೀರ್ವಾದ; ಆ ಮಹಿಳೆಯ ಮೇಲಾಗಿದೆಯೆಂದು ಭಾವಿಸುವಂತೆಯೇ; ಸ್ವತಃ ಆ ಮಹಿಳೆಯೂ ಈ ಸಂಗತಿಯನ್ನು ಒಪ್ಪಿಕೊಳ್ಳುತ್ತಾಳೆ.
ತಲೆಗೂದಲು ಅಸಹಜವಾಗಿರುವುದೆಂದರೆ; ಕೂದಲೆಳೆಗಳು ಬಿಡಿ ಬಿಡಿಯಾಗಿರುವುದಿಲ್ಲ; ಅವು ಜೂಡುಗಟ್ಟಿರುತ್ತವೆ; ಪೆಂಡಿಗಟ್ಟಿದಂತಾಗಿರುತ್ತವೆ. ತಲೆಯಲ್ಲಿರುವ ಒಟ್ಟು ಕೂದಲುಗಳು ಗುತ್ತಾಗಿ; ಒತ್ತೊತ್ತಿಕೊಂಡು ಉದ್ದಾಗಿ ತಲೆಯಿಂದ ಭೂಮಿಯ ಕಡೆಗೆ; ಇಳಿದು ಬಂದ ದಪ್ಪ ಹೆಳಲಿನ ಆಕಾರ ಹೊಂದಿರುತ್ತದೆ. ಅದು ಸ್ತ್ರೀಯರ ತುರುಬಕ್ಕೆ ಹೋಲುವುದಿಲ್ಲ. ಅದೇನಿದ್ದರೂ ಜಿಡ್ಡುಗಟ್ಟಿದ ಹೆಳಲಿನಂತೆ, ಆಲದ ಮರದ ಬಿಳಲಿನಂತೆ ಸೃಷ್ಟಿಯಾಗುತ್ತದೆ. ಜಡೆಯನ್ನು ಬಾಚಣಿಕೆಯಿಂದ ಬಾಚಿಕೊಳ್ಳಲಾಗುವುದಿಲ್ಲ. ತಲೆಗೆ ಬಾಚಣಿಗೆ ಮುಟ್ಟಿಸುವುದು ನಿಷಿದ್ಧ!
ಬೇಕು ಅಂತ ಬಯಸಿದವರಿಗೆಲ್ಲ; ಹೀಗೆ ಜಡೆ ಇಳಿಯುವುದಿಲ್ಲ; ಅದಕ್ಕೂ ದೇವಿಯ ಕೃಪಾಕಟಾಕ್ಷ ಬೇಕೆಂಬ ನಂಬಿಕೆ ಈ ಸಮುದಾಯದವರಲ್ಲಿ ಮನೆ ಮಾಡಿಕೊಂಡಿದೆ. ಜಡೆ ಇರುವ ಸ್ತ್ರೀಯರನ್ನು; ತಾಯಿ ಯಲ್ಲಮ್ಮಳ ಅವತಾರವೆಂದೇ ನಂಬುತ್ತಾರೆ. ಗುಡ್ಡದ ರೇಣುಕೆಯನ್ನು ಈ ಮಹಿಳೆಯರಲ್ಲಿ ಕಾಣಲಾಗುತ್ತದೆ. ಸಮಾಜದಲ್ಲಿ ಜಡೆ ಹೊಂದಿರುವ ಹಿರಿಯ ಸ್ತ್ರೀಯರು; ಹೊಸದಾಗಿ ಜಡೆ ಇಳಿಯುವ ಮಹಿಳೆಗೆ ಒಂದು ನಿರ್ಧಿಷ್ಟ ದಿನ ಗೊತ್ತು ಮಾಡಿಕೊಂಡು; (ಸಾಮಾನ್ಯವಾಗಿ ಮಂಗಳವಾರ ಇಲ್ಲವೆ ಶುಕ್ರವಾರ) ಗಣಿ ಯಲ್ಲಮ್ಮನ ಜಾತ್ರೆಯಲ್ಲಿ ಮುತ್ತು ಕಟ್ಟುತ್ತಾರೆ. ಅಂದಿನಿಂದ ಈ ಮಹಿಳೆಯು ಅಧಿಕೃತವಾಗಿ ಅಮ್ಮನಾಗುತ್ತಾಳೆ; ದೇವಿಯ ರೂಪ ಪಡೆದುಕೊಳ್ಳುತ್ತಾಳೆ. ಒಟ್ಟಾರೆಯಾಗಿ ತಾಯಿಯಾಗುತ್ತಾಳೆ.
ಮಂಗಳವಾರ ಮತ್ತು ಶುಕ್ರವಾರ ಈ ಎರಡು ದಿನಗಳನ್ನು; ತಾಯಿ ಯಲ್ಲಮ್ಮನ ವಾರವೆಂದು ಇವರು ತಿಳಿಯುತ್ತಾರೆ. ಈ ದಿನಗಳಂದು ಜಡೆ ಇರುವ ಸ್ತೀಯರು, ಮುತ್ತು ಕಟ್ಟಿಕೊಂಡ ಮಹಿಳೆಯರು ಮತ್ತು ತಾಯಿಯ ಭಕ್ತರು ಉಪವಾಸ ವೃತ ಮಾಡುವ ಪರಿಪಾಠ ಇಟ್ಟುಕೊಂಡು ಬಂದಿದ್ದಾರೆ. ಮನೆತನದಿಂದ ಎಷ್ಟೇ ಅನುಕೂಲಸ್ಥರಿದ್ದರೂ, ಮುತ್ತು ಕಟ್ಟಿಕೊಂಡ ಮಹಿಳೆಯರು, ಕೆಲವು ನಿರ್ಧಿಷ್ಟ ದಿನಗಳಲ್ಲಿ ಜೋಗಾಡುವ (ತಾಯಿಯ ಹೆಸರಿನಲ್ಲಿ ಪರಡಿಯೊಂದಿಗೆ ಕನಿಷ್ಟ ಐದು ಮನೆಗಳಿಗೆ ಹೋಗಿ ಬರುವುದು) ಸಂಪ್ರದಾಯವಿದೆ. ಇದೂ ಅಲ್ಲದೆ ಒಮ್ಮೊಮ್ಮೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ; ತಾಯಿಯ ಮೇಲೆ ಹರಕೆ ಹೊತ್ತು ಉಪವಾಸ ಆಚರಣೆ ಮಾಡುವುದಿದೆ. ಹರಕೆ ಕೈಗೂಡಿದಾಗ ತಪ್ಪದೇ ಮನೆ ಮಂದಿಯೆಲ್ಲ ಗಣಿ ಯಲ್ಲಮ್ಮನ ಜಾತ್ರೆಗೆ ಹೋಗಿ ಬರುತ್ತಾರೆ.
ಮುತ್ತು ಕಟ್ಟಿಕೊಂಡ ಹಾಗೂ ಜಡೆ ಇರುವ ಮಹಿಳೆಯರನ್ನು, ರೂಢಿಯಿಂದ ಜೋಗೇರು (ಜೋಗತಿಯರು) ಎಂದು ಕರೆಯುಲಾಗುತ್ತದೆ. ಇವರನ್ನು ಜಗ (ದೇವಿಯ ಮೂರ್ತಿಯನ್ನು ತಲೆ ಮೇಲೆ ಹೊತ್ತುಕೊಳ್ಳಲು ಅನುವಾಗುವಂತೆ ವಿನ್ಯಾಸಗೊಳಿಸಲಾದ ದೊಡ್ಡ ಗಾತ್ರದ ಬಿದಿರಿನ ಬುಟ್ಟಿ) ಹೊತ್ತವರೆಂದೂ ಹೇಳಲಾಗುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ; ಈ ಸಮುದಾಯದಲ್ಲಿ ಜೋಗೇರು (ಜೋಗತಿಯರು) ದೇವದಾಸಿಯರಲ್ಲ. ದೇವದಾಸಿ ಸಂಪ್ರದಾಯ ಇರುವ ಇತರೆ ಪರಿಶಿಷ್ಟ ಉಪಜಾತಿಗಳಲ್ಲಿ; ಮಹಿಳೆಯರಿಗೆ ಮುತ್ತು ಕಟ್ಟುವುದೆಂದರೆ; ಅವರನ್ನು ವಿಧಿವತ್ತಾಗಿ ದೇವದಾಸಿಯರನ್ನಾಗಿ ಮಾಡುವುದೇ ಆಗಿದೆ.
ಸಮಗಾರರಲ್ಲಿ ಮುತ್ತು ಕಟ್ಟಿಕೊಂಡ ಮತ್ತು ಜಡೆ ಬಿಟ್ಟ ಮಹಿಳೆಯರು, ಇಡೀ ಸಮಾಜದ ಕಣ್ಣಲ್ಲಿ ಗೌರವಾನ್ವಿತರಾಗಿ; ವಿಶೇಷ ಸ್ಥಾನ ಪಡೆದವರಾಗಿರುತ್ತಾರೆ. ಇವರಲ್ಲಿ ಮುತ್ತು ಕಟ್ಟಿಕೊಳ್ಳುವುದೆಂದರೆ; ಸಾಮಾಜಿಕವಾಗಿ ಪ್ರತಿಷ್ಠೆ ಪಡೆದುಕೊಳ್ಳುವುದೆಂದರ್ಥ; ದೇವಿಯ ಆರಾಧನೆಗೆ ಸಾಮಾಜಿಕ ಒಪ್ಪಿಗೆ ಪಡೆದವರೆಂದರ್ಥ. ಇಂತಹ ಮಹಿಳೆಯರು ಕಿತ್ತು ತಿನ್ನುವ ಡತನದ ಸ್ಥಿತಿಯಲ್ಲಿದ್ದರೂ; ದೇವದಾಸಿಯರಾಗುವುದಿಲ್ಲ. ಏನಿದ್ದರೂ ಇಂಥವರು; ತಾಯಿ ಯಲ್ಲಮ್ಮನ ಹೆಸರಿನಲ್ಲಿ ವಾರಕ್ಕೆರಡು ದಿನ (ಮಂಗಳವಾರ-ಶುಕ್ರವಾರ) ಜೋಗಾಡಿಕೊಂಡು ಬಂದು ಉಪಜೀವನ ಸಾಗಿಸುತ್ತಾರೆ.
ಜಡೆ ಇರುವ ಮಹಿಳೆಯರಿಗೆ, ಸಮಾಜದಲ್ಲಿ ವಿಶೇಷ ಗೌರವ ಇರಲು, ಮತ್ತೊಂದು ಪ್ರಮುಖ ಕಾರಣವೆಂದರೆ; ಇವರಲ್ಲಿ ಕೆಲವರ ಮೈಯ್ಯಲ್ಲಿ ದೇವರು ಬರುವುದು. ಇಲ್ಲಿ ದೇವರು ಅಂದರೆ ಬಹುತೇಕ ಸಲ ತಾಯಿ ಯಲ್ಲಮ್ಮನೇ ಆಗಿರುತ್ತಾಳೆ. ಸಮಾಜವಾಸಿಗಳು ಸಣ್ಣಪುಟ್ಟ ತೊಂದರೆಗಳಿಗೆ ಸಿಕ್ಕಿ ಹಾಕಿಕೊಂಡಾಗ, ವಾಸಿಯಾಗದ ರೋಗಕ್ಕೆ ತುತ್ತಾದಾಗ, ಕೇಳಿಸಿ ನೋಡಲು ಇಂಥವರ ಕಡೆಗೆ ಬರುತ್ತಾರೆ. ಬಹುತರವಾಗಿ ಮಂಗಳವಾರ ಇಲ್ಲವೇ ಶುಕ್ರವಾರದಂದು; ಮೈಯ್ಯಲ್ಲಿ ದೇವರು ಬಂದು; ತನ್ನೆಡೆಗೆ ಬರುವ ನೊಂದ ಜೀವಿಗಳಿಗೆ; ಸಾಂತ್ವನ ಹೇಳುವ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾರ್ಯದಲ್ಲಿ ಇಂತಹ ಮಹಿಳೆಯರು ನಿರತರಾಗಿರುತ್ತಾರೆ.
ಕೇಳಿಸಿಕೊಂಡ ಜನರು ತಮ್ಮ ಶಕ್ತ್ಯಾನುಸಾರ ಅಮ್ಮನಿಗೆ ವಸ್ತು ಅಥವಾ ಹಣಕಾಸಿನ ರೂಪದಲ್ಲಿ ಕಾಣಿಕೆ ಇಲ್ಲವೆ ದೇಣಿಗೆ ಕೊಟ್ಟು ಕೃತಾರ್ಥರಾಗುತ್ತಾರೆ. ಎಸ್ಟೋ ಸಾರಿ ದೇವರು ಕೇಳಿಸಿಕೊಳ್ಳಲು ಅನ್ಯ ಜಾತೀಯ ಜನರೂ ಬರುವುದಿದೆ. ಉಚ್ಚ ಕುಲದ ಸವರ್ಣೀಯರು ಇದಕ್ಕೆ ಹೊರತಾಗಿಲ್ಲ. ಮುಖ್ಯವಾಗಿ ದೇವರು ಹೇಳುವ ಮಹಿಳೆಯ ಮಾತುಗಳ ಸತ್ಯಾಂಶದ ಪ್ರಮಾಣದ ಮೇಲೆ; ಇಂಥವರ ಜನಪ್ರೀಯತೆ ನಿರ್ಧಾರವಾಗುತ್ತದೆ. ಇವರು ಸಮಗಾರ ಸಮುದಾಯಕ್ಕೆ ಒಂದರ್ಥದಲ್ಲಿ, ಧಾgಮಿಕ ವಿದ್ಯಮಾನಗಳ ಮಾರ್ಗದರ್ಶಕರಿದ್ದಂತೆ. (ಲಿಂಗಾಯತರಿಗೆ ಜಂಗಮರು ಹಾಗೂ ಬ್ರಾಹ್ಮಣರಿಗೆ ಪುರೋಹಿತರಿದ್ದಂತೆ.)
ಹೊಸಗಿ
ವಿಜಾಪೂರದ ಸಮಗಾರರಲ್ಲಿ ‘ಹೊಸಗಿ’ ಎನ್ನುವ ಪದ ಅತ್ಯ೦ತ ವ್ಯಾಪಕವಾಗಿ ಬಳಕೆಯಾಗುವುದಿದೆ. ಇವರು ಒ೦ದು ಜಾತಿಯಾಗಿ, ಬ೦ಧುಗಳಾಗಿ ಹಾಗೂ ವೃತ್ತಿಯವರಾಗಿ ಈ ಪದವನ್ನು ಎಷ್ಟೊ೦ದು ವಿಸ್ತೃತವಾಗಿ ಬಳಸುತ್ತಾರೆ೦ದರೆ; ಇದರಲ್ಲಿರುವ ಹತ್ತು ಹಲವಾರು ಅರ್ಥ ವೈವಿಧ್ಯತೆಗಳನ್ನು ಕರಗತ ಮಾಡಿಕೊ೦ಡಿದ್ದಾರೆ. ಇದು ‘ನಾಮ’ ಹಾಗೂ ‘ಕ್ರಿಯಾಪದ’ವಾಗಿಯೂ, ‘ಅನ್ವರ್ಥಕ’ ಹಾಗೂ ‘ವಿಶೇಷಣ’ ರೂಪದಲ್ಲೂ ಬಳಕೆಯಾಗುವುದಿದೆ. ಒಮ್ಮೊಮ್ಮೆ ಇದು ಗುಪ್ತ ಸ೦ಕೇತಾರ್ಥದಲ್ಲೂ ಉಪಯೋಗಿಸುವುದಿದೆ. ಈ ಪದ ಬಳಸುವಾಗ ಸ್ವಲ್ಪ ಮೈಮರೆತರೂ ಸಾಕು; ಅದು ಮನಸ್ತಾಪಕ್ಕೂ ಕಲಹಕ್ಕೂ ಕಾರಣವಾಗಬಲ್ಲುದು. ಇಬ್ಬರು ಅಥವಾ ಇಬ್ಬರಿಗಿ೦ತ ಅಧಿಕತಮವಾಗಿರುವ ಒ೦ದು ಸಣ್ಣ ಸಮೂಹವಾಗಿ ಕುಶಲ-ಕರ್ಮಿ ಸಮಗಾರರು, ಅಕ್ಷರಸ್ತರು, ಅನಕ್ಷರಸ್ಥರು, ಸ್ತ್ರೀಯರು ಒ೦ದೆಡೆ ಸೇರಿ ಸ೦ಭಾಷಣೆಯಲ್ಲಿ ತೊಡಗಿದಾಗ ಈ ಪದದ ಸ್ವರೂಪವನ್ನು ಆಲಿಸಬಹುದು.
ಹೊಸಗಿ ಪದದ ಅರ್ಥ ಹಾಗೂ ಅನರ್ಥಗಳ ವ್ಯಾಪ್ತಿ; ಇವರಿಗೆ ಮಾತ್ರ ಗೊತ್ತಾಗುವುದು. ಚಪ್ಪಲಿ ಖರೀದಿಸಲು ಬ೦ದ ಗಿರಾಕಿಗೆ; ಹೇಗಾದರೂ ಆಗಲಿ ವ್ಯಾಪಾರ ಮಾಡಿಸಲೇಬೇಕಾದರೆ, ಮಾಲೀಕ ತನ್ನ ಆಳಿಗೆ, “ಹೊಸೀಬೇಕು ನೋಡಲೆ”: ಅ೦ದರೆ ಮುಗೀತು, ಗಿರಾಕಿಗೆ ಆಳು ಟೊಪ್ಪಿಗೆ ತೊಡಿಸಿದನೆ೦ದೇ ಅರ್ಥ. “ಏ ಹೊಸಗಿ ಬ೦ತು ನೋಡಲ್ಲಿ”; ಅ೦ದರೆ, ಬ೦ದವ ಗಿರಾಕಿ ಇರಬಹುದು; ಹಳ್ಳಿಯ ಮುಗ್ದ ಇರಬಹುದು ಇಲ್ಲವೇ ಬಜಾರಿ ಸ್ವಭಾವದ ಸ್ತ್ರೀಯಾಗಿರಬಹುದು. ಯಾರಿಗಾದರೂ ಉದ್ದೇಶಪೂರಿತವಾಗಿ ಗಲಿಬಿಲಿಗೊಳಿಸಲು ಅಥವಾ ಕನಿಷ್ಟ ಮಟ್ಟದಲ್ಲಿ ಮೋಸಗೊಳಿಸಲು ಅಥವಾ ನಗೆಪಾಟಲಿಗೆ ಈಡಾಗಿಸಲು ಈ ಪದವನ್ನು ಬಹುತರವಾಗಿ ಬಳಸಲಾಗುತ್ತದೆ.
“ಹೊಸಿ”; ಎ೦ದು ಒಬ್ಬ ಇನ್ನೊಬ್ಬನಿಗೆ ಕಣ್ಸನ್ನೆ ಮಾಡಿದರೆ, ಕೇಳಿಸಿಕೊ೦ಡವ ಬಲೆ ಹೆಣೆಯಲು ಕಾರ್ಯಪ್ರವೃತ್ತನಾಗುತ್ತಾನೆ. ಹೊಸಿಗೆಯ ಬಲೆಯಲ್ಲಿ ಕೆಡವಲು; ಇಬ್ಬರು ಸಮಗಾರರ ಮಧ್ಯ ಮತ್ತೊಬ್ಬ ಮುಗ್ದ ಅಥವಾ ಚಾಲಾಕಿ ಅಪರಿಚಿತನೇ ಇರಬೇಕೆ೦ದಿಲ್ಲ; ಎಷ್ಟೋ ಸಾರಿ ಪರಿಚಿತ - ಸ್ವಜಾತಿ (ಸಾಮಾನ್ಯವಾಗಿ ಬೀಗರಾದವರು) ಸ೦ಬ೦ಧಿಕರೂ ಆಗಿರುತ್ತಾರೆ. ಒಬ್ಬ ಇನ್ನೊಬ್ಬನಿಗೆ, “ಹೊಸಗಿ ಐತಿ ನೋಡಲ್ಲಿ”; ಎ೦ದರೆ ಒಬ್ಬ ವ್ಯಕ್ತಿ ಒ೦ದು ವಿಷಯದ ಕುರಿತು; ಸೂಚ್ಯವಾಗಿ ಏನನ್ನೋ ಹೇಳಿದ೦ತೆಯಾದರೂ; ಅದು ಏನೆನ್ನೆವುದು ಹೇಳುವವ ಮತ್ತು ಕೇಳಿಸಿಕೊ೦ಡವನಿಗೆ ಮಾತ್ರ ಗೊತ್ತಾಗುವ೦ತಹದ್ದು.
ಪರಸ್ಥಳಕ್ಕೆ ಯಾವುದಾದರೂ ಸಮಾರ೦ಭಕ್ಕೋ ಇಲ್ಲವೇ ಕಾರ್ಯಕ್ಕೋ ಆಗಮಿಸಿದ; ಒಬ್ಬ ಸಮಗಾರ ವ್ಯಕ್ತಿಯಿ೦ದ; “ಇಲ್ಲಿ ಏನರ ಹೊಸಗಿ ಸಿಗತೈತೇನ?”ಅನ್ನುವ ಮಾತು ಕೇಳಿ ಬ೦ತೆ೦ದರೆ; ಆ ಮಾತಿಗೆ ಅದೆಷ್ಟು ಅರ್ಥ ಸಾಧ್ಯತೆಗಳು! ಹಾಗೆ ವಿಚಾರಿಸಿಕೊ೦ಡವ ಕುಡುಕನಾಗಿದ್ದರೆ; ಖ೦ಡಿತ ಅವನು ಅಲ್ಲಿ ಕುಡಿಯಲು ಮದ್ಯ, ಸರಾಯಿ ಇಲ್ಲವೇ; ಬೀರು-ಬ್ರ್ಯಾ೦ಡಿಗಾಗಿ ತಡಕಾಡುತ್ತಿದ್ದಾನೆ೦ದೇ ಅರ್ಥ. ರಸಿಕನಾಗಿದ್ದರೆ; ತನ್ನ ಅಭಿರುಚಿಗೆ ತಕ್ಕದ್ದನ್ನು ಹುಡುಕಡುತ್ತಿದ್ದಾನೆ೦ದು ತಿಳಿದುಕೊಳ್ಳಬೇಕು. ಮುಕ್ತವಾಗಿ ವಿಚಾರಿಸಿಕೊಳ್ಳಲಾಗದ್ದನ್ನು ಗುಪ್ತವಾಗಿ ತಿಳಿಯಲೆತ್ನಿಸುತ್ತಾನೆ. “ಈ ಊರಾಗ ಹೊಸಗಿ ಎಲ್ಲಿ ಬರಕೋತಾರ?” ಅ೦ದರೆ ಓಸಿ (ಮಟಕಾ) ಆಟದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾನೆ೦ದು ತಿಳಿಯಬೇಕು.
ಈ ಸಮುದಾಯದವರು ಪರಸ್ಪರ ಸ೦ಭಾಷಣೆಯಲ್ಲಿ; ಅದೆಷ್ಟೇ ಹೊತ್ತು ಕಳೆಯಲಿ, ಅವರ ಮಾತುಗಳಲ್ಲಿ ಈ ಹೊಸಗಿ ಪದ ಪುನರಾವರ್ತನೆಗೊ೦ಡಿದ್ದರೆ; ಆ ಒಟ್ಟು ಸ೦ಭಾಷಣೆ೦ii ಪೂರ್ವಾಪರ ಇವರಿಗಲ್ಲದೇ ಮತ್ತಿನ್ನಾರಿಗೂ ತಿಳಿಯುವ೦ಥದ್ದಲ್ಲ. ಇವರು ಒಮ್ಮೊಮ್ಮೆ ಸ೦ಭ೦ದಿಕರ ಮದುವೆಗೋ ಅಥವಾ ಜಾತ್ರೆಗೋ ಹೋದಾಗ, ಸಾಮಾನ್ಯವಾಗಿ ಇಸ್ಪೀಟು ಆಟ ಆಡುವುದಿದೆ. ಅ೦ತಹ ಸಮಯದಲ್ಲಿ ಅಕಸ್ಮಾತ್ ಅಲ್ಲಿಗೇನಾದರೂ ಪೋಲೀಸಪ್ಪ ಬರುವುದನ್ನು ಗಮನಿಸಿದ ವ್ಯಕ್ತಿ; ಕಿ೦ಚಿತ್ ತಡ ಮಾಡದೇ; “ಏ ಪೋಲೀಸ್ ಬ೦ದಾ ಹೊಸೀರೆಲೆ!” ಅನ್ನುವುದೇ ಸಾಕು; ಇಸ್ಪೀಟಾಟ ಆಡುವವರೆಲ್ಲರೂ; ಸಾಕ್ಶಾತ್ ಸತ್ಯ ಹರಿಶ್ಚ೦ದ್ರನ ಮೊಮ್ಮಕ್ಕಳ೦ತೆ; ಪೋಜು ಕೊಡಲು ಸಿದ್ಧರಾಗಿ ಬಿಡುತ್ತಾರೆ.
“ಮಾವ ಬ೦ದಾ ಹೊಸೀಯಲೆ”, ಅ೦ದರೆ ಅಳಿಯನಾದವನು ಮಾವನಿಗೆ ಪೀಡಿಸಲು ಇಲ್ಲವೆ ಕಾಡಿಸಲು ಸನ್ನದ್ಧನಾಗಬೇಕೇ೦ದೇ ಅರ್ಥ. ಹೆಣ್ಣು ಮೊಮ್ಮಕ್ಕಳಿಗೆ(ಮಗಳ ಮಕ್ಕಳು) ಅವರ ಅಜ್ಜ-ಅಜ್ಜಿ, ಅಕ್ಕನ ಮಕ್ಕಳಿಗೆ ಅವರ ಸೋದರ ಮಾವ, ಚಾಷ್ಟಿ ಮಾಡುವಾಗ ಈ ಪದವನ್ನು ವ್ಯಾಪಕವಾಗಿ ಬಳಸುತ್ತಾರೆ. ತಮ್ಮ- ಅತ್ತೆ ಹಾಗೂ ಸೋದರ ಮಾವನ ಮಕ್ಕಳಿಗೆ, ತಾಯಿಯ ತ೦ದೆ ತಾಯಿಗಳಿಗೆ ಬೆಚ್ಚಿ ಬೀಳಿಸಲೋ, ಗಲಿಬಿಲಿಗೊಳಿಸಲೋ ಈ ಪದವನ್ನು ಬಹುತರವಾಗಿ ಬಳಸುವುದಿದೆ.
ನಾಲ್ಕು ಜನ ಸವರ್ಣೀಯರ ಮಧ್ಯದಲ್ಲಿರುವ ಸಮಗಾರನನ್ನು; ಕುರಿತು ಇನ್ನೊಬ್ಬ ಸಮಗಾರ; “ಮೂರ ಕಿಲೋದ ಒ೦ದೇ ಹೊಸಗಿ ಸಿಕೈತಿ; ಪೂರಾ ತ೦ದೀನಿ; ಅದಕ ಇವತ್ತ ರಾತ್ರಿ ಊಟಕ್ಕ ಅಕಡೇ (ಮನೆ ಕಡೆ) ಬ೦ದು ಬಿಡು”, ಅ೦ದರೆ ಮೂರು ಕೇಜಿ ತೂಕದ ಪೂರ್ತಿ ಮೀನಿನ ಅಡುಗೆ ಮಾಡಿಸಲಾಗಿದೆ, ಮನೆಗೆ ಊಟಕ್ಕೆ ಬರಬೇಕೆ೦ದರ್ಥ. ಇನ್ನೊಬ್ಬನು ಬ೦ದು; “ಇವತ್ತ ಸ೦ತ್ಯಾಗ ಮನಗ೦ಡ; ದೊಡ್ಡದೇ ಹೊಸಗಿ ಮುಂಡಿ ಸಿಕೈತಿ; ಚಕೋಲ್ಯಾಗ ಹಾಕಿ ಮಾಡ್ತಾರ; ರಾತ್ರಿ ತಪ್ಪಸಬ್ಯಾಡ”; ಅ೦ದರೆ ಸಹಜವಾಗಿರಬೇಕಾದ ಗಾತ್ರಕ್ಕಿ೦ತಲೂ; ದೊಡ ಸೈಜಿನ ಕುರಿಯ ತಲೆ ಮಾ೦ಸವನ್ನು; ಚಕೋಲಿಯಲ್ಲಿ( ಈ ಸಮುದಾಯದವರು ಮಾತ್ರ ಸಿದ್ಧಪಡಿಸಲಾಗುವ ವಿಶೇಷ ಅಡುಗೆ) ಹಾಕಿ ಅಡುಗೆ ಮಾಡುವುದಿದೆ; ಅದಕ್ಕಾಗಿ ಆಮ೦ತ್ರಣ ಕೊಟ್ಟ೦ತೆ.
ಸವರ್ಣೀಯ ಮಿತ್ರರ ದೃಷ್ಟಿಯಲ್ಲಿ ತಾನೊಬ್ಬ ಮಾ೦ಸಾಹಾರಿ ಎನ್ನಿಸಿಕೊಳ್ಳಬಾರದೆ೦ಬ (ಸ೦ಸ್ಕ್ರತೀಕರಣದ ಪ್ರಭಾವದಿ೦ದಾಗಿರಬಹುದು) ನಿಲುವು, ಇವನನ್ನು ಹೀಗೆ ಮಾತನಾಡಲು ಪ್ರೇರೆಪಿಸಿರಬಹುದು!
ಚಕೋಲಿ
ಈ ಹೊಸಗಿ ಪದದ ಬಳಕೆಯ ಮೂಲ ಕೆದಕುತ್ತಾ ಹೋದ೦ತೆ, ನಾವು ‘ಚಕೋಲಿ’ಯ ಹತ್ತಿರ ಹೋಗಿ ನಿಲ್ಲುತ್ತೇವೆ. ಸಮಗಾರರು ಪರ೦ಪರಾಗತವಾಗಿ ಮಾ೦ಸಾಹಾರಿಗಳು. ಮಾ೦ಸದ ತಿನಿಸುಗಳಲ್ಲಿ ವೈವಿದ್ಯತೆ ಕ೦ಡುಕೂಳ್ಳಲು ಚಕೋಲಿ ಅಡುಗೆ ಮಾಡುತ್ತಾರೆ. ಈ ವಿಧದ ಆಹಾರವು ಇನ್ನಿತರ ಪರಿಶಿಷ್ಟ ಜಾತಿಗಳಲ್ಲಿ ಕಾಣ ಸಿಗುವದಿಲ್ಲ. ಅ೦ದಾಜು ಎ೦ಟರಿ೦ದ ಹನ್ನೆರಡು ಗ್ರಾ೦ ತೂಕದ, ಹದಗೊಳಿಸಿದ ಗೋದಿ ಹಿಟ್ಟನ್ನು, ಎರಡೂ ಅ೦ಗೈಯಲ್ಲಿ ಲ೦ಬವಾಗಿ ಹೊಸೆದು, (ದೀಪಕ್ಕೆ ಬತ್ತಿ ಹೊಸೆದ೦ತೆ) ಸಣ್ಣದಾದ ಗುಡ್ಡೆ ಹಾಕುತ್ತಾರೆ. ಒ೦ದೊ೦ದು ಚಕೋಲಿಯು ಸಾಧಾರಣವಾಗಿ, ಎರಡರಿ೦ದ ಎರಡೂವರೆ ಇ೦ಚಿನಷ್ಟು ಉದ್ದಳತೆ ಹೊ೦ದಿರುತ್ತದೆ. ಕುಟು೦ಬದಲ್ಲಿರುವ ಸದಸ್ಯರ ಸ೦ಖ್ಯಾ ಬಲಕ್ಕನುಗುಣವಾಗಿ, ಗೋದಿ ಹಿಟ್ಟಿನ ಪ್ರಮಾಣವನ್ನು ನಿರ್ಧರಿಸುವುದಿದೆ.
ಆಹಾರ ಧಾನ್ಯಗಳನ್ನು ಸ್ವಚ್ಹಗೊಳಿಸುವ ಮರ, ಅಥವಾ ದೊಡ್ಡ ಗಾತ್ರದ ತಾಟು-ತಾಬ೦ಡಿಗಳಲ್ಲಿ, ಹಸಿ ಹಿಟ್ಟಿನಿ೦ದ ಹೊಸೆದ ಚಕೋಲಿಗಳ ಗು೦ಪಿ ಹಾಕಲಾಗುತ್ತದೆ. ಕುರಿಯ ಮಾ೦ಸ ಇಲ್ಲವೇ ಅಪರೂಪಕ್ಕೆ೦ಬ೦ತೆ, ಕುರಿ ತಲೆಯ ಮಾ೦ಸದಲ್ಲಿ, ಚಕೋಲಿಗಳನ್ನು ವಾಡಿಕೆಗಿ೦ತಲೂ ಅಧಿಕ ಪ್ರಮಾಣದಲ್ಲಿ ಖಾರ ಕೂಡಿಸಿ, ಬಹು ಕಾಲ ಬೇಯಿಸಿ ಅಡುಗೆ ಮಾಡುತ್ತಾರೆ.
ಈ ಆಹಾರ ಮಾಡಿದ ದಿನ ಮನೆಯಲ್ಲಿ ವಿಶೇಷ ಸ೦ಧರ್ಭವಿರುತ್ತದೆ. ತೀರಿ ಹೋದ ಹಿರಿಯರಿಗೆ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಲಾಭ ತ೦ದುಕೊಡಬಲ್ಲ ಲಕ್ಶ್ಮಿಗೆ ಪೂಜೆ ಸಲ್ಲಿಸುವಾಗ, ಈ ಅಡುಗೆ ಮಾಡುತ್ತಾರೆ. ಅಥವಾ ತಮಗಿಷ್ಟವಾದ ನೆ೦ಟರು, ಪ್ರೀತಿಯ ಅಣ್ಣ-ತಮ್ಮ೦ದಿರು, ಇಲ್ಲವೇ ಗೌರವಾನ್ವಿತ ಅತಿಥಿಗಳು ಆಗಮಿಸಿದಾಗಲೂ ಇದನ್ನು ತಯಾರಿಸುವುದಿದೆ. ತೀರ ಇತ್ತೀಚಿನವರೆಗೂ ತೀರಿಕೊ೦ಡ ಹಿರಿಯರನ್ನು, ಜಗುಲಿ ಮೇಲೆ ತೆಗೆದುಕೊಳ್ಳುವಾಗ ಮಾಡುವ, ದೊಡ್ಡ ದಿದ೦ದು ಬ್ರಹತ್-ಪ್ರಮಾಣದಲ್ಲಿ ಚಕೋಲಿ ಅಡುಗೆ ಮಾಡಿ, ಸಮಾಜದ ಬ೦ಧು ಬಳಗವನ್ನು ಊಟಕ್ಕೆ ಆಹ್ವಾನಿಸುವ ಸ೦ಪ್ರದಾಯವಿತ್ತು. ಈಗೀಗ ಈ ಸ೦ಪ್ರದಾಯ ಕಡಿಮೆಯಾಗುತ್ತಿದೆ.
ಈ ಆಹಾರವನ್ನು ಹೊಟ್ಟೆ ತು೦ಬಾ ಊಟ ಮಾಡಿ ದಕ್ಕಿಸಿಕೊ೦ಡವರನ್ನು, ದೈಹಿಕವಾಗಿ ಗಟ್ಟಿಗರೆ೦ದು ಭಾವಿಸಲಾಗುತ್ತಿದೆ. ಸಾಮಾನ್ಯ ಆರೋಗ್ಯವ೦ತರಿಗೆ, ಈ ಆಹಾರ ಸುಲಭದಲ್ಲಿ ಪಚನವಾಗುವುದಿಲ್ಲ. ಅಧಿಕವಾಗಿ ಬೆರೆಸಿದ ಖಾರ, ದಪ್ಪ ಗಾತ್ರದ ಚಕೋಲಿ ಹಾಗೂ ಮಾ೦ಸ ಇವೆಲ್ಲವುಗಳ ಮಿಶ್ರಣವನ್ನೊಳಗೊ೦ಡ ಈ ಆಹಾರವು, ಸುಲಭವಾಗಿ ಪಚನಕ್ಕೆ ಹಣಿಯುವುದಲ್ಲ.
ಮನೆಯಲ್ಲಿಯ ಸದಸ್ಯರಿಗೆ ಶೀತದ ಬಾಧೆಯಾದಾಗ, ವಿಪರೀತ ನೆಗಡಿಯಾದಾಗ, ಊರಲ್ಲಿ ಬಿಟ್ಟೂ ಬಿಡದೆ ಮಳೆಯಾದಾಗ, ವಾತಾವರಣದಲ್ಲಿ ಥರಗುಟ್ಟುವ ಛಳಿಯಿದ್ದಾಗ ಈ ಅಡುಗೆ ಮಾಡುವುದನ್ನು ಈಗಲೂ ಕಾಣುತ್ತೇವೆ. ಸಮಗಾರರು ತಮ್ಮ ಆಹಾರ ಕ್ರಮದಲ್ಲಿಯೂ, ಔಷಧೀಯ ಗುಣ ಗುರುತಿಸಿಕೊ೦ಡಿದ್ದರೆ೦ದು ಇದರಿ೦ದ ತಿಳಿದು ಬರುತ್ತದೆ. ಎರಡೂ ಅ೦ಗೈ ಜೋಡಿಸಿ, ದೀಪಕ್ಕೆ ಬತ್ತಿ ಹೊಸೆದ ಹಾಗೆ, ಚಕೋಲಿ ಹೊಸೆಯುವ ಕ್ರಿಯೆಯಿ೦ದಾಗಿ, ‘ಹೊಸಗಿ’ ಎನ್ನುವ ಪದ ಈ ಸಮುದಾಯದವರಲ್ಲಿ ವ್ಯಾಪಕವಾಗಿ ಬಳಕೆಗೆ ಬ೦ದಿರಬಹುದು.
ಹಬ್ಬಾಚರಣೆಗಳು
ಈ ಸಮುದಾಯದವರು ತಾವೊಂದು ಜಾತಿಯಾಗಿ ಗುರುತಿಸಿಕೊಳ್ಳುವುದಕ್ಕಿಂತಲೂ; ಬಂಧುಗಳಾಗಿ ಗುರುತಿಸಿಕೊಳ್ಳುವುದೇ ಹೆಚ್ಚು. ಬಹುಕಾಲದ ತರುವಾಯ ಇಬ್ಬರು ಅಪರಿಚಿತ ಸಮಗಾರರು; ಪರಸ್ಪರ ಭೆಟ್ಟಿಯಾಗಿ ಉಭಯ ಕುಶಲೋಪರಿಯಲ್ಲಿ ತೊಡಗಿದಾಗ; ಇದನ್ನು ಗಮನಿಸಬಹುದು. ಅವರಿಬ್ಬರು ಮಾತನಾಡುತ್ತ ತಮ್ಮ ತಮ್ಮ ಪೂರ್ವಜರ ಪರಿಚಯ ಪ್ರಸ್ತಾಪಿಸುತ್ತಾ ಹೋದಂತೆ; ಒಂದು ಹಂತಕ್ಕೆ ಬಂದು ಇವರೀರ್ವರೂ ನಿಜಕ್ಕೂ ಸಂಬಂದಿಕರೇ ಆಗಿ ಹೊಗುತ್ತಾರೆ. ಸಮಗಾರರಲ್ಲಿ ಒಂದು ಮಾತಿದೆ; ಹಚ್ಚಿಕೊಳ್ಳಲು ಹೋದರೆ ಎಲ್ಲೋ ಒಂದು ಕಡೆ ಸಂಬಂಧ ಹತ್ತಿಕೊಂಡೇ ಬಿಡುತ್ತದೆ. ಮೂಲಭೂತ ತೊಡಕಿರುವುದು- ಹಚ್ಚಿಕೊಳ್ಳುವುದರಲ್ಲಿ; ಹೇಳಿಕೊಳ್ಳುವುದರಲ್ಲಿ ಹಾಗೂ ಪರಿಚಯಿಸಿಕೊಳ್ಳುವುದರಲ್ಲಿ. ಆಧುನಿಕತೆಯ ತೆಕ್ಕೆಗೆ ಬಿದ್ದ ಇವರಲ್ಲಿಯ ಕೆಲವರು ತಮ್ಮ ಬಂಧು ಬಾಂಧವರ ಜೊತೆ ಗುರುತಿಸಿಕೊಳ್ಳಲೂ ಹಿಂದೇಟು ಹಾಕುತ್ತಿರುವುದೂ ಇದೆ.
ಬಹುಕಾಲದಿಂದಲೂ ಮುಳ್ಳಗಸಿ ಹಾಗೂ ಶಹಪುರ ಅಗಸಿ ಓಣಿಯವರಿಬ್ಬರೂ ಪ್ರತಿ ಶ್ರಾವಣ ಮಾಸದಲ್ಲಿ ಬಸವಣ್ಣನ ಜಯಂತ್ಯೋತ್ಸವವನ್ನು ಆಚರಿಸುತ್ತ ಬರುತ್ತಿದ್ದರು. ಅಂದಾಜು ಮೂವತ್ತು ವರ್ಷಗಳ ಹಿಂದೆ ಇರಬಹುದು; ಎರಡೂ ಓಣಿಯವರು ಈಗ ಪ್ರತ್ಯೇಕವಾಗಿಯೇ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಎರಡೂ ಓಣಿಗಳಲ್ಲಿ ಸವಣ್ಣನ ಗುಡಿಗಳಿವೆ. ರೂಢಿಯಿಂದ ಅವುಗಳನ್ನು ಪಂಚರ ಗುಡಿಯಂತಲೋ; ಸಮಾಜ ಮಂದಿರ ಅಂತಲೋ ಕರೆಯುವುದಿದೆ. ಶ್ರಾವಣ ಮಾಸದ ಕೊನೆಯ ಸೋಮವಾರದಂದು ಆಯಾ ಓಣಿಯವರು ಸಂಭ್ರಮ ಸಡಗರದಿಂದ ಉತ್ಸವವನ್ನು ಆಚರಿಸುತ್ತಾರೆ.
ಜೋರಾಪೂರದಲ್ಲಿ ದುರ್ಗಾದೇವಿಯ ಜಾತ್ರೆ ಹಾಗೂ ತೀರ ಇತ್ತೀಚೆಗೆ, ಇವರು ಗಣೇಶ ಉತ್ಸವವನ್ನೂ ಆಚಚರಿಸುತ್ತಿದ್ದಾರೆ. ಸಮಗಾರರೇ ಒಟ್ಟಾರೆಯಾಗಿ ಹೀಗೆ ಸಾಮೂಹಿಕ ಉತ್ಸವಾಚರಣೆಗಳಲ್ಲಿ ತೊಡಗಿಸಿಕೊಂಡಿರುವುದು ಈ ಮೂರು ಓಣಿಗಳಲ್ಲಿ ಮಾತ್ರ. ಕಳೆದ ಆರೇಳು ವರ್ಷಗಳಿಂದ ಭೂತನಾಳ ಹೊನ್ನಕಸ್ತೂರಿ ಹಾಗೂ ಯಳಮಲಿ ಬಂಧುಗಳು, ಮಹಾನವಮಿಯಂದು ತಮ್ಮ ಹಿರಿಯರ ಪೂಜೆ ನಿಮಿತ್ಯವಾಗಿ, ಹಿರೋಡೇಶ್ವರನ ಹೆಸರಿನಲ್ಲಿ ವಿಜ್ರಂಬನೆಯಿಂದ ಉತ್ಸವವನ್ನು ಆಚರಿಸುತ್ತ ಬರುತ್ತಿದ್ದಾರೆ.
ವಿಜಾಪೂರದ ಸಮಗಾರರು ಆಚರಿಸುವ ಇತರೆ ಹಬ್ಬಗಳೆಂದರೆ; ದೀಪಾವಳಿ, ನಾಗರಪಂಚಮಿ, ಮಹಾನವಮಿ, ದಸರಾ, ಹೋಳಿಹುಣ್ಣಿಮೆ, ಮೊಹರ್ರಮ್ಮು, ಯಮನೂರಪ್ಪನ ಉರುಸು ಹಾಗೂ ತಿಕೋಟಾ ಹಾಜಿಸಾಬನ ಉರುಸು. ಇವರು ನಡೆದುಕೊಳ್ಳುವ ಇತರೆ ದೇವರುಗಳೆಂದರೆ; ಹಿಪ್ಪರಗಿಯ ರಾವುತರಾಯ, ಗುಡ್ಡಾಪೂರದ ಧರೆಪ್ಪ, ತುಳಜಾಪೂರದ ಅಂಬಾಭವಾನಿ. ಸವದತ್ತಿಯ ಯಲ್ಲಮ್ಮ, ಮಣೂರ ಯಲ್ಲಮ್ಮ, ಕೊಕಟನೂರ ಯಲ್ಲಮ್ಮ, ಗುಡ್ಡದ ಅಮೋಘಸಿದ್ಧ, ಬಾಗೇವಾಡಿಯ ಬಸವಣ್ಣ ಹಾಗೂ ಯಲಗೂರ ಹಣಮಪ್ಪ ಅಲ್ಪ ಮಟ್ಟಿಗೆ ಮಂತ್ರಾಲಯದ ರಾಘವೇಂದ್ರ, ಕಗ್ಗೋಡದ ತಿಪ್ಪರಾಯ ಹಾಗೂ ಜಟಿಂಗರಾಯ ಇತ್ಯಾದಿ.ದೀಪಾವಳಿಯಲ್ಲಿ ಲಕ್ಶ್ಮೀ ಪೂಜೆ ಮಾಡುತ್ತಾರೆ. ಅಂಗಡಿಕಾರರೆಲ್ಲ ಲಕ್ಶ್ಮೀ ಹಾಗೂ ಪಾಡವೆ ಪೂಜೆ ಮಾಡಿ; ವ್ಯಾಪಾರ ವಹಿವಾಟಿಗೆ ಹೊಸ ಲೆಕ್ಕ ಪತ್ರ ನಿರ್ವಹನೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಅಂತೆಯೇ ಮಹಾನವಮಿಯಂದು; ಆಯುಧ ಪೂಜೆಯ ಜೊತೆಗೆ ಎರಡು ಪ್ರಮುಖ ಬೆಡಗುಗಳಾದ; ಕಬಾಡೆ ಹಾಗೂ ಶಹಾಪುರ ಮನೆತನದಲ್ಲಿರುವ ಪಲ್ಲಕ್ಕಿಗಳನ್ನು ಶೃಂಗರಿಸಿ; ಬನ್ನಿ ಮುಡಿಯುವ ಕಾರ್ಯ ನೆರವೇರಿಸಿಕೊಂಡು; ಸಕಲ ಬಂಧು ಬಾಂಧವರಿಗೆ, ಹಿತೈಷಿ ಮಿತ್ರರುಗಳಿಗೆ ಬನ್ನಿ ಕೊಟ್ಟು ಸೌಹಾರ್ದಯುತವಾಗಿ ಕೂಡಿ ಬಾಳುವ ಸಂಕಲ್ಪ ಮಾಡುತ್ತಾರೆ.
ಗಣಿ-ಯಲ್ಲಮ್ಮ
ವಿಜಾಪೂರ ಶಹರದ ಸಮಗಾರರ ಆರಾದ್ಯ ದೈವ ಈ ಯಲ್ಲಮ್ಮ. ಸುಮಾರು ಎರಡು ನೂರು ವರ್ಷಗಳಿಗೂ ಹಿ೦ದಿನಿ೦ದ ಈ ದೇವಿಯ ಜಾತ್ರಾ ಮಹೊತ್ಸವವನ್ನು ಸಡಗರ ಸ೦ಭ್ರಮದಿ೦ದ ಆಚರಿಸಿಕೊ೦ಡು ಬರಲಾಗುತ್ತಿದೆ. ಪ್ರತಿ ವರ್ಷ ಡಿಸೆ೦ಬರ ತಿ೦ಗಳಿನಲ್ಲಿ ನಾಲ್ಕು ದಿನ ಜರುಗುವ ಸಾಮುದಾಯಿಕ ಜಾತ್ರೆಯಲ್ಲಿ; ವಿಜಾಪೂರ ಶಹರ ಹಾಗೂ ಮಹಾರಾಷ್ಟ್ರ ಮೂಲದ ಸಮಗಾರರು; ಪ್ರಾಥಮಿಕ ಶಾಲಾ ಬಾಲಕರು ವನಮಹೋತ್ಸವಕ್ಕೆ ತೆರಳಿ; ನಕ್ಕು ನಲಿದು ಬರುವ೦ತೆ; ಬದುಕಿನ ಜ೦ಜಾಟದಿ೦ದ ವಾರದ ಮಟ್ಟಿಗೆ ಬಿಡುಗಡೆ ಹೊ೦ದಿ; ನೆಮ್ಮದಿಯಿ೦ದ ಕಾಲ ಕಳೆದು ಬರುತ್ತಾರೆ.
ಜಾತ್ರಾ ಮಹೋತ್ಸವದ ಉಸ್ತುವಾರಿಯನ್ನು; ಬಹು ಕಾಲದಿ೦ದಲೂ ಮಾಜಿ ಶಾಸಕರಾದ ಶ್ರೀಯುತರಾದ; ಜೆ ಎಲ್ ಕಬಾಡೆ ಹಾಗೂ ಸಿ೦ದಗಿ ಮಾಸ್ತರ ಇವರು ನಿರ್ವಹಿಸಿಕೊಂಡು ಬರುತ್ತಿದ್ದರು. ಬದಲಾದ ಕಾಲಕ್ಕೆ ತಕ್ಕ೦ತೆ ಈಗ; ಉತ್ಸಾಹಿ ಯುವಕರ ಸಮೂಹ; ಸಾ೦ಘಿಕವಾಗಿ ಉಸ್ತುವಾರಿ ಹೊಣೆಯನ್ನು ಹೊತ್ತುಕೊ೦ಡಿದ್ದು; ನಾಲ್ಕು ಜನ ಹೌದೆನ್ನುವ೦ತೆ ತನ್ನ ಕರ್ತವ್ಯ ಪಾಲನೆಯಲ್ಲಿ ತೊಡಗಿಸಿಕೊ೦ಡು; ದೇವಿಯ ಕೃಪಾಕಟಾಕ್ಶಕ್ಕೆ ಪಾತ್ರವಾಗಿದೆ.
‘ಗಣಿ ಯಲ್ಲಮ್ಮ ಕಮೀಟಿ’ಯ ಅದ್ಯಕ್ಶರಾಗಿ ಶ್ರೀಯುತ, ಜೆ.ಎಲ್.ಕಬಾಡೆ. ಮಾಜಿ ಶಾಸಕರು, ಶ್ರೀಯುತ, ಹಾಜಿಲಾಲ. ಸಿದ್ರಾಮ. ಕಬಾಡೆ. ಮತ್ತು ತಿಪ್ಪನ್ನ ಹಾಜಿ ಶಹಾಪೂರ ಇವರು ಕಾರ್ಯದರ್ಶಿಗಳಾಗಿ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಮಿಟಿಯ ಸದಸ್ಯರುಗಳಾಗಿ- ತಿಪ್ಪಣ್ಣ ಧರೆಪ್ಪ ಹಲಗಿಮನಿ, ಗುರುನಾಥ ಎಸ್ ಕಬಾಡೆ, ಸೋಮನ್ನ ವೈ ಸೌದಾಗಾರ, ಯಮನಪ್ಪ ಕೆ ಕಟ್ಟಿಮನಿ, ಸುರೇಶ ಎನ್ ಹೊಸಮನಿ, ಲಕ್ಷ್ಮಣ ಡಿ ಭೂತನಾಳ, ಪರಸರಾಮ ಡಿ ಹಂಜಗಿ ಹಾಗೂ ರಾಜಪ್ಪ ಎ ಕಾಶೆ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ತಾಯಿಗೆ ಹರಕೆಯ ರೂಪದಲ್ಲಿ; ನೂರಾರುಗಟ್ಟಲೆ ಕುರಿಗಳನ್ನು ಬಲಿ ಕೊಡಲಾಗುತ್ತದೆ. ತಮ್ಮ ಇಷ್ಟಾರ್ಥ ಈಡೇರಿಕೆಯ ಫಲವಾಗಿ; ಧೀರ್ಘ ದ೦ಡ ನಮಸ್ಕಾರ ಹಾಕಿಯೋ; ಇಲ್ಲವೆ ಉಟಗಿ ಉಟ್ಟುಕೊ೦ಡೋ ದೇವಿಯ ಕರುಣೆಗೆ ಈಸಮುದಾ೦iiದ ಜನ ಪಾತ್ರರಾಗುತ್ತಾರೆ.
ವಿಜಾಪೂರ ಶಹರ ಮಾತ್ರವಲ್ಲ; ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಿ೦ದಲೂ ನೂರಾರು ಕುಟು೦ಬಗಳ; ಸಾವಿರಾರು ಸಮಗಾರ ಬ೦ಧುಗಳು; ತಾವೆಲ್ಲ ಒ೦ದೇ ಕುಟು೦ಬದ ಸದಸ್ಯರೆ೦ಬ೦ತೆ ಸೇರಿ; ಹರ್ಷೋಲ್ಲಾಸದಿ೦ದ ಜಾತ್ರೆ ಮಾಡುತ್ತಾರೆ. ಜಾತ್ರೆಗೆ ಸೇರುವ ಒಟ್ಟು ಪುರುಷರಲ್ಲಿ ಅ೦ದಾಜು ಎ೦ಬತ್ತು ಪ್ರತಿಶತದಷ್ಟು ಜನರು; ಹುಣ್ಣಿಮೆಯ ದಿನ ಮದ್ಯ ಸೇವನೆ ಮಾಡಿರುತ್ತಾರೆ. ವಿಚಿತ್ರ ಆದರೂ ಸತ್ಯ ಸ೦ಗತಿ ಏನೆ೦ದರೆ; ಇಡೀ ಜಾತ್ರೆಯಲ್ಲಿ; ಎಲೂ ಗದ್ದಲು-ಗಲಾಟೆಗಳಾಗುವುದಿಲ್ಲ; ಕದನ ಜಗಳಗಳಾಗುವುದಿಲ್ಲ. ಅಕಸ್ಮಾತ್ ಎಲ್ಲಿಯಾದರೂ ಒಂದಿಬ್ಬರಿಗೆ ಕೈ-ಕೈ ಹತ್ತುವ ಲಕ್ಷಣಗಳು ಕಂಡು ಬಂದರೆ, ಹತ್ತಾರು ಕಾಲುಗಳು ಅತ್ತ ಧಾವಿಸಿ ಅವರನ್ನು ಒಂದೇ ಕುಟುಂಬದವರಂತೆ ಸಂಭಾಳಿಸಿ ಶಾಂತ ಮಾಡುತ್ತಾರೆ.
ನವ ಉತ್ಸಾಹೀ ಯುವಕರ ಸಮೂಹವೊಂದು, ವಿಜಾಪೂರ ಶಹರದಿಂದ ಹುಣ್ಣಿಮೆಯ ಎರಡು ದಿನಕ್ಕೆ ಮೊದಲು ಪಾದ ಯಾತ್ರೆ ಮಾಡಿಕೊಂಡು, ತಾಯಿಯ ಗುಡ್ಡಕ್ಕೆ ಆಗಮಿಸಿ, ಶೃದ್ಧೆ ಭಕ್ತಿಯಿಂದ ತಾಯಿಯ ಸೇವೆ ಕೈಗೊಳ್ಳುತ್ತಾರೆ. ಮರುದಿನ ರಾತ್ರಿ ಹೂವಿನವರ ಭಕ್ತಾದಿಗಳ ತಂಡವೂ ಸಹ ಶಹರದಿಂದ ನಡೆಯುತ್ತಲೇ ಆಗಮಿಸುವುದು.
ಮೊದಲಿಗೆಲ್ಲ ಜಾತ್ರೆಗೆ ಆಗಮಿಸಿದವರಲ್ಲಿ; ಬಹುಪಾಲು ಭಕ್ತರು; ಪೂರ್ತಿ ಜಾತ್ರೆ ಮುಗಿಸಿಕೊ೦ಡು ಹೋಗುತ್ತಿದ್ದರು. ಬದಲಾದ ಪರಿಸ್ಥಿತಿಯಿ೦ದಾಗಿ; ಇ೦ದು ಸಾಕಷ್ಟು ಜನ ಭಕ್ತಾದಿಗಳು ಹುಣ್ಣಿಮೆಯ ಮರುದಿನ; ಬಳೆ ಬೀಳುವ ಮೊದಲಿಗೆ; ತಮ್ಮ ತಮ್ಮ ಊರುಗಳಿಗೆ ಹೊರಟು ಹೋಗುತ್ತಾರೆ. ಸಾಮಾನ್ಯವಾಗಿ ಯಾವುದೇ ಜಾತ್ರೆ ಉತ್ಸವಗಳಲ್ಲಿ; ಮಕ್ಕಳು ಮುದುಕರು ಇತ್ಯಾದಿಯಾಗಿ; ಕಳೆದುಕೊಳ್ಳುವುದು ಇಲ್ಲವೆ ತಪ್ಪಿಸಿಕೊಳ್ಳುವುದನ್ನು ಕೇಳಿದ್ದೇವೆ. ಇಲ್ಲಿ ಹಾಗಲ್ಲ; ಈ ಬ೦ಧುಗಳಲ್ಲಿ ಯಾರಾದರೂ ಕಳೆದು ಹೋದರೆ; ಅ೦ಥವರು ಖ೦ಡಿತಕ್ಕೂ ಈ ಜಾತ್ರೆಯಲ್ಲಿ ಸಿಗುತ್ತಾರೆ೦ಬ ಪ್ರತೀತಿ ಇದೆ. ಉಳಿದೆಲ್ಲ ಜಾತ್ರೆಗಳಲ್ಲಿ ಕಳೆದುಕೊಳ್ಳುವುದಿದ್ದರೆ; ಈ ಜಾತ್ರೆಯಲ್ಲಿ ಪಡೆದುಕೊಳ್ಳುವುದಿದೆ. ಈ ಸಮುದಾಯದವರಲ್ಲಿ, ನಾವು ಯಾರನ್ನಾದರೂ ಹುಡುಕಾಡಬೇಕಾಗಿದ್ದರೆ; ಈ ಜಾತ್ರೆಗೆ ಬರಬೇಕು; ಅವರಿಗೆ ನಾವು ಹುಡುಕುವ ಮೊದಲೇ, ನಾವೇ ಅವರಿಗೆ ಸಿಗುತ್ತೇವೆ, ಅ೦ತಹ ಅಪರೂಪದ ಜಾತ್ರೆ ಇದು.
‘ಗಣಿ ಯಲ್ಲಮ್ಮನ ಜಾತೆ’ಯೆ೦ದರೆ- ಹಣ ಹೊ೦ದಿಸುವುದು; ಕುರಿ ಖರೀದಿಸುವುದು; ಸಾಲ ಪಡೆಯುವುದು; ಕುಟು೦ಬ ಸಮೇತ ಪಿಕ್ನಿಕ್ಕಿಗೆ ಹೋಗುವುದು; ಆ ವರ್ಷ ವಿವಾಹವಾದ ನವ ದ೦ಪತಿಗಳಿಗೆ ಗುಡ್ಡ ಹತ್ತಿಸುವುದು; ಬ೦ಧು ಬಳಗವನ್ನು ಕೂಡುವುದು; ಅಣ್ಣ-ತಮ್ಮ೦ದಿರನ್ನು ಸೇರುವುದು; ಬೀಗರು-ನೆ೦ಟರನ್ನು ಚಾಷ್ಟಿ ಮಾಡಿ ಛೇಡಿಸುವುದು; ಕನ್ಯಾ ನೋಡುವುದು; ವರ ಹುಡುಕುವುದು; ಸಾಧ್ಯವಾದರೆ ಮಾತುಕತೆ ಮಾಡುವುದು; ಒ೦ಟಿಯಾಗಿ ಜಾತ್ರೆಗೆ ಆಗಮಿಸಿದ ಆಪ್ತರನ್ನು; ಆದರದಿ೦ದ ಬರ ಮಾಡಿಕೊ೦ಡು ಆದರಾತಿಥ್ಯ ಮಾಡುವುದು.
‘ತಾಯಿಯ ಜಾತೆ’ಯೆ೦ದರೆ- ಕುಡಿಯಲಾರದವರು ಕುಡಿಯಲು ಪ್ರಾರ೦ಭಿಸುವುದು; ಕುಡಿಯುವವರು ಹೆಚ್ಚಿಗೆ ಕುಡಿಯುವುದು; ಹುಣ್ಣಿಮೆಯ೦ದು ಸ್ಟ್ಯಾ೦ಡರ್ಡ ಕುಡಿಯುವುದು; ಮರು ದಿನ ಸಿಕ್ಕಿದ್ದ ಕೂಡಿಯುವುದು, ಮರಳಿ ಬರುವ ದಿನ ಉಳದಿದ್ದ (ಉಳದಿದ್ದರೆ) ಕುಡಿಯುವುದು; ಮು೦ದಿನ ವರ್ಷ ಜಾತ್ರೆಗೆ ಹೋಗುವತನಕ; ಕುಡಿದೂ ಕುಡಿಯದ ಹಾಗಿರುವುದು; ವಾರಿಗೆಯವರ ಜೊತೆಗೂಡಿ ಕುಡಿಯುವುದು; ತಿನ್ನುವುದು; ಹಿರಿಯರಿಗೆ ತ೦ದು ಕೊಡುವುದು; ಮೋಜು ಮಜಾ ಮಾಡುವುದು; ಕಳ್ಳೀ ಸಾಲಿನ್ಯಾಗ ಇಸ್ಪೀಟಾಡುವುದು; ಹೊಳಿ ಜ಼ಳಕಾ ಮಾಡುವುದು; ಜಗ ಹೊತ್ತ ತಾಯ೦ದಿರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು; ಹಣಿ ತು೦ಬ ಭ೦ಡಾರ ಹಚ್ಚಿಕೊಳ್ಳುವುದು; ಮನಸಿನ ತು೦ಬಾ ಒಳ್ಳೆಯವರಾಗೂದು; ಬಾಯಿ ತು೦ಬಾ ಉಧೋ ಉಧೋ ಅನ್ನುವುದು;
‘ದೇವಿಯ ಜಾತೆ’ಯೆ೦ದರೆ- ಹೆಣ್ಣು ಮಕ್ಕಳು ಬೆವರು ಸುರಿಸುತ್ತ ಅಡುಗೆ ಮಾಡುವುದು; ಹಾಡು ಹೇಳುತ್ತ ಊಟಕ್ಕೆ ಬಡಿಸುವುದು; ಗ೦ಡ ಕುಡುಕನಾಗಿದ್ದರೆ; ಮು೦ದಿನ ವರ್ಷ ಬರುವದರೊಳಗಾಗಿ; ಕುಡಿತ ಬಿಡಲು (ಗ೦ಡನಿಗೆ) ಬುದ್ಧಿ ಕೊಡುವ೦ತೆ; ಪ್ರತಿ ವರ್ಷವೂ ಸೆರಗೊಡಿ ಭಕ್ತಿಯಿ೦ದ; ತಾಯಿಯಲ್ಲಿ ಹೆ೦ಡತಿಯಾದವಳು ಬೇಡಿಕೊಳ್ಳುವುದು; ಹಿರಿಯರ ದೇವರು ಯಾರ ಪಾಲಿಗೆ ಬ೦ದಿರುತ್ತವೆಯೋ; ಅವರಿಗೆ (ಮಹಿಳೆಗೆ) ಮುತ್ತು ಕಟ್ಟಿಸುವುದು; ಮುತ್ತು ಕಟ್ಟಿಕೊ೦ಡವರು ಜಗ ಹೊತ್ತುಕೊ೦ಡು (ಹುಣ್ಣಿಮೆ ದಿನ ಸಂಜೆ) ಹೊಳಿಗೆ ಹೋಗಿ ಬರುವುದು; ನಾಲ್ಕೂ ದಿನ ಇದ್ದು ಜಾತ್ರೆ ಮಾಡಿ ಬರುವುದು; ಪರಡಿ ತು೦ಬಿಸುವುದು; ಜೋಗೇರಿಗೆ ಉಣ ಬಡಿಸುವುದು; ಜೋಗ ಹಾಕುವುದು; ಜೋಗಪ್ಪಗ ಖುಸಿ ಕೊಡೂದು; ನವಜಾತ ಶಿಸುಗಳಿಗೆ ಮೂರು ವರ್ಷ ತು೦ಬುವುದರೊಳಗೆ ಜಡೆ (ಜವಳ) ತೆಗೆಸುವುದು.
ಕೊನೆಯದಾಗಿ- ಜಾತ್ರೆ ಮುಗಿಸಿಕೊ೦ಡು ಸುರಕ್ಶಿತವಾಗಿ ಊರು ತಲುಪಿದ ನ೦ತರ; ಪರಶುರಾಮನಿಗೆ ಕಳುಹಿಸುವುದು. ಹೆಣ್ಣುಮಕ್ಕಳ ಪರಿಶ್ರಮ ಮೆಚ್ಚಲೇಬೇಕು. ಈ ಸಮಾಜದ ಹೆಣ್ಣುಮಕ್ಕಳು ತಾಯಿಯ ಜಾತ್ರೆ ಎ೦ದರೆ; ಹಿ೦ದೇಟು ಹಾಕುವವರಲ್ಲ. ಮನೆಯಲ್ಲಿ ಗ೦ಡಸರು ಜಾತ್ರೆಯ ಎಳೆ ತೆಗೆದರೆ ಸಾಕು; ಇವರು ಹಚಡಾ ನು೦ಗಿ ಬಿಡುತ್ತಾರೆ. ಒಟ್ಟಾರೆ ಈ ಜಾತ್ರೆಯಲ್ಲಿ; ಅಸಲೀ ಜವಾಬ್ದಾರಿಗಳನ್ನೆಲ್ಲ ಕುಟು೦ಬದ ಹೆಣ್ಣು ಮಕ್ಕಳೇ ನಿಭಾಯಿಸುತ್ತಾರೆ. ಗ೦ಡಸು ಮಕ್ಕಳದೇನಿದ್ದರೂ; ವನ ಮಹೋತ್ಸವಕ್ಕೆ ಆಗಮಿಸುವ ಶಾಲಾ ಬಾಲಕರ೦ತೆ; ಕುಣಿದು; ಕುಪ್ಪಳಿಸಿ; ಕುಡದು; ತಿ೦ದು ಕಾಲ ಹರಣ ಮಾಡುವ ಕಾಯಕ. ಎಷ್ಟಾದರೂ ಇದು ತಾಯಿಯ ಜಾತ್ರೆ ಅಲ್ಲವೇ? ತಾಯ೦ದಿರು ಬೆವರು ಹರಿಸುವುದು; ಮಕ್ಕಳೆಲ್ಲರೂ ಮೋಜು ಮಾಡುವುದು!
ಎಲ್ಲಮ್ಮ ತಾಯಿಯ ‘ಭೀಕರ’ ಮುಖ
ತಾಯಿ ಎಲ್ಲಮ್ಮಳ ಮುಖ ಭೀಕರ, ಭಯಂಕರ ಮತ್ತು ಭಯ ಹುಟ್ಟಿಸುವಂತೆ ಭಾಸವಾದರೆ, ಯಾರೂ ಅಚ್ಚರಿ ಪಡಬೇಕಾಗಿಲ್ಲ. ಈ ಮುಖದ ಭೀಕರತೆಯ ಹಿಂದೆ ಬಹುಶಃ ಒಂದು ವಾಸ್ತವ ತರ್ಕವಿದ್ದಂತೆ ಕಾಣುತ್ತದೆ.
ಕೆಲವು ಭಕ್ತರು ಹೇಳುವಂತೆ; ಎಲ್ಲಮ್ಮ ಮುಂಜಾನೆ ಬಾಲಿಕೆಯಂತೆ; ಮಧ್ಯಾನ್ಹ ಹರೆಯದ ಯುವvಯಂತೆ ಹಾಗೂ ರಾತ್ರಿ ಮುದುಕಿಯಂತೆ ಗೋಚರವಾಗುತ್ತಾಳೆಂದು ತಿಳಿದು ಬರುತ್ತದೆ. ಒಂದು ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ, ಮಾನವ ಜೀವನದ ಮೂರೂ ಹಂತಗಳ ಮುಖಾಂತರ ಎಲ್ಲಮ್ಮ ಹಾದು ಹೋಗುತ್ತಾಳೆಂದು ಪ್ರತೀತಿ ಇದೆ.
ಡಿಸೆಂಬರ ತಿಂಗಳಿನ ಛಳಿಯಲ್ಲಿ ಜರುಗುವ ಜಾತ್ರೆ ಮುಗಿಸಿಕೊಂಡು, ಸಕಲ ಭಕ್ತಾದಿಗಳು ತಮ್ಮ ತಮ್ಮ ಊರಿಗೆ ವಾಪಸ್ಸಾದಾಗ, ಜಾತ್ರೆಗೆ ಬರಲಾರದವರು; ಜಾತ್ರೆ ಮಾಡಿಕೊಂಡು ಬಂದವರ ಕುರಿತು; “ನಿಮ್ಮ ಮಾರಿ ಮ್ಯಾಲಿನ ಬಣ್ಣ; ಎಲ್ಲವ್ವ ತಗೊಂಡು ನಿಮಗ ಎಲ್ಲವ್ವ ತನ್ನ ಬಣ್ಣಾ ಕೊಟ್ಟಾಳ ನೋಡ”; ಅನ್ನುವುದಿದೆ. ಇದರ ತಾತ್ಪರ್ಯ ಇಷ್ಟೆ; ಜಾತ್ರೆಗೆ ಹೋಗಿ ಬಂದವರೆಲ್ಲರೂ ಸಾಮಾನ್ಯವಾಗಿ ತಮ್ಮ ಮುಖಗಳನ್ನು ಕಪ್ಪಾಗಿಸಿಕೊಂಡಿರುತ್ತಾರೆ. ನಾಗರಿಕ ಲೋಕದಲ್ಲಿ ವಾಸಿಸುವ ಈ ಜನರಿಗೆ ಅಡವಿಯ ಮುಕ್ತ ಜೀವನ, ಮೈ ಕೊರೆಯುವ ಛಳಿ, ಕೃಷ್ಣೆಯ ತಣ್ಣೀರಿನ ಸ್ನಾನ, ಮಿತಿಮೀರಿದ ಮದ್ಯಪಾನ, ಬಿಟ್ಟೂಬಿಡದ ಮಾಂಸಾಹಾರ, ನಿರಂತರ ಗಾಳಿ ಬಡಿಸಿಕೊಂಡ ಶರೀರ, ಹಾಗೂ ಆಗುವುದೆಲ್ಲವೂ ಸಮಯಾನುಸಾರಕ್ಕೆ ಆಗದಿರುವುದು, ಮತ್ತು ಇತಿಮಿತಿಯಲ್ಲಾಗದಿರುವುದು, ಇತ್ಯಾದಿಯಿಂದಾಗಿ ಐದಾರು ದಿನಗಳ ಪರ್ಯಂತ, ನಾಡವಾಸಿ ಭಕ್ತ ಜನ ಕಾಡಿನಲ್ಲಿ ಕಾಲ ಕಳೆದು, ತಮ್ಮ ನಯ-ನಾಜೂಕಿನ ನಾಗರೀಕ ಮೈ ಬಣ್ಣವನ್ನು, ಇಲ್ಲಿ ತಾತ್ಕಾಲಿಕವಾಗಿ ಕಳೆದುಕೊಳ್ಳುತ್ತಾರೆ.
ತಾಯಿಯ ಮೈ ಬಣ್ಣ ಹೇಗಿರಬೇಕೋ ಹಾಗೆ ಇರುವುದಂತೂ ವಾಸ್ತವ. ಜಾತ್ರೆ ಮಾಡಿಕೊಂಡು ಮರಳಿ ಹೋಗುವಾಗ ಭಕ್ತಾದಿಗಳು ಹೀಗೆ(ಕಪ್ಪು) ಮೈಬಣ್ಣವನ್ನು ತಮ್ಮ ಮೇಲೆ ಆರೋಪಿಸಿಕೊಳ್ಳುತ್ತಾರೆ. ದಲಿತ ಹಿಂದುಳಿದ ಸಮುದಾಯಗಳ ಬಹುತೇಕ ಮನೆ ದೇವರುಗಳು ಹೆಣ್ಣು ದೇವತೆಗಳೆ ಆಗಿರುವುದು ಸಾಮಾನ್ಯ ಸಂಗತಿ.
ಮೇಲು ಜಾತಿಯ ಪುರುಷರಿಂದ ತಮ್ಮ ಹೆಣ್ಣು ಮಕ್ಕಳನ್ನು ಸಂರಕ್ಷಿಸಲೋಸುಗ, ಅವರ ಮುಖ ಸೌಂದರ್ಯಹೀನ ಮಾಡಲಾಗುತ್ತಿದ್ದಿರಲೂಬಹುದು! ದೃಷ್ಟಾಂತಕ್ಕಾಗಿ ನೋಡುವುದಾದರೆ, ತೀರ ಇತ್ತೀಚಿನವರೆಗೂ ವಯಸ್ಸಾದ ಸ್ತ್ರೀಯರು, ತಮ್ಮ ಹಲ್ಲುಗಳಿಗೆ ಜಾಚಾಲಿ (ಒಂದು ತರಹದ ಗಾವಟಿ ಟೂಥ ಪೌಡರ) ತಿಕ್ಕುತ್ತಿದ್ದರು. ಅದರಿಂದ ಹಲ್ಲುಗಳು ಕಪ್ಪಾಗುವುದಲ್ಲದೆ, (ಗಟ್ಟಿಯೂ) ತಮ್ಮ ಗಂಡಂದಿರು ಬಿಟ್ಟು ಉಳಿದ ಪುರುಷರು, ತಮ್ಮೆಡೆಗೆ ಆಕರ್ಷಿತರಾಗಬಾರದೆನ್ನುವ ಮನೋಭಾವ ಇದ್ದಿರಲೂಬಹುದು.
ನಾವು ಗಮನಿಸಿದಂತೆ ಸ್ವಾತಂತ್ರ್ಯ ಲಭ್ಯತೆಯ ನಿಕಟ ಪೂರ್ವದಲ್ಲಿ, ತಂದೆ-ತಾಯಿಗಳಾದವರು ಋತುಮತಿಯರಾದ ತಮ್ಮ ಹೆಣ್ಣು ಮಕ್ಕಳು, ಒಳ್ಳೊಳ್ಳೆಯ ಸೀರೆ ಉಡುವುದನ್ನು ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲ. ಪರ ಪುರುಷರ ಕಣ್ಣಿಗೆ ಯುವತಿಯರು ಎದ್ದು ಕಾಣುವಂತಿರಬಾರದೆಂದೇ, ಹಿರಿಯರ ಅಭಿಲಾಷೆಯಾಗಿತ್ತೆಂದು ಅನಿಸುತ್ತದೆ. ಹೆಣ್ಣು ಮಕ್ಕಳು ಕುರೂಪಿಯರಾಗಿದ್ದಷ್ಟೂ ಅವರು ಸುರಕ್ಷಿತರಾಗಿರುತ್ತಾರೆಂಬ ಬಲವಾದ ನಂಬಿಕೆ ಈ ಸಮುದಾಯದ ಜನರಲ್ಲಿತ್ತು. ಸೌಂದರ್ಯವಿದ್ದಲ್ಲಿ ಗಂಡಾಂತರಗಳೂ ಅಧಿಕವಾಗಿರುತ್ತವೆ ಎನ್ನುವುದು, ಇವರ ವಾದವಿದ್ದಂತೆ ಕಂಡು ಬರುತ್ತದೆ.
ಈಗ ಕೃಷ್ಣೆಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಮೊದಲಿಗೆಲ್ಲ ಮುಖದ ಕುರೂಪತನಕ್ಕೂ, ಮನಸ್ಸಿನ ಸೌಂದರ್ಯಕ್ಕೂ ಎಲ್ಲಿಲ್ಲದ ಬೆಲೆ ಇತ್ತು. ನಮ್ಮ ಸಮಾಜದ ಹಿರಿಯ ತಾಯಂದಿರ ಮುಖ ಸುಂದರವಾಗಿರಲಿಲ್ಲ ನಿಜ; ಆದರೆ ಅವರು ಮನಸ್ಸಿನಿಂದ ಸೌಂದರ್ಯದ ಖನಿಯಾಗಿದ್ದವರು. ಹೃದಯ ವೈಶಾಲ್ಯತೆಗೆ ಹೆಸರುವಾಸಿಯಗಿದ್ದರು. ಈ ಸಮುದಾಯದ ತಾಯಂದಿರ ಕಾಲಲ್ಲಿ ಪಾದರಕ್ಷೆಗಳಿರಲಿಲ್ಲ ನಿಜ; ಅವರ ಕರುಳ ವಾತ್ಸಲ್ಯಕ್ಕೆ ಮಾತ್ರ, ಯಾವ ಕಾಲದಲ್ಲೂ ಬರಗಾಲ ಇರಲಿಲ್ಲ. ಅಂಥವರ ಪಟ್ಟಿ ಮಾಡುತ್ತ ಕುಂತರೆ ಅದು ಬೇಗ ಮುಗಿಯುವ ಕಾರ್ಯವಲ್ಲ.
ತಾಯಿ ಎಲ್ಲಮ್ಮಳ ಮುಖ ಕಪ್ಪಗೆ ಕುರೂಪ ಇರುವಂತೆ ಮಾಡಿ, ಅವಳಲ್ಲಿ ತಾಯ್ತನದ ಕರುಳ ಕುಡಿಯ ನಂಟು, ಈ ಜನ ಬೆಸೆದುಕೊಂಡಿರುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಎಲ್ಲಮ್ಮಳ ಭೀಕರ ಭಯಂಕರ ಮುಖ ಸ್ವತಃ ಎಲ್ಲಮ್ಮಳ ಸ್ವರಕ್ಷಣೆಗೂ ಬೇಕು; ತನ್ಮೂಲಕ ತಮ್ಮ ಇಡೀ ಸಮುದಾಯದ ಸಕಲರೂ, ವಿಷೇಶವಾಗಿ ಹೆಣ್ಣು ಮಕ್ಕಳು ಸಂರಕ್ಷಿಸಲ್ಪಡಬೇಕೆಂಬ, ಉದಾತ್ತ ಧ್ಯೇಯವೂ ಇವರದ್ದಾಗಿರಬೇಕೆಂದು ಕಾಣುತ್ತದೆ.
ನ್ಯಾಯ ಪದ್ಧತಿ
ವಿಜಾಪೂರದ ಸಮಗಾರರಲ್ಲಿ; ನ್ಯಾಯ ಪದ್ಧತಿಗೆ ಪ೦ಚರು ಅಥವಾ ದೈವ ಎನ್ನುವ ವ್ಯವಸ್ಥೆ ಇರುತ್ತದೆ. ಪ೦ಚರೆ೦ದರೆ ಸಮುದಾಯದ ಐದು ಜನ ಪ್ರಮುಖರು. ಅವರಿಗೆ ದೈವವೆ೦ದೂ ಕರೆಯುತ್ತಾರೆ. ಇವರಲ್ಲಿ ಬಹಳಷ್ಟು ಪ್ರಮಾಣದ ನ್ಯಾಯ-ನಿಗಾದಿಗಳು, ತ೦ಟೆ ತಕರಾರುಗಳು, ಪ೦ಚರ ಸಮ್ಮುಖದಲ್ಲಿಯೇ ಬಗೆ ಹರಿಸಿಕೊಳ್ಳಲಾಗುತ್ತದೆ. ಕೌಟು೦ಬಿಕ ಕಲಹಗಳು, ಸೋದರ ಸ೦ಬ೦ದೀ ವ್ಯಾಜ್ಯಗಳು, ತ೦ದೆ ಮಕ್ಕಳ ಮನಸ್ಥಾಪಗಳು, ಗ೦ಡ-ಹೆ೦ಡಿರ ಮುನಿಸುಗಳು, ರಕ್ತ ಸ೦ಬಧಿಗಳಲ್ಲಿ ತಲೆದೋರುವ ಆ೦ತರಿಕ ಕಲಹ ಕಚ್ಚಾಟಗಳು; ಎಲ್ಲವೂ ಬಹುತರವಾಗಿ ಸಮುದಾಯದ ಹಿರಿಯರ ಸಮ್ಮುಖದಲ್ಲಿಯೇ ಇತ್ಯರ್ಥಗೊಳ್ಳುತ್ತವೆ. ಆಧುನಿಕ ಕೋರ್ಟು ಕಚೇರಿಗಳಿಗೆ ಇವರು ಮೊರೆ ಹೋಗುವುದು ತೀರ ವಿರಳ. ಮದುವೆಯಿ೦ದ ಮಸಣದವರೆಗೆ ಎಲ್ಲ ಶುಭಾಶುಭ ಕಾರ್ಯಗಳಲ್ಲಿ ಪ೦ಚರ ಉಪಸ್ಥಿತಿ ಎದ್ದು ಕಾಣುತ್ತದೆ.
ಕುಟುಂಬದಲ್ಲಿ ಗಂಡ ಹೆಂಡತಿ ಮದ್ಯ ವಿರಸ ಏರ್ಪಟ್ಟಾಗ; ಸಮಾಜದ ಪ೦ಚರು (ದೈವದವರು) ಅದನ್ನು ಬಗೆಹರಿಸುತ್ತಾರೆ. ಬಹುತೇಕ ಸಲ ದೈವದ ತೀರ್ಮಾಣ ಗ೦ಡಸಿನ ಪರವಾಗಿಯೇ ಇರುತ್ತದೆ. ಕುಡುಕ, ವ್ಯಭಿಚಾರಿ, ಅಪರಾಧಿ, ಸಮಾಜ ಕ೦ಟಕ, ಅ೦ಗವಿಕಲ ಗ೦ಡನಿದ್ದರೂ ಹೆ೦ಡತಿಗೆ ಸಮಾಜ ಹೇಳುವ ಮಾತು; ‘ಅವನೇ ಅವಳ ದೇವರು’; ಸಮಗಾರರಲ್ಲಿ ಕೊಟ್ಟ ಹೆಣ್ಣು ಕುಲಕ್ಕೆ ಹೊರತೆನ್ನುವ ನ೦ಬಿಕೆ ಗಟ್ಟಿಯಾಗಿದೆ.
ಸ೦ಘ-ಸ೦ಸ್ಥೆ, ಪ್ರತಿಸ್ಠಿತ ವ್ಯಕ್ತಿಗಳ ಸಾಧನೆ
ವಿಜಾಪೂರದ ಸಮಗಾರರು ಸಾ೦ಘಿಕವಾಗ ಮತ್ತು ಸಾ೦ಸ್ಥಿಕವಾಗಿ ದುರ್ಬಲರೆ೦ದೇ ಹೇಳಬಹುದು. ತಾವು ಸ೦ಘಟಿತರಾಗಬೇಕಾದ ಪ್ರಾಥಮಿಕ ತಿಳುವಳಿಕೆ; ತೀರ ಇತ್ತೀಚಿನವರೆಗೂ ಇವರಲ್ಲಿ ಕ೦ಡು ಬ೦ದಿರಲಿಲ್ಲ. ರಾಜ್ಯದಲ್ಲಿ ಈ ಸಮುದಾಯಕ್ಕೆ೦ದೇ ಸರ್ಕಾರವು ಲಿಡ್ಕರ ಯೋಜನೆಯ ಅಡಿಯಲ್ಲಿ; ಲೆದರ ಬೋರ್ಡ್ ಸ್ಥಾಪನೆ ಮಾಡಿ ಇಪ್ಪತೈದು ವರ್ಷಗಳೇ ಗತಿಸಿವೆ. ಈವರೆಗೆ ಈ ಸಮುದಾಯದ ಯಾರೊಬ್ಬರೂ ಸದರಿ ಬೋರ್ಡಿಗೆ ಸದಸ್ಯರಾಗಲೀ; ಚೇರ್ಮನ್ ಆಗಲೀ ಆಗಿಲ್ಲದಿರುವುದನ್ನು ಗಮನಿಸಬೇಕು. ತಮ್ಮ ವೃತ್ತಿ ಕಸುಬಿಗೆ ಸ೦ಬ೦ದಿಸಿ; ರಾಜ್ಯದಲ್ಲಿರುವ ಈ ಬೋರ್ಡಿಗೂ; ತಮಗೂ ಸುತಾರ೦ ಸ೦ಭ೦ದವೇ ಇಲ್ಲದ೦ತಹ; ವೈರಾಗ್ಯ ಭಾವ ತಾಳಿರುವ ಈ ಜನರು; ಸ೦ಘಟನಾತ್ಮಕವಾಗಿ ತಮ್ಮ ಹಕ್ಕು ಕೇಳುವಲ್ಲಿ; ಅತ್ಯ೦ತ ಆತ೦ಕ ಹಾಗೂ ಹಿ೦ಜರಿತದ ಮನೋಭಾವ ಹೊ೦ದಿದ್ದಾರೆ.
೧೯೯೯ರಲ್ಲಿ ಕರ್ನಾಟಕದ ಸಮಗಾರರ ಪ್ರ-ಪ್ರಥಮ ರಾಜ್ಯ ಸಮಾವೇಶ ‘ಹರಳಯ್ಯ ಸಮಾಜ ವೇದಿಕೆ’ ಅಡಿಯಯಲ್ಲಿ ಬೆಳಗಾವಿಯಲ್ಲಿ ಜರುಗಿತು. ಆ ಸಮಾವೇಶದಲ್ಲಿ ಸಮಗಾರರ ಸ೦ಘಟನಾ ಅವಶ್ಯಕತೆಯನ್ನು ಒತ್ತಿ ಹೇಳಲಾಯಿತು. ಸಮುದಾಯದ ಹಕ್ಕುಗಳಿಗಾಗಿ ಈ ಜನರು ಹೋರಾಡಲು ಸಿದ್ಧರಾಗಬೇಕೆ೦ದು ಕರೆ ಕೊಡಲಾಯಿತು.
ವಿಜಾಪೂರ eಲ್ಲಾ ಘಟಕಕ್ಕೆ ಶ್ರೀ; ರಾಯಪ್ಪ ಬಸಪ್ಪ ಶಹಾಪೂರ ಅದ್ಯಕ್ಶರಾಗಿಯೂ; ಶ್ರೀ; ಚನ್ನಬಸಪ್ಪ ತುಳಜಪ್ಪ ಹೊಸಮನಿ ಇವರು ನಗರಾದ್ಯಕ್ಷರಾಗಿಯೂ ಹಾಗೂ ಶ್ರೀ; ಗಣೆಶ ಸಿದ್ದಪ್ಪ ಕಬಾಡೆ ಇವರು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಹರದಲ್ಲಿ ‘ಹರಳಯ್ಯ ಸಮಾಜ ಸೇವಾ ಸಹಕಾರ ಸ೦ಘ’ವೆ೦ಬ ಬ್ಯಾ೦ಕನ್ನು ಪ್ರಾರ೦ಭಿಸಲಾಗಿದೆ. ನೊ೦ದಾಯಿತ ಸ೦ಘದ ಮುಖಾ೦ತರ ಗೃಹ ನಿರ್ಮಾಣ ಯೋಜನೆ ಇಟ್ಟುಕೊ೦ಡು; ಐದಾರು ಎಕರೆ ಭೂಮಿ ಖರೀದಿಸಿ; ಕುಲ ಬಾ೦ಧವರಿಗೆ ಆತ್ಯ೦ತ ಸೋವಿ ದರದಲ್ಲಿ; ಮರಾಟ ಮಾಡಿ ಅದಕ್ಕೆ ‘ಜಗಜೀವನರಾಮ್ ಕಾಲನಿ’ ಅ೦ತ ಹೆಸರಿಡಲಾಗಿದೆ.
ಭೂತನಾಳ, ಹೊನ್ನಕಸ್ತೂರಿ ಹಾಗೂ ಯಳಮೇಲಿ ಬ೦ಧುಗಳು; ಕಳೆದ ಆರೇಳು ವರ್ಷಗಳಿ೦ದ; ಹಿರೋಡೇಶ್ವರ ಉತ್ಸವವನ್ನು; ವಿಜ್ರ೦ಬನೆಯಿ೦ದ ಆಚರಿಸಿಕೊ೦ಡು ಬರುತ್ತಿದ್ದಾರೆ. ಪ್ರತಿ ಮಹಾನವಮಿಯ೦ದು; ಭೂತನಾಳ ಬೆಡಗಿನ ಸಮಸ್ತ; ಸೋದರ ಸ೦ಬ೦ದೀ ಬ೦ಧುಗಳು; ಒ೦ದುಗೂಡಿ ಆಚರಿಸಲಾಗುವ ಉತ್ಸವದ ಅ೦ಗವಾಗಿ; ಅನುಕರಣೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೆಡಗಿನಲ್ಲಿ ತೀರಿ ಹೋದ ಹಿರಿಯರ ಸ್ಮರಣಾರ್ಥವಾಗಿ; ಪ್ರಸ್ತುತ ಸಮಾಜದಲ್ಲಿ ಯಾವುದೇ ಬೆಡಗಿನ; ವಿಶೇಷ ಪ್ರತಿಭಾವ೦ತ ಸಾಧಕರನ್ನು ಆಹ್ವಾನಿಸಿ ಗೌರವಪೂರಕವಾಗಿ ಸನ್ಮಾನಿಸಲಾಗುತ್ತದೆ. ನೋ೦ದಾಯಿತ ಸ೦ಘದ ಅದ್ಯಕ್ಶರಾಗಿ ಶ್ರೀಯುತ, ಶರಣಪ್ಪ ಮಲ್ಲಪ್ಪ ಭೂತನಾಳ; ಹಾಗೂ ಕಾರ್ಯದರ್ಶಿಗಳಾಗಿ ಶ್ರೀಯುತ ತಣ್ಣ ತೇಜಪ್ಪ ಭೂತನಾಳ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರಿಗೆ ಬೆನ್ನುಲುಬಾಗಿ ಶ್ರೀಯುತ ಕಲ್ಲಪ್ಪ ಶಿವಪ್ಪ ಭೂತನಾಳ, ಬಸವರಾಜ ಯಲ್ಲಪ್ಪ ಹೊನ್ನಕಸ್ತೂರಿ, ಸದಾಶಿವ ನರಸಪ್ಪ ಭೂತನಾಳ, ದೇವೇ೦ದ್ರ ಕುಬೇರಪ್ಪ ಹೊನ್ನಕಸ್ತೂರಿ, ಲಕ್ಶ್ಮಣ ದು೦ಡಪ್ಪ ಭೂತನಾಳ, ಯಲ್ಲಪ್ಪ ಭೂತನಾಳ, ನರಸಪ್ಪ ಭೂತನಾಳ, ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಜಾಪೂರದಲ್ಲಿ ತೀರ ಇತ್ತೀಚೆಗೆ; ಸಮಗಾರ ಹರಳಯ್ಯ ನಿವೃತ್ತ ನೌಕರರ ಸಂಘವನ್ನು ಸ್ಥಾಪಿಸಲಾಗಿದ್ದು; ಇದರ ಅದ್ಯಕ್ಷರರಾಗಿ ಶ್ರೀ ಕಲ್ಲಪ್ಪ ಎಸ್ ಜಮಖಂಡಿ. (ನಿವೃತ್ತ ಶಿಕ್ಷಕರು) ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರತಿಷ್ಠಿತರು
ಜೆ ಎಲ್ ಕಬಾಡೆಯವರು ಬಳ್ಳೊಳ್ಳಿ ಮೀಸಲು ಮತಕ್ಶೆತ್ರದಿ೦ದ; ಕರ್ನಾಟಕ ರಾಜ್ಯ ವಿಧಾನ ಸಭೆಗೆ; ಮೊಟ್ಟ ಮೊದಲ ಚುನಾವಣೆಯಿ೦ದ ಪ್ರಾರ೦ಭಿಸಿ; ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರು. ಒಬ್ಬ ಯಶಶ್ವೀ ರಾಜಕಾರಣಿಗೆ ಇರಬೇಕಾದ ಎಲ್ಲ ಗುಣ ಲಕ್ಶಣಗಳು ಇವರಲ್ಲಿ ಮೇಳೈಸಿದ್ದವು. ರಾಜಕಾರಣಕ್ಕೆ ಸಮಗಾರರಲ್ಲಿ ಇವರ೦ತಹ ಅರ್ಹರು ಇನ್ನೊಬ್ಬರು ಇರಲಿಲ್ಲ. ಆದರೇನು ಮಾಡುವುದು? ‘ದೊರಿ ಮಗಾ ಊರಿಗಾಗಲಿಲ’ ಅನ್ನುವ೦ತೆ; ಕಬಾಡೆ ಎಮ್ಮೆಲ್ಲೆ ಸಾಹೇಬರು; ಸಮಗಾರರ ಸಾಮೂಹಿಕ ಉದ್ಧಾರಕ್ಕೆ ಒಮ್ಮೆಯೂ ತಲೆ ಬಿಸಿ ಮಾಡಿಕೊಳ್ಳಲಿಲ್ಲ ಎಂದು ಬಹುಜನ ಅಭಿಪ್ರಾಯ ಪಡುತ್ತಾರೆ. ಇವರು ರಾಜಕಾರಣದಲ್ಲಿ ಕಾಲ ಕಳೆದದ್ದು ಕಾಲು ಶತಮಾನವಾದರೂ; ಸಾಮುದಾಯಿಕ ಹಿತದ್ರೃಷ್ಟಿಯಿ೦ದ ಸಾಧನೆ ಮಾಡಿರುವುದು; ಶೂನ್ಯ ಸ೦ಪಾದನೆಯೆ೦ದೇ ಹೇಳಬೇಕು.
ತಾವೇ; ತಾವು ಮಾತ್ರ ಬೆಳೆದರೇ ವಿನಃ; ತಮ್ಮ ಸುತ್ತ-ಮುತ್ತಲಿನ ಬ೦ಧು ಬಾ೦ಧವರನ್ನು ಬೆಳೆಸುವ ಗೋಜಿಗೆ ಹೋಗಲಿಲ್ಲ. ಹೋಗಲಿ; ತಮ್ಮ ಕುಟು೦ಬದಲ್ಲಿರುವ ಸಹೋದರರಲ್ಲಿ ಒಬ್ಬರನ್ನಾದರೂ ಬೆಳೆಸಬಹುದಿತ್ತು. ಅದಕ್ಕೂ ಇಲ್ಲವೆ೦ದಾದರೆ; ಕೊನೇ ಪಕ್ಶ ಇದ್ದೊಬ್ಬ ಪುತ್ರನನ್ನಾದರೂ; ತಮ್ಮ ರಾಜಕೀಯದ ಗರಡಿಯಲ್ಲಿ ಪಳಗಿಸಬಹುದಿತ್ತು. ಸಮಾಜೋದ್ಧಾರಕ್ಕೆ ಒ೦ದು ಸುವರ್ಣಾವಕಾಶ ಇವರಿಗೆ ದೊರೆತಿತ್ತು. ಅದರ ಸದುಪಯೋಗ ಆಗದಿದ್ದುದೇ ಸಮಾಜ ಬಾ೦ಧವರ ಬಹು ದೊಡ್ಡ ಕೊರಗು.
ಇವರ ರಾಜಕೀಯ ಸ್ವರೂಪ; ಸ್ವಹಿತಾಸಕ್ತಿಯಾಚೆ ವಿಸ್ತರಿಸಲೇ ಇಲ್ಲ. ರಾಜಕೀಯದಲ್ಲಿ ತಮ್ಮ ನ೦ತರ; ಸಮಾಜದ ಇಲ್ಲವೇ ಕುಟು೦ಬದ ಯಾರಾದರೊಬ್ಬರು ಉಳಿಯುವ೦ತೆ ಮಾಡದಿರುವುದೇ ಇವರ (ಕಾಲು ಶತಮಾನದ) ರಾಜಕೀಯ ಬದುಕಿನ ಏಕೈಕ ಸಾಧನೆಯೆ೦ದು ಹೇಳಬಹುದೇನೋ! ಮಾಜಿ ಶಾಸಕರಾಗಿರುವ ಕಬಾಡೆ; ಇವರ ನ೦ತರ ಯಾರು? ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. ಅಖ೦ಡ ಇಪ್ಪತೈದು ವರ್ಷಗಳ ರಾಜಕಾರಣದಲ್ಲಿ ಸಕ್ರೀಯವಾಗಿದ್ದುಕೊ೦ಡು; ಒಬ್ಬ ಸಮರ್ಥ ಉತ್ತರಾಧಿಕಾರಿಯನ್ನು; ತಮ್ಮ ಹಿ೦ದೆ ಬಿಟ್ಟು ಹೋಗದಷ್ಟು ಇವರು ದುರ್ಬಲರೆ೦ದೇ ಹೇಳಬಹುದು. ಸದ್ಯಕ್ಕೆ ತಮ್ಮ ಏಕೈಕ ಪುತ್ರನ ಆಶ್ರಯದಲ್ಲಿ (ದಾವuಗೆರೆ) ಬದುಕಿನ ಸ೦ಜೆಯನ್ನು ಕಳೆಯುತ್ತಿದ್ದಾರೆ.
ಲಕ್ಷ್ಮೀ ಪುತ್ರರು
ಒಂದು ಕಾಲಕ್ಕೆ ವಿಜಾಪೂರವನ್ನು ಫ಼ಕೀರ ಬಸ್ತಿ ಎಂದು ಕರೆಯುತ್ತಿದ್ದರು. ಇಂದು ಅಕ್ಷರಶಃ ಇದು ಕುಬೇರ ಬಸ್ತಿಯಾಗಿರುವುದು ಸುಳ್ಳಲ್ಲ. ಶಹರದ ಹರಳಯ್ಯ ಸಮಾಜ ಬಂಧುಗಳಲ್ಲಿ ಕೆಲವರು ತಮ್ಮ ಅಪಾರ ಬುದ್ಧಿವಂತಿಕೆಯಿಂದ, ಜಾಣ್ಮೆಯಿಂದ, ಕೌಶಲ್ಯದಿಂದ ತಮ್ಮ ತಮ್ಮ ವೃತ್ತಿಯಲ್ಲಿ ಅತ್ಯದ್ಭುತ ಸಾಧನೆ ಮಾಡಿ ತೋರಿಸಿದ್ದಾರೆ.
ಹಾಗೆ ನೋಡಿದರೆ; ಇವರು ಅಷ್ಟೇನೂ ವಿದ್ಯಾವಂತರಲ್ಲ. ಇವರು ತಮ್ಮ ಬದುಕಿನ ಅನುಭವದಿಂದ ಪಾಠ ಕಲಿತವರು; ಪ್ರಯತ್ನಶೀಲತೆಯಿಂದ ಹಾಗೂ ಕ್ರಿಯಾಶೀಲತೆಯಿಂದ ಮುಂದೆ ಬಂದವರು. ಇಂಥವರಲ್ಲಿ ಕೆಲವರನ್ನು ಹೆಸರಿಸಬೇಕಾದರೆ; ಕಲ್ಲಪ್ಪ ಶಿವಪ್ಪ ಜಮಖಂಡಿ, ಪರಸರಾಮ ರಾಜಪ್ಪ ಇಲಕಲ್, ದೇವೇಂದ್ರ ಯಲ್ಲಪ್ಪ ಕಬಾಡೆ. ಮಹಾದೇವ ಕೂಸಪ್ಪ ಕಬಾಡೆ, ಗಣೇಶ ಸಿದ್ದಪ್ಪ ಕಬಾಡೆ, ರಾಜಗೋಪಾಲ. ಬಸಪ್ಪ ಶಹಾಪೂರ, ರಾಯಪ್ಪ ಬಸಪ್ಪ ಶಹಾಪೂರ, ಅಶೋಕ ಧರೆಪ್ಪ ಶಹಾಪೂರ ಹಾಗೂ ದಿ. ಸತ್ಯಪ್ಪ ಪರಸಪ್ಪ ಕಾಂಬಳೆ ಇತ್ಯಾದಿ.
ಇವರು ಯಾವುದೇ ಮೀಸಲಾತಿ ಸೌಲಭ್ಯದಿಂದ ಮೇಲೆ ಬಂದವರಲ್ಲ. ಯಾವುದೇ ಕ್ಷೇತ್ರದರಲಿ; ಇಂಥವರು ತಮ್ಮ ಅಪಾರ ಸ್ವ ಸಾಮರ್ಥ್ಯದಿಂದ ಚಾಕಚಕ್ಯತೆಯಿಂದ; ಪ್ರವಾಹದ ವಿರುದ್ಧ ಈಜಬಲ್ಲವರು; ಈಜಿ ದಡ ಸೇರಬಲ್ಲವರು. ಬದುಕಿನಲ್ಲಿ ಎಂತಹದೇ ಸವಾಲು ಸಮಸ್ಯೆಗಳು ಎದುರಾಗಲಿ; ಅವೆಲ್ಲವನ್ನು ಸಮರ್ಥವಾಗಿ ಎದುರಿಸಿ ಜಯ ಸಾಧಿಸಬಲ್ಲವರು.
ಸರಸ್ವತಿ ಪುತ್ರರು
ಮುಳ್ಳಗಸಿಯ- ರಮೇಶ ಧರೆಪ್ಪ ಕಟ್ಟಿಮನಿ; ಲಕ್ಶ್ಮಣ ತುಳಜಾರಾಮ ಕಬಾಡೆ ಹಾಗೂ ಸದಾಶಿವ ಕಲಪ್ಪ ಜಮಖ೦ಡಿ; ಇವರನ್ನು ಇಲ್ಲಿ ಉಲ್ಲೇಖಿಸಿದರೆ ತಪ್ಪಾಗಲಿಕ್ಕಿಲ್ಲ. ಈ ಮೂವರು ವಯಸ್ಸಿನಲ್ಲಿ ವಾರಿಗೆಯವರು. ಗೆಳೆತನದಲ್ಲಿ ಕೂಡಿ ಆಡಿದವರು. ಕರ್ನಾಟಕದ ಪ್ರತಿಷ್ಠಿತ; ಸುರತ್ಕಲ್ ಇ೦ಜನಿಯರಿ೦ಗ್ ಕಾಲೇಜಿನಿ೦ದ; ಒ೦ದೇ ಬಾರಿಗೆ ಓದಿ ಹೊರ ಬ೦ದವರು. ಅಪ್ಪಟ ಪ್ರತಿಭಾವ೦ತರು. ಯಾವುದೇ ಬಗೆಯ ಮೀಸಲಾತಿ ಇಲ್ಲದೆಯೂ ಇವರು ಮು೦ದೆ ಬಂದವರು. ಏನನ್ನಾದರೂ ತಮ್ಮ ಸ್ವ-ಸಾಮರ್ಥ್ಯದಿ೦ದ ಸಾಧಿಸಬಲ್ಲವರು. ಇವರು ಮುಳ್ಳಗಸಿಯ ಹೆಮ್ಮೆಯ ಕುಡಿಗಳು!
ರಮೇಶ ಧರೆಪ್ಪ ಕಟ್ಟಿಮನಿ ಇವರು, ಸದ್ಯ ಕಾರ್ಯ-ನಿರ್ವಾಹಕ ಇಂಜನೀಯರಾಗಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆ೦ಬ೦ತೆ; ಇವರ ಸೇವಾ ದಕ್ಶತೆಯನ್ನು ಪರಿಗಣಿಸಿ; ಇಲಾಖೆಯ ವತಿಯಿ೦ದ ಇವರನ್ನು ವಿಶೇಷ ಕರ್ತವ್ಯದ ಮೇಲೆ ಡೆನ್ಮಾರ್ಕ್ ದೇಶಕ್ಕೆ ಕಳುಹಿಸಿ ಕೊಡಲಾಗಿತ್ತು. ಸಮಾಜದ ಯಾವುದೇ ಕೆಲಸ ಕಾರ್ಯಗಳಿರಲಿ; ಅದಕ್ಕೆ ತಮ್ಮ ಶಕ್ತಿ ಮೀರಿ ಸಹಾಯ ಹಸ್ತ ಚಾಚುವುದರಲ್ಲಿ ಇವರು ಸದಾ ಸನ್ನದ್ಧರು. ಇವರ ಕಿರಿಯ ಪುತ್ರ ಸದ್ಯ ಸೈನಿಕ ಶಾಲೆಯಲ್ಲಿ ಅಧ್ಯನ ಮಾಡುತ್ತಿದ್ದಾರೆ.
ಶಹರದ ಸಮಗಾರರ ಆರಾದ್ಯ ದೈವವಾದ; ಗಣಿ ಯಲ್ಲಮ್ಮ ದೇವಸ್ಥಾನದ; ನೂತನ ಕಟ್ಟಡ ಕಾಮಗಾರಿಯಲ್ಲಿ; ಶ್ರೀಯುತರು ಕೊಡುಗೈ ದೊರೆಯಾಗಿ; ತಾಯಿಯ ಸೇವೆ ಮಾಡಿದ್ದನ್ನು ಯಾರೂ ಮರೆಯಲಾರರು. ಇವರಲ್ಲಿರುವ ಸಾಮಾಜಿಕ ಕಳಕಳಿ ಹಾಗೂ ಕ್ರಿಯಾಶೀಲತೆ ಅನುಕರಣೀಯವಾದದ್ದು. ಇವರ ಸಹೋದರರಾದ ದಿ. ಶ್ರೀ ಹುಸೇನಪ್ಪನವರ ಚಿರಂಜೀವಿಯಾದ ಶ್ರೀ ತುಳಜಪ್ಪ (ಮುದುಕಾ) ಇವರು ಇಂಜನೀಯರಾಗಿ ಕರ್ತವ್ಯದಲ್ಲಿದ್ದಾರೆ.
ಲಕ್ಶ್ಮಣ ತುಳಜಾರಾಮ ಕಬಾಡೆ; ಸದ್ಯಕ್ಕೆ ರಾಯಚೂರ ಜಿಲ್ಲೆಯ ಶಕ್ತಿ ನಗರದ ಶಾಖೊತ್ಪನ್ನ ವಿದ್ಯುತ್ ಕೇ೦ದ್ರದಲ್ಲಿ ಚೀಫ಼್ ಇ೦ಜನಿಯರ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಶಕ ತ೦ದೆ ತಾಯಿಗಳ ಪುತ್ರರಾದ ಇವರು; ಬೇಕಾದಷ್ಟು ದುಡ್ಡು ತ೦ದು ಕೊಡುವ ಇಲಾಖೆಗಳಲ್ಲಿ; ವೃತ್ತಿ ಪ್ರಾರ೦ಭಿಸುವ ಸುಯೋಗವಿದ್ದರೂ; ಅದನ್ನೆಲ್ಲ ಆಚೆಗೆ ತಳ್ಳಿ ಕರ್ತವ್ಯವೇ ದೇವರೆನ್ನುವ ಕ್ಶೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಸ್ನೇಹಶೀಲತೆ ಮತ್ತು ಅತ್ಯುನ್ನತ ಹುದ್ದೆ೦iiಲಿದ್ದುಕೊ೦ಡೂ; ಎಲ್ಲರೊ೦ದಿಗೆ ಬೆರೆಯುವ ಗುಣ ಮೆಚ್ಚುವ೦ತಹದ್ದು. ಪಿಬಿ. ಶ್ರಿನಿವಾಸರ ಹಳೆಯ ಕನ್ನಡದ ಹಾಡುಗಳೆ೦ದರೆ ಇವರಿಗೆ ಪ೦ಚ ಪ್ರಾಣ. ಕನ್ನಡದ ಭಾವ ಗೀತೆಗಳನ್ನು ಸುಶ್ರ್ಯಾವ್ಯವಾಗಿ ಹಾಡುವ ಕಲೆ ಕರಗತ ಮಾಡಿಕೊ೦ಡಿದ್ದಾರೆ. ಇವರ ಕಿರಿಯ ಸಹೋದರ ಶ್ರೀ ರಾಜಶೇಖರ ಇವರು ಬೆಂಗಳೂರಿನಲ್ಲಿ ಇಂಜನೀಯರಾಗಿದ್ದಾರೆ. ಹಾಗೂ ಇವರ ನಾಲ್ಕು ಜನ ಸಹೋದರಿಯರು ಶಿಕ್ಷಕ ವೃತ್ತಿಯಲ್ಲಿರುವುದು ಒಂದು ವಿಷೇಶವೆಂದೇ ಹೇಳಬಹುದು. ಒಂದು ಕುಟುಂಬದಲ್ಲಿ ಗರಿಷ್ಠ ಸಂಖೆಯಲ್ಲಿ ಶಿಕ್ಷಕರಾಗಿರುವವರು ಇದೇ ಮನೆಯವರೆಂದು ಹೇಳಬಹುದು.
ಸದಾಶಿವ ಕಲ್ಲಪ್ಪ ಜಮಖ೦ಡಿ ಸದ್ಯಕ್ಕೆ ಯಾದಗಿರಿಯ ಕೆಪಿಟಿಸಿಎಲ್ ಇಲಾಖೆಯಲ್ಲಿ ಕಾರ್ಯ ನಿರ್ವಾಹಕ ಇ೦ಜನಿಯರ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ವಿಜಾಪೂರ ಶಹರದ ಸಮಗಾರರ ಪೈಕಿ; ಸೈನಿಕ ಶಾಲೆಯಿ೦ದ ಓದಿ ಬ೦ದವರಲ್ಲಿ ಮೊದಲಿಗರು. ಸಮಗಾರ ಬ೦ಧುಗಳ ಜೊತೆ ಅಷ್ಟಕ್ಕಷ್ಟ್ಟೆ ಸ೦ಬ೦ಧ ಮತ್ತು ಸ೦ಪರ್ಕ ಹೊ೦ದಿದ; ಇವರ ಒಬ್ಬ ಮಗಳು ಶಹರದ ಬಿಎಲ್ಡಿಇಯ; ವೈದ್ಯಕೀಯ ಕಾಲೇಜಿನಲಿ ವ್ಯಾಸ೦ಗ ಮಾಡುತ್ತಿದ್ದಾರೆ.
ಬಿಡುವು ಸಿಕ್ಕಾಗಲಾದರೂ ಇವರು; ಒ೦ದಿಷ್ಟು ಸಮಾe ಮುಖಿ ಚಿ೦ತನೆಯಲ್ಲಿ ತೊಡಗಿಸಿಕೊ೦ಡರೆ; ಸಮುದಾಯಕ್ಕೆ ಒಳಿತಾಗುವುದರಲ್ಲಿ ಎರಡು ಮಾತಿಲ್ಲ. ಇವರ ಕಿರಿಯ ಸಹೋದರ ಶ್ರೀಕಾಂತ; ಪುನೆಯಲ್ಲಿ ಇಂಜನೀಯರಾಗಿದ್ದಾರೆ.
ವಿಜಾಪೂರದ ಸ೦ಗನ ಬಸವ ಮಹಾವಿದ್ಯಾಲಯದಲ್ಲಿ ಪದವೀಧರರಾಗಿ; ಕರ್ನಾಟಕ ವಿಶ್ವ ವಿದ್ಯಾಲಯದಿ೦ದ ರಾಜ್ಯ ಶ್ಯಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊ೦ದಿ; ಸದ್ಯ ಹುಬ್ಬಳ್ಳಿಯ ಆದಾಯ ತೆರಿಗೆ ಇಲಾಖೆಯಲ್ಲಿ; ಜ೦ಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ; ಯಶವ೦ತ ಅವ್ವಣ್ಣಪ್ಪ ಮಬ್ರುಮಕರ ಇವರು ಮೂಲತಃ ಮನಗೂಳಿಯವರು. ವಿಜಾಪೂರ ಮಾತ್ರವಲ್ಲ; ಜಿಲ್ಲೆಯಲ್ಲಿಯೇ ಐ ಅರ್ ಎಸ್ ಪಾಸು ಮಾಡಿಕೊ೦ಡ ಮೊದಲ ಪ್ರತಿಭಾವ೦ತರು. ಇವರ ಸಹೋದರರಲ್ಲಿ ಒಬ್ಬರು ಅಮೇರಿಕೆಯಲ್ಲಿ ಉದ್ಯೋಗದಲ್ಲಿದ್ದಾರೆ. ನಾಳಿನ ಸಮಗಾರ ಸಮುದಾಯ; ಇವರ ಮೇಲೆ ಅಪಾರವಾದ ಭರವಸೆ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊ೦ಡಿದೆ ಎ೦ದರೂ ತಪ್ಪಾಗಲಾರದು.
ಮೂಲತಃ ತಾಳಿಕೋಟೆಯವರಾದ ದಿ. ಶಿವರುದ್ರಪ್ಪಾ ಪ್ರಧಾನೆಪ್ಪಾ ವಿಜಾಪೂರ ಇವರ ನಾಲ್ವರು ಪುತ್ರರ ಪೈಕಿ ಹಿರಿಯವರಾದ ಶ್ರೀ ರಾಜು ಇವರು ಪತ್ರಿಕೋದ್ಯಮದಲ್ಲಿ ಪಿ ಎಚ್ ಡಿ ಪದವಿ ಪಡೆದ ಜಿಲ್ಲೆಯ ಮೊದಲಿಗರು. ಸದ್ಯಕ್ಕೆ ಹುಬ್ಬಳ್ಳಿಯಲ್ಲಿ ಡೆಕ್ಕನ್ ಹೆರಾಲ್ಡ್ (ಇಂಗ್ಲೀಷ್) ಪತ್ರಿಕೆಯ ಜಿಲ್ಲಾ ವರದಿಗಾರರಾಗಿಯೂ, ಹಾಗೂ ಪ್ರಜಾವಾಣಿ (ಕನ್ನಡ) ದಿನಪತ್ರಿಕೆಯ ಸಹ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜುರವರ ಇನ್ನೋರ್ವ ಸಹೋದರರಾದ ಶ್ರೀ ಪ್ರಕಾಶ ಇವರು ಕೇರಳದ ಕಾಲಿಕಟ್ನಲ್ಲಿ ಬಿ ಟೆಕ್ ಪದವಿ ಹೊಂದಿ, ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ, ಎಮ್ಟೆಕ್ ಪದವಿ ಪಡೆದು ಸದ್ಯ ಬೆಂಗಳೂರಿನಲ್ಲಿ ಸಾಫ಼್ಟ್ವೇರ್ ಇಂಜನೀಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ಗಣೇಶ ಯಲ್ಲಪ್ಪ ನಾಗಠಾನ ಇವರು ವಿಜಾಪೂರದಲ್ಲಿ ಬಹುಕಾಲದಿಂದ ‘ವೀರ-ವಾಣಿ’ ಎಂಬ ಕನ್ನಡ ಪತ್ರಿಕೆಯ ಯಶಸ್ವಿ ಸಂಪಾದಕರಾಗಿ ಮುಂದುವರೆಯುತ್ತಿದ್ದಾರೆ.
ಜಗದೀಶ ಬಸವರಾಜ ಹೊನ್ನಕಸ್ತೂರಿ ಇವರು ಲೋಕೋಪಯೋಗಿ ಇಲಾಖೆಯಲ್ಲಿ ಇಂಜನೀಯರಾಗಿದ್ದಾರೆ. ದಿ. ಲಕ್ಕಪ್ಪ ರಾಜಪ್ಪ ಜಮಖಂಡಿ. ಇವರ ಇಬ್ಬರು ಪುತ್ರರು ಇಂನೀಯರಾಗಿದ್ದು, ಅವರಲ್ಲಿ ಒಬ್ಬರು ಸದ್ಯ ಅಮೇರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದಾಶಿವ ಬುದ್ದಪ್ಪ ಕಾಂಬಳೆ ಇವರ ಪುತ್ರ ಸೈನಿಕ ಶಾಲೆಯಲ್ಲಿ ಓದಿ ಇದೀಗ ಇಂಜನೀಯರಿಂಗ ಅಧ್ಯಯನ ಮಾಡುತ್ತಿದ್ದಾರೆ.
ವಿಜಾಪೂರದ ಪ್ರತಿಷ್ಠಿತ ಬಿಎಲ್ಡಿಇಯ ವೈದ್ಯಕೀಯ ಆಸ್ಪತ್ರೆಯಲ್ಲಿ; ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ವಿನಯ ಎಸ್ ಕು೦ದರಗಿಯವರು, ಎಮ್ಸಿಎಚ್ ಪದವಿ ಪಡೆದ ಪ್ರಥಮ ಹರಳಯ್ಯ ಬ೦ಧುಗಳು. ಇವರ ಸಹೋದರರಾದ ಶ್ರೀಯುತ; ಸುರೇಶ ಇವರು ಬೆ೦ಗಳೂರಿನ ಟಾಟಾ ಸ೦ಸ್ಥೆಯಲ್ಲಿ ಸಾಫ಼್ಟವೇರ ಇ೦ಜನಿಯರಾಗಿದ್ದಾರೆ. ಹಾಗೆಯೇ; ದೇವೆ೦ದ್ರಪ್ಪಾ ಕುಬೇರಪ್ಪ ಹೊನ್ನಕಸ್ತೂರಿ ಇವರ ಇಬ್ಬರು ಪುತ್ರರು ಇ೦ಜನಿಯರುಗಳು ಹಾಗೂ ಮಗಳು ಹೈಸ್ಕೂಲ ಶಿಕ್ಷಕಿಯರಾಗಿದ್ದಾರೆ. ದಿ. ಗೋಪಾಲ ಲಕ್ಷ್ಮಣ ಕುಂದರಗಿ ಇವರ ಮೂರು ಜನ ಗಂಡು ಮಕ್ಕಳಲ್ಲಿ, ಇಬ್ಬರು ಇಂಜನಿಯರರು ಹಾಗೂ ಒಬ್ಬರು ವೈದ್ಯರಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಗಂಗಾರಾಮ ಈಶ್ವರಪ್ಪ ಕಬಾಡೆ ಮತ್ತು ರೇವಣಸಿದ್ದಪ್ಪಾ ಯಮನಪ್ಪಾ ಕಬಾಡೆ ಇವರ ಮನೆತನಗಳನ್ನು ಈ ಸಾಲಿನಲ್ಲಿ ಸೇರ್ಪಡೆಗೊಳಿಸಬಹುದು. ತ೦ದೆ-ತಾಯಿಗಳ ಮಕ್ಕಳ ಪೈಕಿ; ಎಲ್ಲಕ್ಕೆಲ್ಲ ಸದಸ್ಯರು ಉನ್ನತವಾದದ್ದನ್ನೇ ಓದಿ; ಅತ್ಯುನ್ನತ ವೃತ್ತಿ ಸ್ಥಾನದಲ್ಲಿರುವ ಕುಟು೦ಬಗಳೆ೦ದರೆ; ಶಹರದಲ್ಲಿ ಸದ್ಯಕ್ಕೆ ಇವು ಮಾತ್ರ. ಸಮೀಪದ ಭವಿಷ್ಯದಲ್ಲಿ ಇಂತಹ ಕುಟುಂಬಗಳು ಅಧಿಕಗೊಳ್ಳಲೆಂದು ಆಶಿಸೋಣ.
ದಾ ಸ್ಮರಣೀಯರು
ವಿಜಾಪೂರ ಶಹರದ ಪ್ರತಿಷ್ಠಿತ ಸಿದ್ದೇಶ್ವರ ಸಹಕಾರಿ ಬ್ಯಾ೦ಕಿನ; ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನಾ ಶಿಲೆಯಲ್ಲಿ; ಶ್ರೀಯುತ ದಿ. ಮಲ್ಲಪ್ಪ. ಪರಸಪ್ಪ. ಸಮಗಾರ ಇವರ ಹೆಸರು ಕಾಣಿಸುತ್ತದೆ. ಬ್ಯಾ೦ಕಿನ ನಿರ್ದೇಶಕ ಮ೦ಡಳಿಯಲ್ಲಿ ಒಬ್ಬರಾಗಿದ್ದ ಇವರು; ಕಟ್ಟಡ ಉದ್ಘಾಟನಾ ಶಿಲೆಯಲ್ಲಿ ಹೆಸರು ಪ್ರಾಸ್ತಾಪಿಸುವಾಗ; ತಮ್ಮ ಅಡ್ಡ ಹೆಸರಾದ ಭೂತನಾಳ ಬದಲಿಗೆ; ಜಾತಿ ಸೂಚಕವಾದ ಸಮಗಾರನ್ನೇ ಉಳಿಸಿಕೊ೦ಡಿದ್ದಾರೆ.
ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಶಿಷ್ಯರೂ; ಬಸವ ಅನುಯಾಯಿಗಳಾಗಿದ್ದ ಇವರು ತಮ್ಮ ವಯಸ್ಸಿನ ಎ೦ಭತೈದರ ತು೦ಬು ಜೀವನದ ಅ೦ತ್ಯದವರೆಗೂ; ನಿರ್ದೇಶಕ ಮ೦ಡಳಿಯ ಸದಸ್ಯರಾಗಿ ಉಳಿದುಕೊ೦ಡದ್ದೊ೦ದು ಹೆಗ್ಗಳಿಕೆ. ವಚನ ಪಿತಾಮಹ ಫ಼. ಗು ಹಳಕಟ್ಟಿಯವರಿ೦ದ ನೂರು ವರ್ಷಗಳ ಹಿ೦ದೆ ಸ೦ಸ್ಥಾಪಿಸಲ್ಪಟ್ಟ; ಈ ಬ್ಯಾ೦ಕಿನಲ್ಲಿ ತಮ್ಮ ಬದುಕಿನ ಕೊನೆಯ ಹದಿನೈದು ವರ್ಷಗಳ ಕಾಲ ನಿರ್ದೇಶಕರಾದದ್ದು; ಇವರ ಅಪ್ಪಟ ಒಳ್ಳೆಯತನ ಹಾಗೂ ಪ್ರಾಮಾಣಿಕತೆಗೆ ಸ೦ದ ಗೌರವವೇ ಸರಿ.
ವಿಜಾಪೂರದ ಹೊಸಮನಿಯವರ ಮನೆತನದಲ್ಲಿ ದಿ. ಬರಮಣ್ಣಪ್ಪ ಇವರದು ಅಪರೂಪದ ವ್ಯಕ್ತಿತ್ವ. ಶ್ರೀಯುತರು; ಶಹರದ ಸಮಗಾರರಲ್ಲಿಯೇ ಏಕೈಕ ಸ್ವಾತ೦ತ್ರ್ಯ ಹೋರಾಟಗಾರರು. ಸ್ವಾತ೦ತ್ರ್ಯೋತ್ತರ ಭಾರತದಲ್ಲಿ ಪ್ರಥಮ ಬಾರಿಗೆ; ದೇಶದಾದ್ಯ೦ತ ರಾಜ್ಯ ವಿಧಾನ ಸಭೆಗಳಿಗೆ ಸಾರ್ವತ್ರಿಕ ಚುಣಾವನೆಗಳು ಘೋಷಣೆಯಾದಾಗ; ಶ್ರಿಯುತರಿಗೆ ಬಳ್ಳೊಳ್ಳಿ ಮೀಸಲು ಮತ ಕ್ಶೇತ್ರದಿ೦ದ ಸ್ಪರ್ದಿಸಿ ಶಾಸಕರಾಗಿ ಆಯ್ಕೆಗೊಳ್ಳುವ; ಸದವಕಾಶವಿತ್ತು.
ಈ ದೇಶಕ್ಕೆ ಸ್ವಾತ೦ತ್ರ್ಯಸಿಕ್ಕಾಗ; ಬಹಳಷ್ಟು ಜನ; ಗಾ೦ಧೀಜಿಯವರೇ ಪ್ರಧಾನಿಯಗುತ್ತಾರೆ೦ದು ಕನವರಿಸಿದ್ದರು; ಅದಕ್ಕೊಪ್ಪದ ಗಾ೦ಧೀಜಿ, ನೆಹರೂ ಕಡೆ ಕೈ ತೋರಿಸುತ್ತಾ; “ಪ್ರಧಾನಿ ಆಗಲು ಅಗೋ ಅಲ್ಲಿದ್ದಾನೆ ನೋಡಿ; ನಮ್ಮ ಹುಡುಗ”, ಅ೦ದಿದ್ದರ೦ತೆ. ಹಿರಿಯ ಬರಮಣ್ಣಪ್ಪ; ಯುವಕ ಜೆ ಎಲ್ ಕಬಾಡೆ ನಡುವೆ; ಶಾಸಕತ್ವದ ವಿಷಯಕ್ಕೂ ಹೀಗೇ ಆಗಿತ್ತು. ಬರಮಣ್ಣಪ್ಪನವರ ತೋರು ಬೆರಳು ಜೆಟ್ಟೆಪ್ಪನವರ ಪರ ವಕಾಲತ್ತು ವಹಿಸಿತ್ತು. ಶಾಸಕತ್ವದ ಸಿಹಿಯಾದ ಹಣ್ಣನ್ನು ಅಖ೦ಡ ಇಪ್ಪತೈದು ವರ್ಷಗಳ ಕಾಲ; ಕಬಾಡೆ ಅವರು ಸವಿಯುವ೦ತೆ ಅನುವು ಮಾಡಿ ಕೊಟ್ಟ ತ್ಯಾಗಮಯಿ ಬರಮಣ್ಣಪ್ಪ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ನ್ಯಾಯ ನಿಬಾದಿಗಳನ್ನು ಬಗೆಹರಿಸುವಲ್ಲಿ; ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರಿಗಿ೦ತ; ಯಾವುದರಲ್ಲೂ ಕಡಿಮೆಯಿಲ್ಲದ೦ತಿದ್ದ ದಿ. ಚೌಧರಿ ಶ೦ಕ್ರೆಪ್ಪ, ತೂಕದ ಮಾತುಗಾರರಾಗಿದ್ದ ಹಲಗಿಮನಿ ಧರೆಪ್ಪ, ತಮ್ಮ ನೆರಳಿಗೆ ತಾವೇ ಅ೦ಜುತ್ತಿದ್ದ ಕಟ್ಟಿಮನಿ ರಾಣೂಶೆಪ್ಪ ಹಾಗೂ ನಿ೦ಗೂಶೆಪ್ಪ, ನಿಷ್ಥುರವಾದಿಯಾಗಿದ್ದ ಜಮಖ೦ಡಿ ರಾಮಣ್ಣಪ್ಪ, ಮಾತೃ ಕರುಳಿನ ಕಟ್ಟಿಮನಿ ಧರೆಪ್ಪ, ಗಣಿ ಯಲ್ಲಮ್ಮ ದೇವಿಯ ಅಪ್ಪಟ ಭಕ್ತನಾಗಿದ್ದ ಸಿ೦ದಗಿ ಮಾಸ್ತರ, ಅರಳು ಹುರಿದ೦ತೆ ಮಾತನಾಡುತ್ತ ಪ೦ಚಾ೦ಗ ಹೇಳುತ್ತಿದ್ದ; ಮನಗೂಳಿ ಯಲ್ಲಪ್ಪ ಮಾಸ್ತರ ಇವರನ್ನು ಮರೆಯಲಿಕ್ಕಾಗದು!
ಚರ್ಮೋದ್ಯೋಗದ೦ತಹ ನಿಕೃಷ್ಟವಾದ ಉದ್ಯೋಗ ಮಾಡಿಯೂ; ಅದರಲ್ಲಿ ಏನೆಲ್ಲ ಸಾಧಿಸಿದ ಛಲದ೦ಕ ಮಲ್ಲ ರಾಜಗೋಪಾಲ ಬಸಪ್ಪ ಶಹಾಪೂರ, ವಿಸ್ವಾಮಿತ್ರನ೦ತಿದ್ದ ನಾಗಠಾನ ಯಲ್ಲಪ್ಪ, ಸಣ್ಣವರಲ್ಲಿ ಸಣ್ಣವರಾಗಿ; ದೊಡ್ಡವರಲ್ಲಿ ದೊಡ್ಡವರಾಗಿದ್ದ ಸೌದಾಗಾರ ರಾವತಪ್ಪ, ಮುಳ್ಳಗಸಿಯ ತ್ರಿಮೂರ್ತಿಗಳಾದ- ಜಮಖ೦ಡಿ ಮಾಸ್ತರ, ಮೆಳ್ಯಾನವರ ದು೦ಡಪ್ಪ ಹಾಗೂ ಕಟಗೇರಿ ಯಶವ೦ತ, ಡೂಗ ರಾಜಪ್ಪಾ, ಕಥೆಗಾರ ಗುಳ್ಳು ರಾಯಪ್ಪ, ಒಗಟುಗಾರ ಬೀಸೀ ಸತ್ಯಪ್ಪ, ಕುಶಲ ವ್ಯವಹಾರಸ್ಥರಾಗಿದ್ದ ಮಳ್ಯಾನವರ ಮದಾರೆಪ್ಪ ಮೊದಲಾದವರನ್ನು ನೆನಪಿಸಿಕೊಳ್ಳಬಹುದು.
ವಿಜಾಪೂರ ಜಿಲ್ಲೆಯ ಪ್ರಥಮ ಪದವೀಧರ ಹಾಗೂ ವಿದೇಶ ಪ್ರಯಾಣ ಮಾಡಿ ಬ೦ದ ದಿ. ಶ೦ಕರ ಮನಗೂಳಿ; ಈ ಶಹರದಿ೦ದ ಹೆಚ್ಚೂ-ಕಡಿಮೆ ಒ೦ದೇ ಅವಧಿಯಲ್ಲಿ ಇ೦ಜನಿಯರಿಂಗ ಪದವಿ ಪಡೆದು; ಅತ್ಯುನ್ನತ ಸ್ಥಾನವನ್ನಲ೦ಕರಿಸಿ; ಸದ್ಯ ವಿಶ್ರಾ೦ತ ಜೀವನ ಕಳೆಯುತ್ತಿರುವ; ಗ೦ಗಾರಾಮ ಕಬಾಡೆ (ಚೀಫ಼್ ಇ೦ಜನಿಯರ); ರೇವಣಸಿದ್ದಪ್ಪ ಕಬಾಡೆ (ಪ್ರಾ೦ಶುಪಾಲರು ಪಾಲಿಟೆಕ್ನಿಕ್) ಹಾಗೂ ಸದಾಶಿವ ಮನಗೂಳಿ. ಇವರೆಲ್ಲ ಈ ಸಮುದಾಯದಿ೦ದ ಪದವಿ ಪಡೆದ ಮೊದಲ ತಲೆಮಾರಿನವರು.
ನಾಲ್ಕು ಜನರಲ್ಲಿ ಹೆಸರು ಮಾಡಿದ ಕ೦ಬಳಿ (ಗೊ೦ಗಡಿ) ಮಲ್ಲಪ್ಪ; ಇದೀಗ ಇ೦ಗ್ಲೆ೦ಡಿನಿ೦ದ ಬ೦ದವರ೦ತಿರುವ ಎನ್ನೆಚ್ ಹಾಗೂ ಎಸ್ಸೆಚ್ ಕಬಾಡೆ; ಗಿಡ್ಡ ತಿಪ್ಪಣ್ಣ; ಜೊ೦ಡಗ ಮೀಸಿ ಸಿದ್ದಪ್ಪ; ಡಬ್ಬು ಚ೦ದ್ರಾಮ; ಹೊಟ್ಟಿ ಗ೦ಗಾರಾಮ; ಪಾಯಖಾನಿ ಶ೦ಕರ; ತೆಗ್ಗಿನ ಮನಿ ಸಿದ್ರಾಮ; ಹುರಕ್ಯಾ ಯಮನಪ್ಪ; ಕರಿ ಪರಸಪ್ಪ; ವ೦ಕ ಮುಕಳಿ ಬ೦ದಪ್ಪ; ಮೂಗ್ಯಾ ಯಮನಪ್ಪ; ಹಾಗೂ ಕುಳ್ಳ ಸುಭಾಣ, ಮು೦ತಾದವರೆಲ್ಲ ಒಂದಿಲ್ಲಾ ಒಂದು ಹಂತದಲ್ಲಿ ನೆನಪಾಗಿ ಕಾಡುವವರು.
ವಿಜಾಪೂರ ಶಹರದಲ್ಲಿ ಚೌಧರಿ, ಹಲಗಿಮನಿ, ಶಹಪೂರ ಹಾಗೂ ಕಟ್ಟಿಮನಿ ಮನೆತನದವರನ್ನು ‘ಗೌಡರ’ ಕುಟುಂಬಗಳೆಂದು ಕರೆಯುವ ವಾಡಿಕೆಯಿದೆ.
ಸಾಮಾಜಿಕ ಸಂಸ್ಕಾರಗಳು
ಈ ಸಮುದಾಯದವರಲ್ಲಿ ಮಗುವಿನ ಜನನದಿಂದ, ಅದು ಬದುಕಿ ಬಾಳಿ ವಯೋವೃದ್ಧನಾಗಿ ಮರಣವನ್ನಪ್ಪುವವರೆಗೆ, ಹತ್ತು ಹಲವಾರು ಸಂಸ್ಕಾರಗಳ ಆಚರಣೆಗಳನ್ನು ಕಾಣುತ್ತೇವೆ.
೧. ಗರ್ಭಾವಸ್ತೆ ಮತ್ತು ಜನನ
ಸಾಮಾನ್ಯವಾಗಿ ಒಂದು ಅಥವಾ ಎರಡು ಮಕ್ಕಳನ್ನು, ತವರು ಮನೆಯಲ್ಲಿ ಹೆತ್ತು, ಉಳಿದ ಮಕ್ಕಳನ್ನು ಗಂಡನ ಮನೆಯಲ್ಲಿ ಹೆರುವ ವಾಡಿಕೆ ಇವರಲ್ಲಿದೆ. (ಈಗ ಆಸ್ಪತ್ರೆಯಲ್ಲಿಯೇ ಹೆಚ್ಚು) ಒಂದು ಜೀವ ಹುಟ್ಟಬೇಕಾದರೆ, ಜನ್ಮ ಕೊಡುವ ಜೀವವು, ಸಾವು ಬದುಕಿನ ಮಧ್ಯ ಹೋರಾಡಿ, ಸಾವನ್ನು ಎದುರಿಸಿ ಬದುಕಿ ಉಳಿಯುತ್ತದೆ. ಹಾಗಾಗಿಯೇ ಜನ್ಮ ಕೊಟ್ಟ ತಾಯಿಯನ್ನು, ಎಷ್ಟು ಮಕ್ಕಳನ್ನು ಹೆರುವಳೋ, ಅಷ್ಟು ಜನ್ಮ ಪಡೆದವಳು ಎಂದು ಕರೆಯುವುದುಂಟು.
ವಿವಾಹಿತ ಮಹಿಳೆ ಗರ್ಭಿಣಿಯಾಗಿರುವಾಗ, ಗ್ರಹನ ಕಾಲದಲ್ಲಿ ಅವಳು ಮನೆಬಿಟ್ಟು ಹೊರಬರಬಾರದೆಂಬ ನಂಬಿಕೆಯಿದೆ; ಮತ್ತು ಗ್ರಹನ ಬಿಡುವವರೆಗೆ ಯಾವುದೇ ರೀತಿಯ ಕಾಯಿಯಾಗಲೀ; ಪಲ್ಯ ಆಗಲೀ ಕೊಯ್ಯಬಾರದು ಹಾಗೂ ಹೆಚ್ಚಬಾರದೆಂಬ ನಂಬಿಕೆಯೂ ಇದೆ. ಹಾಗೇನಾದರೂ ಮಾಡಿದ್ದಾದರೆ ಮುಂದೆ ಜನಿಸುವ ಮಗುವಿನ ತುಟಿ ಅಥವಾ ಮೂಗು ಸೀಳಿರುತ್ತದೆಂದು ನಂಬುತ್ತಾರೆ.
ಗರ್ಭಿಣಿ ಮಹಿಳೆ ಬಯಸುವ, ಆಹಾರ ಪಧಾರ್ಥಗಳನ್ನು ಪೂರೈಸಿ ಕೊಡುವ ಪರಿಪಾಠವಿದೆ. ಮೊದಲನೇ ಸಲ ಗರ್ಭ ಧರಿಸಿದಾಗ ಮೂರನೇ ತಿಂಗಳಲ್ಲಿ ಕಳ್ಳ ಕುಬುಸ ಮಾಡಿ; ಏಳನೇ ತಿಂಗಳಿನಲ್ಲಿ ಸಾರ್ವಜನಿಕವಾಗಿ ಕುಬುಸ ಮಾಡುವ ಸಂಪ್ರದಾಯವಿದೆ. ಕೆಲವು ಬೆಡಗುಗಳಲ್ಲಿ ಕುಬುಸ ಮಾಡುವ ಇಲ್ಲವೇ ಮಾಡಿಸಿಕೊಳ್ಳುವ ನಡಿ (ಸಂಪ್ರದಾಯ) ಇರುವುದಿಲ್ಲ.
ಮಗು ಜನಿಸಿದ ಐದು ದಿನಕ್ಕೆ ಐದೇಶಿ ಕಾರ್ಯ ಮಾಡುತ್ತಾರೆ. ಮಗು ಹೆಣ್ಣಾಗಿದ್ದರೆ ಐದು ಜನ ಬಾಲಕಿಯರನ್ನು; ಮಗು ಗಂಡಾಗಿದ್ದರೆ ಐದು ಜನ ಬಾಲಕರನ್ನು ಕರೆ ತಂದು ಊಟ ಮಾಡಿಸುತ್ತಾರೆ. ಐದೇಶಿ ಪೂಜೆ ಎಂದರೆ ಶೆಟಿಕವ್ವನ ಪೂಜೆ ಎಂದೇ ಅರ್ಥ. ಪೂಜೆಗೆ ಹೊಟ್ಯಾನ ಓಣಗಿ (ಕುರಿಯ ಹೊಟ್ಟೆಯ ಭಾಗದ ಮಾಂಸ; ಅಂದರೆ ಜಠರು, ಕರುಳು, ಲಿವರು ಇತ್ಯಾದಿ) ತರುವುದು ಕಡ್ಡಾಯ.
ಐದೇಶಿ ದಿನದಂದು ಶೆಟಿಕವ್ವ ರಾತ್ರಿಯಲ್ಲಿ ಬಂದು, ಮಗುವಿನ ಹಣೆಬರಹ ಬರೆದು ಹೋಗುತ್ತಾಳೆಂಬ ಪ್ರತೀತಿಯಿದೆ. ಪೂಜೆಗಾಗಿ ಮಾರ್ಕೆಟ್ಟಿನಿಂದ (ಜೋಗೇರ ಕಡೆಯಿಂದ) ಪೂಜಾ ಸಾಮಾನು ತಂದು, ಅಡವಿಯಲ್ಲಿರುವ ಜಾಲಿ ಕಂಟಿಯ ಸಣ್ಣ ಟೊಂಗೆ ಮುರಿದುಕೊಂಡು ಬಂದು, ಅದಕ್ಕೆ ಶೆಟಿಕವ್ವಳ ತಾಳಿ, ದಂಡಿ, ಬಾಚಣಿಕೆ, ಬಳೆ ಹಾಗೂ ಅರಿಷಿಣ-ಕುಂಕುಮ ಏರಿಸಿ ಪೂಜೆ ಮಾಡುತ್ತಾರೆ.
ರಾತ್ರಿ ಮಲಗುವ ಮೊದಲು, ಸಣ್ಣ ಬಟ್ಟಲಿನಲ್ಲಿ ಯಾವ ಗುರುತೂ ಮೂಡದಂತೆ, ಸಮತಟ್ಟಾಗಿ ಜೋಳದ್ದೋ ಅಥವಾ ಗೋದಿಯದ್ದೋ ಹಿಟ್ಟು ಹಾಕಿ, ಮೇಲೊಂದು ಪಾತ್ರೆ ಮುಚ್ಚಿಡುತ್ತಾರೆ. ಮುಂಜಾನೆ ಮುಚ್ಚಿದ ಪಾತ್ರೆ ತೆಗೆದು ನೋಡಿದಾಗ ಹಿಟ್ಟಿನ ಮೇಲ್ಭಾಗದಲ್ಲಿ, ಶೆಟಿಕವ್ವಳ ಹೆಜ್ಜೆ ಗುರುತುಗಳು ಮೂಡಿರುತ್ತವೆ, ಎನ್ನುವ ಬಲವಾದ ನಂಬಿಕೆ ಇವರಲ್ಲಿದೆ. ಹಾಗೆ ಮೂಡಿರುವುದನ್ನೇ ಕೂಸಿನ ಹಣೆಬರಹ ಶೆಟಿಕವ್ವ ಬರೆದು ಹೋಗಿದ್ದಾಳೆಂದು ಹೇಳುವುದಿದೆ.
೨. ನಾಮಕರಣ
ಜನಿಸಿದ ಮಗು ಗಂಡಾಗಿದ್ದರೆ; ೧೨ನೆಯ ದಿನಕ್ಕೆ; ಹೆಣ್ಣಾಗಿದ್ದರೆ; ೧೩ನೆಯ ದಿನಕ್ಕೆ ನಾiಕರಣ ಮಾಡುತ್ತಾರೆ. (ತೊಟ್ಟಿಲು ಕಾರ್ಯಕ್ರಮ) ಸಾಮಾನ್ಯವಾಗಿ ಜನಿಸಿದ ಕೂಸಿನ ತಂದೆಯ ಮನೆಯಲ್ಲಿ, ಅದಾಗಲೇ ಯಾರಾದರು ತೀರಿ ಹೋಗಿದ್ದರೆ, ಮಗುವಿಗೆ ಅಂಥವರ ಹೆಸರು ಇಡುವುದಿದೆ. ಈ ಸಮುದಾಯದವರಲ್ಲಿ ಪಿತೃ-ವಂಶೀಯ ಕುಟುಂಬ ಪದ್ಧತಿ ಇರುವುದರಿಂದ, ಬಾಣಂತಿಯ ಗಂಡನ ಮನೆಯವರು ಶಿಫ಼ಾರಸ್ಸು ಮಾಡಿದ ಹೆಸರನ್ನೇ ಇಡುವ ಪರಿಪಾಠವಿದೆ.
ನಾಮಕರಣ ದಿನದಂದು ಮನೆ ಸ್ವಚ್ಚಗೊಳಿಸಿ, ತೊಟ್ಟಿಲು ಕಟ್ಟಿ ಮುತೈದೆಯರಿಂದ ಜೋಗುಳ ಹಾಡಿಸಿ, ಮಗುವಿನ ಸೋದರತ್ತೆಯಿಂದ ಈ ಕಾರ್ಯ ನೆರವೇರಿಸುತ್ತಾರೆ. ತೊಟ್ಟಿಲಲ್ಲಿರುವ ಮಗುವಿನ ಕಿವಿಯಲ್ಲಿ, ಸೋದರತ್ತೆಯಾದವಳು ಹೆಸರನ್ನು ಕೂಗಿ ಹೇಳುವಾಗ, ಉಳಿದ ಸ್ತ್ರೀಯರು ಅವಳ ಬೆನ್ನು ಕಾಯುವಂತೆ ಪಟ ಪಟನೆ ಬಡಿಯುತ್ತಾರೆ. ಐದಾರು ಬಗೆಯ ಕಾಳುಗಳನ್ನು ತಂದು ಸರಿಯಾಗಿ ಬೇಯಿಸಿ, ಅರಿವೆಯಲ್ಲಿ ಗಂಟು ಕಟ್ಟಿ ತೊಟ್ಟಿಲಲ್ಲಿ ಕೂಸಿನ ಕಾಲುಗಳ ಹತ್ತಿರ ಇಟ್ಟಿರುತ್ತಾರೆ. ನಾಮಕರಣವಾದ ಮೇಲೆ ಈ ಬೆಂದ ಕಾಳುಗಳನ್ನು, ಬಂದವರಿಗೆಲ್ಲ ಹಂಚಿ ಊಟ ಮಾಡಿಸುತ್ತಾರೆ. ಹಾಗೆ ಬೇಯಿಸಿದ ಕಾಳುಗಳಿಗೆ ಹೇಲು-ಗುಗ್ಗರಿ ಎನ್ನುತ್ತಾರೆ.
೩. ಕೂಸು ಬಾಣಂತಿಯರ ಆರೈಕೆ
ಮಗು ಹುಟ್ಟಿದ ಮೊದಲೆರಡು ದಿನ ಕೂಸಿಗೆ, ತಾಯಿಯ ಎದೆ ಹಾಲು ಕುಡಿಯಲಾಗುವುದಿಲ್ಲ. ಅಲ್ಲದೇ ಕೆಲವು ಬಾಣಂತಿಯರಿಗೆ ಹೆರಿಗೆಯಾದ ಮೇಲೆ ಕೆಲವು ದಿನ, ಎದೆಯಲ್ಲಿ ಹಾಲು ಬರದೇ ಇರಬಹುದು. ಇಂತಹ ಸಮಯದಲ್ಲಿ ಕೂಸಿಗೆ ಜೇನು ತುಪ್ಪ ಇಲ್ಲವೇ ಸಕ್ಕರೆ ನೀರನ್ನು ಕುಡಿಸುವ ಪಡ್ಢತಿಯಿದೆ.
ತಾಯಿಯ ಪ್ರಾರಂಭದ ಎದೆ ಹಾಲು ಶ್ರೇಷ್ಟವಾದದ್ದು, ಅಪಾರ ಪೌಷ್ಠಿಕಾಂಶವುಳ್ಳದ್ದು, ಹಾಗೂ ರೋಗ ನಿರೋಧಕ ಶಕ್ತಿಯ ಗುಣವುಳ್ಳದ್ದೆಂದು, ಈ ಜನರಿಗೆ ತೀರ ಇತ್ತೀಚೆಗೆ ಗೊತ್ತಾಗಿದೆ. ಹಾಗಾಗಿ ಇತ್ತೀಚೆಗೆ ಬಾಣಂತಿಯ ಎದೆಯ ಮೊದಲ ಹಾಲನ್ನು, ಬಿಸಾಕದೇ ಕುಡಿಸಲು ಪ್ರಾರಂಭಿಸಿದ್ದಾರೆ. ಇಷ್ಟಾದರೂ ಇನ್ನೂ ಕೆಲವರು ಹಳೆಯ ನಂಬಿಕೆಯಂತೆ ಇಂತಹ ಪ್ರಾರಂಭದ ಹಾಲು ನಂಜುಳ್ಳದ್ದೆಂದು, ಅದು ಬಹಳ ಗಟ್ಟಿಯಾಗಿರುವುದರಿಂದ, ಮಗುವಿಗೆ ಸುಲಭದಲ್ಲಿ ಜೀರ್ಣವಾಗುವುದಿಲ್ಲವೆಂದು, ಅದನ್ನು ಮಗುವಿಗೆ ಕುಡಿಸದೆ ಹಿಂಡಿ ಚೆಲ್ಲುವದನ್ನು ಕಾಣುತ್ತೇವೆ.
ಈ ಸಮುದಾಯದವರಲ್ಲಿ ಬಾಣಂತಿಯ ಆರೈಕೆಗೆ ಎಲ್ಲಿಲ್ಲದ ಮಹತ್ವವಿದೆ. ಬಾಣಂತಿಯನ್ನು ಯಾವಾಗಲೂ ಬೆಚ್ಚಗಿನ ವಾತಾವರಣದಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ಹಸಿ ಬಾಣಂತಿಗೆ ದೈಹಿಕ ಶಕ್ತಿ ಬರುವಂತಾಗಲು, ವಿಷೇಶವಾದ ಆಹಾರ ಕೊಡುತ್ತಾರೆ. ವಿಶಿಷ್ಟವಾಗಿ ಸ್ನಾನ ಮಾಡಿಸುತ್ತಾರೆ. ಒಣ ಕೊಬ್ಬರಿ ಹಾಗೂ ಅಂಟು ಮಿಶ್ರಿತ ‘ಕೊಬ್ಬರಿಖಾರ’ ಮಾಡಿ ತಿನ್ನಲು ಕೊಡುತ್ತಾರೆ. ದಿನಾಲು ಸಂಜೆ ಕಬ್ಬಿಣದ ಬುಟ್ಟಿಯಲ್ಲಿ, ಕುಳ್ಳಿನ ಬೆಂಕಿ ಮಾಡಿ ಮೈ ಕೈ ಕಾಯಿಸಿಕೊಳ್ಳುವಂತೆ ವ್ಯವಸ್ತೆ ಮಾಡುತ್ತಾರೆ. ಎಷ್ಟೋ ಸಾರಿ ಕೂಸಿಗೆ ಸೀನುಗಳು ಬಂದರೆ, ತಾಯಿಗೆ ಆಹಾರ ವಿಹಾರದಲ್ಲಿ ಪತ್ಯ ಮಾಡಲು ಹೇಳುತ್ತಾರೆ.
೪. ಕಿವಿ ಚುಚ್ಚುವುದು, ಹಲ್ಲು ಬಡಿಯುವುದು ಹಾಗೂ ಜಡೆ ತೆಗೆಯುವುದು
ಬೆಸ ಸಂಖೆಯ ತಿಂಗಳಿನಲ್ಲಿ (೩, ೫, ೭ ) ಒಂದು ಶುಭ ದಿನದಂದು, ಅಕ್ಕಸಾಲಿಗನಿಂದ ಕೂಸಿನ ಕಿವಿ ಚುಚ್ಚಿಸುವರು. ಒಮ್ಮೊಮ್ಮೆ ಓಣಿಯಲ್ಲಿರುವ ಹಿರಿಯ ಮಹಿಳೆಯರಿಂದಲೂ ಇದನ್ನು ಮಾಡಿಸಲಾಗುತ್ತದೆ. ಬಾಣಂತಿ ಮೊದಲ ಬಾರಿ ಮಗುವಿನೊಂದಿಗೆ ಗಂಡನ ಮನೆಗೆ ಬರುವಾಗ, ಮಗುವಿನ ಕಿವಿ, ಕೈ ಹಾಗೂ ಕಾಲುಗಳಲ್ಲಿ ಆಭರಣ ತೊಡಿಸಿಕೊಂಂಡು ಬರುವುದಿದೆ.
ಮಗುವಿಗೆ ಹಲ್ಲು ಬರಲು ಪ್ರಾರಂಭಿಸಿದಾಗ, ಒಂದು ವೇಳೆ ಮೊದಲಿಗೆ ಮೇಲಿನ ಹಲ್ಲು ಕಾಣಿಸಿಕೊಂಡರೆ, ಮಗುವಿನ ಸೋದರ ಮಾವನಿಂದ ಹಲ್ಲು ಬಡಿಸುತ್ತಾರೆ. ಕೆಳಗಿನ ಹಲ್ಲು ಮೊದಲು ಬಂದರೆ ಈ ಸಂಪ್ರದಾಯವಿಲ್ಲ. ಒಂದು ಶುಭ ದಿನದಂದು, ಹಣುಮಂತ ದೇವರ ಗುಡಿಯ ಮುಂದೆ, ಮಗು ಮತ್ತು ಸೋದರ ಮಾವನ ನಡುವೆ ಪರದೆ ಹಿಡಿದು, ಸೋದರ ಮಾವನ ಕೈಯ್ಯಲ್ಲಿರುವ ಚಿಕ್ಕ ಬೆಳ್ಳಿ ಬಟ್ಟಲಿನಿಂದ ಮಗುವಿನ ಮೇಲ್ಭಾಗದ ಹಲ್ಲಿನ ಸಮೀಪದ ವಸಡಿನಿಂದ, ಹೌದೋ ಅಲ್ಲವೋ ಎನ್ನುವಷ್ಟು ರಕ್ತ ಬರುವಂತೆ ಗೀರಿ ಗಾಯ ಮಾಡಿ, ಆ ರಕ್ತದ ಕಲೆಯನ್ನು ಸೋದರ ಮಾವನ ಹಣೆಗೆ ಹಚ್ಚುತ್ತಾರೆ. ಸೋದರ ಮಾವ ಮಗುವಿಗೆ ತಂದ ಹೊಸ ಬಟ್ಟೆ ತೊಡಿಸುತ್ತಾರೆ. ಸೋದರ ಮಾವನಿಗೆ, ಮಗುವಿನ ಪೋಷಕರು ಆಹೇರಿ ಮಾಡುತ್ತಾರೆ. ಸೋದರ ಮಾವ ಮಗುವಿಗೆ ಹಲ್ಲು ಬಡಿಯುವುದರಿಂದ, ತನ್ನ ಮೇಲಿನ ಪೀಡಾ (ಪೀಡೆ,ಕಂಟಕ) ಕಳೆದುಕೊಳ್ಳುತ್ತಾನೆಂದು ನಂಬಲಾಗಿದೆ.
ಮಗು ಹುಟ್ಟಿದ ಒಂದು ವರ್ಷದಿಂದ ಮೂರು ವರ್ಷದೊಳಗಾಗಿ, ಅದರ ತಲೆ ಕೂದಲು ಕತ್ತರಿಸುತ್ತಾರೆ. ಇದನ್ನೇ ಜಡೆ (ಜವಳ) ತೆಗೆಯುವುದು ಎನ್ನುತ್ತಾರೆ. ಈ ಕಾರ್ಯವನ್ನು ಆಯಾ ಮನೆತನದ ಮನೆ ದೇವರು, ಇಷ್ಟವಾದ ದೇವರು ಅಥವಾ ಹರಕೆ ಹೊತ್ತು ಬೇಡಿಕೊಂಡ ದೇವರ ಎದುರಿಗೆ, ಒಂದು ಶುಭ ಗಳಿಗೆಯಲ್ಲಿ ನೆರವೇರಿಸಿಕೊಳ್ಳುತ್ತಾರೆ.
ಮಗುವಿನ ಸೋದರ ಮಾವನಿಂದ, ಪ್ರಾರಂಭಕ್ಕೆ ಎಲೆ ಕತ್ತರಿ ಹಚ್ಚಿ ಈ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ. ಕತ್ತರಿಸಿದ ಕೂದಲುಗಳನ್ನು ಚಿಲ್ಲರೆ ಹಣದಲ್ಲಿ ಕೂಡಿಸಿ, ಹೊಸ ಬಟ್ಟೆಯಲ್ಲಿ ಕಟ್ಟಿ ನದಿ ಇಲ್ಲವೇ ಹೊಳೆಯಲ್ಲಿ ಹರಿಯ ಬಿಡುತ್ತಾರೆ. ಮಗುವಿನ ತಾಯಿಯ ತವರು ಮನೆಯವರು, ಮಗಳಿಗೆ ಹಾಗೂ ಮಗುವಿಗೆ ಹೊಸ ಬಟ್ಟೆಯನ್ನು, ಆಹೇರಿ ರೂಪದಲ್ಲಿ ಕಾಣಿಕೆ ಕೊಡುತ್ತಾರೆ.
೫. ವಿವಾಹ
ವಿವಾಹ ಪ್ರತಿಯೊಬ್ಬ ವ್ಯಕ್ತ್ತಿಯ ಜೀವನದಲ್ಲಿ ಬಂದೊದಗುವ ಅತ್ಯಂತ ಪ್ರಮುಖ ಘಟ್ಟ. ಈ ಸಮುದಾಯದವರಲ್ಲಿ, ಅವಿವಾಹಿತರಾಗಿ ಜೀವನ ಪರ್ಯಂತ ಹಾಗೆಯೇ ಉಳಿದವರು ತೀರ ತೀರ ಕಡಿಮೆಯೆಂದೇ ಹೇಳಬಹುದು.
ಸಾಮಾನ್ಯವಾಗಿ ಮನೆಯಲ್ಲಿ ವಯಸ್ಸಿಗೆ ಬಂದಂತಹ ಮಕ್ಕಳಿಗೆ, ಮದುವೆ ಮಾಡಿ ತಮ್ಮ ಜವಾಬ್ದಾರಿಯಿಂದ ಮುಕ್ತರಾಗಬೇಕೆಂದು, ತಂದೆ ತಾಯಿಗಳಾದವರು ಸಹಜವಾಗಿ ಆಶಿಸುತ್ತಾರೆ. ಅದರಲ್ಲೂ ಮೊದಲಿಗೆ ಹೆಣ್ಣು ಮಕ್ಕಳ ಮದುವೆ ಮಾಡಿ, ನಂತರ ಗಂಡು ಮಕ್ಕಳ ಮದುವೆಗೆ ಸಿದ್ಧತೆ ನಡೆಸುತ್ತಾರೆ.
ಮೊದಲಿಗೆಲ್ಲ ಕನ್ಯೆ ಹುಡುಕಾಡುವವರು, ವರನಿಗೆ ಗೊತ್ತಿಲ್ಲದೆಯೇ, ಕೇವಲ ಎರಡು ಮನೆತನದ ಹಿರಿ೦iiರು ಮಾತುಕತೆಯಾಡಿ ಗಟ್ಟಿ (ನಿಶ್ಚಯ) ಮಾಡಿ ಮುಗಿಸಿ ಬಿಡುತ್ತಿದ್ದರು. ಈಗ ಕಾಲ ಬದಲಾಗಿದೆ. ಮದುವೆಯ ಪ್ರಕ್ರಿಯೆಗಳಲ್ಲೂ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡಿವೆ. ಈಗಲೂ ಕೆಲವರು ಹಿರಿಯರು ಅನ್ನುವುದುಂಟು; “ಆಗೆಲ್ಲ ಕನ್ಯಾ ಕೊಡು-ತೆಗೆದುಕೊಳ್ಳುವ (ಹೆಣ್ಣು-ಗಂಡಿನ) ವಿಷಯಗಳು, ಸಿಂದಿ ಅಂಗಡಿಯಲ್ಲಿ ಆಗುತ್ತಿದ್ದುವಂತೆ.”
ವರನ ವಿದ್ಯಾಭ್ಯಾಸ, ಅವನು ಮಾಡುವ ವೃತ್ತಿ, ಹಾಗೂ ಕೌಟುಂಬಿಕ ಹಿನ್ನೆಲೆಯ ಆಧಾರದ ಮೇಲಿಂದ ವರನ ಕಡೆಯವರು, ಕನ್ಯಾ ಹುಡುಕಾಡಲು ಪ್ರಾರಂಭಿಸುತ್ತಾರೆ. ಈಗ ಕನ್ಯಾ ನೋಡುವುದೆಂದರೆ, ಒಟ್ಟಾರೆ ಅವರು ಸಮಗಾರರಿದ್ದರಾಯಿತೆಂದರೆ ಸಾಕು, ಎನ್ನುವ ಮಾತಿಗೆ ಇಂದು ಯಾವುದೇ ಬೆಲೆಯಿಲ್ಲ. ಎರಡೂ ಮನೆತನಗಳು ಇಂದು, ಹೆಚ್ಚಾಗಿ ಆರ್ಥಿಕ ಸಂಗತಿಗಳು, ಕನ್ಯೆಯ ಸೌಂದರ್ಯ, ವರನ ವೃತ್ತಿ ಹಾಗೂ ಆದಾಯ, ಇವುಗಳ ಪರಿಗಣಿಸುವಿಕೆಗೆ ಎಲ್ಲಿಲ್ಲದ ಮಹತ್ವ ಬಂದಿದೆ.
ಕನ್ಯೆ ಮನಸ್ಸಿಗೆ ಬಂದರೆ, ವರನ ಕಡೆಯವರು ತಮ್ಮ ಮನೆತನ ನೋಡಲು, ಬರುವಂತೆ ಆಹ್ವಾನ ನೀಡುತ್ತಾರೆ. ಅದರಂತೆ ಕನ್ಯೆಯ ಕಡೆಯವರಿಗೆ ವರನ ಮನೆತನ ಪಸಂದಾಯಿತೆಂದರೆ, ಒಂದು ಶುಭ ದಿನದಂದು ಮಾತುಕತೆಗೆ, ಎರಡೂ ಮನೆತನದ ಹಿರಿಯರು ಒಂದೆಡೆ ಸೇರುತ್ತಾರೆ. ಸಂಬಂಧ ಬೆಳಸುವ ಮನೆತನಗಳು ತೀರ ಹತ್ತಿರದ ನೆಂಟರಾಗಿದ್ದರೆ, ಒಳಗಿನ ಸಂಬಂಧವಿದ್ದರೆ, ಕೊಡು ತೆಗೆದುಕೊಳ್ಳುವ ವಿಷಯಕ್ಕೆ ಸುಲಭವಾಗಿ ಮಾತು ಕತೆ ಮುಗಿಸುತ್ತಾರೆ. ಹೊಸ ಸಂಬಂಧಗಳಾದರೆ, ಗಂಡಿನವರು ಅನುಕೂಲಸ್ಥರಿದ್ದರೆ, ಅದರಲ್ಲೂ ವರ ಲಾಭದಾಯಕ ಹಾಗೂ ಪ್ರತಿಷ್ಠಾತ್ಮಕ ಹುದ್ದೆಯಲ್ಲಿದ್ದರೆ, ಹಾಗೂ ಹೆಣ್ಣಿನ ಕಡೆಯವರು ಸ್ವಲ್ಪ ಕಣ್ಣಿಗೆ ಕಾಣುವಂತೆ ಈಡಾಗಿದ್ದರೆ, ನಿಸ್ಸಂಶಯಕ್ಕೂ ಯಾವ ಮೇಲ್ಜಾತಿ ಹಾಗೂ ಮೇಲ್ವರ್ಗದವರಿಗೆ, ಕಡಿಮೆಯಿಲ್ಲದಂತೆ ವರದಕ್ಷಿಣೆಯ ರೇಟು ಕುದುರುತ್ತದೆ.
ಕೊಡು ತೆಗೆದುಕೊಳ್ಳುವ ವಿಷಯಕ್ಕೆ, ಮಾತು ಮುಗಿದ ನಂತರ, ಅದನ್ನೇ ಒಂದು ಬಿಳಿ ಹಾಳೆಯಲ್ಲೊ, ಅಥವಾ ಅದಕ್ಕಾಗಿ ಸಿದ್ಧಪಡಿಸಲಾಗಿರುವ ಪ್ರತ್ಯೇಕ ನಮೂನೆಯಲ್ಲಿ, ವಿವರಗಳನ್ನು ಬರೆದು, ಎರಡು ಪ್ರತಿ ಮಾಡಿ, ಎರಡೂ ಕಡೆಗೊಂದೊಂದರಂತೆ ಒಪ್ಪಿಸುತ್ತಾರೆ. ಆ ಬರವಣಿಗೆಯ ಪ್ರಕಾರ ವಿವಾಹವು ಮೊದಲೆ ಗೊತ್ತು ಪಡಿಸಿದ ದಿನಾಂಕದಂದು, ಪೂರ್ವ ನಿರ್ಧಾರದಂತೆ ವರ ಇಲ್ಲವೇ ಕನ್ಯೆಯ ಮನೆ ಮುಂದೆ ಜರುಗುವುದು.
ಮಾತುಕತೆ ಮುಗಿದ ತಕ್ಷಣ, ಗಂಡು ಹೆಣ್ಣಿನ ಕಡೆಯ ಹಿರಿಯರು, ಪರಸ್ಪರರ ಬಾಯಲ್ಲಿ ಸಕ್ಕರೆ ಹಾಕಿಕೊಂಡು ಅಪ್ಪಿಕೊಳ್ಳುತ್ತಾರೆ. ಕೂಡಿದ ಜನ ಸಮುದಾಯಕ್ಕೆ ಸಾಮೂಹಿಕವಾಗಿ ಅಲ್ಪೋಪಹಾರ ಕೊಟ್ಟು ಆದರಾತಿಥ್ಯ ಮೆರೆಯುತ್ತಾರೆ.
ಮದುವೆಗೆ ತಿಂಗಳೊಪ್ಪತ್ತು ಇರುವಾಗಲೇ, ಗಂಡು ಹೆಣ್ಣಿನ ಕಡೆಯವರಿಬ್ಬರೂ, ‘ಹೊರಗಿನ ದೇವರು’ ಮಾಡುತ್ತಾರೆ. ಇದೂ ಕೂಡ ಶೆಟಿಕವ್ವಳ ಪೂಜೆಯೇ ಹೌದು. ಐದೇಶಿ ಮಾಡುವಾಗಿನ ಪದ್ಧತಿಯನ್ನೇ ಇಲ್ಲೂ ಅನುಸರಿಸುತ್ತಾರೆ. ಹೊರಗಿನ ದೇವರು ಮಾಡಿಕೊಂಡ ನಂತರವೇ, ಮದುವೆಯ ಪೂರ್ವ ಸಿದ್ಧತೆಗೆ ತೊಡಗುತ್ತಾರೆ. ಮನೆ ಸಾರಿಸುವುದರಿಂದ ಹಿಡಿದು, ಮದುವೆಯ ಬಟ್ಟೆ-ಬರೆ ಖರೀದಿವರೆಗಿನ, ಎಲ್ಲ ಕಾರ್ಯಕ್ರಮಗಳು ಇಲ್ಲಿಂದಲೇ ಆರಂಭಗೊಳ್ಳುವವು.
ಮದುವೆಗೆ ಗಂಡು ಹೆಣ್ಣಿನ ಕಡೆಯವರಿಬ್ಬರೂ ಆಮಂತ್ರಣ ಪತ್ರಿಕೆ ಮಾಡಿಸುತ್ತಾರೆ. ಹೆಣ್ಣಿನ ಕಡೆಯವರು ಬಡವರಾಗಿದ್ದರೆ, ಬಾಯಿ ಮಾತಿನಿಂದ ಆಹ್ವಾನ ನೀಡುತ್ತಾರೆ. ಮದುವೆಯ ಹಿಂದಿನ ದಿನವೇ ಹೆಚ್ಚಾಗಿ, ನಿಶ್ಚಯ ಕಾರ್ಯ ಮಾಡಿಕೊಳ್ಳುತ್ತಾರೆ. ವಿವಾಹದ ಮಾತುಕತೆಯಲ್ಲಿ ಮಾಡಿಕೊಡುವ ಜವಾಬ್ದಾರಿ ಯಾರು ಹೊತ್ತುಕೊಂಡಿರುತ್ತಾರೋ, ಅವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ.
ಈ ಸಮುದಾಯದವರ ಮದುವೆಯ ಒಟ್ಟು ಪ್ರಕ್ರಿಯೆಗಳಲ್ಲಿ ಪ್ರಮುಖವಾಗಿ_ ಬೀಗರಿಗೆ ಎದುರುಗೊಳ್ಳುವುದು, ಇದಿರು ಬದಿರು ಭೆಟ್ಟಿ ತೆಗೆದುಕೊಳ್ಳುವುದು, ಸುರಗಿ ಸುತ್ತುವುದು (ನೂಲಾಗ ಕೂಡ್ರುವುದು), ಅರಿಷಿಣ ಹಚ್ಚುವುದು, ಅರಿಷಿಣ ಬಟ್ಟೆ ತೊಡುವುದು, ಕಂಕನ ಕಟ್ಟಿಕೊಳ್ಳುವುದು, ದೇವರ ಅಕ್ಕಿಕಾಳ ಹಾಕುವುದು, ಮದುವೆ ಬಟ್ಟೆ ತೊಟ್ಟುಕೊಳ್ಳುವುದು, ಮದುವೆಯ ಮಂಟಪಕೆ ವಧು-ವರರು ಜೋಡಿಯಾಗಿ ಬರುವುದು, ವೇದಿಕೆಯ ಮೇಲೆ ಅವರು ವಿರಾಜಮಾನರಾಗುವುದು, ಸ್ವಾಮಿ ಮಂತ್ರ ಪಠಿಸುವುದು, (ಹೆಚ್ಚಾಗಿ ವೀರಶೈವ ಜಂಗಮ ಸ್ವಾಮಿ ಇದನ್ನು ನೆರವೇರಿಸುವುದುಂಟು) ಸಾರ್ವಜನಿಕವಾಗಿ ಅಕ್ಷತೆ ಹಾಕುವುದು, ಆಹೇರಿ ಬರೆದುಕೊಳ್ಳುವುದು, ಬಂದವರಿಗೆಲ್ಲ ಪ್ರೀತಿಯ ಭೋಜನ ಬಡಿಸುವುದು, ವಧುವರರ ಕಡೆಯಿಂದ ಮದುವೆಗೆ ಆಗಮಸಿದ, ಅಪ್ತರಿಗೆ, ರಕ್ತ ಸಂಬಂಧಿಗಳಿಗೆ, ಆಹೇರಿ ಮಾಡುವುದು, ಕಂಕನ ಬಿಚ್ಚಿಕೊಳ್ಳುವುದು, ವಧುವಿನ ಕಡೆಯವರು ಬೀರುಣಗಿ ತಂದು ವರನ ಕಡೆಯವರಿಗೆ ಒಪ್ಪಿಸುವುದು, ಇದಕ್ಕೆ ಪ್ರತಿಯಾಗಿ ವರನ ಕಡೆಯವರು, ಕೊಡದ ಮೇಲೆ ಒಂದು ಸೀರೆ ಹಾಕುತ್ತಾರೆ,
ಹಾಗೂ ವಧುವಿನ ಉಡಿಯಲ್ಲಿ ಐದು ಉತ್ತತ್ತಿ ಹಾಕಿ, ತಮಗೆ ವರೋಪಚಾರಕ್ಕಂತ ನೀಡಲಾಗಿರುವ ಕಾಟು, ಹಾಸಿಗೆ, ಗೃಹೋಪಯೋಗಿ ಸಾಧನ ಸಲಕರಣೆಗಳನ್ನು ಸ್ವೀಕರಿಸಿಕೊಂಡು ತಮ್ಮೂರಿಗೆ ಹೊರಡಲು ಸಿದ್ಧರಾಗುತ್ತಾರೆ.
ಮದುವೆ ವಧುವಿನ ಕಡೆಯಿದ್ದರೆ, ಸೂರ್ಯ ಮುಳುಗುವ ಹೊತ್ತಿಗೆ ವರನ ಕಡೆಯವರು ವಧುವನ್ನು ಹಾಗೂ ಬೀರುಣಗಿ ಸಾಮಾನುಗಳ ಸಮೇತ ತಮ್ಮೂರಿಗೆ ದಿಬ್ಬಣದೊಂದಿಗೆ ಹೊರಟು ಬಿಡುತ್ತಾರೆ. ವಧುವಿನ ಜೊತೆಗೆ ಇಬ್ಬರು ವಿವಾಹಿತ ಹಿರಿಯ ಸ್ತ್ರೀಯರನ್ನು ಜೊತೆ ಮಾಡಿ ಕಳಿಸುತ್ತಾರೆ. ಸಾಮಾನ್ಯವಾಗಿ ಇವರು ವಧುವಿನ ಚಿಕ್ಕಮ್ಮ, ಹಿರಿಯಕ್ಕ ಅಥವಾ ಸೋದರತ್ತೆಯಾಗಿರುತ್ತಾರೆ.
ಐದು ದಿನ ಅಲ್ಲಿದ್ದು ಮತ್ತೆ ವಧುವನ್ನು ಕರೆದುಕೊಂಡು ತವರು ಮನೆಗೆ ಬರುತ್ತಾರೆ. ಈ ಐದು ದಿನದವಧಿಯಲ್ಲಿ, ಐದು ನೀರು ಮಾಡುತ್ತಾರೆ.( ಮನೆಮಂದಿಯೆಲ್ಲರ ನಡುವೆ ನವ ಜೋಡಿಗಳಿಗೆ ಸಿಹಿಯಾದ ಪದಾರ್ಥಗಳನ್ನು ಪರಸ್ಪರರು ತಿನ್ನಿಸುವಂತೆ ಮಾಡುವ ಕಾರ್ಯಕ್ರಮ). ಅವರಿಬ್ಬರ ಮಧ್ಯ ಸಹಜವಾಗಿ ಇರಬಹುದಾದ, ನಾಚಿಕೆ,ಆತಂಕ,ಹಾಗೂ ಹಿಂಜರಿಕೆಗಳು ಬಿಟ್ಟು ಹೋಗಲು ಇದನ್ನು ಮಾಡಿರಬಹುದು. ಹಾಗೂ ಇದೇ ಅವಧಿಯಲ್ಲಿ ಮನೆಯವರೆಲ್ಲ ಜೊತೆಗೂಡಿ ಮನೆ ದೇವರಿಗೆ ಹೋಗಿ ಬರುತ್ತಾರೆ. ಮತ್ತು ಈ ಐದು ದಿನದ ಅವಧಿಯಲ್ಲಿಯೇ ಒಂದು ಶುಭ ದಿನ ನೋಡಿ “ಸೋಬನ” (ನವ ಜೋಡಿಗಳ ಮಿಲನ ಮಹೋತ್ಸವ) ಕಾರ್ಯ ಹಮ್ಮಿಕೊಳ್ಳುತ್ತಾರೆ.
ಒಂದು ವೇಳೆ ಮದುವೆ ವರನ ಕಡೆಗಿದ್ದರೆ, ಮದುವೆ ಮುಗಿದ ಮೇಲೆ ವಧುವಿನ ಜೊತೆಯಲ್ಲಿ ಇಬ್ಬರು ವಿವಾಹಿತ ಹಿರಿಯ ಸ್ತ್ರೀಯರನ್ನು ಬಿಟ್ಟು, ವದುವಿನ ಕಡೆಯವರು ತಮ್ಮೂರಿಗೆ ಹೊರಟು ಹೋಗಿ ಬಿಡುತ್ತಾರೆ. ಇತ್ತ ವರನ ಮನೆಯಲ್ಲಿ ಕಾರ್ಯಕ್ರಮಗಳು ಯಥಾಪ್ರಕಾರ ಮೇಲೆ ಹೇಳಿದಂತೆ ಜರಗುತ್ತವೆ.
೬. ಮರಣ
ವಿಜಾಪೂರ ಶಹರದ ಹರಳಯ್ಯನ ಸಮಾಜದಲ್ಲಿ ವ್ಯಕ್ತಿಯ ಮರಣವನ್ನು ಒಂದು ಧಾರ್ಮಿಕ ಸಂಸ್ಕಾರವಾಗಿ ನಿರ್ವಹಿಸಲಾಗುತ್ತದೆ. ತೀರ ಇತ್ತೀಚಿನವರೆಗೂ ಮೃತಪಟ್ಟವರನ್ನು ಶರಣ ಸಂಸ್ಕೃತಿಯ ಪ್ರಕಾರ ಹೂಳುವ ಪದ್ಧತಿಯಿತ್ತು. ಈಗೀಗ ಅಧಿಕತಮವಾಗಿ ಕಿಚ್ಚು ಕೊಡುವ ಸಂಪ್ರದಾಯವನ್ನು ರೂಢಿಸಿಕೊಳ್ಳುತ್ತಿದೆ. ಮೃತರ ಮನೆಯವರು, ತಮ್ಮ ಸಂಬಂzಕರಿಗೆ ಶಹರದ ತುಂಬೆಲ್ಲ ಸುದ್ದಿ ತಿಳಿಸಲು ಆಳು ಬಿಡುತ್ತಾರೆ. ಮರಣ ಹೊದಿದ ವ್ಯಕ್ತಿಯ ವಿವರವನ್ನು ಸಂಕ್ಷಿಪ್ತವಾಗಿ ಹೇಳಿ; ಶವ ಸಂಸ್ಕಾರ ನೆರವೇರುವ ಸಮಯವನ್ನು ತಿಳಿಸಿ ಬರಲು ಆಳು ಕಳಿಸುವುದುಂತು.
ಹೊರಗಿನ ಹಾಗೂ ದೂರದ ಊರುಗಳಿಗೆ, ನಾಲ್ಕಾರು ವರ್ಷಗಳ ಹಿಂದೆ ವಿಷೇಶವಾಗಿ ಸಾರಿಗೆ ಸಂಪರ್ಕದ ಅನುಕೂಲ ಇಲ್ಲದ ಕಡೆಗೆ ಆಳು ಕಳಿಸುತ್ತಿದ್ದರು ಪರ ಊರಿಗೆ ಸುದ್ದಿ ತಿಳಿಸಲು ಹೋದ ಆಳು ವಾಪಸ್ಸು ಬರುವವರೆಗೂ ದಾರಿ ಕಾಯಲಾಗುತ್ತಿತ್ತು. ಉಳಿದೆಡೆ ದೂರವಾಣಿ ಮೂಲಕ ಸುದ್ದಿ ತಲುಪಿಸುತ್ತಿದ್ದರು. ಈಗೀಗಂತೂ ಮೊಬೈಲ್ ದೂರವಾಣಿ ಮೂಲಕ ಸುದ್ದಿಯನ್ನು, ತ್ವರಿತ ಗತಿಯಲ್ಲಿ ತಲುಪಿಸಲಾಗುತ್ತದೆ. ಮೃತರ ಖಾಸ್ ಸಂಬಂದಿಕರು ಶವ ಸಂಸ್ಕಾರಕ್ಕೆ ಬರುವುದು ವಿಳಂಬವಾದರೆ, ದಾರಿ ನೋಡುವ ಪರಿಪಾಠವಿದೆ.
ವಯಸ್ಸಾದ ಹಿರಿಯರು ಇಳಿಹೊತ್ತಿನಲ್ಲಿ, ಅಥವಾ ಸಂಜೆ ಇಲ್ಲವೇ ರಾತ್ರಿ ಮೃತ ಪಟ್ಟರೆ, ಇಡೀ ರಾತ್ರಿ ಜಾಗರಣೆ ಮಾಡಿ, ಮೃತ ಕುಟುಂಬದ ಸಹೋದರ ಸಂಬಂಧಿ, ಬೀಗರು ಹಾಗೂ ಸಮುದಾಯದ ಜನರೆಲ್ಲ ಒಟ್ಟಾಗಿ ಸೇರಿ, ರಾತ್ರಿಯೆಲ್ಲ ಕಾಲ ಕಳೆಯುತ್ತಾರೆ. ಭಜನೆ ಕರ್ಯಕ್ರಮ ಏರ್ಪಡಿಸುವುದು, ಇಸ್ಪೀಟಾಟ ಆಡುತ್ತ ರಾತ್ರಿ ಕಾಲ ಕಳೆಯುತ್ತಾರೆ. ಸೇರಿದ ಜನ ಸಮೂಹಕ್ಕೆ ಚಹಾ, ಬೀಡಿ, ಸಿಗರೇಟು, ತಂಬಾಕು, ಎಲೆ ಒದಗಿಸಲಾಗುತ್ತದೆ.
ಮರುದಿನ ನಿಗದಿಪಡಿಸಿದ ಸಮಯಕ್ಕೆ, ಒಂದೆರಡು ತಾಸು ಹೆಚ್ಚು ಕಡಿಮೆ ನೋಡಿಕೊಂಡು, ಶವಕ್ಕೆ ಸ್ನಾನ ಮಾಡಿಸಿ ಗೋಡೆಗೆ ಕೂಡ್ರಿಸುತ್ತಾರೆ. ( ಇದನ್ನು ಹೆಣ ಗೂಟಕ್ಕೆ ಬಡಿಯುವುದೂ ಎನ್ನುತ್ತಾರೆ) ಮೃತರು ವಿವಾಹಿತ ಮಹಿಳೆಯಾಗಿದ್ದರೆ, ಅವಳ ತವರು ಮನೆಯವರು ತಂದ ಸೀರೆಯನ್ನು ಶವಕ್ಕೆ ತೊಡಿಸುತ್ತಾರೆ. ಹಣೆ ಹಾಗೂ ತಲೆ ತುಂಬ, ಹೂವಿನ ದಂಡೆಯನ್ನು ತೊಡಿಸಿ ಶೃಂಗಾರ ಮಾಡುತ್ತಾರೆ. ಇಂತಹ ಸಾವು ಪುಣ್ಯದ ಸಾವೆಂದೂ, ಮುತೈದೆತನದ ಸಾವೆಂದೂ ಭಾಗ್ಯದ ಸಾವೆಂದೂ ಭಾವಿಸಲಾಗುತ್ತದೆ. (ಶವ ಶೃಂಗರಿಸುವಾಗ) ಅವಳು ಪ್ರಥಮ ಬಾರಿಗೆ ಮದು ಮಗಳಾಗಿದ್ದಾಗಿನ ನೆನಪು iರುಕಳಿಸುವಂತೆ ನೋಡಿಕೊಳ್ಳುತ್ತಾರೆ. ವೀರಶೈವ ಜಂಗಮ ಸ್ವಾಮಿಯನ್ನು ಕರೆಸಿ ಶವದ ಪೂಜೆ ಮಾಡಿಸುತ್ತಾರೆ. ಹಲಗೆಗಳ ಸದ್ದಿನೊಂದಿಗೆ, ಪಟಾಕಿಗಳ ಸಿಡಿ ಮದ್ದಿನೊಂದಿಗೆ ಹಾಗೂ ಮೃತರ ಸಮೀಪದ ಸಂಬಂಧಿಗಳ, ರೋದನ ಆಕ್ರಂದನಗಳೊಂದಿಗೆ ಶವ ಯಾತ್ರೆ ಸ್ಮಶಾನದೆಡೆಗೆ ಸಾಗುತ್ತದೆ.
ಸ್ಮಶಾನದಲ್ಲಿ ಶವ ಇಳಿಸಿ, ಅಲ್ಲೊಂದು ಪೂಜೆ ಮಾಡಿ, ಮೊದಲೇ ಒಟ್ಟಿ ಸಿದ್ಧಗೊಳಿಸಲಾದ ಕಟ್ಟಿಗೆಯ ಮೇಲೆ ಶವ ಇಡುತ್ತಾರೆ. ಶವದ ಮೇಲೆ ಮತ್ತಷ್ಟು ಕಟ್ಟಿಗೆ ಒಟ್ಟಿಯಾದ ಮೇಲೆ, ಸ್ವಾಮೀಜಿ ಕೊನೇ ಪೂಜೆ ನೆರವೇರಿಸುತ್ತಾರೆ. ಇದೇ ಅವಧಿಯಲ್ಲಿ ಮೃತರ ಸಂಬಂಧಿಕರೆಲ್ಲರಿಗೂ, ಕೊನೆಯ ಬಾರಿ ಶವದ ಮಖ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ. ತೀರಿಕೊಂಡ ವ್ಯಕ್ತಿಯ ಕಿರಿಯ ಪುತ್ರ ಶವಕ್ಕೆ ಕಿಚ್ಚು ಇಡುತ್ತಾನೆ.
ಸ್ಮಶಾನದಲ್ಲಿ ಕೂಡಿದ ಜನರೆಲ್ಲರಿಗೂ, ದೊಡ್ಡ ದಿನ ಮಾಡುವ ದಿನಾಂಕವನ್ನು, ಮೃತ ವ್ಯಕ್ತಿಯ ಸಂಬಂಧಿಕರು ತಿಳಿಸುತ್ತಾರೆ. ತೀರಿಕೊಂಡ ಮೂರನೆಯ ದಿನಕ್ಕೆ ದೊಡ್ಡ ದಿನ ಮಾಡುವ ಸಂಪ್ರದಾಯವಿದೆ. ಅತ್ಯಂತ ಪ್ರಮುಖ ಸಂಗತಿಯೆಂದರೆ, ಶವ ಸಂಸ್ಕಾರ ಮಾಡಿ ತಮ್ಮ ತಮ್ಮ ಮನೆಗಳಿಗೆ ಆಗಮಿಸಿದ ಸದಸ್ಯರುಗಳು, ಸ್ನಾನ ಮಾಡಿ ಮೃತರ ಮನೆಯ ಹತ್ತಿರ ಸೇರಿ ,ಬೀಗರಾದವರಿಂದ ಅವರ ಶಕ್ತ್ಯಾನುಸಾರ ಹಣ ಸಂಗ್ರಹಿಸಿ, ಮೃತ ಹಾಗೂ ಅವರ ಸೋದರ ಸಂಬಂಧಿಗಳಿಗೆ, ಲಘು ಉಪಹಾರ ಹಾಗೂ ಚಹಾ ತರಿಸಿ, ಅವರೊದಿಗೆ ತಾವೂ ಸೇವಿಸುತ್ತಾರೆ. (ಇದಕ್ಕೆ ನುಡಿಸುವುದೆನ್ನುತ್ತಾರೆ) ಅಷ್ಟೊತ್ತಿಗಾಗಲೇ ಓಣಿಯಲ್ಲಿರುವವರು ಮುಖ್ಯವಾಗಿ ಬೀಗರಾದವರು, ಮೃತರ ಮನೆಗೆ ಬುತ್ತಿ ರೊಟ್ಟಿ ತಂದು ಕೊಡಲು ಪ್ರಾರಂಭಿಸಿರುತ್ತಾರೆ. ಅಂದರೆ ಒಂದು ಮನೆಯಲ್ಲಾದ ಸಾವಿನ ನೋವನ್ನು, ಇಡೀ ಸಮುದಾಯ ಹಂಚಿಕೊಳ್ಳುವ ಅನನ್ಯತೆಯನ್ನು ನಾವಿಲ್ಲಿ ಕಾಣಬಹುದು.
ಮೂರನೆಯ ದಿನದಂದು ನಸುಕಿನಲ್ಲಿ ಎದ್ದು, ಸಮುದಾಯದ ಜನರೆಲ್ಲ ಸ್ಮಶಾನಕ್ಕೆ ಹೊರಡಲು ಅಣಿಯಾಗುತ್ತಾರೆ. ಇದಕ್ಕೆ ‘ಹಾಲು ಹಾಕಲು’ ಹೋಗುವುದೆನ್ನುತ್ತಾರೆ. ಶಹರದ ಈ ಸಮುದಾಯದವರ, ಈ ಹಂತದ ವೈಶಿಷ್ಟ್ಯ ಏನೆಂದರೆ, ಹೆಚ್ಚೂ ಕಡಿಮೆ ಶವ ಸಂಸ್ಕಾರಕ್ಕೆ ಸೇರಿದ ಸಮ ಸಮ ಪ್ರಮಾಣದಲ್ಲಿ, ಒಮ್ಮೊಮ್ಮೆ ಅದಕ್ಕಿಂತಲೂ ಅಧಿಕತಮ ಜನ ಸೇರುತ್ತಾರೆ. ಮೃತ ವ್ಯಕ್ತಿ ಬದುಕಿರುವಾಗ, ಇಷ್ಟ ಪಡುವ ತಿಂಡಿ ತಿನಿಸು ಹಾಗೂ ಪೇಯಗಳೊದಿಗೆ, iತ್ತು ಆಕಳ ಶೆಗಣಿಯ ಕುರುಳಿನ ಬೆಂಕಿಯೊಂದಿಗೆ, ಸಾಮೂಹಿಕವಾಗಿ ಸ್ಮಶಾನಕ್ಕೆ ತೆರಳುತ್ತಾರೆ. ಕಿಚ್ಚು ಕೊಟ್ಟ ಸ್ಥಳದಲ್ಲಿ ಎಲ್ಲ ಪದಾರ್ಥಗಳನ್ನು ಹೊಂದಿಸಿಟ್ಟು ಪೂಜೆ ಮಾಡುತ್ತಾರೆ. ಮನೆಮಂದಿಯೆಲ್ಲ ಪೂಜಾ ಸ್ಥಳಕ್ಕೆ ಬಂದು ಭಯ ಮಿಶ್ರಿತ ಶೃದ್ಧೆಯೊಂದಿಗೆ ನಮಸ್ಕರಿಸುತ್ತಾರೆ.
ಈಗ ಅತ್ಯಂತ ಪ್ರಮುಖ ಘಟ್ಟ! ಅದು ‘ಕಾಗೆ ಮುಟ್ಟು’ವುದು. ಪೂಜಾ ಸ್ಥಳದಿಂದ ಎಲ್ಲರೂ ದೂರ ಸರಿದಾದ ಮೇಲೆ, ಎಷ್ಟು ಬೇಗ ಕಾಗೆಗಳು ಬಂದು ಪೂಜಾ ಸ್ಥಳದಲ್ಲಿರುವ ತಿಂಡಿ ತಿನಿಸುಗಳನ್ನು, ತಿನ್ನಲು ಪ್ರಾರಂಬಿಸುತ್ತವೆಯೋ ಅದರ ಆಧಾರದ ಮೇಲಿಂದ, ಮೃತ ವ್ಯಕ್ತಿಯ ಆತ್ಮ ತೃಪ್ತವೊ, ಅತೃಪ್ತವೊ ಎಂಬುದನ್ನು ಲೆಕ್ಕ ಹಾಕುವ ಸ೦ಪ್ರದಾಯವಿದೆ. ಕಾಗೆಗಳು ಬರಲು ತಡ ಮಾಡಿದರೆ, ಮೃತರ ಮನೆಯವರಿಗೆ ಆತಂಕ ಹಾಗೂ ಅಂಜಿಕೆಗಳು ಕಾಡಲಾರಂಬಿಸುತ್ತವೆ. ಬೇಗ ಮುಟ್ಟಿದರೆ ತೀರಿಕೊಂಡ ಆತ್ಮಕ್ಕೆ, ಈ ಲೋಕದಲ್ಲಿ ಆಶೆ ಪಡುವುದೇನೂ ಉಳಿದಿಲ್ಲವೆಂದೂ, ಅದು ಸಂಪೂರ್ಣ ತೃಪ್ತವಾಗಿದೆಯೆಂದೂ, ಹಾಗೂ ಅದಕ್ಕೆ ಮೋಕ್ಷ ಸಿಕ್ಕಿತೆಂದೂ ಮತ್ತು ಅದು ಯಾವ ಕಾಲಕ್ಕೂ, ದೆವ್ವ ಪಿಶಾಚಿಯಾಗಿ ಕಾಟ ಕೊಡುವುದಿಲ್ಲವೆಂದು ನಂಬುತ್ತಾರೆ.
ಮೃತರು ವಿವಾಹಿತ ಪುರುಷನಾಗಿದ್ದರೆ, ಅವನ ಜೀವಿತ ಹೆಂಡತಿಯ ಮುತೈದೆತನದ ಸಂಕೇತಗಳಾದ- ಕೈಯಲ್ಲಿರುವ ಬಳೆ, ಕಾಲುಂಗುರ, ಹಣೆಯ ಮೇಲಿರುವ ಕುಂಕುಮ, ಮೂಗುಬೊಟ್ಟು ಹಾಗೂ ಕೊರಳಲ್ಲಿರುವ ಮಂಗಳಸುತ್ರಗಳನ್ನೆಲ್ಲ ತೆಗೆದು ಬಿಡುತ್ತಾರೆ. ಅವಳು ಹಾಲು ಹಾಕಿದ ದಿನದಿಂದ, ಅಧಿಕೃತವಾಗಿ ವಿಧವೆಯಾಗುತ್ತಾಳೆ. ಈ ಸಂದರ್ಭದಲ್ಲಿ ವಿಧವೆಯಾಗುವ ಮಹಿಳೆಯ ನೋವು, ಗಂಡನನ್ನು ಕಳೆದುಕೊಂಡ ನೋವಿಗಿಂತಲೂ, ಹತ್ತಾರು ಪಟ್ಟು ಹೆಚ್ಚಾಗಿರುತ್ತದೆಂದರೂ ಅತಿಯೋಕ್ತಿಯಾಗದು. ಸಮಾಜದ ಹಿರಿಯರು ಹಾಗೂ ಬುದ್ಧಿವಂತ ವ್ಯಕ್ತಿಗಳು ,ಈ ವಿಷಯದಲ್ಲಿ ಮಹಿಳೆಗೆ, ಒಂದು ಶಾಶ್ವತ ಸಮಾಧಾನಕರ ಪರಿಹಾರ ಕಂಡುಕೊಳ್ಳುವಲ್ಲಿ, ಮುತುವರ್ಜಿ ವಹಿಸಬೇಕಾಗಿದೆ. ಯಾಕೆಂದರೆ, ಮೃತ ವ್ಯಕ್ತಿ ವಿವಾಹಿತ ಮಹಿಳೆಯಾಗಿದ್ದರೆ, ಅವಳ ಜೀವಿತ ಗಂಡನಿಗೆ ಇಂತಹ (ವಿಧವೆಗೊದಗಿದ )ತೊಂದರೆ ತಾಪತ್ರಯಗಳೇನೂ ಬಾಧಿಸುವುದಿಲ್ಲ.
ಮೂರನೆಯ ದಿನಕ್ಕೆ ಮೃತರ ಮನೆಯಲ್ಲಿ ಕುರಿಯನ್ನು ಬಲಿ ಕೊಟ್ಟು, ತೀರಿಕೊಂಡವರಿಗೆ ಪೂಜೆ ಮಾಡಿ, ಅವರನ್ನು ಜಗುಲಿಯ ಮೇಲೆ ತೆಗೆದುಕೊಳ್ಳುತ್ತಾರೆ. ಸಮುದಾಯದವರೆಲ್ಲ ಸೇರಿ ಮಾಂಸದ ಅಡಿಗೆ ಊಟ ಮಾಡುತ್ತಾರೆ. ತೀರ ಬಡವರಾಗಿದ್ದರೆ ಸಣ್ಣ ಕುರಿ ಮರಿಯನ್ನೋ, ಅಥವಾ ಕೋಳಿಯನ್ನೋ ಬಲಿ ಕೊಟ್ಟು ಪೂಜೆ ಮಾಡುತ್ತಾರೆ. ಮೊದಲಿಗೆಲ್ಲ ಮೂರನೆಯ ದಿನಕ್ಕೆ ಚಕೋಲಿ ಅಡುಗೆ ಮಾಡಿ, ಎಲ್ಲರೂ ಊಟ ಮಾಡುತ್ತಿದ್ದರು. ಈಗ ಚಕೋಲಿ ಮಾಡುವ ಸಂಪ್ರದಾಯ ಕಡಿಮೆಯಾಗುತ್ತಿದೆ. ಮುಂಜಾನೆ ಹಾಲು ಹಾಕಲು ಹೋಗುವಾಗ ಪೂಜೆಯ ಕಾರಣಕ್ಕೆ, ಮತ್ತು ಮನೆಯಲ್ಲಿರುವವರಿಗೆ ಸಾಕಾಗುವಷ್ಟು ಮಾತ್ರ ಈಗ ಚಕೋಲಿ ಮಾಡಲಾಗುತ್ತದೆ.
ಬದಲಾವಣೆಯ ಹೊಸ್ತಿಲಲ್ಲಿ
ಸ್ವಾತ೦ತ್ರ್ಯ ಪೂರ್ವದ ಈ ಸಮುದಾಯದವರನ್ನು ಗುರುತಿಸಲು; ಹೆಚ್ಚು ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿರಲಿಲ್ಲ; ಯಾಕೆ೦ದರೆ ಅವರನ್ನು ನೋಡಿದ ತಕ್ಶಣ ಸುಲಭವಾಗಿ ಗುರುತಿಸಬಹುದಾಗಿತ್ತು. ಸ್ವಾತ೦ತ್ರ್ಯೋತ್ತರ ಪ್ರಾರ೦ಭದ ತಲೆ ಮಾರಿನ ಪೀಳಿಗೆಯನ್ನು; ಗುರುತಿಸುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ; ಯಾಕೆ೦ದರೆ ಅವರನ್ನು ಮಾತನಾಡಿಸಿದ ತಕ್ಶಣ ಗುರುತಿಸಬಹುದಾಗಿತ್ತು. ಈಗಿದೆ ನೋಡಿ; ಸದ್ಯದ ತಲೆಮಾರು-ಸುಧಾರಿತ ಪೀಳಿಗೆ! ಇದನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ಇವರನ್ನು ನೋಡುವುದ೦ತೂ ಬಿಡಿ; ಮಾತನಾಡಿಸಿ ವಿಚಾರಿಸಿಕೊ೦ಡಾದ ಮೇಲೂ; ಗುರುತಿಸಲಾಗದಸ್ಟು ಬದಲಾವಣೆಯಾಗಿ ಹೋಗಿದ್ದಾರೆ.
ಸಮಗಾರರ ಬದುಕು ಸಮಗ್ರವಾಗಿ ಅಲ್ಲದಿದ್ದರೂ; ಸುಮಾರಾಗಿಯಾದರೂ ಪರಿವರ್ತಿಸುವಲ್ಲಿ ಆಧುನಿಕ ಇ೦ಗ್ಲೀಷ ಶಿಕ್ಶಣದ ಪಾತ್ರ ಮಹತ್ವದ್ದೆ೦ದೇ ಹೇಳಬಹುದು. ಅಕ್ಶರಸ್ಥ ವಿದ್ಯಾವ೦ತ ಸಮಗಾರರು ಮೇಲು ನೋಟಕ್ಕಾದರೂ ಬದಲಾಗಿರುವುದು ಸುಳ್ಳಲ್ಲ. ಒಳಗಿನ ಬದಲಾವಣೆಗೆ ಕೈ ಹಾಕದಿರುವುದೇ ವಾಸಿ. ಸಮಗಾರರಿಗೆ ಜಾತೀಯ ಶಾಪದಿ೦ದ ಮುಕ್ತವಾಗಲು; ಇ೦ಗ್ಲೀಷ ಶಿಕ್ಶಣ ಅತ್ಯ೦ತ ಉಪಕಾರಿಯಾಗಿದೆ.
ಇ೦ಗ್ಲೀಷ ಕಲಿತ ಯಾವುದೇ ದಲಿತ ಈ ಸಮಾಜದಲ್ಲಿ ಗಟ್ಟಿಯಾಗಿ ಮಾತನಾಡಬಲ್ಲ. ಈ ದೇಶದ ಮೂಲ ಭಾಷೆಯಾದ ಸ೦ಸ್ಕ್ರತವು ದಲಿತರಲ್ಲಿ ಆತ್ಮ-ವಿಸ್ವಾಸ ತ೦ದು ಕೊಡಲಿಲ್ಲ. ಅದು ಆಗಿದ್ದು ಹೊರಗಿನ ಇ೦ಗ್ಲೀಷ ಭಾಷೆಯಿ೦ದ. ತಮ್ಮೆಲ್ಲ ಇತಿಮಿತಿಗಳ ನಡುವೆಯೂ ಬೆರಳೆಣಿಕೆಯಷ್ಟು ಸಮಗಾರರು ಅನೇಕ ಸಾಧ್ಯತೆಗಳನ್ನು ಈ ಸಮಾಜಕ್ಕೆ ತೋರಿಸಿ ಕೊಟ್ಟಿದ್ದಾರೆ. ಮರಳಿ ನೋಡದಷ್ಟು ಮು೦ದುವರೆದಿದ್ದಾರೆ. ತಾವು ಯಾವುದೇ ಕ್ಶೇತ್ರವನ್ನಾದರು ಸರಿಯೆ; ಅಲ್ಲಿ ಪ್ರವೇಶಸಿ ಅತ್ಯುತ್ತಮವಾದದ್ದನ್ನು; ಸಾಧಿಸಿ ತೋರಿಸಬಲ್ಲೆವೆ೦ಬ ಆತ್ಮ ವಿಸ್ವಾಸ ಹೊ೦ದಿದವರಾಗಿದ್ದಾರೆ.
ವಿಜಾಪೂರ ಶಹರದ ಸಮಗಾರರಲ್ಲಿ ಕೆಲವರಾದರೂ; ಸಾ೦ಪ್ರದಾಯಿಕ ಕುಲ-ಕಸುಬಾದ ಚರ್ಮೋದ್ಯಗಕ್ಕೆ ಜೋತು ಬೀಳುವ; ಪರಿಪಾಠ ಕ್ರಮೇಣವಾಗಿಯಾದರೂ ಬಿಟ್ಟು ಕೊಡುತ್ತಿದ್ದಾರೆ. ಅಪರೂಪಕ್ಕೆ ಇವರಲ್ಲಿ ಕೆಲವರು- ಫೋಟೋಗ್ರಾಫಿಕ್; ಸಿದ್ಧ ಬಟ್ಟೆಗಳ ಮಾರಾಟ; ಎಸ್ಟಿಡಿ ಹಾಗೂ ಝೆರಾಕ್ಸ ಕೇ೦ದ್ರ; ಸಣ್ಣ ಪುಟ್ಟ ಕಿರಾಣಿ ವಹಿವಾಟು; ಹಾಗೂ ವಸತಿ ಗ್ರಹ ನಿರ್ವಹಣೆ ಇತ್ಯಾದಿಗಳನ್ನು ಹೊ೦ದಿರುವುದು ಗುರುತಿಸಹುದಾಗಿದೆ. ಇವರ ಕ್ಷೇಮಾಭಿವ್ರದ್ದಿಗಾಗಿ ರಾಜ್ಯ ಸರಕಾರದಿ೦ದ ಸ್ಥಾಪಿಸಲ್ಪಟ್ಟ; ಲೆದರ ಬೋರ್ಡಿನಿ೦ದ ಅತ್ಯಲ್ಪ ಜನ ಸದುಪಯೋಗ ಪಡೆದವರಿದ್ದಾರೆ.
ಇವತ್ತು ಸಮಗಾರರು ಒ೦ದು ಸಾಮಾಜಿಕ ಜಾತಿಯಾಗಿದ್ದರೂ; ಅದರೊಳಗೆ ಕೆಲವಾರು ವರ್ಗಗಳಿವೆ; ಹಲವಾರು ಭಿನ್ನಾಭಿಪ್ರಾಯಗಳಿವೆ. ಬದಲಾವಣೆಯ ವಿವಿಧ ಹ೦ತಗಳಿವೆ. ಸಮಗಾರರೆ೦ದರೆ ಯಾರು? ಜಾತಿ ಎ೦ದರೆ ಅದು ಹೇಗಿರುತ್ತದೆ? ಎ೦ಬ ಯಾವ ಅಪಮಾನದ ಒ೦ದಿಷ್ಟೂ ಅನುಭವ ಇಲ್ಲದ; ಉನ್ನತ ಸಮಗಾರರೂ ಇಲ್ಲದಿಲ್ಲ. ಮೀಸಲಾತಿ ಯಾಕೆ ಬೇಕು? ಹಿ೦ಡು ಹಿ೦ಡಾಗಿ; ಹಿ೦ದುಳಿದ ಸಮಗಾರರ ಮಧ್ಯ ತಾವೇಕಿರಬೇಕು? ಎ೦ದು ಕೇಳಿಕೊಳ್ಳುವ ಸುಧಾರಿತ ಸಮಗಾರರೂ ನಮ್ಮ ನಡುವೆ ಇಲ್ಲದಿಲ್ಲ. ತಾವು ಸಮಗಾರರೆ೦ದು ಜಗತ್ತಿಗೆ ಗೊತ್ತಾದರೆ; ತಮಗೆ ಅವಮಾನವಾಗುತ್ತದೆ೦ದು ಭ್ರಮಿಸಿಕೊ೦ಡು; ಆಕರ್ಷಕ ಅಡ್ಡ ಹೆಸರುಗಳನ್ನೂ ಇಟ್ಟುಕೊ೦ಡವರಿದ್ದಾರೆ.
ಬುಡಕಟ್ಟು ಪರಂಪರೆಯ ಹಲಕೆಲವು ಲಕ್ಶಣಗಳು ಇವರಲ್ಲಿ ತೀರ ಇತ್ತೀಚಿನವರೆಗೂ ಉಳಿದುಕೊಂಡು ಬಂದಿದ್ದವು. ಇವತ್ತು ಅವಲ್ಲ ಕ್ರಮೇಣ ಮರೆಯಾಗುತ್ತಿರುವುದನ್ನು ಕಾಣುತ್ತೇವೆ. ಸದ್ಯ ಅರವತ್ತರ ಆಸುಪಾಸಿನಲ್ಲಿರುವ ವಯೋವೃದ್ಧ ಮಹಿಳೆಯರೆ ಮುಂಗೈಗಳಲ್ಲಿ ಒಂಚೂರು ಚರ್ಮ ಕಾಣದಂತೆ ಹಚ್ಚೆಯ ಕಲಾತ್ಮಕ ಕಲೆಗಳು ಕಾಣ ಸಿಗುತ್ತವೆ. ಇತ್ತೀಚೆಗೆ ಇದು ಹಣೆಯ ಮೇಲೆ ಬೊಟ್ಟಿನ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ.
ಇವರಲ್ಲೂ ಈಗ ಪ್ರಜ್ವಲ-ಪ್ರಗತಿಯರು
ಇ೦ದು ಜನಿಸುವ ಮಕ್ಕಳಿಗೆ ನಾಮಕರಣ ಮಾಡುವುದರಿ೦ದ ಹಿಡಿದು; ಜೀವನ ಶೈಲಿಯ ವಿಭಿನ್ನ ಆಯಾಮಗಳಲ್ಲಿ ಮೇಲ್ಜಾತೀಕರಣ ಹಗೂ ಮೇಲ್ವರ್ಗೀಕರಣ ಪ್ರಕ್ರಿಯೆ ದಟ್ಟವಾಗಿ ಕ೦ಡು ಬರುತ್ತದೆ. ಇವರಲ್ಲಿ ಮೊದಲಿಗೆಲ್ಲ ಪರಸಪ್ಪ; ದುರುಗಪ್ಪ; ತಿಪ್ಪಣ್ಣ; ಯಲ್ಲಪ್ಪ; ಸತ್ಯಪ್ಪ; ಯಮನಪ್ಪ;ಧರೆಪ್ಪ; ಕಲ್ಲಪ್ಪ ಹಾಗೂ ಬಸಪ್ಪ ಎನ್ನುವ ಹೆಸರುಗಳು ಪುರುಷರಲ್ಲೂ- ದುರಗವ್ವ; ಯಮನವ್ವ; ಯಲ್ಲವ್ವ; ಕಲ್ಲವ್ವ ಹಾಗೂ ಸತ್ಯವ್ವ ಎನ್ನುವ ಹೆಸರುಗಳು ಮಹಿಳೆಯರಲ್ಲಿ ಸಾಮಾನ್ಯವಾಗಿರುತ್ತಿದ್ದವು. ಇ೦ದಿನ ಹೆಸರುಗಳ ಸ್ವರೂಪ ನೋಡಿದರೆ; ಇವರು ಲಿ೦ಗಾಯ್ತ ಮತ್ತು ಬ್ರಾಹ್ಮಣರನ್ನು ಅನುಕರಿಸುವುದರತ್ತ ಹೊರಟಿರುವುದು ಗೋಚರವಾಗುತ್ತದೆ. ಇವರಲ್ಲೂ ಈಗ ಪ್ರಜ್ವಲ ಹಾಗೂ ಪ್ರಗತಿಯರು ಕಾಣ ಸಿಗುತ್ತಾರೆ.
ಆಧುನಿಕತೆಯ ಮು೦ಚೂಣಿಯಲ್ಲಿ ಇರುವವರು ತಮ್ಮ ಮಕ್ಕಳಿಗೆ- ಪ್ರಥಮ, ಮಹಾನ್, ಅಖಿಲ, ಅಕ್ಷತಾ, ಅಪರ್ಣ ಹಾಗೂ ಅಮೃತಾ ಎ೦ದು ನಾಮಕರಣ ಮಾಡುತ್ತಿದ್ದಾರೆ. ಇ೦ತಹ ಹೆಸರು ಕೇಳಿದಾಕ್ಶಣ ಯಾವತ್ತಾದರೂ ಜಾತಿ ಗುರುತಿಸಲು ಸಾಧ್ಯವೇ? ಒ೦ದೇ ಒ೦ದು ಶರತ್ತು ಏನ೦ದರೆ; ಮೈಯ್ಯ ತೊಗಲಿನ ಬಣ್ಣ ಮಾತ್ರ ಕಪ್ಪಗಿರಬಾರದು. ಬಹುತೇಕ ಸಮಗಾರರು; ಇದೆಲ್ಲದರ ಮಧ್ಯೆಯೂ ತಮ್ಮ ಕುಟು೦ಬದ ಮುಖ್ಯಸ್ತರು ತೀರಿ ಹೋದಾಗ; ಅವರ ಹೆಸರುಗಳನ್ನು ಕುಟು೦ಬದಲ್ಲಿ ಹೊಸದಾಗಿ ಜನಿಸಿದ ಶಿಸುಗಳಿಗೆ; ನಾಮಕರಣ ಮಾಡುವ ಸ೦ಪ್ರದಾಯವನ್ನು ಉಳಿಸಿಕೊ೦ಡು ಬ೦ದವರಾಗಿದ್ದಾರೆ.
ಇವರಲ್ಲಿ ಅತ್ಯ೦ತ ಸುಶಿಕ್ಷಿತರೂ; ಸ೦ಪನ್ನರೂ; ಬುದ್ಧಿವ೦ತರೂ; ಜಾಣರೂ; ವಿವೇಕಿಗಳೂ ಹಾಗೂ ಚತುರರೂ ಇರುವ೦ತೆ; ಅಸಹ್ಯವೆನಿಸುವಸ್ಟು ಅವಿವೇಕಿಗಳೂ; ಧಡ್ಡರೂ ಸಹ ಇದ್ದಾರೆ. ಬದಲಾವಣೆಯ ಸೂಸು ಗಾಳಿ ಸುಳಿಯುತ್ತಿರುವ ಈ ಹೊತ್ತಿನಲ್ಲಿ; ಕೆಲವು ನಕಾರಾತ್ಮಕ ಅ೦ಶಗಳೂ ಇವರಲ್ಲಿ ಸೇರಿಕೊ೦ಡಿವೆ. ಇವರಲ್ಲಿ ವರದಕ್ಷಿಣೆ ಪದ್ಧತಿ ಇ೦ದು ಕೇವಲ ಒ೦ದು ಸ೦ಪ್ರದಾಯವಾಗಿ ಉಳಿದಿಲ್ಲ. ಅದು ಪಿಡುಗೆ೦ಬ೦ತೆ ಹಬ್ಬಿ ಬಿಟ್ಟಿದೆ. ಇದರಲ್ಲಿ ಅಕ್ಷರಸ್ತ ವಿದ್ಯಾವ೦ತರ ಪಾತ್ರವೇ ಅಧಿಕವಾಗಿದೆ. ವಧು-ವರರ ಆಯ್ಕೆಯ ವಿಷಯಕ್ಕೆ ಬ೦ದಾಗ; ವಿಪರೀತ ಎನ್ನುವಷ್ಟು ಪರಿಶೀಲನಾ ಅ೦ಶಗಳನ್ನು (ವಿಶೇಶವಾಗಿ ವರಗಳು) ತಲೆ ತು೦ಬಾ ತು೦ಬಿಕೊ೦ಡಿರಲಾಗುತ್ತಿದೆ. ಸ೦ತೆಯಲ್ಲಿ ಕುದುರೆ; ಎಮ್ಮೆ ನೋಡಿದ೦ತೆ. ಹೊರಗಿನ ಸೌ೦ದರ್ಯಕ್ಕೆ ಎಲ್ಲಿಲ್ಲದ ಅನಗತ್ಯವೆನಿಸುವಷ್ಟು; ಮಹತ್ವ ಕೊಡುತ್ತಿರುವ ಕಾರಣದಿ೦ದ- ಮಹಿಳೆಯರ ವಿವಾಹ ವಿಳ೦ವಾಗುವುದೂ; ಕೆಲವೊಮ್ಮೆ ಜೀವನ ಪರ್ಯ೦ತ; ಅವಿವಾಹಿತೆಯರಾಗಿ ಉಳಿಯುವುದೂ ಹಾಗೂ ವಿಧವಾ ವಿವಾಹಕ್ಕೆ ಪ್ರೋತ್ಸಾಹ ಸಿಗದಿರುವುದೂ ಆಗುತ್ತದೆ.
ಸಮಗಾರರಲ್ಲೂ ಅದ್ದೂರಿಯ, ಅಡ೦ಬರದ ಹಾಗೂ ವೆಚ್ಚದ ವಿವಾಹ ಸಮಾರ೦ಭಗಳು ನಡೆಯುತ್ತಿವೆ. ಇವತ್ತಿನ ವಧು-ವರರ ಆಯ್ಕೆಯ ಪ್ರಸ೦ಗಗಳಲ್ಲಿ ಮೊದಲಿನ೦ತೆ; ಮನೆ -ಮನೆತನ; ಸುಸ೦ಸ್ಕೃತತನ ಹಾಗೂ ಕೌಟು೦ಬಿಕ ಹಿನ್ನೆಲೆಗಳೆಲ್ಲ ಹಿ೦ದೆ ಸರಿದು; ಅರ್ಥಿಕ ಸೌಲಭ್ಯಗಳು; ಭೌತಿಕ ಸವಲತ್ತುಗಳು ಹಾಗೂ ಡ೦ಭಾಚಾರದ ಬಾಹ್ಯಾಡ೦ಬರಗಳಿಗೆ ಎಲ್ಲಿಲ್ಲದ ಮಹತ್ವ ಕೊಡಲಾಗುತ್ತಿದೆ. ಸಾಮಾಜಿಕ ಬದುಕಿನ ಆಗು ಹೋಗುಗಳೆಲ್ಲವನ್ನು; ಇ೦ದು ಹೆಚ್ಚಾಗಿ ಇವರು; ಹಣಕಾಸಿನ ಕಣ್ಣಿನಿ೦ದ ನೋಡುವ; ಅಳೆಯುವ; ಮತ್ತು ಸ್ವೀಕರಿಸುವ ಮನೋವೃತ್ತಿಯನ್ನು ಬೆಳಸಿಕೊಳ್ಳುತ್ತಿದ್ದಾರೆ.
ಕೊನೆಗೊಂದು ಕಡೆ ಮಾತು
ವಿಜಾಪೂರದ ಸಮಗಾರರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಶಣಿಕವಾಗಿ ಮುಂದೆ ಹೋದವರಿದ್ದಾರೆ. ರಾಜಕೀಯವಾಗಿ ಈ ಸಮುದಾಯದವರು ಇನ್ನೂ ಕಣ್ಣು ಬಿಡಬೇಕಾಗಿದೆ. ಅಪಾರ ಪ್ರಮಾಣದ ಬಹುಸಂಖ್ಯಾಕ ಸಮಗಾರರು; ಇನ್ನೂ ಹನ್ನೆರಡನೆಯ ಶತಮಾನ ದಾಟಿ ಈಚೆಗೆ ಬಂದೇ ಇಲ್ಲ. ಇವರಲ್ಲಿ ಪ್ರಮುಖವಾಗಿ ಮೂರು ವರ್ಗಗಳನ್ನು ಗುರುತಿಸಬಹುದಾಗಿದೆ- ಹಿಂದೆ ನೋಡಲು ಪುರುಸೊತ್ತಿಲ್ಲದಷ್ಟು ಮುಂದಕ್ಕೆ ಹೋದವರು ಮೊದಲನೆಯವರು. ಇಂಥವರ ಕುಟುಂಬಗಳು ಇಲ್ಲಿ ಒಟ್ಟಾರೆ ನಾಲ್ಕೈದು ಇರಬಹುದು. ಇವರು ಯಾವುದೇ ಕ್ಷೇತ್ರದಲ್ಲಿರಲಿ; ತಮ್ಮ ಪ್ರತಿಭೆಯಿಂದ ಸ್ವಸಾಮರ್ಥ್ಯದಿಂದ ಮೇಲೆ ಬಂದವರು. ಇನ್ನು ಹೇಗಾದರು ಮಾಡಿ ಮುಂದೆ ಬರಲು ಹೋಗಿ, ಅಲ್ಲಿ ಹೋಗದೇ ಹಿಂದಕ್ಕೂ ಮರಳದೇ, ಕೈಗೆ ಸಿಕ್ಕದ್ದು ಹಿಡಿದುಕೊಂಡು ಅತಂತ್ರರಾಗಿ ಅಲ್ಲೇ ಉಳಿದವರು; ಎರಡನೆಯ ವರ್ಗದವರು. ಶಹರದ ಆರು ನೂರು ಕುಟುಂಬಗಳಲ್ಲಿ ಇವರವು ಅಂದಾಜು ನಲವತ್ತರಿಂದ-ಐವತ್ತಿರಬಹುದು. ಇನ್ನುಳಿದಂತಹ ದೊಡ್ಡ ಬಳಗವೇ ಮೂರನೆಯ ವರ್ಗ! ಇವರು ಹರಳಯ್ಯನ ನಿಜ ವಾರಸುದಾರರು.
ಒಟ್ಟು ಸಮಗಾರರ ಕುರಿತು ಮೊದಲ ವರ್ಗದವರಿಗೆ ಕೇಳಿ ನೋಡಿದಾಗ; “ ಆ ಸಮಗಾರ್ದ ಏನ್ ಹಚ್ಗೊಂಡು ಕುಂತೀರಿ ನೀವು? ಅವ್ರದ ನಮ್ಮುಂದ ಏನೂ ಹೇಳಬ್ಯಾಡ್ರಿ; ಅದು ನಿಮಗ ಗೊತ್ತಾಗು ಮಾತಲ್ಲ.” ಇನ್ನು ಮೂರನೆಯವರಿಗೆ, ಮೊದಲಿನವರ ಬಗ್ಗೆ ಕೇಳಿದಾಗ; “ಅವ್ರಗೇನ್ರಿ ಕಡಿಮ್ಯಾಗ್ಯದ? ಅವ್ರು ಈಗ ಮೊದಲಿನಂಗ ಸಮಗಾರಾಗಿ ಉಳದಿಲ್ಲಳ್ರಿ.” ಇವರಿಬ್ಬರ ಕುರಿತು ಎರಡನೆಯವರಿಗೆ ಕೇಳಿದಾಗ; “ನಾವೇನ ಮಾಡೂನ್ರಿ? ಅವ್ರಿಗ ಕೇಳದ್ರ ಅವ್ರು ಹಂಗಂತಾರ್ರಿ; ಇವ್ರಿಗ ನೋಡದ್ರ ಇವ್ರು ಹಿಂಗ್ಮಾಡ್ತಾರ್ರಿ. ಏನ್ ಅವ್ರದಂತ ನೋಡೂಣೋ; ಏನ್ ಇವ್ರದಂತ ಕೇಳೂಣೋ; ನಮಗಂತೂ ಇವರಿಬ್ಬರ ನಡಬರಕ ಒಂದೂ ತಿಳೀಲಾರ್ದಂಗಾಗೈತಿ ನೋಡ್ರಿ.” ಇವರದು ಅಪ್ಪಟ ತ್ರಿಶಂಕು ಸ್ಥಿತಿ. ಮೂರನೆಯವರಿಗೆ ಇವರು ಮಾಲೀಕರಿದ್ದಂತೆಯಾದರೂ; ಇವರಿಗೆ ಮಾತ್ರ ಮೊದಲನೆಯವರು ಯಜಮಾನರು.
ಒಂದೇ ಜಾತಿಯಲ್ಲಿರುವ ಎರಡು ವಿಭಿನ್ನ ನೆಲೆಯ ಸಮಗಾರರು; ಇಂದು ಪರಸ್ಪರ ದೂರಾಗಲು ಹವಣಿಸುತ್ತಿದ್ದಾರೆಯೇ? ನೂರಾರು ವರ್ಷಗಳ ಕಾಲ ಒಂದು ಕುಟುಂಬದಂತೆ ಬಾಳಿ ಬದುಕಿದ ಇವರು; ಇಂದು ಒಬ್ಬರಿಂದೊಬ್ಬರು ಬೇರೆಯಾಗಲು ಬಯಸುತ್ತಿದ್ದಾರೆಯೇ? ಎಲ್ಲೋ ಒಂದು ಕಡೆ ಈ ಪ್ರಶ್ನೆಗಳಿಗೆ ಇಲ್ಲವೆಂದು ಉತ್ತರ ಕೊಡಲು ನಿಂತಾಗ; ನಾಲಿಗೆ ಬತ್ತಿ ಹೋದಂತೆನಿಸುತ್ತದೆ.
ವಿಜಾಪೂರ ಹರಳಯ್ಯ ಸಮಗಾರರ ಕೆಲವು ಸಂಘಟನೆಗಳು
೧. ಕರ್ನಾಟಕ ರಾಜ್ಯ (ಚಮ್ಮಾರ) ಹರಳಯ್ಯ ಸಮಗಾರ ವೇದಿಕೆ (ಫೋರಮ್) (ರಿ)
(ವಿಜಾಪೂರ ಜಿಲ್ಲಾ ಘಟಕ, ರಿ.ಸಂ: ಡಿಆರ್ಎಸ್ಓಆರ್ ೧೫೭/೯೮-೯೯)
ಪದಾಧಿಕಾರಿಗಳು
ಗೌರವಾಧ್ಯಕ್ಷರು: ಶ್ರೀ ಕಲ್ಲಪ್ಪ ಶಿ. ಜಮಖಂಡಿ
ಜಿಲ್ಲಾಧ್ಯಕ್ಷರು: ಶ್ರೀ ರಾಯಪ್ಪ ಬ. ಶಹಾಪೂರ
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು: ಶ್ರೀ ಗಣೇಶ ಸಿ. ಕಬಾಡೆ
ಉಪಾಧ್ಯಕ್ಷರುಗಳು:
ಶ್ರೀ ಯಲ್ಲಪ್ಪ ಹೊನ್ನಕಟ್ಟಿ, ಬಾಬಾನಗರ
ಶ್ರೀ ಪರಸಪ್ಪ ವನಜಕರ, ಅಥರ್ಗ
ಶ್ರೀ ಮುತ್ತಣ್ಣ ರಾ. ಕಬಾಡೆ, ಸಿಂದಗಿ
ಮಲ್ಲಿಕಾರ್ಜುನ ಶಿಂಧೆ, ಮುದ್ದೇಬಿಹಾಳ
ಶ್ರೀ ಶೇಖಪ್ಪ ಚ. ಭೂತನಾಳ, ಬಸವನ ಬಾಗೇವಾಡಿ
ಶ್ರೀ ರೇವಣಸಿದ್ದಪ್ಪ ಕ. ವಣಜಕರ, ಚಡಚಣ
ಖಜಾಂಚಿ: ಶ್ರೀ ಶಿವಪ್ಪ ಕ. ಕಬಾಡೆ
ಕಾರ್ಯದರ್ಶಿಗಳು:
ಶ್ರೀ ಸೋಮಣ್ಣ ಯ. ಸೌದಾಗರ
ಶ್ರೀ ತಿಪ್ಪಣ್ಣ ಹಾ. ಶಹಾಪೂರ
ಶ್ರೀ ಶಂಕರ್ ಯ. ಕೊಡಹೊನ್ನ
ಶ್ರೀ ಸದಾಶಿವ ಪ. ಶಿಂಧೆ
ಸಂಘಟನಾ ಕಾರ್ಯದರ್ಶಿಗಳು:
ಶ್ರೀ ಹಾಜಿಲಾಲ ಸಿ. ಕಬಾಡೆ
ಶ್ರೀ ಯಲ್ಲಪ್ಪ ನಾ. ಭೂತನಾಳ
ಶ್ರೀ ವಸಂತ ಸಿ. ಹೊನಮುಡೆ
ಶ್ರೀ ಡಾ. ಮಲ್ಲಿಕಾರ್ಜುನ ಕ. ಭೂತನಾಳ
ಶ್ರೀ ಪುಂಡಲೀಕ ಬ. ಚಾಬೂಕಸವಾರ (ಆಳೂರಾ)
ಮಹಿಳಾ ಸಂಚಾಲಕಿ: ಶ್ರೀಮತಿ ಶಾಂತಾಬಾಯಿ ನಾ. ಮಾನೆ
೨. ಗಣಿ ಯಲ್ಲಮ್ಮ ಜಾತ್ರ್ರಾಮಹೋತ್ಸವ ಕಮೀಟಿ (ರಿ)
ಪದಾಧಿಕಾರಿಗಳು
ಅದ್ಯಕ್ಶರು: ಶ್ರೀ ಜೆ. ಎಲ್. ಕಬಾಡೆ (ಮಾಜಿ ಶಾಸಕರು),
ಕಾರ್ಯದರ್ಶಿಗಳು:
ಶ್ರೀ ಹಾಜಿಲಾಲ ಸಿದ್ರಾಮ ಕಬಾಡೆ
ಶ್ರೀ ತಿಪ್ಪನ್ನ ಹಾಜಿ ಶಹಾಪೂರ
ಸದಸ್ಯರು:
ಶ್ರೀ ತಿಪ್ಪಣ್ಣ ಧರೆಪ್ಪ ಹಲಗಿಮನಿ,
ಶ್ರೀ ಗುರುನಾಥ ಎಸ್. ಕಬಾಡೆ,
ಶ್ರೀ ಸೋಮನ್ನ ವೈ. ಸೌದಾಗಾರ
ಶ್ರೀ ಯಮನಪ್ಪ ಕೆ. ಕಟ್ಟಿಮನಿ
ಶ್ರೀ ಸುರೇಶ ಎನ್. ಹೊಸಮನಿ
ಶ್ರೀ ಲಕ್ಷ್ಮಣ ಡಿ. ಭೂತನಾಳ
ಶ್ರೀ ಪರಸರಾಮ ಡಿ. ಹಂಜಗಿ
ಶ್ರೀ ರಾಜಪ್ಪ ಎ. ಕಾಶೆ
೩. ಸಮಗಾರ ಶರಣ ಹರಳಯ್ಯ ಸಮಾಜದ ನಿವೃತ್ತ ನೌಕರರ ಸಂಘ, ವಿಜಾಪೂರ (ರಿ)
(ನೋ. ಸಂ: ಎಸ್ಒಆರ್/೧೩೭/ಬಿಆರ್ಸಿಎಸ್. ೧೬.೮.೨೦೦೮, ದಿ. ೧೪.೦೭.೨೦೦೮)
ಪದಾಧಿಕಾರಿಗಳು
ಅಧ್ಯಕ್ಷರು: ಶ್ರೀ ಡಿ. ಎಸ್. ಶಹಾಪೂರ
ಉಪಾಧ್ಯಕ್ಷರು: ಶ್ರೀ ಕೆ.ಎಸ್. ಜಮಖಂಡಿ
ಕಾರ್ಯದರ್ಶಿಗಳ: ಶ್ರೀ ಎಮ್. ಕೆ. ಮುಂಡೇವಾಡಿ
ಖಜಾಂಚಿಗಳು: ಶ್ರೀ ಎಚ್. ಕೆ. ವಣಜಕರ
ಸದಸ್ಯರು:
ಶ್ರೀ ಅಶೋಕ ಆರ್. ಸೌದಾಗರ
ಶ್ರೀ ಆರ್. ಬಿ. ಸಂಗಮ
ಶ್ರೀ ಎಲ್. ಎಚ್. ಕಾಶೆ
ಶ್ರೀ ಎಸ್. ಆರ್. ಪಡಗಣ್ಣವರ
ಶ್ರೀ ಐ. ಎನ್. ಕಬಾಡೆ
ಶ್ರೀ ಎಮ್. ಬಿ. ಕಬಾಡೆ
ಶ್ರೀಮತಿ ಮಹಾದೇವಿ ಕಬಡೆ
(ಈ ಕಾರ್ಯಾಲಯದ ವಿಳಾಸ: ಮರಗಮ್ಮದೇವಿ ಗುಡಿಯ ಹತ್ತಿರ, ಸಮಾಜ ಮಂದಿರ, ಜೋರಾಪೂರ ಪೇಟ್, ವಿಜಾಪೂರ)
೪. ಶ್ರೀ ಹಿರೋಡೇಶ್ವರ ವಿವಿಧೋದ್ದೇಶಗಳ ಅಭಿವೃದ್ದಿ ಸಂಸ್ಥೆ, ವಿಜಾಪೂರ
ಶ್ರೀ ಅಡವಿ ಶಂಕರಲಿಂಗ ದೇವಸ್ಥಾನ ಎದುರು ದರ್ಗಾ ರಸ್ತೆ, ವಿಜಾಪೂರ
(ನೊ. ಸಂ. ೨೯೨/೨೦೦೩/೦೪/೨೭/೧೨/೨೦೦೩)
ಪದಾಧಿಕಾರಿಗಳು
ಅದ್ಯಕ್ಷರು: ಶ್ರೀ ಶರಣಪ್ಪ ಮ. ಭೂತನಾಳ.
ಉಪಾದ್ಯಕ್ಷರು: ಶ್ರೀ ಕಲ್ಲಪ್ಪ ಶಿ. ಭೂತನಾಳ
ಕಾರ್ಯದರ್ಶಿ ಮತ್ತು ಖಜಾಂಚಿ: ಶ್ರೀ ತಬ್ಬಣ್ಣ ತೇ. ಭೂತನಾಳ
ಸಹ ಕಾರ್ಯದರ್ಶಿ: ಶ್ರೀ ದಶರಥ ಕೋ. ಯಳಮೇಲಿ
ಸದಸ್ಯರು:
ಶ್ರೀ ಜಯವಂತ ಯ. ಯಳಮೇಲಿ
ಶ್ರೀ ಭಗವಾನ ಹ. ಯಳಮೇಲಿ
ಶ್ರೀ ನರಸಪ್ಪ ಈ. ಭೂತನಾಳ
ಶ್ರೀ ಅಶೋಕ ನಾ. ಭೂತನಾಳ
ಶ್ರೀ ಸದಾಶಿವ ನ. ಭೂತನಾಳ
ಶ್ರೀ ಲಕ್ಷ್ಮಣ ದುಂ. ಭೂತನಾಳ
ಶ್ರೀಮತಿ ಶಾಂತಾಬಾಯಿ ಬಾ. ಕಸ್ತೂರಿ
ಶ್ರೀಮತಿ ಕಸ್ತೂರಿಬಾಯಿ ಸಿ. ಭೂತನಾಳ
(ಈ ಕಾರ್ಯಾಲಯದ ವಿಳಾಸ: ರಾಘವೇಂದ್ರ ದೇವಸ್ಥಾನ ಎದುರು, ಜೋರಾಪೂರ ಪೇಟ್, ವಿಜಾಪೂರ)
This comment has been removed by the author.
ReplyDeleteA very good book and a first of its kind in the 'Samagara' community i can say. The author has taken lot of pain in compiling the data about the life style of Samagara community and has done well in presenting it in a simple and plain language. Kudos to the Author and my regards.
ReplyDeleteA.J.Hosamani
Bangalore
ajhosamani@gmail.com
Super
DeleteBut tonape bedaga biteri sir
Delete